Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹುಣಶ್ಯಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಚಾಲನೆ ನೀಡಲಾಯಿತು.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ಸುಮಿತ್ ಮೇತ್ರಿ ಮಾತನಾಡಿ, ಸಿ.ವಿ.ರಾಮನ್ ರವರು ಬೆಳಕಿನ ಪರಿಣಾಮ ಸಿದ್ಧಾಂತವನ್ನು ಮಂಡಿಸಿದಕ್ಕಾಗಿ ೧೯೩೦ರಲ್ಲಿ ನೊಬೆಲ್ ಪಾರಿತೋಷಕವನ್ನು ಏಷ್ಯಾ ಖಂಡದಲ್ಲಿ ಮೊಟ್ಟಮೊದಲ ಬಾರಿಗೆ ಪಡೆದುಕೊಂಡರು ಎಂದು ಹೇಳಿದರು.ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಅವಳೆ ಸಿ.ವಿ ರಾಮನ್‌ರವರ ಜೀವನ ಚರಿತ್ರೆ, ವಿದ್ಯಾಭ್ಯಾಸ, ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ಹೇಳಿದರು.ಮುಖ್ಯಶಿಕ್ಷಕ ಮಡಿವಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಮುಂದುವರೆದ ರಾಷ್ಟçವಾಗಿದೆ ಜೊತೆಗೆ ಸರ್ ಸಿ ವಿ ರಾಮನ್‌ರ ಜೀವನ, ಅವರ ಆದರ್ಶಗಳು ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.ವಿಜ್ಞಾನ ಶಿಕ್ಷಕ ಸದ್ದಾಂ ಗಣಿ ಬೆಳಕಿನ ಚದುರುವಿಕೆ ಬಗ್ಗೆ ಸರಳ ಪ್ರಯೋಗ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗಿದ್ದು, ಮೂಢನಂಬಿಕೆಗಳ ಕುರಿತು ಜಾಗ್ರತೆ ಮೂಡಿಸುವುದು ತುಂಬ ಅವಶ್ಯಕವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಸಾಧೀಕ ಸುಂಬಡ ಹೇಳಿದರು.ಆಲಮೇಲದ ಭೀಮಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ವೈದ್ಯಸಾಹಿತಿ ಡಾ.ಸಮೀರ ಹಾದಿಮನಿ, ವಿಶ್ವಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅನನ್ಯವಾಗಿದ್ದು, ಸಾವಿರಾರು ವರ್ಷಗಳ ಹಿಂದೆಯೆ ಆರ್ಯಭಟ ಸೊನ್ನೆಯನ್ನು ಕಂಡುಹಿಡಿದಿದ್ದು, ನಮ್ಮ ವಿಜಯಪುರದ ಬಿಜ್ಜರಗಿಯಲ್ಲಿ ಜನ್ಮತಾಳಿದ್ದ ಭಾಸ್ಕರಾಚಾರ್ಯರು ಬೀಜಗಣಿತ, ಖಗೋಳ ಶಾಸ್ತ್ರಜ್ಞರಾಗಿ ಪ್ರತಿಪಾದಿಸಿದ ಅನೇಕ ಸಿದ್ದಾಂತಗಳು ಈಗಿನ ವಿಜ್ಞಾನಿಗಳಿಗೆ ಸವಾಲೊಡ್ಡುವ ರೀತಿಯಲ್ಲಿವೆ,ಆಧುನಿಕ ವೈದ್ಯವಿಜ್ಞಾನಕ್ಕೆ ಶಸ್ತ್ರ ಚಿಕಿತ್ಸೆಯ ಪಿತಾಮಹಾ ಸುಶ್ರುತ ಮಹರ್ಷಿಗಳ ಕೊಡುಗೆ ಅಪಾರವಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಸಿ ವಿ ರಾಮನ್ ,ಹರಗೋವಿಂದ ಖೋರಾನಾ ಮುಂತಾದವರಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ವಿಜ್ಞಾನಕ್ಕೆ ಮನ್ನಣೆ ಸಿಕ್ಕಿದೆ ಎಂದರು.