Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಮ್ಮ ಮನಸ್ಸು ಯಾವದನ್ನು ಮಾಡಬೇಕೆಂಬುದನ್ನು ಸಂಕಲ್ಪ ಮಾಡಿಕೊಂಡರೆ ಮನಸ್ಸು ಆ ಕೆಲಸವನ್ನು ಮಾಡಿ ಅದರಲ್ಲಿ ಯಶಸ್ವಿಯಾಗುತ್ತದೆ. ಜೀವನದಲ್ಲಿ ನಾವೆಲ್ಲರೂ ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜೀವನವನ್ನು ಸಂತೋಷವಾಗಿ, ಆರೋಗ್ಯಕರವಾಗಿ ಕಳೆಯಬೇಕೆಂದು ಸಂಚಾರಿ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ಹೇಳಿದರು.ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ಬುಧವಾರ ಸಂಜೆ ಕಳೆದ ಹನ್ನೊಂದು ದಿನಗಳ ಕಾಲ ಜರುಗಿದ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಪ್ರತಿದಿನ ಬೆಳಗ್ಗೆ ಬೇಗ ಏಳುವ ಮೂಲಕ ನಿತ್ಯವೂ ಗರಿಷ್ಠ ಒಂದು ಗಂಟೆ ಇಲ್ಲವೇ ಕನಿಷ್ಠ ಅರ್ಧಗಂಟೆಯಾದರೂ ಪ್ರಾಣಾಯಾಮ, ಯೋಗ, ವಾಯುವಿಹಾರ ನಿರಂತರವಾಗಿ ಮಾಡಿದರೆ ಆರೋಗ್ಯಕರ ಬದುಕು ಸಾಗಿಸಬಹುದು. ಇದಾದ ನಂತರ ಲಿಂಗಪೂಜೆ ಇಲ್ಲವೇ ಧ್ಯಾನ ಮಾಡಬೇಕು. ರಾತ್ರಿ ಬೇಗ ಮಲಗಬೇಕು. ಇದು ಜೀವನದಲ್ಲಿ ನಿರಂತತೆಯಿಂದ ಇದ್ದರೆ ಚೈತನ್ಯಮಯವಾದ ಜೀವನ ನಮ್ಮದಾಗುತ್ತದೆ ಎಂದರು.ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತಿರಲಿ ಆ ಕೆಲಸವನ್ನು ಖುಷಿಯಾಗಿ, ನಗು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇತಿಹಾಸದ ಪುಟಗಳಲ್ಲಿ ಸಾಕಷ್ಟು ರಾಜರು ಕಾಣಿಸುತ್ತಾರೆ. ಅವರಲ್ಲಿ ನಮ್ಮ ಭಾಗದಲ್ಲಿ ಅತ್ಯಂತ ವೀರರು, ಶೂರರು, ಪರಾಕ್ರಮಿಗಳು ಶಿವಾಜಿ ಮಹಾರಾಜರು ಆಗಿದ್ದರು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟç ನಿರ್ಮಾಣಕ್ಕೆ ಮರಾಠರ ಪಾತ್ರ ದೊಡ್ಡದು ಎಂದು ಹೇಳಲಾಗುತ್ತೆ. ಆರೆ ಸಧ್ಯ ಮರಾಠರು ಹಿಂದುಳಿದ ಬಗ್ಗೆ ಮರಾಠಾ ನಾಯಕರು ಮಾತನಾಡುತ್ತಾರೆ. ಯಾರೇ ಹಿಂದುಳಿಯಲು ಕಾರಣ ಶಿಕ್ಷಣದ ಕೊರತೆ. ಯುವ ಪೀಳಿಗೆಯನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಆರ್‌ಎಸ್‌ಎಸ್ ನ ಪ್ರಮುಖರಾದ ಪರಶುರಾಮ ಪವಾರ, ಮರಾಠಾ ಸಮಾಜದ ಅಧ್ಯಕ್ಷ ಭರತ ಭೋಸಲೆ ಪ್ರಮುಖರಾದ ರಾಜೇಂದ್ರ ಭೋಸಲೆ, ಅಶೋಕ ನಾಡಗೌಡ, ಸಂಗಣ್ಣ ಬಿರಾದಾರ ಜಿಟಿಸಿ, ಪರಶುರಾಮ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದಲ್ಲಿ ಬೆಳ್ಳಬೆಳಿಗ್ಗೆ ಲೇವಾದೇವಿ ವ್ಯವಹಾರಿಗಳೆನ್ನಲಾದ ಇಬ್ಬರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಕಿರು ಸಾಲ, ಅಧಿಕ ಬಡ್ಡಿ ಅನಧೀಕೃತ ಕಾಗದ ಪತ್ರಗಳನ್ನು ಪಡೆಯುವದು ಹೀಗೆ ಅಮಾಯಕ ಸಾರ್ವಜನಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ದಿಢೀರ ಕಾರ್ಯಾಚರಣೆ ನಡೆಸಿದ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಮರಾಠಾ ಸಮಾಜ ಬಾಂಧವರು ಬುಧವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಸಂಭ್ರಮ,ಸಡಗರದಿಂದ ಆಚರಿಸಿದರು.ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ ಮಹಿಳೆಯರು ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೂರ್ತಿಯ ಮೆರವಣಿಗೆಗೆ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮುಖಂಡ ಸಂಗಮೇಶ ಓಲೇಕಾರ ಚಾಲನೆ ನೀಡಿದರು.