ಕೊಡೇಕಲ್ ದಾವಲಮಲಿಕ್ ಅಜ್ಜರ ಯಶೋಗಾಥೆ | ದಾರಿ ಹೋಕರಿಂದ ಹಿಡಿದು ಅನಾಥರಿಗೆಲ್ಲ ಅನ್ನ, ನೀರು, ನೆರಳು ನೀಡಿದ ಸಹೃದಯಿ
ಉದಯರಶ್ಮಿ ದಿನಪತ್ರಿಕೆ
ವರದಿ: ಇಲ್ಯಾಸ್ ಪಟೇಲ್. ಬ
ಯಾದಗಿರಿ: ತಾಯಿಯ ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ತಾಯಿಯ
ಪ್ರೀತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ ತಂದೆ ತಾಯಿ ಇಲ್ಲದ ನೂರಾರು ಅನಾಥ ಜೀವಗಳ ತಾಯಿಯಾಗಿ, ತಂದೆಯಾಗಿ ಹಗಲು ರಾತ್ರಿ ಮಕ್ಕಳ ಆರೈಕೆ ಮಾಡುತ್ತಿರುವ ಮಹಾನ್ ಜೋಳಿಗೆ ಅಜ್ಜರ ಮಮತೆಯ ಮಡಿಲು ಇಲ್ಲಿದೆ ನೋಡಿ,
ಅವರೆಲ್ಲ ಕನಸುಗಳನ್ನ ಹೊತ್ತುಕೊಂಡು ಓಡಾತ್ತಿರುವ ಪುಟ್ಟ ಪುಟ್ಟ ಮಕ್ಕಳು. ತಾಯಿಯ ಆಸರೆ ಇಲ್ಲದೆ, ಭಾವನೆಗಳ ಬರಿದಾದ ಜೀವನದಲ್ಲಿ ತಾಯಿಯ ಮಡಿಲು ಬೇಡುತ್ತಿರುವ ಚಿಕ್ಕ ಚಿಕ್ಕ ಕಂದಮ್ಮಗಳು. ಯ್ಯಾರೊ ಮಾಡಿದ ತಪ್ಪಿಗೆ ಇನ್ಯಾರೊ ನೋವು ಅನುಭವಿಸುತ್ತಿರುವ ಆ ಜೀವಗಳು. ತಂದೆ ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ಶಿಕ್ಷೆ. ಈ ಎಲ್ಲ ನೋವು ಗಳನ್ನ ಅರಿತು, ತಾಯಿ ಮನಸ್ಸಿನಿಂದ ಆರೈಕೆ ಮಾಡುತ್ತಿರುವ ಹೃದಯ ವಂತಿಕೆಯ ನೂರು ಮಕ್ಕಳ ತಾಯಿ_ತಂದೆಯಾಗಿ ಭವದ ಬಯಲಿಗೆ ಬೆಂದು ಬಿದ್ದ ಜೀವಗಳ ರಕ್ಷಣೆಗಾಗಿ ಎದ್ದು ನಿಂತ ಸಾಧಕನ ಕಥಾನಕವಿದು.
ಹೌದು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಓಡಾಡಿದ ಕರ್ಮ ಭೂಮಿ. ಭಾವೈಕ್ಯವನ್ನೇ ಉಂಡದ್ದನೆಲ. ಇಂತಹ ನೆಲದ ಸೊಗಡುಂಡ ದಾವಲಮಲಿಕ ಅಜ್ಜ ಅವರ ಯಶೋಗಾಥೆ. ಇದರ ಆರಂಭದ ಬುನಾದಿಯೇ ದಾನದಿಂದ ಶುರುವಾಗಿದೆ. ಕೊಡೇಕಲ್ ಸಾಹುಕಾರೊಬ್ಬರು ನೀಡುವ 14 ಗುಂಟೆ ಜಾಗೆಯಲ್ಲಿ ನಂದನವನ ನಿರ್ಮಿಸಿದ್ದಾರೆ. ದಾರಿ ಹೋಕರಿಂದ ಹಿಡಿದು ಅನಾಥರಿಗೆಲ್ಲ ಅನ್ನ ನೀರು, ನೆರಳು ನೀಡಿದ್ದಾರೆ.
ಜೋಳಿಗೆ ಅಜ್ಜನವರ ಮೂಲತ: ಯಾವ್ ಊರುದವರು?
