Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದಾನಗಳಲ್ಲಿ ಶ್ರೇಷ್ಟ ದಾನ ಅಕ್ಷರದಾನ. ಅಕ್ಷರ ಜ್ಞಾನ ಪಡೆದವರು ಈ ಪ್ರಪಂಚವನ್ನೇ ಬದಲಿಸುವ ಶಕ್ತಿ ಹೊಂದುತ್ತಾರೆ. ಅಂತಹ ಅಕ್ಷರ ಜ್ಞಾನ ನೀಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ಶಿಕ್ಷಕರು ಎಂದು ಕ್ಷೇತ್ರ ಸಮನ್ವಾಧಿಕಾರಿ ಯು.ಬಿ.ಧರಿಕಾರ ಹೇಳಿದರು.ತಾಲೂಕಿನ ಕಂದಗನೂರ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಉದ್ಘಾಟನೆ, ಶಾಲಾ ಬೆಳ್ಳಿ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಮತ್ತು ದಾನಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕ ಈ ದೇಶದ ರಕ್ಷಕ. ಎಲ್ಲ ವೃತ್ತಿಗಳಿಗಿಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ. ಹಿಂದೆ ಗುರು ಶಿಷ್ಯರ ಸಂಬಂಧ ಸಾಕಷ್ಟು ಗಟ್ಟಿಯಾಗಿರುತ್ತಿತ್ತು. ಸಧ್ಯದ ದಿನಮಾನಗಳಲ್ಲಿ ಗುರು ಶಿಷ್ಯರ ಬಾಂಧವ್ಯ ಕಡಿಮೆಯಾಗುತ್ತಿದೆ. ಶಿಕ್ಷಣ ವ್ಯಾಪಾರಿಕರಣದತ್ತ ಸಾಗುತ್ತಿದೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ. ಸಾಕಷ್ಟು ಪ್ರತಿಭಾನ್ವಿತ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಹಣ ಕಟ್ಟಿ ತಮ್ಮ ಮಕ್ಕಳನ್ನು…

Read More

ಉಮರಜದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ ಘೂಳೇಶ್ವರರಿಂದ ನುಡಿಮುತ್ತುಗಳು ಉದಯರಶ್ಮಿ ದಿನಪತ್ರಿಕೆ ಚಡಚಣ: ಗ್ರಾಮೀಣ ಭಾಗದಲ್ಲಿ ಕುಸ್ತಿ ಕಲೆಗಳು ಇನ್ನೂ ಜರುಗುತ್ತಿವೆ. ಇತ್ತಿತ್ತಲಾಗಿ ಇದು ನಶಿಸಿ ಹೋಗುತ್ತಿದ್ದು ಇದರ ಉಳಿವಿಗಾಗಿ ಯುವಕರು ಮುಂದಾಗಬೇಕು. ಶಕ್ತಿ ಪ್ರದರ್ಶನಕ್ಕಿಟ್ಟು ಆಡುವ ಕಲೆ ಕುಸ್ತಿ ಬಹಳ ಮಹತ್ವ ಪಡೆದಿದೆ ಎಂದು ಬೀರಪ್ದ ಖತಾಳೆಯವರು ಹೇಳಿದರು.ಬುಧವಾರದಂದು ಉಮರಜ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಕುಸ್ತಿ ಪಂದ್ಯಾಟದ ಮೈದಾನ ಪೂಜೆ ನೆರವೇರಿಸಿ ಮಾತನಾಡಿದ ಅವರು. ಗ್ರಾಮಗಳಲ್ಲಿ ಗರಡಿ ಮನೆಗಳನ್ನು ತೆರೆಯಬೇಕು. ಉತ್ತಮ ಮಾರ್ಗದರ್ಶನ ನೀಡುವ ಗುರು ದೊರೆಯಬೇಕು. ಅಂದಾಗ ಕುಸ್ತಿಪಟುಗಳು ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯ ಎಂದರು.ಸುಮಾರು ನೂರಾರು ಕುಸ್ತಿ ಪಟುಗಳು ಬಾಗಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದರು, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳು ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದವು. ೫೧ ಸಾವಿರ ಬಹುಮಾನದ ಕೊಲ್ಹಾಪುರದ ಸುನೀಲ ಕೊಟಗೊಂಡ ಹಾಗೂ ಬಾಮಣಿಯ ಶುಭಂ ದುಧಾಳೆಯವರ ಕುಸ್ತಗಳು ಪ್ರೇಕ್ಷಕರಿಗೆ…

