Author: editor.udayarashmi@gmail.com

ರಚನೆ- ಅಕ್ಷತಾ ಅಡೂರ್(’ಕಥಾ ಅರಮನೆ ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ ನಿನ್ನ ನೋಡಿದೊಡನೆ ನೀ ನನ್ನ ಸೆಳೆಯಲುಹೃದಯ ಮೀಟಿತು ಪ್ರೇಮ ಸವಿಗಾನನೀ ಸನಿಹಕೆ ಬರಲು ಮನದಲಿ ಸಡಗರಅಭಿಲಾಷೆಯ ಅಲೆಗಳಲಿ ಮೈಮರೆಯುತಲಿ ನಾ ನಿನ್ನ ಕಂಗಳಲ್ಲಿ ನನ್ನ ಪ್ರತಿಬಿಂಬವ ನಾ ಕಾಣಲುಸಮಯದ ಪರಿವಿಲ್ಲದೆ ಒಲವಾಗುವುದುಅನುರಾಗವು ಚಿಮ್ಮಿ ಚಿತ್ತಾರ ಮೂಡಲುಸಡಗರ ಸಂಭ್ರಮದ ಮಹೋತ್ಸವವಾಗುವುದು ಹಗಲಿರುಳು ಸತತ ನಿನ್ನದೇ ಕನವರಿಕೆನಿನ್ನುಸಿರಲಿ ಉಸಿರಾಗುವ ಹೆಬ್ಬಯಕೆಬಯಸುವುದು ಅಪರಿಮಿತ ಸಾಂಗತ್ಯಕೆಬಂದುಬಿಡೊಮ್ಮೆ ಋಜುವಾತು ಹಾಕೋಕೆ ಬಾಳ ಪಯಣಕೆ ನೀ ಒಡನಾಡಿಯಾಗಲುಪ್ರೀತಿ ಸಂಗಮದಲಿ ಭಾವೋತ್ಕರ್ಷವಾಗುವುದುಕಾಣುವ ಕನಸಿಗೆ ನೀ ನನಗೆ ಸದಾ ಕಾವಲಿರಲುದಾಂಪತ್ಯದಲಿ ಪ್ರೀತಿಯ ನಿತ್ಯೋತ್ಸವವಾಗುವುದು

Read More

ಲೇಖನಮೀನಾ ಸದಾನಂದ್.(’ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಪೌರ್ಣಮಿ ಬಹು ರಾಷ್ಟ್ರೀಯ ಕಂಪನಿಯಲ್ಲಿ ಮ್ಯಾನೇಜರ್. ಡಬ್ಬಲ್ ಡಿಗ್ರಿ ಮಾಡಿದ್ದಾಳೆ. ಅವಳು ಕಟ್ಟಾ ಕನ್ನಡಾಭಿಮಾನಿ.‌ ಕನ್ನಡ ಮಾಧ್ಯಮದಲ್ಲೇ ಎಸ್.ಎಸ್.ಎಲ್.ಸಿ ವರೆಗೂ ಓದಿದ್ದಾಳೆ. ನಂತರ ಮುಂದೆ ಡಿಗ್ರಿಗೋಸ್ಕರ ಕಾಲೇಜಿನಲ್ಲಿ ಓದಿದ್ದಾಳೆ. ಈಗ ಇಪ್ಪತ್ತೈದು ವರ್ಷಗಳು ತುಂಬಿದೆ. ಇವಳೊಬ್ಬಳೇ ಮಗಳು. ತಂದೆ ಇಲ್ಲ.‌ ತಾಯಿಗೆ ಈಗ ಮಗಳ ಮದುವೆ ಮಾಡಬೇಕೆಂಬ ಜವಾಬ್ದಾರಿ. ಆದರೆ ಪೌರ್ಣಮಿ, ನನ್ನ ನ್ನ ಮದುವೆಯಾಗುವವನು ನನ್ನಂತೆಯೇ ಕನ್ನಡಾಭಿಮಾನಿಯಾಗಿರ ಬೇಕು ಮತ್ತು ನನ್ನ‌ ತಾಯಿಯನ್ನು ನಾನು ಚೆನ್ನಾಗಿ ನೋಡಿಕೊಳ್ಳಲು ಬಿಡಬೇಕು ಹಾಗಿದ್ದರೆ ಮಾತ್ರ ಆ ಮದುವೆಯಾಗಲು ತಯಾರು ಎಂದು ಅಮ್ಮನಿಗೆ ತಿಳಿಸಿದ್ದಾಳೆ. . ಮನೆಯ ಸಂಪೂರ್ಣ ಜವಾಬ್ದಾರಿ ಇವಳದೇ.‌ ತಂದೆ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಯ ಆದಾಯ ಪೌರ್ಣಮಿಯ ಓದು, ತಮ್ಮ ಬದುಕು, ಮನೆ ಬಾಡಿಗೆ ಇದಕ್ಕೇ ಸರಿಹೋಗುತ್ತಿತ್ತು. ಈಗ‌ ತಂದೆಯೂ ಇಲ್ಲಾ, ಅಂಗಡಿಯೂ ಇಲ್ಲಾ. ಇವಳ ಒಳ್ಳೆಯ ಸಂಬಳದಿಂದ ಬದುಕು ಚೆನ್ನಾಗೇ ಸಾಗುತ್ತಿತ್ತು.‌‌‌‌‌ ಇವಳಿಗೆ ಕನ್ನಡ ಎಂದರೆ ಮೈ ನವಿರೇಳುತ್ತಿತ್ತು.ಕನ್ನಡದಲ್ಲಿ ಕವಿತೆಗಳು,…

Read More

ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಅವರ ಸಾಮಾಜಿಕ ಸ್ಥಿತಿ. ಈ ಮೂರೂ ಸುಸ್ಥಿಯಲ್ಲಿ ಇದ್ದರೆ ಮನುಷ್ಯನು ಆರೋಗ್ಯವಾಗಿ ಇರುತ್ತಾನೆ. ಮನುಷ್ಯ ಆರೋಗ್ಯವಾಗಿ ಇರಲು ಉತ್ತಮ ಆಹಾರ ಶುದ್ಧವಾದ ಗಾಳಿ ಮತ್ತು ಶುದ್ಧವಾದ ನೀರು ಸೇವನೆ ಮಾಡಬೇಕು. ಒಂದು ಜೀವಿಯ ದೇಹ ಮತ್ತು ಮನಸ್ಸು ಸಂಪೂರ್ಣ ಸಮತೋಲನದಲ್ಲಿ ಇರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ‘ಆರೋಗ್ಯ ಎಂದರೆ ಮನುಷ್ಯನ ದೇಹದ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೇ’ ಆಗಿದೆ.ಆರೋಗ್ಯಕರ ಜೀವನವೆಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುತ ಮನಸ್ಸು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಮನಸ್ಸು ಮತ್ತು ದೇಹಕ್ಕೆ ಸೂಕ್ತ ಆಗಿರುವುದನ್ನು ಮಾತ್ರ ಮಾಡಬೇಕು. ಜೀವನಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನಿರ್ವಣೆ ಮಾಡುವುದರಿಂದ ವ್ಯಕ್ತಿಯ ಬಗ್ಗೆ ಸದಭಿಪ್ರಾಯ ಮೂಡುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆಶ್ರಮ ರಸ್ತೆ ಬಳಿಯ ರಾಮಕೃಷ್ಣ ನಗರದಲ್ಲಿ ಫೆ.೨೬ ಬುಧವಾರ ಸಂಜೆ ೭ ಗಂಟೆಗೆ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆರಾಮಕೃಷ್ಣ ಬಡಾವಣೆಯ ಶ್ರೀ ಗಜಾನನ ಮಿತ್ರ ಮಂಡಳಿ ಆಯೋಜಿಸಿದ ಮಹಾ ಶಿವರಾತ್ರಿ ಆಚರಣೆಯ ಸಾನಿಧ್ಯವನ್ನು ಕನ್ನೂರ ಕೈವಲ್ಯ ಕುಟೀರದ ಪೂಜ್ಯ ಪ್ರಕಾಶ ಮಹಾರಾಜರು ವಹಿಸಿಕೊಳ್ಳಲಿದ್ದಾರೆ.ಸಂಜೆ ಪ್ರವಚನ ಹಾಗೂ ಬಡಾವಣೆಯ ಮಹಿಳೆಯರಿಂದ, ಮಕ್ಕಳಿಂದ ಪ್ರವಚನ ಹಾಗೂ ವಿವಿಧ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಶ್ರೀ ರಾಮಕೃಷ್ಣ ಗಜಾನನ್ ಮಿತ್ರ ಮಂಡಲದ ವತಿಯಿಂದ ರಾತ್ರಿ 8.30 ಘಂಟೆಯಿಂದ ಜಾಗರಣೆ ಮತ್ತು ಪೂಜೆ ಆಯೋಜಿಸಲಾಗಿದೆ. ನಂತರ ಉಪವಾಸದ ಸಲುವಾಗಿ ಸರ್ವರಿಗೂ ಉಪಹಾರ ಕೂಟ ಏರ್ಪಡಿಸಲಾಗಿದ್ದು, ಸರ್ವರೂ ಪಾಲ್ಗೊಂಡು ಪುನೀತರಾಗಬೇಕೆಂದು ಶ್ರೀ ರಾಮಕೃಷ್ಣ ಗಜಾನನ್ ಮಿತ್ರ ಮಂಡಲದ ಸಂಜೀವ ಪಾಟೀಲ (ಕನ್ನೂರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕಾಶ್ ಮಹಾರಾಜರ ಪರಿಚಯ ಪೂಜ್ಯಶ್ರೀ ಪ್ರಕಾಶ್ ಮಹಾರಾಜರು ಕೈವಲ್ಯ ಕುಟೀರ ವಿಜಯಪುರ ಮೂಲತ: ಕನ್ನೂರ ಗ್ರಾಮದವರು. ಸಮರ್ಥ ಸದ್ಗುರು ಶ್ರೀ ಗಣಪತರಾವ್ ಮಹಾರಾಜರು ಶಾಂತಿ ಕುಟೀರ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಸರುಬಾಯಿ ಹಿರೇಮಠ ಅವರು ಹಿಟ್ಟಿನ ಗಿರಣಿ ಮೂಲಕ ಸ್ವ ಉದ್ಯೋಗ ಮಾಡಿಕೊಂಡಿದ್ದು ಅದರ ಜೊತೆಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಗ್ರಹ ಲಕ್ಷ್ಮಿ ಹಣವನ್ನು ಕೂಡಿಟ್ಟು ಸೇಂಗಾ ಹಿಂಡಿ, ರವಾ ವಡಿಯೋ ಮಶೀನ ತರುವ ಮೂಲಕ ಹೆಚ್ಚಿನ ಉದ್ಯೋಗಕ್ಕೆ ಗೃಹ ಲಕ್ಷ್ಮಿ ಹಣವನ್ನು ಸದ್ಬಳಕೆ ಮಾಡಿಕೊಂಡು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.ವಿಷಯ ತಿಳಿದುಕೊಂಡ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದಿ ಇಲಾಖೆ ಅಧಿಕಾರಿ ಬೇಟಿ ನೀಡಿ ಸರುಬಾಯಿ ಹಿರೇಮಠ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.ಸಿಡಿಪಿಓ ಶಂಬುಲಿಂಗ ಹಿರೇಮಠ ಮಾತನಾಡಿ, ಸರ್ಕಾರದ ಯಾವುದೆ ಯೋಜನೆಯಾಗಲಿ ಸರಿಯಾಗಿ ಸದುಪಯೋಗ ಪಡೆದುಕೊಂದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಗ್ರಹ ಲಕ್ಷ್ಮಿ ಯೋಜನೆಯ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ ನೀಡುತ್ತಿದ್ದು ಆ ಹಣದಿಂದ ಸ್ವ ಉದ್ಯೋಗದಂತ ಒಳ್ಳೆಯ ಕಾರ್ಯಕ್ಕೆ ಉಪಯೋಗಿದವರನ್ನು ಗುರುತಿಸಿ ಸರ್ಕಾರ ಮತ್ತು ಗ್ಯಾರೇಂಟಿ ಯೋಜನೆ ನುಷ್ಠಾನ ಸಮಿತಿ ಅಭಿನಂದಿಸಲಿದೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಬಸವನಭಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಮೂರು-ನಾಲ್ಕು ದಿನಗಳಿಂದ ಇದ್ದ ಮಾನಸಿಕವಾಗಿ ನೊಂದ ಅಂದಾಜು 55 ವಯಸ್ಸಿನ ಮಹಿಳೆಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿಲ್ಪಾ ಹಿರೇಮಠ ಭೇಟಿ ನೀಡಿ ಈ ಮಹಿಳೆಯನ್ನು ವಿಜಯಪುರದ ಸ್ವಾಧಾರ ಕೇಂದ್ರಕ್ಕೆ ಕರೆದುಕೊಂಡು ಹೋದರು.ಈ ಕುರಿತು ಅಧಿಕಾರಿ ಶಿಲ್ಪಾ ಹಿರೇಮಠ ಅವರು ಈ ಮಹಿಳೆಯು ಕಲಬುರಗಿ ಜಿಲ್ಲೆಯ ಮೂಲದವಳಾಗಿದ್ದಾಳೆ. ಇವಳು ಮನೆಯಲ್ಲಿ ಕೆಲ ಕಾರಣಗಳಿಂದ ಮನನೊಂದು ಮನೆ ತೊರೆದು ಬಂದಿದ್ದಾಳೆ. ಸಧ್ಯಕ್ಕೆ ಇವಳನ್ನು ಆರೋಗ್ಯದ ಹಿತ ದೃಷ್ಟಿಯಿಂದ ಸ್ವಾಧಾರ ಕೇಂದ್ರದಲ್ಲಿ ಬಿಡಲಾಗುವದು. ಕೇಂದ್ರದವರು ಇವಳ ಮನೆಯವರನ್ನು ಸಂಪರ್ಕಿಸಿ ಅವಳ ಸಮಸ್ಯೆಯನ್ನು ಪರಿಹರಿಸಿ ನಂತರ ಮನೆಗೆ ಕಳುಹಿಸಿಕೊಡುತ್ತಾರೆ ಎಂದು ಪತ್ರಿಕೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಿದ್ದು ಮೇಟಿ, ಆನಂದ ಕಾಖಂಡಕಿ, ಈರಯ್ಯ ಹಿರೇಮಠ, ಬಸು ತೆಲಗಿ, ಯಲ್ಲಪ್ಪ ಕೋಲಕಾರ, ಮಂಜು ಗುಂಡಾನವರ, ಶಿವು ಗುಂಡಾನವರ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬೆಳಗಾವಿ ಗಡಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಮರಾಠಿ ಮಾತನಾಡು ಎಂದು ಹಲ್ಲೆ ಮಾಡಿದ ಘಟನೆ ಖಂಡನೀಯ ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಬಸ್ ನಿರ್ವಾಹಕ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆ ಕೇಸ್ ದಾಖಲೆ ಮಾಡಿದ ಪೊಲೀಸರ ನಡೆಯು ಖಂಡನೀಯ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಮಸಿ ಹಚ್ಚಿ ಚಾಲಕರ ಮೇಲೆ ಹಲ್ಲೆ ಮಾಡಿ ಅವಮಾನಿಸುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕರ್ನಾಟಕದ ಬಸ್ ಗಳನ್ನು ತಡೆದು ಚಾಲಕರಿಗೆ ನಿಂದಿಸುವುದು. ಅವರ ಮೇಲೆ ಹಲ್ಲೆ ಮಾಡುವುದು ನೋಡಿದರೆ ನಾವು ಯಾವ ದೇಶದಲ್ಲಿ ಇದ್ದೇವೆ ಅನ್ನಿಸುತ್ತಿದೆ. ನಾವೆಲ್ಲ ಭಾರತೀಯರು ಅನ್ನುವ ಪ್ರಜ್ಞೆ ಇಲ್ಲದೆ ನಮ್ಮ ದೇಶದ ಒಕ್ಕೂಟದ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ನಮ್ಮ ಕರ್ನಾಟಕದ ಚಾಲಕರ ಮೇಲೆ ಹಲ್ಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಫೆ.೨೭ ರಿಂದ ಮಾರ್ಚ ೦೧ ವರೆಗೆ ದಲಿತ ದ್ರೋಹಿ ಸರ್ಕಾರದ ವಿರುದ್ದ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನದ ಸಂಯೋಜರಾದ ರಾಮಣ್ಣ ಬಲ್ಲಹುಣ್ಸಿ ಹೇಳಿದರು.ಅವರು ನಗರದಲ್ಲಿನ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಛೇರಿಯಲ್ಲಿ ಮಂಗಳವಾರ ಜರುಗಿದಎಸ್.ಸಿ.ಎಸ್.ಪಿ/ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲನ ಹೋರಾಟದ ಪೂರ್ವಬಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ರಾಜ್ಯದ್ಯಾಂತ ೧೪ ತಂಡಗಳಲ್ಲಿ ಇದೇ ದಿನಾಂಕ ೨೭ರಿಂದ ಮಾರ್ಚ ದಿನಾಂಕ ೦೧ ವರೆಗೆ ಎಸ್.ಸಿ.ಎಸ್.