ನಾನು ಮೂಲತ: ಗುಮ್ಮಟ ನಗರಿ ಎಂದೇ ಹೆಸರು ವಾಸಿಯಾಗಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾರಕೂರ ಗ್ರಾಮದಲ್ಲಿ ತಂದೆ ರಾಜೇಸಾಬ್ ತಾಯಿ ಲಾಲ ಬೀಯವರ 5 ಜನ ಮಕ್ಕಳಲ್ಲಿ 4ನೇ ಮಗನಾಗಿ ಜನಿಸಿದ್ದೇನೆ. ಸ್ವಗ್ರಾಮದಲ್ಲಿ 1ರಿಂದ 6ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ್ದೇನೆ.
ದಾವಲಮಲಿಕ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಇಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, 50ಕ್ಕೂ ಹೆಚ್ಚು ವೃದ್ಧರಿಗೆ ನಿತ್ಯ ಅನ್ನಪ್ರಸಾದ ಮಾಡಿಸುತ್ತಾರೆ, ಆದಕ್ಕಾಗಿ ಜೋಳಿಗೆ ಹಾಕಿ ಊರೂರು ಅಲೆಯುತ್ತಾರೆ. ಇವರಿಗೆ ಜೋಳಿಗೆ ಅಜ್ಜರು ಅಂತಲೆ ಅಡ್ಡ ಹೆಸರು ಬಿದ್ದಿದೆ. ಅನಾಥ ಆಶ್ರಮದಲ್ಲಿ ಎಲ್ಲಾ ಜಾತಿಯ ವಯೋಮಾನದ ಮಕ್ಕಳಿದ್ದಾರೆ. ಎಲ್ಲರೂ ಬೆಳಗ್ಗೆ ಶುಚಿಯಾದ ಬಳಿಕ ಯೋಗ, ಸರ್ವ ಧರ್ಮದ ತಿಳಿವು, ಆಚಾರ-ವಿಚಾರಗಳ ಬೋಧನೆ ಬಳಿಕ ಪ್ರಸಾದ ಮತ್ತು ಶಾಲೆ, ಕಾಲೇಜಿಗೆ ಕಳಿಸಿಕೊಡುವುದು. ಎಲ್ಲವುದರ ನಿಗರಾಣಿ ಅಜ್ಜನವರೇ ನೋಡಿಕೋಳ್ತಾರೆ.
ಜೋಳಿಗೆ ಅಜ್ಜರು ಎಂದರೆ ಮುಸ್ತಾನ ವೃದ್ಧರಲ್ಲ, ಶಾಂತ ಸ್ವಭಾವದ, ನಗುಮೊಗದ, ಹೊತ್ತ ಜವಾಬ್ದಾರಿ ನಿಭಾಯಿಸಲು ಜೋಳಿಗೆ ಹಿಡಿದ ನವಯುವಕ. ಆದರೆ, ಅಧ್ಯಾತ್ಮದ ಸೆಳವು, ದೈವದ ಪ್ರೇರಣೆ ಮತ್ತು ಕಾಲದ ಒತ್ತಾಸೆಗೆ ಸಿಕ್ಕು ಜನಸೇವೆಗೆ, ನಿರ್ಗತಿಕರ ಸೇವೆಗೆ ತನ್ನ ಬದುಕು ಮೀಸಲಿಟ್ಟಿರುವ ಯುವಕ ಈಗ ಜೋಳಿಗೆ ಅಜ್ಜರು ಎಂದೇ ಫೇಮಸ್ಸು, 26ನೇ ವಯಸ್ಸಿಗೆ ಜೋಳಿಗೆ ಹಾಕಿಕೊಂಡು ಹಸಿದ ಹೊಟ್ಟೆಗಳಿಗೆ ಅನ್ನದಷ್ಟೆ ಅಲ್ಲ, ಶಿಕ್ಷಣ ನೀಡಿ ಬದುಕು ಕಟ್ಟಿಕೊಡುವ ಭರವಸೆ ಮೂಡಿಸಿದ್ದಾರೆ.
ಜನ ಕಲ್ಯಾಣಕ್ಕೆ 14ಗುಂಟೆ ಜಾಗ ದಾನ ಮಾಡಿದ ದೊರೆ
ಕೊಡೇಕಲ್ಲಿನ ತಾಪಂ ಮಾಜಿ ಸದಸ್ಯರೂ ಆಗಿದ್ದ ರಂಗನಾಥ ಕಣಕಪ್ಪ ದೊರೆ ಮತ್ತು ಶ್ರೀಮತಿ ನೀಲದ್ದು ದೊರೆ ಅವರು 14 ಗುಂಟೆ ಜಾಗ ದಾನವಾಗಿ ನೀಡಿ ಜನ ಕಲ್ಯಾಣಕ್ಕೆ ಅನುವು ಮಾಡಿಕೊಟ್ಟರು. ಅವರ ದಾನದ ಫಲವಾಗಿ ಇವತ್ತು ನೂರಾರು ಮಕ್ಕಳಿಗೆ, ಜನರಿಗೆ ಆಶ್ರಯ ತಾಣ ಎದ್ದು ನಿಂತಿದೆ.
