ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕರ್ನಾಟಕ ಕಲಾ ಸಂಘವು ಸಾಧಕರ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ ೧೬-೨-೨೦೨೫ ರವಿವಾರ ಮುಂಜಾನೆ ೧೦-೩೦ ಗಂಟೆಗೆ ಉಪ್ಪಲಿ ಬುರ್ಜ ಹತ್ತಿರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗಮಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ವಾಗ್ದೇವಿ ಪ್ರಶಸ್ತಿ ಪುರಸ್ಕೃತರಾದ ಕಲ್ಯಾಣರಾವ ದೇಶಪಾಂಡೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಡಾ. ಸುಭಾಸಚಂದ್ರ ಕನ್ನೂರ ಅವರನ್ನು ಸನ್ಮಾನಿಸಲಾಗುವುದು.
ದರಬಾರ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ. ವೇದನಿಧಿ ಆಚಾರ್ಯ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಶ್ರೀ ನಾರಾಯಣ ಬಾಬಾನಗರ ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಚೇತನ ಅಂಧ ಸಾಹಿತಿ ಶ್ರೀತನಯ ಕಾವ್ಯನಾಮದ ಬಳವಂತ ಕುಲಕರ್ಣಿ ವಿಶೇಷ ಅತಿಥಿಗಳಾಗಿ ಆಗಮಿಸುವರು.
ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ ಹಾಗೂ ಸದಸ್ಯರಾದ ಪ್ರಕಾಶ ಇನಾಮದಾರ ಮತ್ತು ಪ್ರೊ. ರಾಮಚಂದ್ರ ದಿಕ್ಷೀತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.