Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಕರ್ನಾಟಕ ಸ್ಟೇಟ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರದ ಖಜಾಂಚಿ, ಕಿಡ್ಸ್ ಜೋನ್ ಶಾಲೆಯ ಆಡಳಿತಾಧಿಕಾರಿ ಹಾಗೂ ಶಿಕ್ಷಕಿ ಶ್ರೀಮತಿ ಸುಮಾ ಚೌಧರಿ ಇವರ ಸಮಾಜಮುಖಿ ಕಾರ್ಯ, ಉತ್ತಮ ಬೋಧನೆ, ತರಬೇತಿ ನೀಡುವ ಕೌಶಲ್ಯ ಹಾಗೂ ಸ್ಲಮ್ ಮಕ್ಕಳಿಗಾಗಿ ಉಚಿತ ಕಲಿಕಾ ಕೇಂದ್ರ ಸ್ಥಾಪಿಸಿ ಪಾಠ ಬೋಧನೆ ಮಾಡುವಲ್ಲಿ ಯಶಸ್ವಿಯಾಗಿರುವ ಇವರ ಕಾರ್ಯ ಸಾಧನೆ ಕಂಡು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್, ಇವರು ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ ೨೮-೧೨-೨೦೨೪ರಂದು “ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸುತ್ತಿದ್ದಾರೆ.ಚಿನ್ಮಯ ಜ್ಞಾನಿ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸುಮಾ ಚೌಧರಿ ಇವರಿಗೆ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಸೌತ್ ಜೋನ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರ ಜಿಲ್ಲಾ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆದ ಎಸ್.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಥ್ಲೇಟಿಕ್ ಕ್ರೀಡಾಪಟುಗಳು ೨೦೨೪-೨೫ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಆಯ್ಕೆಯಾಗಿದ್ದು, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ ಕ್ರೀಡೆಯು ಇದೇ ದಿ. ೨೬/೧೨/೨೦೨೪ ರಿಂದ ೩೦/೧೨/೨೦೨೪ರ ರವರೆಗೆ ಭುವನೇಶ್ವರದ ಕೆಐಎಸ್‌ಎಸ್ ವಿಶ್ವವಿದ್ಯಾನಿಲಯದಲ್ಲಿ ಜರುಗಲಿದೆ. ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಅಥ್ಲೇಟಿಕ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ತಂಡದ ತರಬೇತಿದಾರಾಗಿ ಗೋಪಾಲ ಲಮಾಣಿ ಮತ್ತು ವ್ಯವಸ್ಥಾಪಕರಾಗಿ ಜಬಿನತಾಜ ಜಿಗಳೂರ ಭಾಗವಹಿಸಲಿದ್ದಾರೆ.ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚAದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ., ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ ಕ್ರೀಡೆಯು ಇದೇ ದಿ. ೨೬/೧೨/೨೦೨೪ ರಿಂದ ೩೦/೧೨/೨೦೨೪ರ ರವರೆಗೆ ಭುವನೇಶ್ವರದ ಕೆಐಎಸ್‌ಎಸ್ ವಿಶ್ವವಿದ್ಯಾನಿಲಯದಲ್ಲಿ ಜರುಗಲಿದೆ. ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಅಥ್ಲೇಟಿಕ್ ಕ್ರೀಡಾಪಟುಗಳು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಡಿ.೨೯ ರಂದು ಬೆಳಗ್ಗೆ ೧೦ ಗಂಟೆಯಿಂದ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಹೀನಾ ತಿಳಿಸಿದ್ದಾರೆ.ಕೃಷಿ ವಿಜ್ಞಾನ ಕೇಂದ್ರ ಇಂಡಿ, ಪಶುಪಾಲನಾ ಇಲಾಖೆ ಇಂಡಿ ಹಾಗೂ ವಿಜಯಪುರ ಬಾಗಲಕೋಟ ಸಹಕಾರಿ ಹಾಲು ಉತ್ಪಾದಕರ ಸಂಘ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.ಕರುಗಳ ಪ್ರದರ್ಶನ, ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ, ಹೈನುಗಾರಿಕೆ ಕುರಿತು ಚರ್ಚಾಗೋಷ್ಠಿ ನಡೆಯಲಿದೆ ಎಂದು ಡಾ.ಹೀನಾ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಹೃದಯವಂತಿಕೆಯಿಂದ ನಮ್ಮ ಇಚ್ಛೆಗೆ ಅನುಗುಣವಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಅದರಡಿ ಪ್ರಯತ್ನಿಸಿ ಯಶಸ್ಸು ಸಾಧಿಸಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದ ವಿವಿಧ ಚಟುವಟಿಕೆ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಇತಿಹಾಸ ನಿರ್ಮಾಣ ಮಾಡಲು ನಮ್ಮ ಪ್ರಯತ್ನ ಅವಶ್ಯಕ, ನಾಗರೀಕ ಸಮಾಜದ ಭಾಗವಾಗಿ ಸಮಾಜವಾದಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಮುಖ್ಯ ಅತಿಥಿ ಪ್ರಾಚಾರ್ಯ ಎಸ್.