ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ೨-೩ ವರ್ಷಗಳಿಂದ ಗುತ್ತಿಗೆದಾರರು ವಿವಿಧ ಇಲಾಖೆಗಳಲ್ಲಿ, ನಿಗಮಗಳಲ್ಲಿ ವಿವಿಧ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಾಮಗಾರಿಗಳಿಗೆ ಇನ್ನೂವರೆಗೂ ಬಾಕಿ ಹಣ ಬಿಡುಗಡೆಗೊಂಡಿರುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೀವ್ರ ಹಿನ್ನೆಡೆಯಾಗಿರುತ್ತದೆ. ಆದ ಕಾರಣ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಫೆ.೧೪ ರಂದು ೧೦ ಗಂಟೆಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಹಮ್ಮಿಕೊಂಡು ನಗರದ ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘ,ದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಆರ್. ರೂಡಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ.ಆರ್. ರೂಡಗಿ, ಗೌರವಾಧ್ಯಕ್ಷರಾದ ಅರುಣ ಎಸ್. ಮಠ, ಈ ಪ್ರತಿಭಟನೆಯಲ್ಲಿ ಸೋನ್ ಕ್ರಸರ್ ವಿಜಯಪುರ ಜಿಲ್ಲಾ ಅಧ್ಯಕ್ಷ ಪ್ರವೀಣ ಹಿರೇಮಠ, ಉಪಾಧ್ಯಕ್ಷ ಸಿ.ಆರ್. ಗಂಗಾಧರ, ಅಸೋಸಿಯೇನ್ ಕನಸ್ಟಂಟನ್ಸ್ ಸಿವ್ಹಿಲ್ ಇಂಜೀನೀಯರ ಡಿ.ಜಿ. ಬಿರಾದಾರ, ನ್ಯಾಯವಾದಿಗಳ ಸಂಘ ವಿಜಯಪುರ ಮತ್ತು ರವೀಂದ್ರ ಬಿಜ್ಜರಗಿ ಅಧ್ಯಕ್ಷರು ಪಠ್ಯ ಪುರಸ್ಕಾರ ಸಂಘ ವಿಜಯಪುರ ಲಾಲಚಂದ ಜೈನ ಅಧ್ಯಕ್ಷರು ಕಿರಣಾ ಸಂಘ, ವ್ಯಾಪಾರಸ್ಥರು ಸಂಘ, ವಿಜಯಪುರ ಹಾಗೂ ಸಿಮೇಂಟ್ ವ್ಯಾಪಾರಸ್ಥರು ಸಂಘದ ಅಧ್ಯಕ್ಷರು, ಕಬ್ಬಿಣ ಮತ್ತು ಬಣ್ಣ ಮತ್ತು ಡಾಂಬರ ಮತ್ತು ಪ್ರಾಬ್ರಿಕ್ ಮಾಲೀಕರು ಕೂಲಿ ಕಾರ್ಮಿಕರು ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ತಾಲೂಕಾ ಘಟಕಗಳಾದ ಇಚಿಡಿ ಘಟಕದ ರಮೇಶ ಪಾಟಿಲ(ಬೈರುಣಗಿ) ಬಸವನ ಬಾಗೇವಾಡಿ ಎ.ಬಿ. ನರಸರಡ್ಡಿ, ಸಿಂದಗಿ ಘಟಕದ ಎಮ್.ಎಮ್. ಮುಂಡೆವಾಡಿ, ಮುದ್ದೇಬಿಹಾಳ ಘಟಕದ ಸುರೇಶಗೌಡ ಪಾಟೀಲ, ಕೃಷ್ಣಾ ತೀರದ ಗುತ್ತಿಗೆದಾರರ ಸಂಘ ಆಲಮಟ್ಟಿ ಶಿವಾನಂದ ಗದಿಗೆಪ್ಪಗೌಡ, ಆರ್.ಡಬ್ಲೂö್ಯ.ವಿ.ಎಸ್. ಗುತ್ತಿಗೆದಾರರ ಸಂಘ ಮೇಟಗಾರ, ಸಿ.ಎಮ್.ಸಿ. ಕಾರಪೋರೇಷನ್ ಉಮೇಸು ಸಂಜು ಜತ್ತಿ, ಕೆಇಬಿ ಗುತ್ತಿಗೆದಾರ ಸಂಘ ಹರೀಶ ಕುಲಕರ್ಣಿ ಮುಂತಾದವರು ಈ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿ ಉಪಸ್ಥಿತರಿರುತ್ತಾರೆ ಎಂದು ಸಂಘದ ಅಧ್ಯಕ್ಷ ಸಿ.ಆರ್. ರೂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.