Read More

ಶೀಘ್ರದಲ್ಲೇ ಕೆಲವು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ಕಲಬುರಗಿ: ಈಗಾಗಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ನಡುವೆ ಪೈಪೋಟಿ ಆರಂಭವಾಗಿದ್ದು, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಮಹತ್ವದ ಸುಳಿವು ನೀಡಿದ್ದಾರೆ.ಕಲಬುರಗಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಶೀಘ್ರದಲ್ಲೇ ಕೆಲವು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಒಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದರು.ಇದೇ ವೇಳೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಸಾಧ್ಯವಾಗುವುದಿಲ್ಲ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನು ಎಂಟು ದಿನಗಳಲ್ಲಿ ನಮ್ಮಿಂದಲೇ ಪ್ರಕಟಣೆ ಹೊರ ಬೀಳಲಿದೆ ಎಂದು ಸ್ಪಷ್ಟಪಡಿಸಿದರು.ಇನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್.ಎಮ್.ಎನ್. ಕ್ರೆಡಿಟ್ ಸೌಹಾರ್ದದ ಸಕ್ಷಮ ಪ್ರಾಧಿಕಾರಿಯನ್ನು ಸರ್ಕಾರ ಪದೆ ಪದೇ ಬದಲಾವಣೆ ಮಾಡುತ್ತಿದ್ದು, ಇದರಿಂದ ಠೇವಣಿ ವಂಚಿತ ಗ್ರಾಹಕರಿಗೆ ಹಣ ಮರುಪಾವತಿಸಲು ವಿಳಂಬವಾಗುತ್ತಿದ್ದು, ಆದ್ದರಿಂದ ಸಕ್ಷಮ ಪ್ರಾಧಿಕಾರಿಯನ್ನು ಹುದ್ದೆಯ ಬದಲಾಗಿ ಹೆಸರಿನಿಂದ ಆದೇಶ ಮಾಡಿ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಹಣ ಮರುಪಾವತಿ ಮಾಡುವರಿಗೂ ಸಕ್ಷಮ ಪ್ರಾಧಿಕಾರಿಯನ್ನು ಬದಲಾವಣೆ ಮಾಡಬಾರದೆಂದು ಆಗ್ರಹಿಸಿ ಠೇವಣಿ ವಂಚಿತ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ರವರಿಗೆ ಬರೆದ ಪತ್ರವನ್ನು ಬುಧವಾರದಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರೈತ ಮುಖಂಡ ಹಾಗೂ ಎಸ್.ಎಮ್.ಎನ್. ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಠೇವಣಿ ವಂಚಿತ ಹೋರಾಟ ಸಮಿತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ, ಈ ಸೌಹಾರ್ದದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳು ಸೇರಿ ಒಟ್ಟು ೨೧ ಶಾಖೆಗಳನ್ನು ಸೌಹಾರ್ದವು ಹೊಂದಿದ್ದು, ಗ್ರಾಹಕರು ನಂಬಿ ಕೋಟ್ಯಾಂತರ ಹಣವನ್ನು ತೊಡಗಿಸಿದ್ದಾರೆ. ಅವಧಿ ಮುಗಿದರೂ ಹಣ ಮರುಪಾವತಿಸದೇ ಆಡಳಿತ…