ಕೊಡೇಕಲ್ಲಿನ ಬಸವೇಶ್ವರ ಮಠದ ವೀರಯ್ಯ ಅಪ್ಪನವರ ಸಾನ್ನಿಧ್ಯದಲ್ಲಿ ದಾವಲಮಲೀಕ್ ದರ್ಗಾ ಆರಂಭಿಸುತ್ತಾರೆ. 41 ದಿನಗಳ ಅನುಷ್ಠಾನ ಮಾಡುತ್ತಾರೆ. ಆದರೂ ಏನೋ ಕಳವಳ, ಯಾಕೋ ದಾರಿ ಸರಿಯಾಗಿ ಹೋಗುತ್ತಿಲ್ಲ ಎನ್ನುವ ತಳಮಳ, ಆಗ ಶುರುವಾಗಿದ್ದೆ ಅನಾಥಾಶ್ರಮ, ವೃದ್ಧಾಶ್ರಮ.
ಅನಾಥಾಶ್ರಮದ ನೂತನ ಕಟ್ಟಡ ಬಿಜಾಪುರ ಜಿಲ್ಲೆಯಲ್ಲಿ ನಿರ್ಮಾಣ
ದಿನದಿಂದ ದಿನಕ್ಕೆ ಆಶ್ರಮದಲ್ಲಿ ಮಕ್ಕಳು, ವೃದ್ಧರು ಹೆಚ್ಚಾಗುತ್ತಾ ಹೋಗುತ್ತಿದ್ದಾರೆ ಆದ ಕಾರಣ ಬಿಜಾಪುರ ಜಿಲ್ಲೆಯಲ್ಲಿ ನಮ್ಮ ಸ್ವಂತ ಜಾಗದಲ್ಲಿ ವಿಶಾಲವಾಗಿ ನೂತನ ಕಟ್ಟಡ ಕಾಮಗಾರಿ ಈಗಾಗಲೇ ಪ್ರಾರಂಭವಾಯಿದೆ .ದಾನಿಗಳ ಸಹಾಯದಿಂದ ಇನ್ನೂ ಉನ್ನತ ಮಟ್ಟಕ್ಕೆ ಅನಾಥ ಆಶ್ರಮ ಬೆಳೆಯಲಿ ಇನ್ನೂ ಹಲವಾರು ನಿರ್ಗತಿಕರ ಸಹಾಯ ಮಾಡಬೇಕೆನ್ನುವ ನಮ್ಮ ಉದ್ದೇಶವಾಗಿದೆ.
ಉದಯ ರಶ್ಮಿ ಪತ್ರಿಕೆ ಜೊತೆ ಮಾತನಾಡಿದ ಅಜ್ಜರು
ಅನಾಥ ಆಶ್ರಮದಲ್ಲಿರುವ ಮಕ್ಕಳು ಓದ್ದಿನೌಕರಿಗೂ ಮಾಡ್ಲಿ ಮದುವೆ ಮಾಡಿ ಮಕ್ಕಳು ಮಾಡೋವರೆಗೂ ಜೋಳಿಗೆ ಇದ್ದೆ ಇದ್ದದ, ಅದಕ್ಕಾಗಿ ಕಾಲಿಕೆ ಚಕ್ರ, ಕಟ್ಟಿಕೊಂಡು ಓಡಾಡಕತ್ತೀನಿ, ನೋಡಮರಿ.. ಭೂಮ್ಯಾಗ ದೊಡ್ಡ ಮನಸ್ಸಿನವರು ಹಾರ.. ಸಣ್ಣ ಮನಸ್ಸಿನೌರು ಹಾರ.. ದಾವಲಮಲಿಕ್, ಶರಣಬಸವೇಶ್ವರ, ಆಣ್ಣ ಬಸವಣ್ಣ ಎಲ್ಲರೂ ದಾಸೋಹ ಮಾಡ್ಯಾರ ನಾನು ಮಾಡ್ತೀನಿ.. ಎನ್ನುತ್ತಲೇ ದೊಡ್ಡದೊಂದು ಆಶ್ರಮ, ಅನಾಥಾಲಯ, ಪ್ರದರ ಮನೆ ಕಟ್ಟಿ ಸಾವಿರಾರು ಮಕ್ಕಳಿಗೆ, ಪಯಸ್ಸಾದವರಿಗೆ ಆಶ್ರಯ ನೀಡಿ ಅವರು ನಕ್ಕಾಗಲೇ, ಅದು ನಾನು ನೋಡಿ ನಗಬೇಕು ಎನ್ನುತ್ತಾರೆ ದಾವಲಮಲಿಕ್ ಅಜ್ಜ, ಉಳ್ಳವರ ನೆರಳು ಅನಾಥ ಜೋಳಿಗೆ ಮೇಲೆ ಬೀಳಲಿ ಅನ್ನುವುದು ಮಹಾದಾಸೆ ಎಂದು ಹೇಳಿದರು.
