ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಜನತೆಯ ನಿರೀಕ್ಷೆಯಂತೆ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೇಸ್ ಪಕ್ಷದ ಪಾಲಾಗಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ನಾಲ್ಕನೆ ವಾರ್ಡಿನ ಸದಸ್ಯ ಚನಮಲ್ಲಪ್ಪ ಶಿವಪ್ಪ ಗಿಡ್ಡಪ್ಪಗೋಳ ಒಬ್ಬರೆ ನಾಮಪತ್ರ ಸಲ್ಲಿಸಿದರು ಅದರಂತೆ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಒಂಬತ್ತನೆ ವಾರ್ಡಿನ ಶ್ರಿಮತಿ ರಾಜಮಾ ನದಾಪ್ ಒಬ್ಬರೆ ನಾಮಪತ್ರ ಸಲ್ಲಿಸಿದ ಪ್ರಯುಕ್ತ ಚುನಾವಣಾಧಿಕಾರಿಗಳು ಎರಡು ಸ್ಥಾನಗಳಿಗೆ ಅವಿರೋದ ಆಯ್ಕೆ ನಡೆಯಿತು ಎಂದು ತಿಳಿಸಿದರು.
ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿಯವರ ಸ್ವಂತ ಊರಾದ ಕೊಲ್ಹಾರ ಪಟ್ಟಣ ಪಂಚಾಯತಿಯ ಸ್ಥಳಿಯ ಆಡಳಿತದ ಚುಕ್ಕಾಣೆ ಕಾಂಗ್ರೇಸ್ ಪಕ್ಷಕ್ಕೆ ದೊರಕಿದೆ ಎನ್ನುವದನ್ನು ಮಾಹಿತಿ ಪಡೆದ ಸಚಿವ ಶಿವಾನಂದ ಎಸ್ ಪಾಟೀಲ ಆಡಳಿತ ಕಛೇರಿಗೆ ಖುಷಿಯಿಂದ ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಹಲವಾರು ಜ್ವಲಂತ ಸಮಸ್ಯೆಗಳ ಮೂಟೆ ಹೊತ್ತಿರುವ ಕೊಲ್ಹಾರ ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸ್ಥಳಿಯ ಆಡಳಿತದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ನಿಡುತ್ತೇನೆ ಎಂದರು.
ಒಟ್ಟು 17 ಸದಸ್ಯ ಬಲದ ಪಟ್ಟಣ ಪಂಚಾಯತಯಲ್ಲಿ ಮೂವರು ಬಿಜೆಪಿ ಸದಸ್ಯರು ಮಾತ್ರ ಇದ್ದು ಉಳಿದಂತೆ ಇಬ್ಬರು ಎಐಎಮ್ಐಎಮ್ ಹನ್ನೊಂದು ಕಾಂಗ್ರೇಸ್ ಪಕ್ಷದ ಸದ್ಯಸ್ಯರು ಪಕ್ಷೇತರ ಪಕ್ಷದಿಂದ ಚುನಾಯಿತರಾದ ಸದಸ್ಯರಲ್ಲಿಯೆ ಹಿರಿಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ ಆಯ್ಕೆ ನಿರಿಕ್ಷೀತವಾಗಿತ್ತು ಉಪಾಧ್ಯಕ್ಷ ಸ್ಥಾನ ಪೈಪೋಟಿಯಿಂದ ಕೂಡಿದ್ದರು ಒಂದು ವರ್ಷದ ಅಧಿಕಾರ ಹಂಚಿಕೆ ಸೂತ್ರದಲ್ಲಿ ರಾಜಮಾ ನದಾಪ್ ಅವರ ಆಯ್ಕೇಯಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ ಎಸ್ ಎಸ್ ನಾಯಕಲಮಠ ಕಾರ್ಯನಿರ್ವಹಿಸಿದರು.
ಸಚಿವ ಶಿವಾನಂದ ಪಾಟೀಲ, ಮುಖ್ಯಾಧಿಕಾರಿ ಉಮೇಶ ಚಲವಾದಿ, ಮುಖಂಡರಾದ ಕಲ್ಲು ಶಂ ದೇಸಾಯಿ, ತಾನಾಜಿ ನಾಗರಾಳ ಸೇರಿದಂತೆ ಪಟ್ಟಣ ಪಂಚಾಯತ ಚುನಾಯಿತ ಸರ್ವಸದಸ್ಯರು ಉಪಸ್ಥಿತರಿದ್ದರು.