Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇವರ ಒಲುಮೆ ಪಡೆದುಕೊಳ್ಳಲು ಹಲವಾರು ಮಾರ್ಗಗಳಿದ್ದು, ಅವುಗಳಲ್ಲಿ ತ್ಯಾಗ ಮತ್ತು ಕರುಣೆ ಉತ್ತಮವಾದದ್ದು ಎಂದು ಶಿರಹಟ್ಟಿ ಭಾವೈಕ್ಯತೆ ಸಂಸ್ಥಾನಮಠದ ಶ್ರೀಫಕೀರ ದಿಂಗಾಲೇಶ್ವರ ಜಗದ್ಗುರು ಹೇಳಿದರು.ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀಮಡಿವಾಳೇಶ್ವರ ಗದ್ದಿಗಿಮಠದಲ್ಲಿ ಲಿಂ.ಸಿದ್ದಲಿಂಗ ಮಹಾಶಿವಯೋಗಿಗಳ ೩೧ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಡಿವಾಳೇಶ್ವರ ಮಹಾಸ್ವಾಮಿಗಳವರ ೧೭ನೆಯ ಪಟ್ಟಾಧಿಕಾರದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮದಲ್ಲಿ ಶಿರಹಟ್ಟಿ ಭಾವೈಕ್ಯತೆ ಸಂಸ್ಥಾನಮಠದ ಶ್ರೀಫಕೀರ ದಿಂಗಾಲೇಶ್ವರ ಜಗದ್ಗುರು ಆಶೀರ್ವಚನ ನೀಡಿ ಮಾತನಾಡಿದ ಅವರು, ಮಹಾತ್ಮರ ಚರಿತ್ರೆಗಳನ್ನು ಆಲಿಸುವುದರ ಮೂಲಕ ಜೀವನದಲ್ಲಿ ಆದ್ಯಾತ್ಮಿಕ ಮತ್ತು ನೈತಿಕ ಚಿಂತನೆ ಅಳವಡಿಸಿಕೊಳ್ಳಬೇಕು. ಮಾನವ ಜನ್ಮ ಶಾಶ್ವತವಲ್ಲ. ಆದರೆ ಜೀವ ಸಂಕುಲದಲ್ಲಿ ಮಾನವ ಜನ್ಮಕ್ಕೆ ಶ್ರೇಷ್ಠ ಸ್ಥಾನವಿದೆ. ದುಡಿಮೆಯಲ್ಲಿ ಸಾಧ್ಯವಾದಷ್ಟು ದಾನ, ಧರ್ಮ ಮಾಡಿ ಸಮೃದ್ಧಿಯ ಬದುಕು ಸಾಗಿಸಬೇಕು. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುವಿನ ಸ್ಮರಣೆ ಮಾಡಬೇಕು ಎಂದರು.ಈ ವೇಳೆ ಮಸಬಿನಾಳ ದಾಸೋಹಮಠದ ಸಿದ್ದರಾಮ ಮಹಾಸ್ವಾಮಿಗಳು, ಮಮದಾಪುರ ವಿರಕ್ತಮಠದ ಮುರುಗೇಂದ್ರ ಮಹಾಸ್ವಾಮಿಗಳು, ಶ್ರೀಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗೆ ಯಾವುದೇ ಬೆಲೆ ಕೊಡದೇ ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇಕಾ ಬಿಟ್ಟಿಯಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ ಇನ್ನಾದರು ಎಚ್ಚೆತ್ತುಕೊಂಡು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಛೇರಿ, ಪಿಠೋಪಕರಣ ಹಾಗೂ ಇತರೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎಮ್.ಎನ್ ಪಾಟೀಲ ಆಗ್ರಹಿಸಿದ್ದಾರೆ.ನಗರದ ತಾಲೂಕ ದಂಡಾಧಿಕಾರಿಗಳ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ ೨ನೇ ಹಂತದ ಮುಷ್ಕರಕ್ಕೆ ಜೆಡಿಎಸ್ ಪಕ್ಷದ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ತಂತ್ರಾಂಶಗಳನ್ನು ನಿರ್ವಹಿಸಲು ಗೂಗಲ್ ಕ್ರೋಮ್/ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾö್ಯನರ್‌ಗಳನ್ನು ಪೂರೈಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲ ಮಾಡಿಕೊಡಬೇಕು ಎಂದರು.