Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ್ರತಿ ಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ :ನಿರಂಜನಶ್ರೀ
(ರಾಜ್ಯ ) ಜಿಲ್ಲೆ

ಪ್ರತಿ ಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ :ನಿರಂಜನಶ್ರೀ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ನಮ್ಮ ಮನಸ್ಸು ಯಾವದನ್ನು ಮಾಡಬೇಕೆಂಬುದನ್ನು ಸಂಕಲ್ಪ ಮಾಡಿಕೊಂಡರೆ ಮನಸ್ಸು ಆ ಕೆಲಸವನ್ನು ಮಾಡಿ ಅದರಲ್ಲಿ ಯಶಸ್ವಿಯಾಗುತ್ತದೆ. ಜೀವನದಲ್ಲಿ ನಾವೆಲ್ಲರೂ ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜೀವನವನ್ನು ಸಂತೋಷವಾಗಿ, ಆರೋಗ್ಯಕರವಾಗಿ ಕಳೆಯಬೇಕೆಂದು ಸಂಚಾರಿ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ಬುಧವಾರ ಸಂಜೆ ಕಳೆದ ಹನ್ನೊಂದು ದಿನಗಳ ಕಾಲ ಜರುಗಿದ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಪ್ರತಿದಿನ ಬೆಳಗ್ಗೆ ಬೇಗ ಏಳುವ ಮೂಲಕ ನಿತ್ಯವೂ ಗರಿಷ್ಠ ಒಂದು ಗಂಟೆ ಇಲ್ಲವೇ ಕನಿಷ್ಠ ಅರ್ಧಗಂಟೆಯಾದರೂ ಪ್ರಾಣಾಯಾಮ, ಯೋಗ, ವಾಯುವಿಹಾರ ನಿರಂತರವಾಗಿ ಮಾಡಿದರೆ ಆರೋಗ್ಯಕರ ಬದುಕು ಸಾಗಿಸಬಹುದು. ಇದಾದ ನಂತರ ಲಿಂಗಪೂಜೆ ಇಲ್ಲವೇ ಧ್ಯಾನ ಮಾಡಬೇಕು. ರಾತ್ರಿ ಬೇಗ ಮಲಗಬೇಕು. ಇದು ಜೀವನದಲ್ಲಿ ನಿರಂತತೆಯಿಂದ ಇದ್ದರೆ ಚೈತನ್ಯಮಯವಾದ ಜೀವನ ನಮ್ಮದಾಗುತ್ತದೆ ಎಂದರು.
ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತಿರಲಿ ಆ ಕೆಲಸವನ್ನು ಖುಷಿಯಾಗಿ, ನಗು ನಗುತ್ತಾ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ತಮ್ಮ ಕೆಲಸವನ್ನು ಬೇಸರದಿಂದ ಮಾಡಕೂಡದು. ಆ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ. ನಮ್ಮಲ್ಲಿ ದಾಸೋಹ ಭಾವವಿರಬೇಕು. ಪೂಜ್ಯರ ಪ್ರವಚನ ಆಲಿಸುವ ಅವಕಾಶ ಇದ್ದಾಗ ಅದನ್ನು ಕೇಳಬೇಕು. ಇದು ಇಲ್ಲದೇ ಇದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವ ರೂಢಿ ಇಟ್ಟುಕೊಳ್ಳಬೇಕೆಂದರು.
ಜೀವನದಲ್ಲಿ ಎಲ್ಲರನ್ನು ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಯಾರು ಮಿತ್ರರನ್ನು,ಶತ್ರುಗಳನ್ನು, ಬೇಕಾದವರನ್ನು, ಬೇಡವಾದವರನ್ನು ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳುತ್ತಾರೋ ಅವರಲ್ಲಿ ಭಗವಂತನ ತರಂಗ ಹರಿಯಲು ಆರಂಭವಾಗುತ್ತದೆ. ಅವರಲ್ಲಿ ಪ್ರೇಮದ ಝರಿ ಹರಿಯಲು ಆರಂಭವಾಗುತ್ತದೆ. ನಮ್ಮಲ್ಲಿ ಜಗತ್ತನ್ನು ಪ್ರೀತಿಸುವ ಭಾವ ಬರಬೇಕು. ಈ ಭಾವ ಬಂದರೆ ಅಲ್ಲಿ ಪರಮಾತ್ಮ ಸುಳಿಯುತ್ತಾನೆ. ಇದರಿಂದಾಗಿ ಅವರಲ್ಲಿ ನಗು, ಪ್ರಸನ್ನತೆ ತಂಗಾಳಿ ರೂಪದಲ್ಲಿ ಪರಮಾತ್ಮ ಹರಿಯುತ್ತಾನೆ. ಎಂದಿಗೂ ಪ್ರೇಮದ ದೀಪ ಆರಬಾರದು ಎಂದರು.
ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಎಂದಿಗೂ ಕೆಟ್ಟದರ ಬಗ್ಗೆ ಆಲೋಚನೆ ಮಾಡಬಾರದು. ಮಹಾತ್ಮರು ದೇಶ, ಸಮಾಜಕ್ಕೆ ಬದುಕಿದ್ದಾರೆ. ಜೀವನ ಕ್ಷಣಿಕವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಸರ್ವಮಂಗಳಾ ಕಡಿವಾಲ, ಶಾಂತಾ ಬಾರಿಕಾಯಿ, ಗಾಯತ್ರಿ ಪಾಟೀಲ, ಎಲ್.ಎನ್. ಇಟಗಿ, ಬಿ.ಎಸ್.ಅವಟಿ, ರಘು, ಆರ್‌.ಎಚ್.ಚಾಂದಕವಟೆ, ವಿನೋದ ಸಜ್ಜನ ಇತರರು ಶಿಬಿರದ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿವರುದ್ರಯ್ಯ ಹಿರೇಮಠ, ರವಿಗೌಡ ಚಿಕ್ಕೊಂಡ, ಪ್ರಭಾಕರ ಖೇಡದ, ವಿನುತ ಕಲ್ಲೂರ, ಶಿವಾನಂದ ತೋಳನೂರ, ಕಾಶೀನಾಥ ಅವಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಮಂಜುನಾಥ ಗುಳೇದಗುಡ್ಡ, ಕೊಟ್ರೇಶ ಹೆಗ್ಡಾಳ, ಸಂಗಪ್ಪ ಜಂಗಶೆಟ್ಟಿ, ಆರ್‌.ಐ. ಬಿರಾದಾರ, ಶ್ರೀಶೈಲ ಕೋಲಕಾರ, ಎನ್.ಎನ್.ಹೊಸಮನಿ, ಸಂಗಣ್ಣ ದಂಡಿನ, ಮಹಾಂತೇಶ ಹಿಟ್ನಳ್ಳಿ, ಶಿವಯೋಗಿ ಒಣರೊಟ್ಟಿ, ಶರಣು ಬಸ್ತಾಳ, ಬಸವರಾಜ ಜೀರ, ಅರುಣ ನಾಲತವಾಡ, ಪರಮಾನಂದ ಓಲೇಕಾರ, ನಿಂಗಪ್ಪ ಬೂದಿಗೋಳಿ, ಗೀತಾ ಬಾಗೇವಾಡಿ, ಮಹಾದೇವಿ ನಿಡಗುಂದಿ, ಶ್ರೀದೇವಿ ಬೀಳಗಿ, ಪುಷ್ಪಾ ಚಿಕ್ಕೊಂಡ, ವಿಶಾಲಾಕ್ಷಿ ಹಿರೇಮಠ, ಸುನಂದಾ ಚಿಕ್ಕೊಂಡ, ಸುವರ್ಣಾ ಡೋಮನಾಳ, ಮುಂಜಾನೆ, ಕಮಲಾ ಪಡಶೆಟ್ಟಿ, ಲಕ್ಷ್ಮೀ, ನೀಲಮ್ಮ ಚೌಕಿಮಠ, ಲಲಿತಾ ಹಳ್ಳಿ ಸೇರಿದಂತೆ ಇತರರು ಇದ್ದರು. ಹನ್ನೊಂದು ದಿನಗಳ ಕಾಲ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ನೀಡಿದ ಸಂಚಾರಿ ಯೋಗ ಗುರು ನಿರಂಜನ ಶ್ರೀಗಳಿಗೆ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಭಾವಚಿತ್ರ ನೀಡಿ ಭಕ್ತಿಯಿಂದ ಗೌರವಿಸಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!
    In (ರಾಜ್ಯ ) ಜಿಲ್ಲೆ
  • ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿಷ್ಕ್ರಿಯ ಸಹಕಾರ ಸಂಘಗಳ ನೋಂದಣಿ ರದ್ದತಿ ಪ್ರಕ್ರಿಯೆ ಆರಂಭ
    In (ರಾಜ್ಯ ) ಜಿಲ್ಲೆ
  • ಕರಡು ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ :ಡಿಸಿ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೋಗ್ಯ ತಪಾಸಣೆ, ನೋಂದಣಿ ಕಡ್ಡಾಯ
    In (ರಾಜ್ಯ ) ಜಿಲ್ಲೆ
  • ಇಂಡಿ: ಬಿಜೆಪಿಯಿಂದ ಮುಂದುವರೆದ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲ ಸಂಪನ್ಮೂಲ ಸಚಿವರು ಬೇಕು
    In (ರಾಜ್ಯ ) ಜಿಲ್ಲೆ
  • ಪ್ರತಿ ಶನಿವಾರ & ರವಿವಾರ ಓಟಗಾರರಿಗೆ ಉಚಿತ ತರಬೇತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.