ಚಡಚಣ ಪಟ್ಟಣ ಪಂಚಾಯತ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳಿಯ ಪಟ್ಟಣ ಪಂಚಾಯ್ತಿಗೆ ಫೆ.21 ರಂದು ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವದಾಗಿ ಚಡಚಣ ಪಟ್ಟಣ ಪಂಚಾಯ್ತಿ ಪಕ್ಷೇತರ ಸದಸ್ಯರಾದ ಚೇತನ ನಿರಾಳೆ ಹಾಗೂ ಚಂದ್ರಕಾಂತ ಕಲಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯ್ತಿಯ ಒಟ್ಟು 16 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ 8 ಜನ ಸದಸ್ಯರು,ನಾಲ್ಕು ಜನ ಕಾಂಗ್ರೆಸ್ ಹಾಗು ನಾಲ್ಕು ಜನ ಪಕ್ಷೇತರರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ಅನೂಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗʼಅʼ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿ ಪಡಿಸಿ ಆದೇಶ ಹೊರಡಿಸಿದಂತೆ ಎರಡೂ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಿಜೆಪಿಯಲ್ಲಿ ಇದ್ದಾರೆ. ಆದರೆ ಬಹುಮತಕ್ಕಾಗಿ ಒಂದು ಮತದ ಅವಶ್ಯಕತೆ ಇದೆ.ಆದ್ದರಿಂದ ನಾವು ಬಿಜೆಪಿ ಬೆಂಬಲಿಸಿ ಪಟ್ಟಣ ಪಂಚಾಯ್ತಿ ಯ ಗದ್ದುಗೆಯನ್ನು ಬಿಜೆಪಿ ಅಭ್ಯರ್ಥಿಗಳು ಹೊಂದಬೇಕು ಎಂಬ ಆಶಯದಿಂದ ಬೇಷರತ್ ಹಾಗೂ ಯಾವುದೇ ಬೇಡಿಕೆ ಇಲ್ಲದೆ ಚುನಾವಣೆಯಲ್ಲಿ ಬಿಜಪಿಗೆ ಮತ ಚಲಾಯಿಸುವದಾಗಿ ಚೇತನ ನಿರಾಳೆ ಹಾಗೂ ಚಂದ್ರಕಾಂತ ಕಲಮನಿ ತಿಳಿಸಿದ್ದಾರೆ.

