ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ಸಮಾಜವು ಅತ್ಯಂತ ಕಲುಷಿತ ವಾತಾವರಣದಲ್ಲಿದೆ ಅಂದರೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ, ಅದಕ್ಕಾಗಿ ಜಾನಪದ ಸಾಹಿತ್ಯ ಶರಣ ಸಾಹಿತ್ಯ ತಿಳಿದು ನಡೆದರೆ ಮಾನವ ಜನಾಂಗಕ್ಕೆ ದಾರಿದೀಪ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಹೇಳಿದರು.
ನಗರದ ವೀರಶೈವ ಲಿಂಗಾಯತ ಮಹಾಸಭಾ ಸಮುದಾಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ ಅಡಿಯಲ್ಲಿ ಡಾ ಎಂ ಎನ್ ವಾಲಿ ಪ್ರತಿಷ್ಠಾನ ಯುಗದರ್ಶಿನಿ ಪ್ರತಿಷ್ಠಾನ ವತಿಯಿಂದ ಜನಪದ ಸಾಹಿತ್ಯೋತ್ಸವ ಹಾಗೂ ಶರಣ ಸಾಹಿತ್ಯೋತ್ಸವ ಕಾರ್ಯಕ್ರಮದ ಸಮಾರೋಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾರದಾ ಐಹೊಳೆ ಮಾತನಾಡಿ, ಭಾರತವು ಭವ್ಯ ಸಂಸ್ಕೃತಿಯ ಆಗರ. ಇಲ್ಲಿ ಜನಪದ ಮತ್ತು ಶರಣ ಸಾಹಿತ್ಯ ಶ್ರೇಷ್ಠ ಸಾಹಿತ್ಯ.ನಾವು ಈ ಎರಡು ಸಾಹಿತ್ಯಗಳನ್ನು ಅಧ್ಯಯನ ಮಾಡಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸುಂದರವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಮಪ್ಪ ಚ ಉಪ್ಪಿನ ಅವರನ್ನು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸುಶೀಲೇಂದ್ರ ನಾಯಕ ಮತ್ತು ಮಹೇಶ ಶಟಗಾರ ಅವರನ್ನು ಅಲ್ಲದೆ ಹಿರಿಯ ಸಾಹಿತಿ ಶ್ರೀಮತಿ ಪ್ರಭಾವತಿ ದೇಸಾಯಿ ಹಾಗೂ ಹೋಟೆಲ್ ಉದ್ಯಮಿ ಸಾರವಾಡದ ಶ್ರೀಮತಿ ಅನುಸೂಯ ಹಿಟ್ಟಿನಹಳ್ಳಿ ಇವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಅಮರೇಶ ಸಾಲಕ್ಕಿ ಸ್ವಾಗತಿಸಿದರು ಆಕಾಶ್ ರಾಮ್ ತೀರ್ಥ ವಂದಿಸಿದರು. ಬಸಲಿಂಗ ಸಾರವಾಡ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಚ್ಯಾಂಣಿ ಡಾ ಸರಸ್ವತಿ ಚಿಮ್ಮಲಗಿ,ಡಾ ಅಶೋಕ್ ವಾಲಿ, ಬಿ ಎನ್ ಪಾಟೀಲ ಡಾ. ಉಷಾದೇವಿ ಹಿರೇಮಠ ಶ್ರೀಮತಿ ಶಕುಂತಲಾ ಮೊಸಲಿಗೆ, ಬಸವರಾಜ ಇಂಚಿಗೇರಿ, ಕುಮಾರ ಡುಮಗಾರ , ಶ್ರೀಮತಿ ವಿದ್ಯಾವತಿ ಅಂಕಲಗಿ ಶ್ರೀಮತಿ ದಾಕ್ಷಾಯಿಣಿ ಬಿರಾದರ ಉಪಸ್ಥಿತರಿದ್ದರು.