ಈ ವೇಳೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಿರೇಕುರುಬರ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳನ್ನು ತಾಂತ್ರಿಕ ಹುದ್ದೆಗಳ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ತಕ್ಕಂತೆ ತಾಂತ್ರಿಕ ಹುದ್ದೆಗಳಿಗೆ ನಿಗದಿಪಡಿಸಿದಂತೆ ಇವರಿಗೂ ವೇತನ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ಶಿಕ್ಷಣ ನಮಗೆ ಬದುಕಿನಲ್ಲಿ ಧೈರ್ಯ ಮತ್ತು ತೃಪ್ತಿ ನೀಡುತ್ತದೆ ಎಂದು ಸ್ಥಳೀಯ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡಿಗೆ ಸಮಾರಂಭದಲ್ಲಿ ಸ್ಥಳೀಯ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಭಾಗವಹಿಸಿ ಮಾತನಾಡಿದರು.ಇಂದು ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯವಾಗಿದೆ. ಇಂದಿನ ಯುವ ಜನಾಂಗದವರಲ್ಲಿ ಓದುವ, ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗುತ್ತಿರುವುದು ಮಾರಕ ಇದು ದೇಶದ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ. ಬದುಕನ್ನು ಪ್ರೀತಿಸಿ ಸಾಧನೆಡೆಗೆ ಸಾಗುವು ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.ಈ ವೇಳೆ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಮೊದಲಿನಂತಿಲ್ಲ. ಅತ್ಯಂತ ಕಠಿಣ…

Read More

ವಿಜಯಪುರದಲ್ಲಿ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಯತ್ನಾಳ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆಕಾಶವಾಣಿ ಕೇಂದ್ರದ ಎದುರಿನ ರಿಂಗ್ ರಸ್ತೆಗೆ ಬನಶಂಕರಿ ಸರ್ಕಲ್ ಎಂದು ನಾಮಕರಣ ಮಾಡುವ ಜತೆಗೆ ನೇಕಾರರು ಸಮುದಾಯ ಭವನ ನಿರ್ಮಿಸಲು ೧೧ ಲಕ್ಷ ರೂ., ಆರ್ಥಿಕ ನೆರವು ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಭರವಸೆ ನೀಡಿದರು.