ರಾಂಪೂರ ಆರೋಢ ಮಠದ ನಿತ್ಯಾನಂದ ಶ್ರೀಗಳು…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ, ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಮಾಹಿತಿ ತಂತ್ರಜ್ಞಾನದ ಜೊತೆ ಜೊತೆಗೆ ವೈಜ್ಞಾನಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಜ್ಞಾನವು ಹೊಸ ಹೊಸ ಆವಿಷ್ಕಾರಗಳು ಮೂಲಕ ಮಕ್ಕಳಲ್ಲಿ ಜ್ಞಾನದಾಹವನ್ನು ಹೆಚ್ಚಿಸುತ್ತದೆ. ಇಡೀ ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದ್ದು, ಖ್ಯಾತ ವಿಜ್ಞಾನಿ ಸಿ ವಿ ರಾಮನ್. ಅವರು ಕಂಡುಹಿಡಿದ ಬೆಳಕಿನ ಚದುರವಿಕೆಯ ಆವಿಷ್ಕಾರ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಪ್ರತಿ ವರ್ಷ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಿದೆ ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ಮಲ್ಲಿಕಾರ್ಜುನ ಮರಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು.ಇದೇ ವೇಳೆ ಉಪನ್ಯಾಸಕಿರಾದ ನಸ್ರೀನ್ ತಾಜ್, ಸುಮಾ ಎಚ್ಚ್, ಪಾರ್ವತಿ, ಜ್ಯೋತಿ, ಉಪನ್ಯಾಸಕರಾದ ಶಶಿಕುಮಾರ, ಡಾ ಶರಣಪ್ಪ, ಡಾ ವೈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಗಳ ಸಂಶೋಧನೆ ಮಾನವ ಜೀವನದ ನೆಮ್ಮದಿ ಮತ್ತು ಶಾಂತಿಗಾಗಿ ಸದ್ಬಳಕೆ ಯಾಗಬೇಕು. ವೈಜ್ಞಾನಿಕ ಮನೋಭಾವ ದಿಂದ ಸಮಾಜದ ಪ್ರತಿ ಕ್ಷೇತ್ರದಲ್ಲಿ ವೈಚಾರಿಕ ಚಿಂತನೆ ಹರಡುವಂತಾಗಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡಲಸಂಗ ದ ವಿಜ್ಞಾನ ಶಿಕ್ಷಕ ವೆಂಕಟೇಶ್ ಚವಾಣ್ ಹೇಳಿದರು.ಇಂಡಿ ತಾಲ್ಲೂಕಿನ ಹಡಲಸಂಗ ದಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಅಂಗವಾಗಿ ಜರುಗಿದ ವಿವಿಧ ವಿಜ್ಞಾನ ವಿಷಯದಲ್ಲಿ ಮಕ್ಕಳ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ ಎಂದ ಅವರು ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿಯೂ ಕೂಡ ಉತ್ತಮ ಕ್ರಿಯಾಶೀಲ ಶಿಕ್ಷಕರು ಕಾರ್ಯ ಮಾಡುತ್ತಿದ್ದು, ಪಾಲಕರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಲು ಪ್ರೋತ್ಸಾಹ ನೀಡಬೇಕೆಂದರು. ಮುಖ್ಯ ಗುರುಗಳಾದ ಎಚ್ ಆರ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎ. ಎಸ್.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರವರು ಮಾ.1 ಶನಿವಾರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಅಂದು ಬೆ.10ಗಂ. ತಿಕೋಟಾ ತಾಲೂಕಿನ ಕಂದಾಯ ಇಲಾಖೆಯ ಭೂಮಾಪನ ಎ.ಡಿ.ಎಲ್.