ಎಂ.ಉಪ್ಪಾರ, ಸಂಗಮೇಶ ಹಿರೇಮಠ, ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಆರ್.ಎಚ್, ಡಾ. ವಿಜಯಮಹಾಂತೇಶ ದೇವರ, ರವಿಕುಮಾರ ಅರಳಿ,ಎಸ್.ಎಚ್.ಓಲೇಕಾರ ಮಾತನಾಡಿದರು.ಪ್ರಶಾಂತ ಕಾಳೆ, ಡಾ.ಎಸ್.ಜೆ.ಮಾಡ್ಯಾಳ, ಎಸ್.ಕೆ.ಲಿಂಗದಳ್ಳಿ, ರವಿ ಕಲ್ಲೂರ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ ವೇದಿಕೆಯ ಮೇಲಿದ್ದರು.ಮಹಾವಿದ್ಯಾಲಯಕ್ಕೆ ಹೊಸದಾಗಿ ನೇಮಕಗೊಂಡ ಮತ್ತು ವರ್ಗಾವಣೆಗೊಂಡ ಸಹಾಯಕ ಪ್ರಾದ್ಯಾಪಕರನ್ನು ನಂದಕುಮಾರ ಬಿರಾದಾರ ಸ್ವಾಗತಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ಮಂಗಲಕಾರ್ಯಾಲಯದ ಆವರಣದಲ್ಲಿ ಡಿ.೨೯ ರಂದು ಮಧ್ಯಾನ್ಹ ೨.೩೦ ಗಂಟೆಗೆ ಶಿವಗೊಂಡಪ್ಪ ರಾಮಚಂದ್ರ ಮೇತ್ರಿ ಇವರ “ಸಮಾಜಮುಖಿ ಮೇತ್ರಿ ಕಾಕಾ” ಸಂಸ್ಮರಣೆ ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ ತಿಳಿಸಿದ್ದಾರೆ.ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಬ್ಯಾಂಕ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಶಿವಾಚಾರ್ಯರರು, ಚಿತ್ರದುರ್ಗ ಶ್ರೀ ಮುರಘಾಮಠದ ಆಡಳಿತ ಅಧಿಕಾರಿ ಜಯಬಸವ ಕುಮಾರ ಸ್ವಾಮಿಗಳು, ನಾಗಠಾಣದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರರು, ತಡವಲಗಾದ ರಾಚೋಟೇಶ್ವರ ಶ್ರೀಗಳು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಶಿರಕನಹಳ್ಳಿಯ ಅಡವಿಲಿಂಗ ಶ್ರೀಗಳು, ಹೀರೇರೂಗಿಯ ಸುಗಲಾದೇವಿಯವರು ಪೂಜ್ಯರು ಭಾಗವಹಿಸುವರು.ಉದ್ಘಾಟನೆ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಇವರಿಂದ, ಅಧ್ಯಕ್ಷತೆ ಶಾಸಕ ಯಶವಂತರಾಯಗೌಡ ಪಾಟೀಲ, ಗ್ರಂಥ ಬಿಡುಗಡೆ ಸಂಸದ ರಮೇಶ ಜಿಗಜಿಣಗಿ, ಸಂಸದರಾದ ಪಿ.ಸಿ.ಸಿದ್ದನಗೌಡರ, ಗೋವಿಂದ ಕಾರಜೋಳ, ಶಾಸಕರಾದ ಲಕ್ಷ್ಮಣ ಸವದಿ, ಬಸನಗೌಡ ಪಾಟೀಲ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಉತ್ತರಪ್ರದೇಶದ ವಾರಣಾಸಿ ಬನಾರಸ ಹಿಂದೂ ವಿಶ್ವವಿದ್ಯಾಲಯದ ಹಿಂದಿ ವಿಭಾಗ ಹಾಗೂ ಯುಗದರ್ಶಿನಿ ಸಂಸ್ಥೆ ಆಯೋಜಿಸಿದ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಪುಸ್ತಕ ಪ್ರಕಟಣೆಯಲ್ಲಿ ಬೆರಗು ಪ್ರಕಾಶನದ ಸೇವೆಯನ್ನು ಗುರುತಿಸಿ ಯುಗದರ್ಶಿನಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡದ ಖ್ಯಾತನಟಿ ಪ್ರೇಮಾ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಅವರು ಕಡಣ ಗ್ರಾಮದ ಬೆರಗು ಪ್ರಕಾಶನದ ಪರವಾಗಿ ಪ್ರಕಾಶಕಿ ವಿಜಯಲಕ್ಷ್ಮಿ ಆರ್. ಕತ್ತಿ ಅವರಿಗೆ ಪ್ರಶಸ್ತಿ ಫಲಕ, ನಗದು ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.ಕರ್ನಾಟಕದ ಮಾಜಿಸಚಿವೆ ಲೀಲಾದೇವಿ ಆರ್ ಪ್ರಸಾದ, ಸಮ್ಮೇಳನದ ಪ್ರಧಾನ ಸಂಚಾಲಕಿ ಡಾ.ಸರಸ್ವತಿ ಚಿಮ್ಮಲಗಿ ಬನಾರಸ ವಿವಿಯ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ ದ್ವಿವೇದಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ಬೆರಗು ಪ್ರಕಾಶನ ಪ್ರಕಟಿಸಿದ ಡಾ.ಸರಸ್ವತಿ ಚಿಮ್ಮಲಗಿ, ಗಾಯತ್ರಿ ಪತ್ತಾರ ಸಂಪಾದಿಸಿದ ‘ಮಹಿಳಾ ಮೀಸಲಾತಿ: ಪ್ರಸ್ತುತತೆ’ ಸಂಪುಟವನ್ನು ಲೇಖಕಿ ಲೀಲಾದೇವಿ ಆರ್. ಪ್ರಸಾದ ಬಿಡುಗಡೆ ಮಾಡಿ ಮಾತನಾಡಿದರು.ಬೆರಗು ಪ್ರಕಾಶನವು ಕಳೆದ ೮ ವರ್ಷಗಳಲ್ಲಿ…

Read More

47 ಸೆಕೆಂಡುಗಳಲ್ಲಿ ಸಂವಿಧಾನ ಪೀಠಿಕೆ ಹೇಳಿದ ಮಕ್ಕಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಂದು ಉತ್ತಮ ಹವ್ಯಾಸವು ಮಗುವಿಗೆ ಆತ್ಮವಿಶ್ವಾಸ, ಸ್ವಾವಲಂಬಿ ಮತ್ತು ಸ್ವತಂತ್ರವಾಗಲು ಸಹಾಯ ಮಾಡುವ ಮೂಲಕ ಅವರ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸುತ್ತದೆ. ಜತೆಗೆ ಮಕ್ಕಳ ಆಲೋಚನಾ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಈ ಅವಳಿ ಹೆಣ್ಣು ಮಕ್ಕಳೇ ನಿದರ್ಶನ.ಆಟವಾಡುವ ವಯಸ್ಸಿನಲ್ಲೇ ತಮ್ಮ ಜ್ಞಾಪಕಶಕ್ತಿಯಿಂದ ಕೇವಲ 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಕನ್ನಡದಲ್ಲಿ ಹೇಳಿ ವಿಶೇಷ ಸಾಧನೆ ಮಾಡಿದ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ‘ನ್ಯಾಷನಲ್ ರೆಕಾರ್ಡ್’ ದಾಖಲಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.’ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಮಾತಿನಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಎಲ್ಲರಿಂದ ಆಗಬೇಕು. ಆಗ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಕ್ಕಳ ತಂದೆ ಸಂತೋಷ ಬಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸದ್ಯ ಯುಕೆಜಿ ವರ್ಗದಲ್ಲಿ ಓದುತ್ತಿರುವ ಅವರು ಜ್ಞಾಪಕಶಕ್ತಿ ವಿಭಾಗದಲ್ಲಿ ಈ ಸಾಧನೆ…