ನಗರದ ವೇದಮಾತೆ ಗಾಯತ್ರಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಕಾಶವಾಣಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿದ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೇಕಾರರು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಸಂಘಟಿತರಾದಾಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ. ಎಲ್ಲರೂ ತಮ್ಮಲ್ಲಿನ ಒಡಕು ಮನೋಭಾವ ತೊರೆದು ಸನಾತನ ಧರ್ಮ ಮತ್ತು ದೇಶದ ಉಳಿವಿಗಾಗಿ ದುಡಿಯಬೇಕು. ರಾಜಕಾರಣಿಗಳು ಮಾಡುವ ಸಾಮೂಹಿಕ ವಿವಾಹ ಬರೀ ಚುನಾವಣೆಗಳಿಗಷ್ಟೇ ಸೀಮಿತವಾಗಿರುತ್ತವೆ. ಅದನ್ನೇ ಮಠಾಧೀಶರು ಮುಂದೆ ನಿಂತು ಬಡ ಮಕ್ಕಳ ಸಾಮೂಹಿಕ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಜನತೆಯ ನಿರೀಕ್ಷೆಯಂತೆ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೇಸ್ ಪಕ್ಷದ ಪಾಲಾಗಿದೆ.ಬುಧವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ನಾಲ್ಕನೆ ವಾರ್ಡಿನ ಸದಸ್ಯ ಚನಮಲ್ಲಪ್ಪ ಶಿವಪ್ಪ ಗಿಡ್ಡಪ್ಪಗೋಳ ಒಬ್ಬರೆ ನಾಮಪತ್ರ ಸಲ್ಲಿಸಿದರು ಅದರಂತೆ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಒಂಬತ್ತನೆ ವಾರ್ಡಿನ ಶ್ರಿಮತಿ ರಾಜಮಾ ನದಾಪ್ ಒಬ್ಬರೆ ನಾಮಪತ್ರ ಸಲ್ಲಿಸಿದ ಪ್ರಯುಕ್ತ ಚುನಾವಣಾಧಿಕಾರಿಗಳು ಎರಡು ಸ್ಥಾನಗಳಿಗೆ ಅವಿರೋದ ಆಯ್ಕೆ ನಡೆಯಿತು ಎಂದು ತಿಳಿಸಿದರು.ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿಯವರ ಸ್ವಂತ ಊರಾದ ಕೊಲ್ಹಾರ ಪಟ್ಟಣ ಪಂಚಾಯತಿಯ ಸ್ಥಳಿಯ ಆಡಳಿತದ ಚುಕ್ಕಾಣೆ ಕಾಂಗ್ರೇಸ್ ಪಕ್ಷಕ್ಕೆ ದೊರಕಿದೆ ಎನ್ನುವದನ್ನು ಮಾಹಿತಿ ಪಡೆದ ಸಚಿವ ಶಿವಾನಂದ ಎಸ್ ಪಾಟೀಲ ಆಡಳಿತ ಕಛೇರಿಗೆ ಖುಷಿಯಿಂದ ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಿದರು.ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಹಲವಾರು ಜ್ವಲಂತ ಸಮಸ್ಯೆಗಳ ಮೂಟೆ ಹೊತ್ತಿರುವ ಕೊಲ್ಹಾರ ಪಟ್ಟಣದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಬಿ ಎಲ್ ಡಿ ಇ ಸಂಸ್ಥೆಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಸಾವಿನ ಕುರಿತು ರಾಜಕೀಯ ಲೇಪಿತ ಹೇಳಿಕೆ ನೀಡುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಾರ ನಗರದ ಲಾಲಾಬಹುದ್ದೂರ ಶಾಸ್ತ್ರಿ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರು ನಡೆಸುವ ಬಾರ್ ನಲ್ಲಿ ನೀರು ಎಂದು ಕೊಟ್ಟಿದ್ದ ಆ್ಯಸಿಡ್ ನ್ನು ಕುಡಿದು ವ್ಯಕ್ತಿಯೊರ್ವ ಮೃತಪಟ್ಟಿದ್ದು, ಆ ಕುರಿತಂತೆ ಈಗಾಗಲೇ ಎಫ್ ಐ ಆರ್ ಆಗಿದೆ.