ರಚನೆ
– ಅಕ್ಷತಾ ಅಡೂರ್
(’ಕಥಾ ಅರಮನೆ ’ ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ನಿನ್ನ ನೋಡಿದೊಡನೆ ನೀ ನನ್ನ ಸೆಳೆಯಲು
ಹೃದಯ ಮೀಟಿತು ಪ್ರೇಮ ಸವಿಗಾನ
ನೀ ಸನಿಹಕೆ ಬರಲು ಮನದಲಿ ಸಡಗರ
ಅಭಿಲಾಷೆಯ ಅಲೆಗಳಲಿ ಮೈಮರೆಯುತಲಿ ನಾ
ನಿನ್ನ ಕಂಗಳಲ್ಲಿ ನನ್ನ ಪ್ರತಿಬಿಂಬವ ನಾ ಕಾಣಲು
ಸಮಯದ ಪರಿವಿಲ್ಲದೆ ಒಲವಾಗುವುದು
ಅನುರಾಗವು ಚಿಮ್ಮಿ ಚಿತ್ತಾರ ಮೂಡಲು
ಸಡಗರ ಸಂಭ್ರಮದ ಮಹೋತ್ಸವವಾಗುವುದು
ಹಗಲಿರುಳು ಸತತ ನಿನ್ನದೇ ಕನವರಿಕೆ
ನಿನ್ನುಸಿರಲಿ ಉಸಿರಾಗುವ ಹೆಬ್ಬಯಕೆ
ಬಯಸುವುದು ಅಪರಿಮಿತ ಸಾಂಗತ್ಯಕೆ
ಬಂದುಬಿಡೊಮ್ಮೆ ಋಜುವಾತು ಹಾಕೋಕೆ
ಬಾಳ ಪಯಣಕೆ ನೀ ಒಡನಾಡಿಯಾಗಲು
ಪ್ರೀತಿ ಸಂಗಮದಲಿ ಭಾವೋತ್ಕರ್ಷವಾಗುವುದು
ಕಾಣುವ ಕನಸಿಗೆ ನೀ ನನಗೆ ಸದಾ ಕಾವಲಿರಲು
ದಾಂಪತ್ಯದಲಿ ಪ್ರೀತಿಯ ನಿತ್ಯೋತ್ಸವವಾಗುವುದು
