Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ

ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶರಣ ಕಾಯಕ, ದಾಸೋಹ ತತ್ವ ಅಳವಡಿಸಿಕೊಳ್ಳಿ :ಪ್ರೊ.ಕರೂರ
(ರಾಜ್ಯ ) ಜಿಲ್ಲೆ

ಶರಣ ಕಾಯಕ, ದಾಸೋಹ ತತ್ವ ಅಳವಡಿಸಿಕೊಳ್ಳಿ :ಪ್ರೊ.ಕರೂರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ಪ್ರಪಂಚಕ್ಕೆ ಅಪೂರ್ವ ಕಾಣಿಕೆ ನೀಡಿವೆ. ಶರಣರ ಕಾಯಕ, ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಶರಣರ ವಚನಗಳಲ್ಲಿ ಅಡಕವಾಗಿವೆ ಎಂದು ಪ್ರೊ. ಎನ್.ಜಿ. ಕರೂರ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇಲ್ಲಿನ ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ರಾಮಪ್ಪ ಚ. ಉಪ್ಪಿನ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಸವಾದಿ ತತ್ವ ಸಿದ್ಧಾಂತ ನಾವೆಲ್ಲ ಒಂದಾಗಿ ಅನುಸರಿಸಿ ಬಾಳಬೇಕು. ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಇಂದಿನ ಯುವಕ-ಯುವತಿಯರು ಸಮಯಪಾಲನೆ ಸ್ವಚ್ಚತೆ ಸತ್ಯಶುದ್ಧ ಕಾಯಕ, ನಮ್ಮ ನಡೆ, ನುಡಿ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥಬರುತ್ತದೆ. ಭಾಗಿದ ತಲೆ ಮುಗಿದ ಕೈ ಭಗವಂತನಿಗೆ ಪ್ರಿಯ. ಕಾಯಕ, ದಾಸೋಹದಿಂದ ಶರಣ ಜೀವಿಗಳಾಗಿ ಬದುಕಿ ಸಮಾಜದ ಒಳತಿಗಾಗಿ ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಿದ್ರಾಮಪ್ಪ ಚ. ಉಪ್ಪಿನ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ನಿಯಮ, ನೀತಿ ಸಾತ್ವಿಕ ಚಿಂತನೆಯಲ್ಲಿ ಬದುಕಿದರೆ ಅದು ಫಲ ಕೊಡುತ್ತದೆ. ದಾನ, ಧರ್ಮ, ಕಾಯಕ, ದಾಸೋಹ ಮೈಗೂಡಿಸಿಕೊಂಡರೆ ಮಾತ್ರ ಸಾರ್ಥಕ ಬದುಕು ಇಂದು ತಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿ ನನ್ನ ಮನಸ್ಸನ್ನು ಕಟ್ಟಿಹಾಕಿದೆ ಎಂದು ಭಾವುಕರಾಗಿ ನುಡಿದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡ ನಿರ್ಮಾಣಕ್ಕೆ ಸಿದ್ರಾಮಪ್ಪ ಉಪ್ಪಿನ ಅವರ ಕೊಡುಗೆ ತುಂಬಾ ಇದೆ. ಅವರೊಬ್ಬ ಕೊಡಗೈದಾನಿಗಳು. ಕೇಂದ್ರ ಸಮಿತಿಯವರು ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ನಮಗೆಲ್ಲ ಸಂತಸ ತಂದಿದೆ. ಕರ್ನಾಟಕದಲ್ಲಿಯೇ ವಿಜಯಪುರ ವೀರಶೈವ ಲಿಂಗಾಯತ ಮಹಾಸಭಾ ಪ್ರಥಮ ಸ್ಥಾನದಲ್ಲಿದೆ ಎಂದರು.
ಉಪಾದ್ಯಕ್ಷ ಸಹದೇವ ನಾಡಗೌಡ ಸ್ವಾಗತಿಸಿ ಪರಿಚಯಿಸಿದರು. ಸಾಹಿತಿ ಜಂಬುನಾಥ ಕಂಚ್ಯಾಣಿ, ಅರುಣ ಶಹಾಪೂರ, ಬಸವರಾಜ ಕುಮಸಗಿ, ರಾಜು ಬಿರಾದಾರ, ಬಿ.ಎಚ್. ಬಾದರಬಂಡಿ ಮಾತನಾಡಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು. ಮ.ಗು. ಯಾದವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ.ಟಿ. ಈಶ್ವರಗೊಂಡ, ವಿದ್ಯಾವತಿ ಅಂಕಲಗಿ, ಜ್ಯೋತಿ ಬಾಗಲಕೋಟ, ಬಸವರಾಜ ಒಂಟಗೋಡಿ, ದೊಡ್ಡಣ್ಣ ಭಜಂತ್ರಿ, ಕಾಶಿನಾಥ ಅಣೆಪ್ಪನವರ, ಶಾರದಾ ಕೊಪ್ಪ ಐಹೊಳ್ಳಿ, ಡಾ. ಸತೀಶ ಜಿಗಜಿಣಗಿ ದಂಪತಿಗಳು, ಡಾ. ಎಂ.ಎಸ್. ಮಧಭಾವಿ, ಡಾ. ವಿ.ಡಿ. ಐಹೊಳ್ಳಿ, ವಿಠ್ಠಲ ತೇಲಿ, ಮಹಾದೇವ ಹಾಲಳ್ಳಿ ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ

ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ

ಮುಂದುವರೆದ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ
    In (ರಾಜ್ಯ ) ಜಿಲ್ಲೆ
  • ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ
    In (ರಾಜ್ಯ ) ಜಿಲ್ಲೆ
  • ಮುಂದುವರೆದ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಅಭ್ಯರ್ಥಿಗೆ 25 ಸಾವಿರ ಮತಗಳ ಅಂತರದ ಗೆಲುವು ಖಚಿತ
    In (ರಾಜ್ಯ ) ಜಿಲ್ಲೆ
  • ಮಾ.31ರಂದು ವಿಶ್ವ ಮಹಿಳಾ ದಿನಾಚರಣೆ & ಮುತ್ತೈದೆಯರಿಗೆ ಉಡಿ ತುಂಬುವಿಕೆ
    In (ರಾಜ್ಯ ) ಜಿಲ್ಲೆ
  • ರಾಮನ ಜೀವನದ ಮೌಲ್ಯಗಳು ಬದುಕಿಗೆ ಶಾಶ್ವತ ಪ್ರೇರಣೆ
    In ವಿಶೇಷ ಲೇಖನ
  • ಬಿರುಗಾಳಿ – ವರುಣನ ಅರ್ಭಟಕ್ಕೆ ನಲುಗಿದ ದ್ರಾಕ್ಷಿ ಬೆಳೆಗಾರರು
    In (ರಾಜ್ಯ ) ಜಿಲ್ಲೆ
  • ಜನಗಣತಿ ಸಿಬ್ಬಂದಿ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚಂದನ್ ಗೌಡ ಒತ್ತಾಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.