ನಂತರ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.ಮೆರವಣಿಗೆಯಲ್ಲಿ ಬಸವರಾಜ ಬಿಜಾಪುರ, ಅನಿಲ ಪವಾರ, ಜೋತಿಬಾ ಪವಾರ, ತಾನಾಜಿ ಸೂರ್ಯವಂಶಿ, ಅಮರ ಗಾಯಕವಾಡ,ಪ್ರದೀಪ ಸಾಳುಂಕೆ, ರವಿ ಖಾಡೆ, ಶಿವಾಜಿ ಜಗತಾಪ, ಬಾಬು ನಿಕ್ಕಂ, ವೆಂಕಟೇಶ ಕರಾಡೆ, ಮಾರುತಿ ಗಾಯಕವಾಡ, ಸುಜಾತಾ ಬಂಡಾರಿ, ಸುನಂದಾ ಗಾಯಕವಾಡ, ಪ್ರಿಯಾ ರಜಪುತ, ನಾಣಿಬಾಯಿ ನಿಕ್ಕಂ, ತೇಜಸ್ವಿನಿ ಗಾಯಕವಾಡ, ಪೂಜಾ ಗಾಯಕವಾಡ, ರೂಪಾ ಜಾಧವ ಸೇರಿದಂತೆ ಇತರರು ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರದಲ್ಲಿ ಫೆ.24 ರಂದು ನಡೆಯಲಿರುವ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಸ್ವಾಮೀಜಿ ಅವರನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯವಾಗಿದೆ. ಕಳೆದ 70 ವರ್ಷದಿಂದ ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಆಯ್ಕೆ ಸೂಕ್ತವಾಗಿದೆ. ಅವರ ಆಯ್ಕೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ಬಂದಂತಾಗಿದೆ. ಅವರನ್ನು ಆಯ್ಕೆ ಮಾಡಲು ಸಹಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಪದಾಧಿಕಾರಿಗಳು ಕೃತಜ್ಞತೆಗಳು. ಬಹುದಿನಗಳ ನಂತರ ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನ ಸಿಕ್ಕಂತಾಗಿದೆ. ಪೂಜ್ಯರು ಎಲ್ಲಾ ಪ್ರಶಸ್ತಿಗಳಿಗಿಂತಲೂ ಹೆಚ್ಚಿನ ಅರ್ಹತೆ ಹೊಂದಿದ್ದಾರೆ. ಅಂತವರ ಆಯ್ಕೆ ಇಡೀ ಜಿಲ್ಲೆಯ ಜನರಿಗಷ್ಟೇ ಅಲ್ಲ. ರಾಜ್ಯದ ಜನರಿಗೆ ಸಂತಸ ತಂದಿದೆ. ಚನ್ನಬಸವ ಸ್ವಾಮೀಜಿಯವರನ್ನು ಆಯ್ಕೆ ಮಾಡುವ ಮೂಲಕ ಸಾಹಿತ್ಯ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ ಎಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪರಕೀಯರ ಆಡಳಿತ ಕಿತ್ತೊಗೆದು ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮಿ, ನ್ಯಾಯವಂತ, ದಕ್ಷ ಆಡಳಿತಗಾರರಾಗಿದ್ದರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತೋತ್ಸವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಶಿವಾಜಿಯ ತಾಯಿ ವೀರಮಾತೆ ಜೀಜಾಬಾಯಿ ಅವರು ಶಿವಾಜಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಜೊತೆಗೆ ಶೌರ್ಯ ನೈತಿಕತೆಯ ಪಾಠಗಳನ್ನು ಹೇಳುತ್ತ ಜೀವನ ಮೌಲ್ಯಗಳ ಶಿಕ್ಷಣ ನೀಡಿದರು. ಇವರ ಗುರು ದಾದಾಜಿ ಕೊಂಡದೇವ ಶಸ್ತ್ರಾಸ್ತ್ರ ವಿದ್ಯೆ, ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದೂ ಧರ್ಮ ಪುನರುಜ್ಜೀವನಗೊಳಿಸಬೇಕು, ಸ್ವರಾಜ್ಯ ಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠ ಮುಖಂಡರು ಮತ್ತು ಪಶ್ಚಿಮ ಘಟ್ಟಗಳ ಮಾವಳರೆಂಬ ದೃಢಕಾಯರಾದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದರು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತರಾಗಿದ್ದರು. ಹಿಂದು ಧರ್ಮಕ್ಕೆ…

