ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇತಿಹಾಸದ ಪುಟಗಳಲ್ಲಿ ಸಾಕಷ್ಟು ರಾಜರು ಕಾಣಿಸುತ್ತಾರೆ. ಅವರಲ್ಲಿ ನಮ್ಮ ಭಾಗದಲ್ಲಿ ಅತ್ಯಂತ ವೀರರು, ಶೂರರು, ಪರಾಕ್ರಮಿಗಳು ಶಿವಾಜಿ ಮಹಾರಾಜರು ಆಗಿದ್ದರು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟç ನಿರ್ಮಾಣಕ್ಕೆ ಮರಾಠರ ಪಾತ್ರ ದೊಡ್ಡದು ಎಂದು ಹೇಳಲಾಗುತ್ತೆ. ಆರೆ ಸಧ್ಯ ಮರಾಠರು ಹಿಂದುಳಿದ ಬಗ್ಗೆ ಮರಾಠಾ ನಾಯಕರು ಮಾತನಾಡುತ್ತಾರೆ. ಯಾರೇ ಹಿಂದುಳಿಯಲು ಕಾರಣ ಶಿಕ್ಷಣದ ಕೊರತೆ. ಯುವ ಪೀಳಿಗೆಯನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಆರ್‌ಎಸ್‌ಎಸ್ ನ ಪ್ರಮುಖರಾದ ಪರಶುರಾಮ ಪವಾರ, ಮರಾಠಾ ಸಮಾಜದ ಅಧ್ಯಕ್ಷ ಭರತ ಭೋಸಲೆ ಪ್ರಮುಖರಾದ ರಾಜೇಂದ್ರ ಭೋಸಲೆ, ಅಶೋಕ ನಾಡಗೌಡ, ಸಂಗಣ್ಣ ಬಿರಾದಾರ ಜಿಟಿಸಿ, ಪರಶುರಾಮ ಪವಾರ, ಹಣಮಂತ ನಲವಡೆ, ವಿಕ್ರಂ ಒಸ್ವಾಲ್, ಉದಯ ರಾಯಚೂರ, ಸಚೀನ್ ಸಾಳುಂಕೆ, ಶಿವಾಜಿ ವಿಜಾಪೂರ, ಕಿರಣ್ ದುದಾನಿ, ಕೃಷ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಅನಿಲ್ ಜಾಧವ್, ವಿನಾಯಕ ಘಾಟಗೆ, ಗಜಾನನ ನಲವಡೆ, ಅನೀಲ್ ಪವಾರ್ ಸೇರಿದಂತೆ ಹಲವರು ಇದ್ದರು.
ಅದ್ಧೂರಿ ಮೆರವಣಿಗೆ
ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ವಿಶೇಶ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಬಜಾರನ ಹನುಮಾನ ದೇವಸ್ಥಾನದಿಂದ ದ್ಯಾಮವ್ವದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯ ವರೆಗೂ ಮರಾಠಾ ಸಮಾಜದ ನೇತೃತ್ವದಲ್ಲಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚಾಲನೆ ನೀಡಿದರು.