Read More

ಶುದ್ಧ ನೀರಿನ ಘಟಕ-ವೈದ್ಯಾಧಿಕಾರಿಗಳ ರಿಕ್ರಿಯೇಷನ್-ರೇಡಿಯಾಲಾಜಿ ಘಟಕ ಮೆಮೋಗ್ರಾಫಿ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಆರೋಗ್ಯವೂ ಅತಿಮುಖ್ಯವಾಗಿದೆ. ಆರೋಗ್ಯವೇ ಭಾಗ್ಯ ಎಂಬಂತೆ ವಿಜಯಪುರ ಜಿಲ್ಲಾಸ್ಪತ್ರೆಯು ಉತ್ಕಷ್ಠವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಹೊರರೋಗಿ, ಒಳರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಇಂಡಿಯನ್ ಬ್ಯಾಂಕ್ ವತಿಯಿಂದ ಒಳಾವರಣದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ ಹಾಗೂ ವೈದ್ಯಾಧಿಕಾರಿಗಳ ರಿಕ್ರೇಷನ್ ಹಾಗೂ ರೇಡಿಯೋಲಾಜಿ ಘಟಕದಲ್ಲಿ ಮೆಮೋಗ್ರಾಫಿ ಉದ್ಘಾಟನೆ, ಆರೋಗ್ಯ ರಕ್ಷಾ ಸಮಿತಿ ಸಭೆ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಆರೋಗ್ಯ ಸುಧಾರಣೆಯಾಗಿದೆ. ರೋಗಿಗಳ ಸಹಾಯಕ್ಕೆಂದು ರೋಗಿಗಳೊಂದಿಗೆ ಬರುವವರಿಗೆ ಉಳಿದುಕೊಳ್ಳಲು ಎರಡು ಕೋಟಿ ರೂ. ವೆಚ್ಚದ ಡಾರ್ಮೆಟರಿ ಕಾಮಗಾರಿಗೆ ಭೂಮಿಪೂಜೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯಲ್ಲಿ ಮಿಲ್ಕ ಬ್ಯಾಂಕ್ ಘಟಕ ಆರಂಭಿಸಲಾಗುತ್ತಿದೆ. ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಪವರ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬ ವ್ಯಕ್ತಿಗೆ ಗೌರವಯುತ ಜೀವನ ನಡೆಸಲು ಕಾನೂನಿನಡಿ ಅವಕಾಶಗಳಿದ್ದು, ಅನಿಷ್ಠ ಪದ್ಧತಿಯಾದ ಜೀತಪದ್ಧತಿಯ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಅಂದಾಗ ಮಾತ್ರ ಇಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಜೀತ ಕಾರ್ಮಿಕ ಪದ್ಧತಿ ನಿಷೇಧ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು ಇದು ಮಾನವತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ಧತಿ) ಕಾಯ್ದೆ ೧೯೭೬ ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ೨-೩ ವರ್ಷಗಳಿಂದ ಗುತ್ತಿಗೆದಾರರು ವಿವಿಧ ಇಲಾಖೆಗಳಲ್ಲಿ, ನಿಗಮಗಳಲ್ಲಿ ವಿವಿಧ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಾಮಗಾರಿಗಳಿಗೆ ಇನ್ನೂವರೆಗೂ ಬಾಕಿ ಹಣ ಬಿಡುಗಡೆಗೊಂಡಿರುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೀವ್ರ ಹಿನ್ನೆಡೆಯಾಗಿರುತ್ತದೆ. ಆದ ಕಾರಣ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಫೆ.೧೪ ರಂದು ೧೦ ಗಂಟೆಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಹಮ್ಮಿಕೊಂಡು ನಗರದ ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘ,ದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಆರ್. ರೂಡಗಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ.ಆರ್. ರೂಡಗಿ, ಗೌರವಾಧ್ಯಕ್ಷರಾದ ಅರುಣ ಎಸ್. ಮಠ, ಈ ಪ್ರತಿಭಟನೆಯಲ್ಲಿ ಸೋನ್ ಕ್ರಸರ್ ವಿಜಯಪುರ ಜಿಲ್ಲಾ ಅಧ್ಯಕ್ಷ ಪ್ರವೀಣ ಹಿರೇಮಠ, ಉಪಾಧ್ಯಕ್ಷ ಸಿ.ಆರ್. ಗಂಗಾಧರ, ಅಸೋಸಿಯೇನ್ ಕನಸ್ಟಂಟನ್ಸ್ ಸಿವ್ಹಿಲ್ ಇಂಜೀನೀಯರ ಡಿ.ಜಿ. ಬಿರಾದಾರ, ನ್ಯಾಯವಾದಿಗಳ ಸಂಘ ವಿಜಯಪುರ ಮತ್ತು ರವೀಂದ್ರ ಬಿಜ್ಜರಗಿ ಅಧ್ಯಕ್ಷರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕರ್ನಾಟಕ ಕಲಾ ಸಂಘವು ಸಾಧಕರ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ ೧೬-೨-೨೦೨೫ ರವಿವಾರ ಮುಂಜಾನೆ ೧೦-೩೦ ಗಂಟೆಗೆ ಉಪ್ಪಲಿ ಬುರ್ಜ ಹತ್ತಿರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಗಮಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ವಾಗ್ದೇವಿ ಪ್ರಶಸ್ತಿ ಪುರಸ್ಕೃತರಾದ ಕಲ್ಯಾಣರಾವ ದೇಶಪಾಂಡೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಡಾ. ಸುಭಾಸಚಂದ್ರ ಕನ್ನೂರ ಅವರನ್ನು ಸನ್ಮಾನಿಸಲಾಗುವುದು.ದರಬಾರ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ. ವೇದನಿಧಿ ಆಚಾರ್ಯ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಶ್ರೀ ನಾರಾಯಣ ಬಾಬಾನಗರ ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಚೇತನ ಅಂಧ ಸಾಹಿತಿ ಶ್ರೀತನಯ ಕಾವ್ಯನಾಮದ ಬಳವಂತ ಕುಲಕರ್ಣಿ ವಿಶೇಷ ಅತಿಥಿಗಳಾಗಿ ಆಗಮಿಸುವರು.ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ ಹಾಗೂ ಸದಸ್ಯರಾದ ಪ್ರಕಾಶ ಇನಾಮದಾರ ಮತ್ತು ಪ್ರೊ. ರಾಮಚಂದ್ರ ದಿಕ್ಷೀತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Read More

