Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗಣಿತ-ಗಣತೆ ಹೆಚ್ಚಿಸುವುದು :ಸುರೇಶ ಮನಹಳ್ಳಿ
(ರಾಜ್ಯ ) ಜಿಲ್ಲೆ

ಗಣಿತ-ಗಣತೆ ಹೆಚ್ಚಿಸುವುದು :ಸುರೇಶ ಮನಹಳ್ಳಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಹರಳಯ್ಯ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ವಿಶೇಷ ತರಗತಿ ಆಯೋಜನೆ

ಉದಯರಶ್ಮಿ ದಿನಪತ್ರಿಕೆ

ಚಿಕ್ಕಪಡಸಲಗಿ: ಬರಲಿರುವ ಎಸ್ಸೆಸ್ಸೆಲ್ಸಿ ವಾಷಿ೯ಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಹವಣಿಸಬೇಕು. ಅದಕ್ಕೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಅದ್ಯಯನಶೀಲರಾಗಿ ಓದಾಭ್ಯಾಸದಲ್ಲಿ ತಲ್ಲಿನರಾಗಬೇಕು. ಅತ್ಯಂತ ಸುಲಭವಾಗಿ ಅತಿ ಹೆಚ್ಚು ಅಂಕಗಳಿಸಲು ಗಣಿತ ವಿಷಯದಲ್ಲಿ ಬರುವ ಪ್ರತಿ ಕ್ಲಿಷ್ಟಕರ ಸಮಸ್ಯೆಗಳನ್ನು ಅಥೈ೯ಸಿಕೊಂಡು ಬಿಡಿಸುವ ಹಂತಗಳನ್ನು ತಿಳಿದುಕೊಂಡರೆ ಅದು ಸಾಧ್ಯ ಎಂದು ಸಾವಳಗಿ ಬಿಎಲ್.ಡಿ.ಇ ಪ್ರೌಢಶಾಲೆಯ ಗಣಿತ ಶಿಕ್ಷಕ ಸುರೇಶ ಮನಹಳ್ಳಿ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಪರೀಕ್ಷಾ ದೃಷ್ಟಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಣಿತ ವಿಶೇಷ ತರಗತಿಯ ಪಾಠ ಪ್ರವಚನ ಬೋಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಾಗಲಬ್ದ ಎಂದು ಸಾಧಿಸುವುದು.ತ್ರಿಭುಜ ಮತ್ತು ವೃತ್ತದ ಮೇಲಿನ ಪ್ರಮೇಯಗಳು, ಗ್ರಾಫ್ ಹಾಗೂ ಎರಡು ಚರಾಕ್ಷರ ರೇಖಾತ್ಮಕ ಸಮೀಕರಣದಲ್ಲಿ ವಜಿ೯ಸುವ ವಿಧಾನ ಸಮಾಂತರ ಶ್ರೇಣಿಯ ವಾಕ್ಯರೂಪದ ಪ್ರಶ್ನೆಗಳಿಗೆ ಬಹುಪದೋಕ್ತಿಯಲ್ಲಿ ಅಪವತಿ೯ಸುವುದು, ವರ್ಗ ಸಮೀಕರಣಕ್ಕೆ ಹಾಗೂ ವಾಕರೂಪದ ಪ್ರಶ್ನೆಗಳಿಗೆ ತ್ರಿಕೋನಮಿತಿ ಪ್ರಸ್ತಾವನೆಯ ಅನುಪಾತಗಳು ತ್ರಿಕೋನಮಿತಿ ಅನ್ವಯಗೆ ಸಹ ಸಂಬಂಧ ಹೊಂದಿವೆ. ಹೀಗೆ ಒಂದು ಸರಿಯಾದ ಕ್ರಮವುಳ್ಳ ಪ್ಲಾನ್ ಮಾಡಿ ಏಕಚಿತ್ತದಿಂದ ಅನುಸರಿಸಿ ಅಭ್ಯಾಸಿಸಿದರೆ ಹೆಚ್ಚು ಅಂಕ ಪಡೆಯಲು ಸಹಾಯಕವಾಗುತ್ತದೆ ಎಂದು ಮಕ್ಕಳಿಗೆ ಸರಳವಾಗಿ ತಿಳಿಯುವಂತೆ ಅರ್ಥವೆತ್ತ ವಿಶ್ಲೇಷಣೆಯ ನಿದರ್ಶನ ಸುರೇಶ ಮನಹಳ್ಳಿ ನೀಡಿದರು.
ಗಣಿತ ಪ್ರಮುಖ ವಿಷಯ. ಇದರ ಮೂಲಮಟ್ಟ, ಮೂಲಭೂತ ಅಂಶಗಳನ್ನು ಸರಿಯಾಗಿ ಅರಿಯಬೇಕು. ಇದು ವಿವಿಧ ವಿಷಯಗಳನ್ನು ಒಳಗೊಂಡಿದೆ. ಕಾರಣ ಗಣಿತ ಪರಿಕಲ್ಪನೆಯೊಂದಿಗೆ ಜ್ಞಾನ ವೃದ್ಧಿಗೆ ನಿಖರತೆ ಭಾವ ತೋರಬೇಕು. ಗಣಿತ ಶಾಸ್ತ್ರ ಅರಿತರೆ ಬದುಕಿನ ಶಾಸ್ತ್ರ ಸುಲಲಿತ. ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಅದರಲ್ಲೂ ಮಕ್ಕಳ ದೈನಂದಿನ ಅಭ್ಯಾಸ ರೂಪಕ್ಕೆ ನವತನದ ಸಂಜೀವಿನಿಯಾಗಿದೆ. ಸ್ವಲ್ಪಮಟ್ಟಿಗೆ ಆರಂಭದಲ್ಲಿ ತಲೆ ಕೆಡಿಸಿಕೊಂಡು ಗಣಿತ ಲೋಕದಲ್ಲಿ ಸಾಗಿದರೆ ಕಲಿಕಾಭಿವೃದ್ಧಿ ವಿಸ್ತೃತವಾಗುತ್ತದೆ. ಆ ದಿಸೆಯಲ್ಲಿ ಸರಳೀಕೃತ ಟಿಪ್ಸ್ ಪಾಲಿಸಿ ಯಶಸ್ಸು ಕಾಣಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪರೀಕ್ಷಾ ಮಂಡಳಿಯ ನಿಯಮದ ಪ್ರಕಾರ ಶೇ,2೦ ರಷ್ಟು ಮಾತ್ರ ಪ್ರಶ್ನೆ ಪತ್ರಿಕೆ ಕಠಿಣತೆ ಹೊಂದಿದ್ದು ಅಂದರೆ 80 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ ಬಹುತೇಕ ಶೇ,16 ಅಂಕದ ಪ್ರಶ್ನೆಗಳು ಮಾತ್ರ ಕಠಿಣತೆಯಿಂದ ಕೂಡಿರುತ್ತವೆ. ಈಗಾಗಲೇ ಪರೀಕ್ಷಾ ಬೋರ್ಡ್ ನಿಂದ ಬಿಡುಗಡೆಗೊಳಿಸಿದ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಿದಾಗ ಈ ಅಂಶ ಗಮನಕ್ಕೆ ಬಂದಿದೆ. ಯಾವ ರೀತಿಯಾಗಿ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಪಟ್ಟಿಮಾಡಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭ್ಯಸಿಸಿದರೆ ಖಂಡಿತವಾಗಿಯೂ 80 ಕ್ಕೆ 80 ಅಂಕಗಳನ್ನು ಪಡೆಯಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಭಯ, ಆತಂಕ್ಕೊಳಗಾಗದೇ ಒತ್ತಡ ಮುಕ್ತವಾಗಿ ಉತ್ಸಾಹದಿಂದ ಪರೀಕ್ಷೆ ಎದುರಿಸಬಹುದು.ಗಣಿತ ವಿಷಯದ ಸಿದ್ದತೆ ಚೆನ್ನಾಗಿ ಮಾಡಿಕೊಳ್ಳಿ. ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಬರೆದು ಉತ್ತಮ ಫಲಿತಾಂಶ ತಮ್ಮದಾಗಿಸಿಕೊಂಡು ಸಾಧನೆ ಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಸುಮಾರು ನಾಲ್ಕೈದು ಗಂಟೆಗಳವರೆಗೆ ಗಣಿತ ವಿಷಯದ ವಿಶೇಷ ತರಗತಿ ನಡೆಸಿಕೊಟ್ಟ ಸುರೇಶ ಮನಹಳ್ಳಿ ಕ್ಲಿಷ್ಟಕರ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು. ಅಂಕಗಳಿಕೆಯ ಸರಳೀಕೃತ ಕ್ರಮಗಳ ಕುರಿತಾದ ಟಿಪ್ಸ್ ನೀಡಿ ಗಣಿತ ಅದ್ಯಯನದ ಮಹತ್ವ ಎಳೆಎಳೆಯಾಗಿ ವಿಶ್ಲೇಸಿಸಿದರು.ಮಕ್ಕಳೊಂದಿಗೆ ಸಂವಾದ,ಪ್ರಶ್ನೋತ್ತರ ವಿಶೇಷ ಚಟುವಟಿಕೆ ಯಶಸ್ವಿಯಾಗಿ ಕೈಗೊಂಡರು.
ಶಾಲೆ,ಸಂಸ್ಥೆಯ ಪರವಾಗಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಗಣಿತ ಸಂಪನ್ಮೂಲ ವ್ಯಕ್ತಿ ಸುರೇಶ ಮನಹಳ್ಳಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಶಿಕ್ಷಕರಾದ ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಈರಪ್ಪ ದೇಸಾಯಿ ಸೇರಿದಂತೆ ಇತರರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
  • ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ
    In (ರಾಜ್ಯ ) ಜಿಲ್ಲೆ
  • ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೨೬ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಜಿಪಂ ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯ: ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗೃತೆವಹಿಸಿ
    In (ರಾಜ್ಯ ) ಜಿಲ್ಲೆ
  • ಕ್ಷಯರೋಗ ಗುಣವಾಗಬಹುದಾದ ಕಾಯಿಲೆ :ಡಾ.ರಾಜೇಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.