ಬಿ.ಎಲ್.ಡಿ. ಇ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿನಿಯ ಸಾವು ಆತ್ಮಹತ್ಯೆಯಿಂದ ಉಂಟಾಗಿದೆ. ಇದರಲ್ಲಿ ಯಾರೆ ತಪ್ಪಿತಸ್ಥರು ಇದ್ದಲ್ಲಿ ಅವರಿಗೆ ಶಿಕ್ಷೆ ಆಗಲಿದೆ. ಇದರಲ್ಲಿ ಯಾವುದೇ ಮುಲಾಜೆ ಇಲ್ಲ. ಆಕೆಯ ಆತ್ಮಹತ್ಯೆ ಹಿಂದಿನ ವಿವಿಧ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ನೀರು ಎಂದು ಹೇಳಿ,…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಘಟನೆ ಒಂದು. ಬಹುಮಹಡಿ ಕಟ್ಟಡದ ಶಾಲೆಗಳಲ್ಲಿ ದುಬಾರಿ ಫೀಸ್ ತೆತ್ತು ಪ್ರವೇಶ ಪಡೆದಿರುವ ಪಾಲಕರು ಅದರ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗದೆ ಒದ್ದಾಡುತ್ತಾರೆ. ಶಾಲೆಯ ಇನ್ ಫ್ರಾಸ್ಟ್ರಕ್ಚರ್ ಗೆ ತಕ್ಕಂತೆ ನೂರೆಂಟು ಶುಲ್ಕಗಳನ್ನು ಸಂಗ್ರಹಿಸುವ ಶಾಲೆಯವರು ದುಬಾರಿ ಬೆಲೆಯ ಬ್ರಾಂಡೆಡ್ ಯೂನಿಫಾರ್ಮ್, ಶೂಸ್, ಸ್ಕೂಲ್ ಬ್ಯಾಗ್ ಗಳನ್ನು, ನೋಟ್ ಬುಕ್ ಗಳನ್ನು ತಮ್ಮಲ್ಲಿಯೇ ಖರೀದಿಸಲು ಹೇಳುತ್ತಾರೆ, ಇದರ ಜೊತೆಗೆ ಮುಂಜಾನೆಯ ಬ್ರೇಕ್ ಫಾಸ್ಟ್ ಮತ್ತು ಲಂಚ್ ಗಳನ್ನು ತಮ್ಮಲ್ಲಿಯೇ ಪ್ರೊವೈಡ್ ಮಾಡುತ್ತೇವೆ ಎಂದು ಮತ್ತಷ್ಟು ಹಣವನ್ನು ಸುಲಿಗೆ ಮಾಡುತ್ತಾರೆ.ಸಾಕಷ್ಟು ಹಣಕಾಸಿನ ಅನುಕೂಲ ಇರುವವರೇ ತಡ ಬಡಾಯಿಸುವಂತಹ ಪರಿಸ್ಥಿತಿ ಇರುವಾಗ, ಹಣಕಾಸಿನ ತೊಂದರೆ ಇರುವವರು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದರೆ ಆ ಪಾಲಕರ ಪಾಡೇನು?ಘಟನೆ 2… ಮುಂಜಾನೆಯಿಂದ ಸಂಜೆಯವರೆಗೆ ಆಫೀಸಿನ ಕೆಲಸಗಳಲ್ಲಿ ವ್ಯಸ್ತರಾಗುವ ಆ ದಂಪತಿಗಳು ಇಳಿ ಸಂಜೆಯ ಹೊತ್ತಿಗೆ ಮನೆ ಸೇರಿ ವಿಶ್ರಾಂತಿ ಪಡೆಯುತ್ತಾರೆ. ವಾರಾಂತ್ಯಗಳಲ್ಲಿ ಸ್ನೇಹಿತರು, ಮೋಜು, ಮಸ್ತಿ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮೂಲಭೂತ ಸೌಲಭ್ಯ ಕಲ್ಪಿಸುವದು, ವೇತನ ಶ್ರೇಣಿ ನಿಗಧಿಪಡಿಸುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು ಸೇರಿದಂತೆ ವಿವಿಧ ಒಟ್ಟು ೨೩ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರಾರಂಭಿಸಿದ ೨ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡು ದಿನಗಳನ್ನು ಪೂರೈಸಿ ಮೂರನೇ ದಿನಕ್ಕೆ ಕಾಲಿರಿಸಿದೆ.ಮಂಗಳವಾರ ತಮ್ಮ ಬೇಡಿಕೆಗಳು ತಮಗೆ ಏಕೆ ಅವಶ್ಯಕ ಎನ್ನುವದನ್ನು ವಿವರಿಸುತ್ತ, ಘೋಷಣೆಗಳನ್ನು ಕೂಗಿದರು. ಧರಣಿ ಸ್ಥಳದಲ್ಲಿಯೇ ಊಟ ಮಾಡಿ ತಮ್ಮ ಆಕ್ರೋಷವನ್ನು ಹೊರಹಾಕಿದರು.ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ಕಂದಾಯ ಇಲಾಖೆಯ ನೌಕರರು ೫ವರ್ಷ ಸೇವೆ ಸಲ್ಲಿಸಿದರೆ ಪದೋನ್ನತಿಗೆ ಯೋಗ್ಯತೆ ಹೊಂದುತ್ತಾರೆ. ಆದರೆ ನಾವು ೧೮ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಇನ್ನೂ ಪದೋನ್ನತಿ ಇಲ್ಲ. ಹೀಗೆ ಹಲವು ವಿಷಯಗಳಲ್ಲಿ ನಮ್ಮನ್ನು ಕಡೆಗಣಿಸಿದ್ದು…

Read More

ನಮ್ಮ ಮೆಟ್ರೋ ಪ್ರಯಾಣ ದರ ಏಕಾಏಕಿ ಹೆಚ್ಚಳ | ಜನರಿಂದ ಆಕ್ರೋಶ | ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ. 50ರಷ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದು, ಮೆಟ್ರೋ ಟಿಕೆಟ್​ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾಸ್ತವಾಂಶಗಳನ್ನು ಬೆಂಗಳೂರು ಜನತೆಯ ಮುಂದಿಡಲು ಬಯಸುತ್ತೇನೆ. ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ.…

Read More

ದರೋಡೆಕೋರರ ಹಲ್ಲೆಯಿಂದ ಮೃತಪಟ್ಟ ಸಂತೋಷ ಕನ್ನಾಳ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಲು ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಕಳ್ಳರ ಹಾವಳಿಯಿಂದ ಗಂಬೀರ ಗಾಯಗೊಡಿದ್ದ ವಿಜಯಪುರ ನಗರದ ಜೈನಾಪೂರ ಲೇಔಟ ನಿವಾಸಿ ಸಂತೋಷ ಕನ್ನಾಳ, (ದಿಂಡವಾರ) ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು, ನೋವಿನ ಸಂಗತಿ ಕೂಡಲೇ ಸರ್ಕಾರ ಮೃತ ಸಂತೋಷನ ಕುಟಂಬಕ್ಕೆ ಪರಿಹಾರ ಒದಗಿಸಬೇಕೆಂದು ನ್ಯಾಯವಾದಿ ಶ್ರೀಶೈಲ ಮುಳಜಿ ಒತ್ತಾಯಿಸಿದರು.ಅವರು ಮಂಗಳವಾರ ವಿವಿಧ ಸಂಘಟನೆಗಳಿಂದ ವಿಜಯಪುರದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ಘಟನೆ ಸಂಭವಿಸಿ ತಿಂಗಳು ಕಳೆಯಲು ಬಂದರು ಜಿಲ್ಲಾಡಳಿತ ಹಾಗೂ ಸರ್ಕಾರ ಮೃತ ಸಂತೋಷನ ಕುಟುಂಬಕ್ಕೆ ಪರಿಹಾರ ನೀಡಲು ವಿಫಲವಾಗಿದೆ ಕೂಡಲೇ ಸೂಕ್ತ ಪರಿಹಾರ ನೀಡಿ ಮೃತ ಸಂತೋಷನ ಕುಟುಂಬಕ್ಕೆ ನ್ಯಾಯ ಒದಗಿಸಬೆಕೆಂದು ಆಗ್ರಹಿಸಿದರು.ಇನ್ನೋರ್ವ ಮುಖಂಡ ನ್ಯಾಯವಾದಿ ದಾನೇಶ ಅವಟಿಯವರು ಮಾತನಾಡಿ, ದರೋಡೆ ಪ್ರಕರಣದಲ್ಲಿ ಅನ್ಯಾಯವಾಗಿ ಮೃತ ಪಟ್ಟ ಸಂತೋಷ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರದಿಂದ ೨೫ ಲಕ್ಷ ರೂ ಗಳ ಪರಿಹಾರ ಹಾಗೂ ಮೃತನ ಪತ್ನಿಗೆ ಸರ್ಕಾರಿ…

Read More