ಕಠಿಣ ಪರೀಶ್ರಮ ಮತ್ತು ಬೋಧಕರ ಸಮರ್ಪಣಾ ಭಾವದ ಫಲವೇ ಈ ಫಲಿತಾಂಶ :ಬಸವರಾಜ್ ಕೌಲಗಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಾಡಿನಾಧ್ಯಂತ ಹೆಸರು ಮಾಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತನ್ನ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿ ಒದಗಿಸಿದೆ.ಐಐಟಿ, ಐಐಐಟಿ ಸೇರಿದಂತೆ ಭಾರತದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಎಂಜಿನೀಯರಿಂಗ್ ಕೋರ್ಸಗಳಿಗೆ ಪ್ರವೇಶ ಪಡೆದುಕೊಳ್ಳುವುದಕ್ಕೆಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೂಲಕ ನಡೆಸಲಾಗುವ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಸಾಧನೆ ಮಾಡಿದ್ದಾರೆ. ಜನೇವರಿ ೨೦೨೫ ರಲ್ಲಿ ಜರುಗಿದ ಜೆಇಇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಅತ್ಯಂತ ಸ್ಪರ್ಧಾತ್ಮಕವಾಗಿರುವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಮರ್ಥ ಕಾಲಾಲ್(೯೮.೯೬), ಹರ್ಷ ಋಣವಾಲ(೯೮.೬೮), ಪ್ರೀತಮ ಬಾಗಲೇ(೯೭.೭೪), ಇಜ್ರೆಲ್ ಮಗಲಿ(೯೭.೫೬), ಅಭಿಷೇಕ್ ಜೋರಾಪುರ(೯೭.೫೩), ಪ್ರೇಮ್ ಚನಗೊಂಡ(೯೭.೧೮), ಗಂಗಾಧರ ಮುಟಗಿ(೯೭.೧೬),…

Read More

ಕಲುಷಿತ ನೀರಿನೊಂದಿಗೆ ಸಭೆಗೆ ಬಂದ ಕೆಸರಟ್ಟಿ ಮಹಿಳೆಯರು | ಅಧಿಕಾರಿಗಳ ಪ್ರತಿ ಹೇಳಿಕೆಗೆ ಕೆಡಿಪಿ ನೂತನ ಸದಸ್ಯರಿಂದ ಆಕ್ಷೇಪ | ಅಧಿಕಾರಿಗಳ ರಕ್ಷಣೆಗೆ ನಿಂತ ಶಾಸಕರು ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಜರುಗಿದ ೨೦೨೪-೨೫ನೇ ಸಾಲಿನ ಒಂದನೇ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಒಂದು ಮೋಟಾರು ರಿಪೇರಿಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರೆ ನನಗೆ ಕರೆ ಮಾಡಿದರೆ ಹೇಗೆ? ೧೫ ನೇ ಹಣಕಾಸು ಅನುದಾನ ಬಳಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸಭೆಯಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬೆಳಿಗ್ಗೆ ಒಂದು ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆಗೆ ಕೆಡಿಪಿ ನೂತನ ಸದಸ್ಯರಿಗೆ…

Read More