ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ಶಿಕ್ಷಣ ನಮಗೆ ಬದುಕಿನಲ್ಲಿ ಧೈರ್ಯ ಮತ್ತು ತೃಪ್ತಿ ನೀಡುತ್ತದೆ ಎಂದು ಸ್ಥಳೀಯ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡಿಗೆ ಸಮಾರಂಭದಲ್ಲಿ ಸ್ಥಳೀಯ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಭಾಗವಹಿಸಿ ಮಾತನಾಡಿದರು.
ಇಂದು ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯವಾಗಿದೆ. ಇಂದಿನ ಯುವ ಜನಾಂಗದವರಲ್ಲಿ ಓದುವ, ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗುತ್ತಿರುವುದು ಮಾರಕ ಇದು ದೇಶದ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ. ಬದುಕನ್ನು ಪ್ರೀತಿಸಿ ಸಾಧನೆಡೆಗೆ ಸಾಗುವು ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಮೊದಲಿನಂತಿಲ್ಲ. ಅತ್ಯಂತ ಕಠಿಣ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡಿಯುವುದರಿಂದ ಅಧ್ಯಯನೆದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ಓದು ನಮ್ಮನ್ನು ಸಮಾಜದಲ್ಲಿ ದೊಡ್ಡವರನ್ನಾಗಿ ಬೆಳೆಸುವ ಜೊತೆಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.
ವೇದಿಕೆ ಮೇಲೆ ಉಪನ್ಯಾಸಕರಾದ ಆರ್.ಬಿ.ಹೊಸಮನಿ, ಬಿ.ಎಸ್.ಬಿರಾದಾರ, ವಿದ್ಯಾರ್ಥಿ ಪ್ರತಿನಿಧಿ ಸಿದ್ದಮ್ಮ ಅಗ್ನಿ ಇದ್ದರು. ಕಾರ್ಯಕ್ರಮದಲ್ಲಿ ದೈಹಿಕ ಉಪನ್ಯಾಸಕ ಸತೀಶ ಬಸರಕೋಡ, ಉಪನ್ಯಾಸಕರಾದ ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಸಿದ್ದಲಿಂಗ ಕಿಣಗಿ, ಡಾ.ಶಾಂತುಲಾಲ ಚವ್ಹಾಣ, ಎ.ಬಿ.ಪಾಟೀಲ, ಎ.ಆರ್.ಸಿಂದಗಿಕರ, ಗಂಗಾರಾಮ ಪವಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.