ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಪಟ್ಟಣದ ಗ್ರಾಮ ದೇವತೆ ಜಾತ್ರೆಯನ್ನು ಈ ಬಾರಿಯೂ ಅತ್ಯಂತ ಅದ್ಧೂರಿಯಾಗಿ ಮೇ೩೦ ರಂದು ನಡೆಸಲು ನಿರ್ಧರಿಸಲಾಯಿತು.
ಈ ಕುರಿತು ಪಟ್ಟಣದ ಕುಂಬಾರಗಲ್ಲಿಯ ಗ್ರಾಮ ದೇವತೆ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವ ಸಮಾಜದ ಮುಖಂಡರು, ಊರಿನ ಗುರು ಹಿರಿಯರು, ಗಣ್ಯ ವರ್ತಕರ ಒಮ್ಮತದ ಒಪ್ಪಿಗೆಯ ಮೇಲೆ ಈ ನಿರ್ಧಾರವನ್ನು ಪ್ರಕಟಿಸಲಾಯಿತು.
ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಅಶೋಕ ವನಹಳ್ಳಿ, ಪ್ರತಿಭಾ ಅಂಗಡಗೇರಿ, ರಫೀಕ ದ್ರಾಕ್ಷಿ, ಭಾರತಿ ಪಾಟೀಲ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ಬಿರಾದಾರ, ಎಂ.ಎಸ್.ನಾವದಗಿ, ಪ್ರಮುಖರಾದ ಅಶೋಕ ನಾಡಗೌಡ, ಅಪ್ಪು ಸಿದ್ದಾಪೂರ, ಬಾಬು ಬಿರಾದಾರ, ಸಂಗಣ್ಣ ಬಿರಾದಾರ ಜಿಟಿಸಿ, ಸುಧೀರ ನಾವದಗಿ, ಸತೀಶ ಓಸ್ವಾಲ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಅಶೋಕ ಚಟ್ಟೇರ, ಸಂಗಣ್ಣ ಮೇಲಿನಮನಿ, ಮುತ್ತಣ್ಣ ರಾಯಗೊಂಡ, ವಿಜೇಂದ್ರ ಅಶೋಕ, ಪರಶುರಾಮ ನಾಲತವಾಡ, ಅಶೋಕ ಮಣಿ, ಜಗದೀಶ ಲಕ್ಷಟ್ಟಿ, ರಾಜುಗೌಡ ಕರಡ್ಡಿ, ಗುರುಸ್ವಾಮಿ ಬೂದಿಹಾಳಮಠ, ಚಿನ್ನು ನಾಡಗೌಡ, ವಿಕ್ರಂ ಓಸ್ವಾಲ, ಉದಯಸಿಂಗ ರಾಯಚೂರ, ರಾಜುಗೌಡ ರಾಯಗೊಂಡ, ಅಪ್ಪು ದೇಗಿನಾಳ, ಟಿ.ಭಾಸ್ಕರ, ಹರೀಶ ಬೆವೂರ ಸೇರಿದಂತೆ ಮತ್ತೀತರರು ಇದ್ದರು.