ಆರ್ ಕಚೇರಿಗೆ ಚಾಲನೆ ನೀಡಲಿದ್ದಾರೆ. ಬೆ.10.30ಗಂ. ತಿಕೋಟಾ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟಿಸಲಿದ್ದಾರೆ. ಬೆ.11ಗಂ. ಕೆ.ಎನ್.ಎನ್.ಎಲ್ ನಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಹೊನವಾಡದಲ್ಲಿ ಹೊನವಾಡ-ಕನಮಡಿ ರಸ್ತೆ ಮತ್ತು ರೂ.1.40 ಕೋಟಿ ವೆಚ್ಚದಲ್ಲಿ ಹೊನವಾಡ-ಬಿಜ್ಜರಗಿ ಹಾಗೂ ಪಿ.ಆರ್.ಡಿ ರೂ.80 ಲಕ್ಷ ವೆಚ್ಚದಲ್ಲಿ ಹೊನವಾಡ-ಬಾಬಾನಗರ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.ಮ.12.30ಗಂ. ಘೋಣಸಗಿ ಗ್ರಾಮದ ಅಮೋಘಸಿದ್ದ ದೇವಸ್ಥಾನ ಹತ್ತಿರ ಕೆ.ಎನ್.ಎನ್.ಎಲ್ ವತಿಯಿಂದ ರೂ.80 ಲಕ್ಷ ವೆಚ್ಚದಲ್ಲಿ ಅಳಗಿನಾಳ-ಗುಡ್ಡಾಪುರ ಗಡಿ ರಸ್ತೆವರೆಗೆ ಮತ್ತು ಸಿಡಿ ಕಾಮಗಾರಿ ಮತ್ತು ರೂ.1.25 ಕೋಟಿ ವೆಚ್ಚದಲ್ಲಿ ಘೋಣಸಗಿ ಮುಖ್ಯರಸ್ತೆಯಿಂದ ಹುಬನೂರ ಮಹಾರಾಷ್ಟ್ರ ಗಡಿಯವರೆಗೆ ರಸ್ತೆ ಸುಧಾರಣೆ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಭಗವಂತನು ತಪ್ಪಸ್ಸಿಗೆ ಒಲಿಯುವುದಿಲ್ಲ ಬದಲಾಗಿ ಭಕ್ತರ ಭಕ್ತಿ ಶುದ್ದವಾಗಿರಬೇಕು ಅಂದಾಗ ಭಗವಂತನು ಒಲಿದು ನಿಮ್ಮ ಆಶೋತ್ತರಗಳನ್ನು ಪೂರೈಸಲಿದ್ದಾನೆ ಎಂದು ಜಗದ್ಗುರು ಡಾ. ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಉಜೈನಿ ಪೀಠ ಅವರು ಹೇಳಿದರು.ಅವರು ತಾಲೂಕಿನ ಆನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನೂತನ ಚಂದ್ರಗಿರಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಹತ್ತಾರು, ಜಾತಿ, ಮತ ಪಂಥಗಳಿವೆ ಆದರೆ ಎಲ್ಲರ ಭಕ್ತಿ ಒಂದೇ ಆಗಿದೆ. ಎಲ್ಲರ ಪ್ರೀತಿ ಬಾಂಧವ್ಯ ಕೂಡ ಒಂದೇ ಆಗಿದೆ ಹೀಗಾಗಿ ಭಾರತವನ್ನು ಭಕ್ತಿ, ಧರ್ಮಗಳ ತವರು ಎಂದು ಜಗತ್ತು ಕರೆದು ಗೌರವಿಸುತ್ತದೆ ಎಂದ ಅವರು ಅನೇಕರು ದೇವರು, ಧರ್ಮವನ್ನು ಮೂಢ ನಂಬಿಕೆ ಎಂದು ಲೇವಡಿ ಮಾಡುತ್ತಾರೆ. ಆದರೆ ನಮ್ಮ ಪೂರ್ವಜರು ಮಾಡಿರುವ ಯಾವ ಆಚರಣೆಗಳಲ್ಲೂ ಮೂಢ ನಂಬಿಕೆಗಳನ್ನು ಕಾಣಲು ಸಾಧ್ಯವಿಲ್ಲ. ಅವೆಲ್ಲವೂ ಮೂಲ ನಂಬಿಕೆಗಳಾಗಿವೆ ಹೀಗಾಗಿ ಯಾರು ಲೇವಡಿ ಮಾಡುವವರ ಮಾತುಗಳಿಗೆ ಕಿವಿಗೊಡದೆ ನಿರಂತವಾಗಿ ಧರ್ಮ ಕಾರ್ಯಗಳನ್ನು ಮಾಡಿ ಎಂದ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮಾ.೧ರಂದು ಅಫಜಲಪುರ ಪಟ್ಟಣದಲ್ಲಿ ನಡೆಯುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬೇಕೆಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಹಾರಾಯ ಅಗಸಿ ಮನವಿ ಮಾಡಿದ್ದಾರೆ.