Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಪಾಲಿಗೆ ವರದಾನವಾಗಿದೆ ಎಂದು ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ್ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಪಿಎಸಿಎಸ್ ಕೆಂಭಾವಿ-2 ಸಹಕಾರ ಸಂಘದ ಅಡಿಯಲ್ಲಿ ಆರಂಭಿಸಿದ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ರೈತರು ತಾವು ಬೆಳೆದ ಫಸಲನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿ ಮೋಸ ಹೋಗದೆ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ 7550/- ರೂಪಾಯಿ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 450/- ರೂಪಾಯಿ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 8000/- ರೂಪಾಯಿಗೆ ರೈತರು ಬೆಳೆದ ತೊಗರಿಯನ್ನು ಖರೀದಿಸುತ್ತಿದ್ದು. ರೈತರು ಮುಂಚಿತವಾಗಿ ಬಂದು ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಸಹಕಾರಿ ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಡಿ ಯಾಳಗಿ ಮಾತನಾಡಿ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿ ನಿಯಮಿತ ಮತ್ತು…
ರಚನೆ- ರಾಜಶೇಖರ ರಾವ್ಸೋಮನಹಳ್ಳಿ ಉದಯರಶ್ಮಿ ದಿನಪತ್ರಿಕೆ ಆರದಿರದ ನಂದಾದೀಪ ಬಾನಂಗಳದಲಿಆ ದೀಪ ಬೆಳಗುತಲಿ ನಿರಂತರ ಬ್ರಹ್ಮಾಂಡದಲಿಹಗಲಲ್ಲಿ ಭಾಸ್ಕರನ ಪಾಳಿ ಇರುಳಲಿ ಚಂದಿರಇವರನುಗುಣ ಪ್ರಕೃತಿಯ ಪ್ರಕ್ರಿಯೆ ಶಾಶ್ವತ ಇಂದು ಆಳಿ ಅಳಿಸಿ ನಾಳೆಗಳ ಮಾಡುವ ದೀಪನಾಳೆ ಹಾಳೆಗಳಲಿ ಅಕ್ಷರನಾದ ಬರೆವ ದಾರಿದೀಪಪ್ರತಿಯ ಪ್ರತಿಸಾಲುಗಳು ಬದುಕು ಹರೆವ ಹಾದಿಹಾದಿಗಳಲಿ ನೀತಿ ನಿಯಮ ಪೊರೆಯುವ ಗಾದಿ ಸೊಡರಿದುವೆ ನಿರಂತರ ಉರಿವ ಸುಂದರ ದೀಪಬತ್ತಿದರು ಎಣ್ಣೆಬತ್ತಿ ನಿಗಿನಿಗಿ ಹೊತ್ತುರಿವ ತಾಪನಿರಂತರ ಕರ್ಮಚಕ್ರ ಕಳೆವ ಪಯಣದ ಶಾಪಸೂರ್ಯ ಚಂದ್ರರೆ ರಂಗದಾಟಕೆ ನಂದಾದೀಪ
ಲೇಖನಸುಮಗೌಡ(’ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಅತಿ ಮಾನುಷ ಶಕ್ತಿಗಳ ಬಗ್ಗೆ ಸಂಶೋಧನೆ ಮಾಡಿದಾಗ ಬಹಳಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿರುವ ಹಲವಾರು ಉದಾಹರಣೆಗಳು ಇವೆ.