Read More

ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಡಿ.31 ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ “ಅನಿರ್ಧಿಷ್ಟಾವಧಿ ಮುಷ್ಕರ” ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಿ ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳಜಂಟಿ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಹೆಚ್.ಅಗರಖೇಡ ಹಾಗೂ ಪ್ರ.ಕಾರ್ಯದರ್ಶಿ ಐ.ಐ.ಮುಶ್ರೀಫ್ ತಿಳಿಸಿದರು.ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ‌ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಂಟಿ‌ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಪ್ರಯಾಣಿಕರನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಮೂಲಕ ಹಾಗೂ ಶಕ್ತಿ ಯೋಜನೆಯ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿರುವ ನಾಲ್ಕೂ ಸಾರಿಗೆ ನಿಗಮಗಳ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ ದೋರಣೆ ತಳೆದಿದೆ ಎಂದರು.ಜ.25…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕರ್ನಾಟಕ ಬ್ಯಾಂಕಿನ ಜೀವಾಳವೇ ಶೇರುದಾರರು, ಠೇವಣಿದಾರರು, ಗ್ರಾಹಕರು ಅವರುಗಳು ಕೊಡುಗೆ ಅಪಾರವಾದದ್ದು ಎಂದು ಕರ್ನಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದರು.ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಬ್ಯಾಂಕ್ ಕಾರ್ಯಾಲಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬ್ಯಾಂಕಿನ ದಶಮಾನೋತ್ಸವ ಹಾಗೂ ಬಡ್ತಿ ಹೊಂದಿ ವರ್ಗಾವಣೆಯಾಗುತ್ತಿರುವ ರಾಜೇಶ್ ಇವರಿಗೆ ಬೀಳ್ಕೊಡುಗೆ ಮತ್ತು ಅಪಘಾತ ವಿಮೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯರ ಸಹಕಾರದಿಂದ ಹತ್ತು ವರ್ಷ ಪೂರೈಸಿದ ಬ್ಯಾಂಕ್ ಮುಂದಿನ ದಿನಗಳಲ್ಲಿ 150 ಕೋಟಿ ರೂಪಾಯಿಗಳ ವ್ಯವಹಾರ ವಹಿವಾಟು ಹೊಂದುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕಾರ್ಯಪ್ರವೃತ್ತವಾಗಲಿ ಎನ್ನುತ್ತಾ, ಗ್ರಾಹಕರ ಹಿತರಕ್ಷಣೆಗಾಗಿ ಕೆಬಿಎಲ್ ಸುರಕ್ಷ 300/-‌ರೂ ಹಾಗೂ ಪಿಎಂಎಸ್ಬಿವೈ 12/-‌ರೂ ಜೀವವಿಮೆ ಮೊತ್ತ ಸಂದಾಯ ಮಾಡಿದರೆ ಆಪತ್ಕಾಲದಲ್ಲಿ ಅವಲಂಬಿತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದರು.ಬ್ಯಾಂಕ್ ಮ್ಯಾನೇಜರ್ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಅತಿಥಿಗಳಾದ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಹಿರಿಯ ಸಹಕಾರಿ…

Read More

ಲೇಖನ- ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರೂ. ಅವರಲ್ಲಿ ಅತ್ಯಂತ ವಿಶಿಷ್ಟ ಪ್ರಮುಖ ಚಿಂತಕಿ ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಲೋಚನೆ ಅಥವಾ ನೀಲಾಂಬಿಕೆ ಮತ್ತು ನೀಲಮ್ಮ ಎಂದು ಕರೆಯಲ್ಪಟ್ಟವಳು. ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲನೆಯವಳು ಸಹೋದರ ಮಾವ ಬಲದೇವನ ಮಗಳು. ನೀಲಾಂಬಿಕೆ ನೀಲಲೋಚನೆ ನೀಲಮ್ಮ ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳು ಇವೆ. ಹರಿಹರ ಬಸವಣ್ಣನವರ ಮತ್ತು ಭೀಮ ಕವಿಗಳು ಮಡದಿ ನೀಲಾಂಬಿಕೆಯನ್ನು ಮಾಯಿದೇವಿ ಎಂದು ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರನಾದನು ಎಂದು ಹೇಳಿದ್ದಾನೆ.ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ. ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣ ದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ ಹೀಗಾಗಿ ನೀಲಮ್ಮ…

Read More