ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಸರುಬಾಯಿ ಹಿರೇಮಠ ಅವರು ಹಿಟ್ಟಿನ ಗಿರಣಿ ಮೂಲಕ ಸ್ವ ಉದ್ಯೋಗ ಮಾಡಿಕೊಂಡಿದ್ದು ಅದರ ಜೊತೆಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಗ್ರಹ ಲಕ್ಷ್ಮಿ ಹಣವನ್ನು ಕೂಡಿಟ್ಟು ಸೇಂಗಾ ಹಿಂಡಿ, ರವಾ ವಡಿಯೋ ಮಶೀನ ತರುವ ಮೂಲಕ ಹೆಚ್ಚಿನ ಉದ್ಯೋಗಕ್ಕೆ ಗೃಹ ಲಕ್ಷ್ಮಿ ಹಣವನ್ನು ಸದ್ಬಳಕೆ ಮಾಡಿಕೊಂಡು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ವಿಷಯ ತಿಳಿದುಕೊಂಡ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದಿ ಇಲಾಖೆ ಅಧಿಕಾರಿ ಬೇಟಿ ನೀಡಿ ಸರುಬಾಯಿ ಹಿರೇಮಠ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಸಿಡಿಪಿಓ ಶಂಬುಲಿಂಗ ಹಿರೇಮಠ ಮಾತನಾಡಿ, ಸರ್ಕಾರದ ಯಾವುದೆ ಯೋಜನೆಯಾಗಲಿ ಸರಿಯಾಗಿ ಸದುಪಯೋಗ ಪಡೆದುಕೊಂದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಗ್ರಹ ಲಕ್ಷ್ಮಿ ಯೋಜನೆಯ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ ನೀಡುತ್ತಿದ್ದು ಆ ಹಣದಿಂದ ಸ್ವ ಉದ್ಯೋಗದಂತ ಒಳ್ಳೆಯ ಕಾರ್ಯಕ್ಕೆ ಉಪಯೋಗಿದವರನ್ನು ಗುರುತಿಸಿ ಸರ್ಕಾರ ಮತ್ತು ಗ್ಯಾರೇಂಟಿ ಯೋಜನೆ ನುಷ್ಠಾನ ಸಮಿತಿ ಅಭಿನಂದಿಸಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ ಮಾತನಾಡಿ, ಕಾಂಗ್ರೇಸ್ ಪಕ್ಷ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಯೋಜನೆ ಯಾವುದೆ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ವಾಹಬ ಸುಂಬಡ, ಪ್ರಶಾಂತ ನಾಶೀ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಕುಂಬಾರ, ಶೈಲಾ ಹೊಸಮನಿ, ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತರು ಇದ್ದರು.