ಸಾಮಾನ್ಯವಾಗಿ ನಾವೆಲ್ಲ ಕೇಳಿ ನೋಡುತ್ತಾ ಬಂದಂತೆ ನಾವು ಚಿಕ್ಕವರಿರುವಾಗ ಊಟ ಮಾಡಿಸುವಾಗ ಅಥವಾ ಹಠಮಾಡಿದಾಗ ನಮ್ಮನ್ನು ಹೆದರಿಸಲು ಅಮ್ಮ ಗುಮ್ಮನನ್ನು ಕರಿತೀನಿ ಊಟ ಮಾಡು ಅನ್ನುತ್ತಿದ್ದದ್ದು ಮಾತು ಕೇಳದೆ ಹಠ ಮಾಡಿದರೆ ಗೊಗ್ಗಯ್ಯ ಬಂದು ಹಿಡ್ಕೊಂಡು ಹೋಗ್ತಾನೆ ಎಂದು ಹೆದರಿಸಿ ಮಾತು ಕೇಳುವಂತೆ ಮಾಡುತ್ತಿದ್ದು ಅದೆಷ್ಟು ಭಯ ಹುಟ್ಟಿಸುತ್ತಿತ್ತು ಅಂದರೆ ಮನೆಯೊಳಗೆ ಸ್ವಲ್ಪ ಕತ್ತಲೆ ಇರುವ ಜಾಗಕ್ಕೆ ಹೋಗಲು ಸಹ ಭಯ ಆಗುತ್ತಿತ್ತು. ಇದೆಲ್ಲಾ ಅಮ್ಮ ಪ್ರೀತಿಯಿಂದ ಹೇಳುತ್ತಿದ್ದಳು ಅನ್ನೋದು ಗೊತ್ತೇ ಆಗ್ತಿರಲಿಲ್ಲ .ಅತಿಮಾನುಷ ಶಕ್ತಿಗಳಲ್ಲಿ ಎಷ್ಟು ಸತ್ಯ ಹಾಗೂ ಪವಾಡಗಳು ತುಂಬಿರುತ್ತವೆ ಎಂಬುದಕ್ಕೆ ಒಂದು ಸತ್ಯ ಘಟನೆಯ ಸಾಕ್ಷಿ ಇದೆ. ನನ್ನ ಸೊಸೆಯ ಊರಿನಲ್ಲಿ ಅವರ ಕಾಫಿ ಎಸ್ಟೇಟ್ಗಳಲ್ಲಿ ಕಾಫಿ ಬೆಳೆ ಹಾಗೂ ಎಲ್ಲಾ ರೀತಿಯ ರಕ್ಷಣೆಗಳಿಗಾಗಿ ಚೌಡಮ್ಮನನ್ನು ಪೂಜಿಸುವ ಪದ್ಧತಿ ರೂಢಿಯಲ್ಲಿದೆ. ಅದಕ್ಕಾಗಿ…
ಕೊಡೇಕಲ್ ದಾವಲಮಲಿಕ್ ಅಜ್ಜರ ಯಶೋಗಾಥೆ | ದಾರಿ ಹೋಕರಿಂದ ಹಿಡಿದು ಅನಾಥರಿಗೆಲ್ಲ ಅನ್ನ, ನೀರು, ನೆರಳು ನೀಡಿದ ಸಹೃದಯಿ ಉದಯರಶ್ಮಿ ದಿನಪತ್ರಿಕೆ ವರದಿ: ಇಲ್ಯಾಸ್ ಪಟೇಲ್. ಬಯಾದಗಿರಿ: ತಾಯಿಯ ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ತಾಯಿಯಪ್ರೀತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ ತಂದೆ ತಾಯಿ ಇಲ್ಲದ ನೂರಾರು ಅನಾಥ ಜೀವಗಳ ತಾಯಿಯಾಗಿ, ತಂದೆಯಾಗಿ ಹಗಲು ರಾತ್ರಿ ಮಕ್ಕಳ ಆರೈಕೆ ಮಾಡುತ್ತಿರುವ ಮಹಾನ್ ಜೋಳಿಗೆ ಅಜ್ಜರ ಮಮತೆಯ ಮಡಿಲು ಇಲ್ಲಿದೆ ನೋಡಿ,ಅವರೆಲ್ಲ ಕನಸುಗಳನ್ನ ಹೊತ್ತುಕೊಂಡು ಓಡಾತ್ತಿರುವ ಪುಟ್ಟ ಪುಟ್ಟ ಮಕ್ಕಳು. ತಾಯಿಯ ಆಸರೆ ಇಲ್ಲದೆ, ಭಾವನೆಗಳ ಬರಿದಾದ ಜೀವನದಲ್ಲಿ ತಾಯಿಯ ಮಡಿಲು ಬೇಡುತ್ತಿರುವ ಚಿಕ್ಕ ಚಿಕ್ಕ ಕಂದಮ್ಮಗಳು. ಯ್ಯಾರೊ ಮಾಡಿದ ತಪ್ಪಿಗೆ ಇನ್ಯಾರೊ ನೋವು ಅನುಭವಿಸುತ್ತಿರುವ ಆ ಜೀವಗಳು. ತಂದೆ ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ಶಿಕ್ಷೆ. ಈ ಎಲ್ಲ ನೋವು ಗಳನ್ನ ಅರಿತು, ತಾಯಿ ಮನಸ್ಸಿನಿಂದ ಆರೈಕೆ ಮಾಡುತ್ತಿರುವ ಹೃದಯ ವಂತಿಕೆಯ ನೂರು ಮಕ್ಕಳ ತಾಯಿ_ತಂದೆಯಾಗಿ ಭವದ ಬಯಲಿಗೆ ಬೆಂದು ಬಿದ್ದ ಜೀವಗಳ ರಕ್ಷಣೆಗಾಗಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಪಟ್ಟಣದ ಗ್ರಾಮ ದೇವತೆ ಜಾತ್ರೆಯನ್ನು ಈ ಬಾರಿಯೂ ಅತ್ಯಂತ ಅದ್ಧೂರಿಯಾಗಿ ಮೇ೩೦ ರಂದು ನಡೆಸಲು ನಿರ್ಧರಿಸಲಾಯಿತು.ಈ ಕುರಿತು ಪಟ್ಟಣದ ಕುಂಬಾರಗಲ್ಲಿಯ ಗ್ರಾಮ ದೇವತೆ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವ ಸಮಾಜದ ಮುಖಂಡರು, ಊರಿನ ಗುರು ಹಿರಿಯರು, ಗಣ್ಯ ವರ್ತಕರ ಒಮ್ಮತದ ಒಪ್ಪಿಗೆಯ ಮೇಲೆ ಈ ನಿರ್ಧಾರವನ್ನು ಪ್ರಕಟಿಸಲಾಯಿತು.ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಅಶೋಕ ವನಹಳ್ಳಿ, ಪ್ರತಿಭಾ ಅಂಗಡಗೇರಿ, ರಫೀಕ ದ್ರಾಕ್ಷಿ, ಭಾರತಿ ಪಾಟೀಲ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ಬಿರಾದಾರ, ಎಂ.ಎಸ್.ನಾವದಗಿ, ಪ್ರಮುಖರಾದ ಅಶೋಕ ನಾಡಗೌಡ, ಅಪ್ಪು ಸಿದ್ದಾಪೂರ, ಬಾಬು ಬಿರಾದಾರ, ಸಂಗಣ್ಣ ಬಿರಾದಾರ ಜಿಟಿಸಿ, ಸುಧೀರ ನಾವದಗಿ, ಸತೀಶ ಓಸ್ವಾಲ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಅಶೋಕ ಚಟ್ಟೇರ, ಸಂಗಣ್ಣ ಮೇಲಿನಮನಿ, ಮುತ್ತಣ್ಣ ರಾಯಗೊಂಡ, ವಿಜೇಂದ್ರ ಅಶೋಕ, ಪರಶುರಾಮ ನಾಲತವಾಡ,…
ವರದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸತ್ತದೆ ಎಂದು ಸೋಮವಾರ ಹೇಳಿದ್ದಾರೆ.ರಾಜ್ಯದ ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ, ಈ ವರ್ಷದ ಕೊನೆಯಲ್ಲಿ “ಪರ್ಯಾಯ ಮುಖ್ಯಮಂತ್ರಿ” ಅಥವಾ “ಅಧಿಕಾರ ಹಂಚಿಕೆ” ಸೂತ್ರದಡಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತುಕತೆಗಳು ನಡೆದಿವೆ.ಸೋಮವಾರ ಈ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, “ಅದನ್ನು ಹೈಕಮಾಂಡ್ ನಿರ್ಧರಿಸಬೇಕು” ಎಂದು ತಿಳಿಸಿದರು.ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಬಲ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದು, ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಹಲವು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ.ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಒಂದು ವರ್ಗವು ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿಸಲು ಪದೇ ಪದೇ ಪ್ರಯತ್ನಗಳು ನಡೆಸುತ್ತಿದೆ. ಸಿದ್ದರಾಮಯ್ಯ ಪಕ್ಷಕ್ಕೆ ಅನಿವಾರ್ಯ :ಡಿಕೆಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪಕ್ಷಾತೀತ ನಾಯಕರಾಗಿದ್ದಾರೆ. ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಯಾರೂ ಹೇಳಿಕೆ ನೀಡುವ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನ ನೂತನ ನಿರ್ದೇಶಕರ ಚುನಾವಣೆಗೆ ಫೆ.