Read More

ದಾವಣಗೆರೆಯಲ್ಲಿ ಪುಟ್ಟರಾಜರ ಅಭಿಮಾನಿ ಭಕ್ತರ ಬೃಹತ್ ಸಮಾವೇಶ ಉದಯರಶ್ಮಿ ದಿನಪತ್ರಿಕೆ ಗದಗ: ನಗರದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ನಿಜವಾದ ಅಭಿಮಾನಿ ಭಕ್ತರ ಮಹಾ ಮನೆಯಾಗಿರುವ ದಾವಣಗೆರೆಯಲ್ಲಿ, ಮಾರ್ಚ್ ಕೊನೆಯ ಅಥವಾ ಏಪ್ರಿಲ್ ಮೊದಲ ವಾರ ಡಾ. ಪಂ. ಪುಟ್ಟರಾಜರ ಅಭಿಮಾನಿ ಭಕ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಒಂದು ದಿನದ ಈ ಸಮಾವೇಶದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಚಿಂತನ-ಮಂಥನ, ರಾಜ್ಯಮಟ್ಟದ ಭಕ್ತಿಗೀತೆ ಗೋಷ್ಠಿ ಮತ್ತು ವಚನ ಗೋಷ್ಠಿ, ಭಕ್ತಿಗೀತೆ ಗಾಯನ ಮತ್ತು ವಚನ ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಗೋಷ್ಠಿಗಳನ್ನು ಆಯೋಜಿಸಿದೆ. ಈ ಸಮಾವೇಶದಲ್ಲಿ ಅಭಿಮಾನಿ ಭಕ್ತ ಪ್ರತಿನಿಧಿಯಾಗಿ ಭಾಗವಹಿಸಿ ಭಕ್ತಿ ಗೀತ ಗೋಷ್ಠಿ, ವಚನಗೋಷ್ಠಿ, ಭಕ್ತಿ ಗೀತೆ ಗಾಯನ ಮತ್ತು ನೃತ್ಯ ಮತ್ತು ನುಡಿ ನಮನ ಸಲ್ಲಿಸಲು ವಿನಂತಿಸಿಕೊಳ್ಳಲಾಗಿದೆ.ಪ್ರತನಿಧಿಯಾಗಿ ಹೆಸರು ನೋಂದಾಯಿಸಿಕೊಂಡು ಗೋಷ್ಠಿಗಳಲ್ಲಿ ಭಾಗವಹಿಸುವ ಪೂಜ್ಯರ ಅಭಿಮಾನಿ ಭಕ್ತ, ಕವಿ; ಕಲಾವಿದರಿಗೆ ಅಭಿಮಾನಿ ಭಕ್ತ ಶ್ರೇಷ್ಠ, ಪುಟ್ಟರಾಜ ಸಾಹಿತ್ಯ, ಸಂಗೀತ…

