ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಮರಾಠಾ ಸಮಾಜ ಬಾಂಧವರು ಬುಧವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಸಂಭ್ರಮ,ಸಡಗರದಿಂದ ಆಚರಿಸಿದರು.
ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ ಮಹಿಳೆಯರು ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೂರ್ತಿಯ ಮೆರವಣಿಗೆಗೆ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮುಖಂಡ ಸಂಗಮೇಶ ಓಲೇಕಾರ ಚಾಲನೆ ನೀಡಿದರು.
ನಂತರ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಮೆರವಣಿಗೆಯಲ್ಲಿ ಬಸವರಾಜ ಬಿಜಾಪುರ, ಅನಿಲ ಪವಾರ, ಜೋತಿಬಾ ಪವಾರ, ತಾನಾಜಿ ಸೂರ್ಯವಂಶಿ, ಅಮರ ಗಾಯಕವಾಡ,ಪ್ರದೀಪ ಸಾಳುಂಕೆ, ರವಿ ಖಾಡೆ, ಶಿವಾಜಿ ಜಗತಾಪ, ಬಾಬು ನಿಕ್ಕಂ, ವೆಂಕಟೇಶ ಕರಾಡೆ, ಮಾರುತಿ ಗಾಯಕವಾಡ, ಸುಜಾತಾ ಬಂಡಾರಿ, ಸುನಂದಾ ಗಾಯಕವಾಡ, ಪ್ರಿಯಾ ರಜಪುತ, ನಾಣಿಬಾಯಿ ನಿಕ್ಕಂ, ತೇಜಸ್ವಿನಿ ಗಾಯಕವಾಡ, ಪೂಜಾ ಗಾಯಕವಾಡ, ರೂಪಾ ಜಾಧವ ಸೇರಿದಂತೆ ಇತರರು ಭಾಗವಹಿಸಿದ್ದರು.