೧೬ರಂದು ಮತದಾನ ಹಾಗೂ ಮತ ಎಣ ಕೆ ಕಾರ್ಯ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನವರು ಗೆಲ್ಲುವ ಮೂಲಕ ಪಿಎಲ್‌ಡಿ ಬ್ಯಾಂಕ್‌ಗೆ ಕಾಂಗ್ರೆಸ್ ತೆಕ್ಕೆಗೆ ಸೇರುವಂತಾಗಿದ್ದರಿಂದ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಈ ಕುರಿತು ಮಾತನಾಡುತ್ತಾ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಹಾಗೂ ಶಾಸಕ ಎಂ.ವೈ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಗಾಗಿ ಕಸರತ್ತು ಮಾಡಲಾಗಿತ್ತು. ಹೀಗಾಗಿ ೧೪ ನಿರ್ದೇಶಕರ ಸ್ಥಾನದ ಪೈಕಿ ಈ ಪೈಕಿ ೧೧ ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಹೊಸದಾಗಿ ಆಯ್ಕೆಗೊಂಡವರು ರೈತರ ಪರವಾಗಿ ಕೆಲಸಮಾಡಿ ಶಾಸಕರ, ಮಾಜಿ ಸಚಿವರ ಗೌರವ ಉಳಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಫಲಿತಾಂಶದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ಮೂರ್ತಿ, ಅಂಬೇಡ್ಕರ್ ಮೂರ್ತಿಗಳಿಗೆ ಪುಷ್ಪ ನಮನ ಸಲ್ಲಿಸಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸ್ತುತ ಸಮಾಜವು ಅತ್ಯಂತ ಕಲುಷಿತ ವಾತಾವರಣದಲ್ಲಿದೆ ಅಂದರೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ, ಅದಕ್ಕಾಗಿ ಜಾನಪದ ಸಾಹಿತ್ಯ ಶರಣ ಸಾಹಿತ್ಯ ತಿಳಿದು ನಡೆದರೆ ಮಾನವ ಜನಾಂಗಕ್ಕೆ ದಾರಿದೀಪ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಹೇಳಿದರು.ನಗರದ ವೀರಶೈವ ಲಿಂಗಾಯತ ಮಹಾಸಭಾ ಸಮುದಾಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ ಅಡಿಯಲ್ಲಿ ಡಾ ಎಂ ಎನ್ ವಾಲಿ ಪ್ರತಿಷ್ಠಾನ ಯುಗದರ್ಶಿನಿ ಪ್ರತಿಷ್ಠಾನ ವತಿಯಿಂದ ಜನಪದ ಸಾಹಿತ್ಯೋತ್ಸವ ಹಾಗೂ ಶರಣ ಸಾಹಿತ್ಯೋತ್ಸವ ಕಾರ್ಯಕ್ರಮದ ಸಮಾರೋಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾರದಾ ಐಹೊಳೆ ಮಾತನಾಡಿ, ಭಾರತವು ಭವ್ಯ ಸಂಸ್ಕೃತಿಯ ಆಗರ. ಇಲ್ಲಿ ಜನಪದ ಮತ್ತು ಶರಣ ಸಾಹಿತ್ಯ ಶ್ರೇಷ್ಠ ಸಾಹಿತ್ಯ.ನಾವು ಈ ಎರಡು ಸಾಹಿತ್ಯಗಳನ್ನು ಅಧ್ಯಯನ ಮಾಡಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸುಂದರವಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ…
