ಉಮರಜದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ ಘೂಳೇಶ್ವರರಿಂದ ನುಡಿಮುತ್ತುಗಳು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಗ್ರಾಮೀಣ ಭಾಗದಲ್ಲಿ ಕುಸ್ತಿ ಕಲೆಗಳು ಇನ್ನೂ ಜರುಗುತ್ತಿವೆ. ಇತ್ತಿತ್ತಲಾಗಿ ಇದು ನಶಿಸಿ ಹೋಗುತ್ತಿದ್ದು ಇದರ ಉಳಿವಿಗಾಗಿ ಯುವಕರು ಮುಂದಾಗಬೇಕು. ಶಕ್ತಿ ಪ್ರದರ್ಶನಕ್ಕಿಟ್ಟು ಆಡುವ ಕಲೆ ಕುಸ್ತಿ ಬಹಳ ಮಹತ್ವ ಪಡೆದಿದೆ ಎಂದು ಬೀರಪ್ದ ಖತಾಳೆಯವರು ಹೇಳಿದರು.
ಬುಧವಾರದಂದು ಉಮರಜ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಕುಸ್ತಿ ಪಂದ್ಯಾಟದ ಮೈದಾನ ಪೂಜೆ ನೆರವೇರಿಸಿ ಮಾತನಾಡಿದ ಅವರು. ಗ್ರಾಮಗಳಲ್ಲಿ ಗರಡಿ ಮನೆಗಳನ್ನು ತೆರೆಯಬೇಕು. ಉತ್ತಮ ಮಾರ್ಗದರ್ಶನ ನೀಡುವ ಗುರು ದೊರೆಯಬೇಕು. ಅಂದಾಗ ಕುಸ್ತಿಪಟುಗಳು ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯ ಎಂದರು.
ಸುಮಾರು ನೂರಾರು ಕುಸ್ತಿ ಪಟುಗಳು ಬಾಗಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದರು, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳು ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದವು. ೫೧ ಸಾವಿರ ಬಹುಮಾನದ ಕೊಲ್ಹಾಪುರದ ಸುನೀಲ ಕೊಟಗೊಂಡ ಹಾಗೂ ಬಾಮಣಿಯ ಶುಭಂ ದುಧಾಳೆಯವರ ಕುಸ್ತಗಳು ಪ್ರೇಕ್ಷಕರಿಗೆ ಆನಂದ ತಂದವು.
ನುಡಿಮತ್ತುಗಳು: ಬುಧವಾರದ ನಸುಕಿನ ಜಾವ ೦೩:೩೦ ರಿಂದ ೫ ಗಂಟೆಯವರೆಗೆ ಘೂಳೇಶ್ವರ ಮಹಾರಾಜರಿಂದ ಉತ್ತಮ, ಉತ್ತಮ. ಮುಂಗಾರಿ ಹಿಂಗಾರಿ ಸ್ವಸ್ತ, ಎಚ್ಚರೋ! ಎಚ್ಚರ!, ಸುಕಾಲ! ಸುಕಾಲ! ರೈತರಿಗೆ ಸುಕಾಲ!, ಜನಪೀಡ, ಅಂಜಿಕೆ ಅಂಜಿಕೆ “ಕಾಲಜ್ಞಾನದ ನುಡಿಮುತ್ತುಗಳು” ಜರುಗಿದವು.
ಈ ವೇಳೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಸೇರಿದ್ದರು. ಅಲ್ಲದೇ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಸಿಬ್ಬಂದಿ ವರ್ಗ, ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನ ಕಮೀಟಿಯ ಸದಸ್ಯರುಗಳು, ಗ್ರಾಮಸ್ಥರು ಭಾಗವಹಿಸಿದ್ದರು.