ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನ ನೂತನ ನಿರ್ದೇಶಕರ ಚುನಾವಣೆಗೆ ಫೆ.೧೬ರಂದು ಮತದಾನ ಹಾಗೂ ಮತ ಎಣ ಕೆ ಕಾರ್ಯ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನವರು ಗೆಲ್ಲುವ ಮೂಲಕ ಪಿಎಲ್‌ಡಿ ಬ್ಯಾಂಕ್‌ಗೆ ಕಾಂಗ್ರೆಸ್ ತೆಕ್ಕೆಗೆ ಸೇರುವಂತಾಗಿದ್ದರಿಂದ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಈ ಕುರಿತು ಮಾತನಾಡುತ್ತಾ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಹಾಗೂ ಶಾಸಕ ಎಂ.ವೈ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಗಾಗಿ ಕಸರತ್ತು ಮಾಡಲಾಗಿತ್ತು. ಹೀಗಾಗಿ ೧೪ ನಿರ್ದೇಶಕರ ಸ್ಥಾನದ ಪೈಕಿ ಈ ಪೈಕಿ ೧೧ ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಹೊಸದಾಗಿ ಆಯ್ಕೆಗೊಂಡವರು ರೈತರ ಪರವಾಗಿ ಕೆಲಸಮಾಡಿ ಶಾಸಕರ, ಮಾಜಿ ಸಚಿವರ ಗೌರವ ಉಳಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಫಲಿತಾಂಶದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ಮೂರ್ತಿ, ಅಂಬೇಡ್ಕರ್ ಮೂರ್ತಿಗಳಿಗೆ ಪುಷ್ಪ ನಮನ ಸಲ್ಲಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಂ ಕೊರಬು, ಸಿದ್ದಾರ್ಥ ಬಸರಿಗಿಡ, ರಾಜುಗೌಡ ಅವರಳ್ಳಿ, ಎಸ್.ಎಸ್ ಪಾಟೀಲ್, ಪಂಡಿತ ನಾವಿ,ಶಿವಾನಂದ ಗಾಡಿ, ಗೌತಮ ಸಕ್ಕರಗಿ, ಶರಣು ಕುಂಬಾರ, ಸಿದ್ದು ಶಿರಸಗಿ, ಪ್ರಕಾಶ ಜಮಾದಾರ, ಸಿದ್ದು ಸಾಲಿಮನಿ, ಸಿದ್ದು ಕಲಶೆಟ್ಟಿ, ಅಣವೀರಯ್ಯ ಹಿರೇಮಠ, ಮಡಿವಾಳಪ್ಪ ಗಂಗಾ, ಅಸ್ಪಾಕ್ ಬಂದರವಾಡ, ರಮೇಶ ನೂಲಾ, ರವಿ ಶೆಟ್ಟಿ, ಸಿದ್ದು ಮಗಿ, ರಾಜಕುಮಾರ ಬಬಲಾದ, ನಿಂಗಪ್ಪ ಪಾಟೋಳಿ, ಕಂಠೆಪ್ಪ ಬಳೂರ್ಗಿ, ಶಿವಪುತ್ರ ಜಿಡ್ಡಗಿ, ಮಹಿಬೂಬ ಪಟೇಲ್, ಶರಣಬಸಪ್ಪ ಅತನೂರೆ, ಚಂದ್ರಕಾಂತ ಶಿರೂರ, ಶರಣಗೌಡ ಪಾಟೀಲ್ ಇದ್ದರು.
ಚುನಾವಣಾಧಿಕಾರಿ ಎಸ್.ಎಚ್ ಗಡಗಿಮನಿ, ಸಹಾಯಕ ಚುನಾವಣಾಧಿಕಾರಿ ಚಾಂದಪಾಶಾ ಅನ್ಸಾರಿ ಮಾತನಾಡಿ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅಫಜಲಪುರದ ನೂತನ ಆಡಳಿತ ಮಂಡಳಿ ನಿರ್ದೇಶಕರ ಮುಂದಿನ ೫ ವರ್ಷಗಳ ಅವಧಿಗಾಗಿ ಚುನಾವಣೆ ನಡೆದಿದ್ದು ಕೋಗನೂರಿನ ಸಂಗಮೇಶ ಬಸಪ್ಪ ಸಾಲೋಟಗಿ ಎಸ್‌ಟಿ ಮೀಸಲು ಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೩ ಸ್ಥಾನಗಳಿಗೆ ಮತದಾನ ನಡೆಯಿತು. ೧೩ ಸ್ಥಾನಗಳಿಗೆ ೩೦ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇವರಲ್ಲಿ ಪ್ರಭುಲಿಂಗ ಮಲ್ಲಿಕಾರ್ಜುನ ೫೬ ಮತ, ಶರಣಬಸಪ್ಪ ಮಲ್ಲಿಕಾರ್ಜುನ ೨೦ ಮತ, ಬಸವರಾಜ ಸಿದ್ದಣಗೌಡ ಪಾಟೀಲ್ ೧೬, ನಾಗೇಂದ್ರಪ್ಪ ಹಣಮಂತ್ರಾಯ ಲಿಂಗಶೇಟ್ಟಿ ೨೬, ಶರಣಪ್ಪ ದತ್ತಪ್ಪ ಒಡಗೇರಿ ೩೩, ಗಂಗಣ್ಣ ತುಳಜಪ್ಪ ಹರಳಯ್ಯ ೧೧, ಮುರುಗೇರಪ್ಪ ಬಸವಂತ್ರಾಯ ರಾಚೇಗೋಳ ೨೪, ಸರ್ವರ ಅಬ್ದುಲ್ ಜಬ್ಬಾರ ೨೮, ಮಲ್ಲಿಕಾರ್ಜುನ ಸಿದ್ದಪ್ಪ ಮುತ್ತಪ್ಪಗೊಳ ೨೦, ಚಂದ್ರಕಾಂತ ಬಸವಂತಪ್ಪ ಜಾಬಾದಿ ೪೬, ಭೀಮಬಾಯಿ ದತ್ತು ನಾಯ್ಕೋಡಿ ೪೫, ರೂಪಾ ಲಕ್ಷ್ಮೀಪುತ್ರ ಕಲಶೆಟ್ಟಿ ೪೪, ಪ್ರಭು ವೀರಭದ್ರಪ್ಪ ಪಾಟೀಲ್ ೧೯೯ ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