ಪಿ/ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲನ ಹಮ್ಮಿಕೊಳ್ಳಲಾಗಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ, ಮಾಜಿ ಸಂಸದ ಡಾ. ಉಮೇಶ ಜಾಧವ್, ಅಮರೇಶ್ವರ ನಾಯಕ್, ಬಳ್ಳಾರಿ ಹನುಮಂತಪ್ಪ, ಗುರುರಾಜ ಗಂಟಹೊಳೆ, ರಾಜು ನಾಯ್ಕರ, ಪ್ರತಾಪ್‌ಗೌಡ ಪಾಟೀಲ, ಅರುಣ ಶಹಾಪುರ, ಇವರುಗಳ ನೇತೃತ್ವ ೧೪ ತಂಡಗಳನ್ನು ರಚಿಸಲಾಗಿದೆ, ರಾಮಣ್ಣ ಬಲ್ಲಾಹುಣ್ಸಿ ಹಾಗೂ ಪಿ.ಓಂಕಾರ ತುಮಕುರ ಇವರು…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಘೋಣಸಗಿ ತಾಂಡಾ ನಂ 01 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ‌ ಬಳೋಲಮಟ್ಟಿ ಮಂಗಳವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಶಾಲಾ ವಾತಾವರಣ ಹಾಗೂ ಭೌತಿಕ ಸೌಲಭ್ಯ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.ಮಕ್ಕಳ ವರ್ಗ ಕೋಣೆಗೆ ತೆರಳಿದ ಅವರು ನಲಿಕಲಿ ಮಕ್ಕಳಿಗೆ ಸರಳ ಓದು, ಸರಳ ಶಬ್ದ ಹಾಗೂ ಗಣಿತದ ಮೂಲಕ್ರೀಯೆಗಳ ಮೂಲಕ ಸರಳ ಲೆಕ್ಕಗಳನ್ನು ಮಕ್ಕಳಿಂದ ಮಾಡಿಸಿದರು. ನಾಲ್ಕು ಮತ್ತು ಐದನೇ ತರಗತಿ ಮಕ್ಕಳಿಗೆ ಸರಳ ಇಂಗ್ಲೀಷ ಪದಗಳು ಗುಣಾಕಾರ, ಭಾಗಾಕಾರ ಲೆಕ್ಕಗಳನ್ನು ಮಕ್ಕಳಿಂದ ಮಾಡಿಸಿ ವಿಧ್ಯಾರ್ಥಿಗಳ ಜೊತೆ ಸಂವಾದಿಸಿದರು.ಶಾಲಾ ಅಂದ ಚಂದ ಗೋಡೆ ಬರಹ ಕಂಡು ಹರ್ಷವ್ಯಕ್ತಪಡಿಸಿ ಪಠ್ಯ ಪುಸ್ತಕದ ಬಹುತೇಕ ಎಲ್ಲ ವಿಷಯಗಳನ್ನು ಗೋಡೆಯ ಮೇಲೆ ಬರಹದ ರೂಪದಲ್ಲಿರುವದರಿಂದ ಮಕ್ಕಳಿಗೆ ಪ್ರತಿದಿನ ನೋಡಿ ಕಲಿಯಲು ತುಂಬಾ ಅನೂಕೂಲವಾಗುತ್ತದೆ. ಶಾಲಾ ಆವರಣದಲ್ಲಿ ಗಿಡಗಳು, ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಗೇಟ್ ಎಲ್ಲ ಮೂಲಭೂತ ಸೌಲಭ್ಯ ಇರುವದರಿಂದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಆಯ್ಯ-ವ್ಯಯ ಅಂದಾಜು ಪತ್ರಿಕೆ ತಯಾರಿಸಲು ಸಾರ್ವಜನಿಕರಿಂದ ಸಲಹೆ-ಸೂಚನೆ ಪಡೆದುಕೊಳ್ಳಲು ಫೆ.೨೮ರಂದು ಮಧ್ಯಾಹ್ನ ೪ ಗಂಟೆಗೆ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ೨ನೇ ಸುತ್ತಿನ ಆಯ್ಯ-ವ್ಯಯ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ವ್ಯಾಪಾರ ಮತ್ತು ಕೈಗಾರಿಕೆ ಸಂಸ್ಥೆ ಒಕ್ಕೂಟಗಳ ಸದಸ್ಯರು ಮತ್ತು ಇತರೆ ಸಂಘ-ಸಂಸ್ಥೆ ಒಕ್ಕೂಟಗಳ ಸದಸ್ಯರು ಮತ್ತು ಇತರೆ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More