ಹರಳಯ್ಯ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ವಿಶೇಷ ತರಗತಿ ಆಯೋಜನೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಬರಲಿರುವ ಎಸ್ಸೆಸ್ಸೆಲ್ಸಿ ವಾಷಿ೯ಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಹವಣಿಸಬೇಕು. ಅದಕ್ಕೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಅದ್ಯಯನಶೀಲರಾಗಿ ಓದಾಭ್ಯಾಸದಲ್ಲಿ ತಲ್ಲಿನರಾಗಬೇಕು. ಅತ್ಯಂತ ಸುಲಭವಾಗಿ ಅತಿ ಹೆಚ್ಚು ಅಂಕಗಳಿಸಲು ಗಣಿತ ವಿಷಯದಲ್ಲಿ ಬರುವ ಪ್ರತಿ ಕ್ಲಿಷ್ಟಕರ ಸಮಸ್ಯೆಗಳನ್ನು ಅಥೈ೯ಸಿಕೊಂಡು ಬಿಡಿಸುವ ಹಂತಗಳನ್ನು ತಿಳಿದುಕೊಂಡರೆ ಅದು ಸಾಧ್ಯ ಎಂದು ಸಾವಳಗಿ ಬಿಎಲ್.ಡಿ.ಇ ಪ್ರೌಢಶಾಲೆಯ ಗಣಿತ ಶಿಕ್ಷಕ ಸುರೇಶ ಮನಹಳ್ಳಿ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಪರೀಕ್ಷಾ ದೃಷ್ಟಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಣಿತ ವಿಶೇಷ ತರಗತಿಯ ಪಾಠ ಪ್ರವಚನ ಬೋಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಭಾಗಲಬ್ದ ಎಂದು ಸಾಧಿಸುವುದು.ತ್ರಿಭುಜ ಮತ್ತು ವೃತ್ತದ ಮೇಲಿನ ಪ್ರಮೇಯಗಳು, ಗ್ರಾಫ್ ಹಾಗೂ ಎರಡು ಚರಾಕ್ಷರ ರೇಖಾತ್ಮಕ ಸಮೀಕರಣದಲ್ಲಿ ವಜಿ೯ಸುವ ವಿಧಾನ ಸಮಾಂತರ ಶ್ರೇಣಿಯ ವಾಕ್ಯರೂಪದ ಪ್ರಶ್ನೆಗಳಿಗೆ ಬಹುಪದೋಕ್ತಿಯಲ್ಲಿ ಅಪವತಿ೯ಸುವುದು, ವರ್ಗ ಸಮೀಕರಣಕ್ಕೆ ಹಾಗೂ…
ರಾಜ್ಯದ ೯ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ಸರಕಾರದ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ೯ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ಹಾಗೂ ಬಿಕ್ಷಾಟನೆ ಮಾಡುವ ಮೂಲಕ ವಂತಿಕೆ ಹಣ ಜಮೆ ಮಾಡಿ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂದೀಪ ಅರಳಗುಂಡಿ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳು ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ, ಅಂತಹ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳನ್ನ ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ, ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿಶ್ವವಿದ್ಯಾಲಯಗಳನ್ನು ಇಂದಿನ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.ವಿದ್ಯಾರ್ಥಿನಿ ಸ್ನೇಹಾ ಹಿರೇಮಠ ಮಾತನಾಡಿ, ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಿ.ಕೆ ಶಿವಕುಮಾರ ಅವರ…