Read More

ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ | ರಾಜ್ಯದ ಜನತೆಗೆ ಮೋಸ | ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈಗ ಯೋಜನೆಗಳನ್ನು ನಿಲ್ಲಿಸಿ ರಾಜ್ಯದ ಜನತೆಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಕೇಂದ್ರದತ್ತ ಬೊಟ್ಟು ಮಾಡುವುದನ್ನು ಬಿಟ್ಟು, ನೆಟ್ಟಗೆ ಆಡಳಿತ ಮಾಡಿ ಇಲ್ಲವೇ ರಾಜೀನಾಮೆ ಕೊಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಬುಧವಾರ ವಾಗ್ದಾಳಿ ನಡೆಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿಗಳಿಂದ, ಆದರೆ, ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ತಲುಪುತ್ತಿಲ್ಲ, ಬಸ್ ಫ್ರೀ ಎಂದು ಹೇಳಿದ್ದರು. ಆದರೆ, ಬಸ್ ನಿಲ್ಲಿಸಿದ್ರು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಹಣ ತಲುಪುತ್ತಿಲ್ಲ. ಸಿದ್ದರಾಮಯ್ಯ ಯೋಜನೆಗಳು ನಿಂತಿದೆಯಾ ಎಂದು ಕೇಳಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಶಿಕ್ಷಾರ್ಹ ಅಪರಾಧ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಕಂಡು ಬಂದಲ್ಲಿ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುವದು ಎಂದು ಕಾರ್ಮಿಕ ನಿರೀಕ್ಷಕ ಕೆ.ಅಲೀಂ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ನಿರ್ಮೂಲನೆ ಮೂಲಕ ಅಟೋ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.೧೪ ವರ್ಷಗಳ ಒಳಗಿನ ಮಕ್ಕಳನ್ನು ಬಾಲ ಕಾರ್ಮಿಕರೆಂದು, ೧೫ ರಿಂದ ೧೮ ವರ್ಷಗಳ ಒಳಗಿನ ಮಕ್ಕಳನ್ನು ಕಿಶೋರ ಕಾರ್ಮಿಕರೆಂದು ಗುರುತಿಸಲಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಸಂಪೂರ್ಣ ಅಪರಾಧವಾದರೆ ಕಿಶೋರ ಕಾರ್ಮಿಕರನ್ನು ಶಾಲಾ ಅವಧಿಯಲ್ಲಿ ದುಡಿಸಿಕೊಳ್ಳುವದು ಅಪರಾಧವಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಂಡ ಅಪರಾಧಕ್ಕೆ ೨೦ರಿಂದ ೫೦ ಸಾವಿರಗಳ ದಂಡ ವಿಧಿಸಿ ಎರಡು ವರ್ಷಗಳ ವರೆಗೆ ಜೈಲು ಶಿಕ್ಷೆ ಕೂಡ ನೀಡಲಾಗುವದು. ಕಿಶೋರ ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕಿಶೋರ ಕಾರ್ಮಿಕರ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಇಲಾಖೆಗೆ ಮಾಹಿತಿ ನೀಡಿ ನಿಯಮಾನುಸಾರ ಕೆಲಸ ನೀಡಬೇಕಾಗುತ್ತದೆ. ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಶಿಕ್ಷೆ ಮತ್ತು ದಂಡಕ್ಕೆ ಪಾತ್ರರಾಗುತ್ತಾರೆ ಎಂದರು.ಕಿರಿಯ…

Read More

ಚಡಚಣ ಪಟ್ಟಣ ಪಂಚಾಯತ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳಿಯ ಪಟ್ಟಣ ಪಂಚಾಯ್ತಿಗೆ ಫೆ.21 ರಂದು ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬೇಷರತ್‌ ಬೆಂಬಲ ನೀಡುವದಾಗಿ ಚಡಚಣ ಪಟ್ಟಣ ಪಂಚಾಯ್ತಿ ಪಕ್ಷೇತರ ಸದಸ್ಯರಾದ ಚೇತನ ನಿರಾಳೆ ಹಾಗೂ ಚಂದ್ರಕಾಂತ ಕಲಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಟ್ಟಣ ಪಂಚಾಯ್ತಿಯ ಒಟ್ಟು 16 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ 8 ಜನ ಸದಸ್ಯರು,ನಾಲ್ಕು ಜನ ಕಾಂಗ್ರೆಸ್‌ ಹಾಗು ನಾಲ್ಕು ಜನ ಪಕ್ಷೇತರರು ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನವನ್ನು ಅನೂಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗʼಅʼ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿ ಪಡಿಸಿ ಆದೇಶ ಹೊರಡಿಸಿದಂತೆ ಎರಡೂ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಿಜೆಪಿಯಲ್ಲಿ ಇದ್ದಾರೆ. ಆದರೆ ಬಹುಮತಕ್ಕಾಗಿ ಒಂದು ಮತದ ಅವಶ್ಯಕತೆ ಇದೆ.ಆದ್ದರಿಂದ ನಾವು ಬಿಜೆಪಿ ಬೆಂಬಲಿಸಿ ಪಟ್ಟಣ ಪಂಚಾಯ್ತಿ ಯ ಗದ್ದುಗೆಯನ್ನು ಬಿಜೆಪಿ ಅಭ್ಯರ್ಥಿಗಳು ಹೊಂದಬೇಕು ಎಂಬ ಆಶಯದಿಂದ ಬೇಷರತ್‌ ಹಾಗೂ ಯಾವುದೇ ಬೇಡಿಕೆ ಇಲ್ಲದೆ…

Read More