ಅದೇನೆ ಇರಲಿ ಇಂದಿನ ಸಮಾಜದಲ್ಲಿ ನಾವು ಬದುಕಿದರೆ ಸಾಕು ಅನ್ನೋ ಕೆಲ ಜನರ ಮಧ್ಯೆ ಈ ಎಲ್ಲಾ ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಸಹಾಯ ಮಾಡುತ್ತಾ, ಶ್ರಮಜೀವಿ ಎನಿಸಿಕೊಂಡ ದಾವಲ್ ಮಲಿಕ್ ಅಜ್ಜನವರು ನಿಸ್ವಾರ್ಥ ಮನೋಭಾವನೆಯಿಂದ ಅನಾಥ ಮಕ್ಕಳಿಗೆ ಆಶ್ರಯ ಆಗಿದ್ದಾರೆ. ದಾವಲ್ ಮಲಿಕ್ ಅಜ್ಜನವರ ಈ ಕಾರ್ಯ ವೈಖರಿಗೆ ನಮ್ಮ ಪತ್ರಿಕೆ ವತಿಯಿಂದ ಅಭಿನಂದನೆಗಳು ತಿಳಿಸುತ್ತೇವೆ.
ಎಲ್ಲವೂ ಭಗವಂತ-ಅಲ್ಲಾಹ್ ಮಾಡಿಸುತ್ತಾನೆ
ಇಲ್ಲಿನ ಮಕ್ಕಳು ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಉಡುಪಿ, ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಪದವಿ, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್ ಓದುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ ಹಾಗೂ ಆಹಾರದ ವ್ಯವಸ್ಥೆ ಮಾಡುವುದು ಜೋಳಿಗಿಯಿಂದಲೇ ಎನ್ನುವ ದಾವಲಮಲಿಕ ಅಜ್ಯರು ಎಲ್ಲವೂ ಭಗವಂತ-ಅಲ್ಲಾಹ್ ಮಾಡಿಸುತ್ತಾನೆ ಎನ್ನುತ್ತಾರೆ. ಇದು ಆನಾಥಾಶ್ರಮವಲ್ಲ ಬದುಕಿನ ಬಂಡಿ, ಭಾವೈಕ್ಯ ಕೇಂದ್ರವಾಗಿದೆ.

ನಾವೆಲ್ಲ ಒಂದಾದರೆ ಜಗತ್ತಿನಲ್ಲಿ ಯಾರು ಅನಾಥರಲ್ಲ
ನಿಮ್ಮ ಕೈಯಿಂದ ಆಗುವಷ್ಟು ದಾವಲ್ ಮಲಿಕ್ ಆನಾಥ ಅಶ್ರಮಕ್ಕೆ ಸಹಾಯ ಮಾಡುವ ಮೂಲಕ ದಾನಿಗಳು ಕೂಡ ನೆರವಾಗಿ ಮಕ್ಕಳಿಗೆ ಭವಿಷ್ಯ ಕೊಡಬಹುದು.
ಶ್ರೀ ದಾವಲಮಲಿಕ್ ವಿದ್ಯಾ ಸಂಸ್ಥೆ ಹಾಗೂ ಅನಾಥಾಶ್ರ, ವೃದಾಶ್ರಮ, ಖಾತೆ ಸಂಖ್ಯೆ 11025101095786
IFSC CODE. PKGB0011025 ಬ್ರಾಂಚ್ ಕೊಡೇಕಲ್,
ಫೋನ್ ಪೇ, ಗೂಗಲ್ ಪೇ ನಂ. 9945029640 ಆಗಿದೆ. ಈಗಾಗಲೇ ಮಾಧ್ಯಮದ ಬಂಧುಗಳು ಕೈ ಹಿಡಿದು ನಡೆಸುತ್ತಿದ್ದಾರೆ.