ಅವರು ತಾಲೂಕಿನ ಆನೂರ ಗ್ರಾಮದ ಚಂದ್ರಗಿರಿ ದೇವಸ್ಥಾನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅಲ್ಲದೆ ಚೌಡಯ್ಯನವರ ಅದ್ದೂರಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಹೀಗಾಗಿ ಹೆಚ್ಚಿನ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಮುಖಂಡರಾದ ಬಸವರಾಜ ಸಪ್ಪನಗೋಳ, ಶ್ರೀಕಾಂತ ದೀವಾನಜೀ ಮಾತನಾಡುತ್ತಾ ಚೌಡಯ್ಯ ಶರಣರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ, ಅವರ ಸಿದ್ದಾಂತಗಳು, ತತ್ವಗಳು, ವಚನಗಳು ಎಲ್ಲರಿಗೂ ಅನ್ವಯ ಆಗುವಂಥವು ಹೀಗಾಗಿ ಚೌಡಯ್ಯ ಶರಣರ ಜಯಂತಿ ಕಾರ್ಯಕ್ರಮಕ್ಕೆ ಜಾತ್ಯಾತೀತವಾಗಿ ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಿ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಚಂದ್ರಗಿರಿ ದೇವಿ ಅರ್ಚಕ ರಾಹುಲ್ ಭಂಡಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ದತ್ತು ಘಾಣೂರ, ಡಾ. ಸಂಗಣ್ಣ ಸಿಂಗೆ, ಚಂದ್ರಕಾಂತ ಸೀತನೂರ, ಬಾಬು ದೇವರಮನಿ,…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮಕ್ಕಳು ಶಾಲೆಯಲ್ಲಿ ಓದುವಾಗ ಕೇವಲ ಪಠ್ಯದ ಪಾಠಗಳನ್ನೂ ಹೇಳುವ ಬದಲಾಗಿ ಅವರ ಸಮಗ್ರ ಬೆಳವಣ ಗೆಯ ದೃಷ್ಟಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗುತ್ತದೆ. ಕ್ರೀಡೆಯಿಂದ ಮಕ್ಕಳ ಸಮಗ್ರ ಬೆಳವಣ ಗೆ ಸಾಧ್ಯ ಎಂದು ಪ್ರಾಂಶುಪಾಲ ಫಾದರ್ ರಾಜಶೇಖರ ಗುಂದಿಗಾ, ಆಡಳಿತ ಅಧಿಕಾರಿ ಫಾದರ್ ರೋಷನ್ ಡಿಸೋಜಾ ಹೇಳಿದರು.ಅವರು ಪಟ್ಟಣದ ದೇಸಾಯಿ ಕಲ್ಲೂರ ರಸ್ತೆಯಲ್ಲಿರುವ ಹೋಲಿ ಕ್ರಾಸ್ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ಮಕ್ಕಳ ಸಮಗ್ರ ಬೆಳವಣ ಗೆಗೆ ಒತ್ತು ನೀಡಲಾಗುತ್ತದೆ. ಪಾಠದ ಜೊತೆಗೆ ಆಟಕ್ಕೂ ಮಹತ್ವ ನೀಡಲಾಗುತ್ತದೆ. ಕಲಿಕೆಯನ್ನು ಗಟ್ಟಿಗೊಳಿಸಬೇಕಾದರೆ ಕ್ರೀಡೆ ಕೂಡ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ ಹೀಗಾಗಿ ಮಕ್ಕಳ ಆಸಕ್ತಿಗನುಗುಣವಾಗಿ ಕ್ರೀಡೆಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತಿದ್ದೇವೆ ಎಂದ ಅವರು ಕ್ರೀಡೆಎಯಲ್ಲಿ ಭಾಗಿಯಾಗಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.ದೈಹಿಕ ಶಿಕ್ಷಕ ರಮೇಶ ಕುಂಬಾರ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಬ್ಲೂ, ಗ್ರೀನ್, ರೆಸ್, ಎಲ್ಲೋ ಎಂಬ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಎಲ್ಲಾ…
ಉದಯರಶ್ಮಿ ದಿನಪತ್ರಿಕೆ ಅಪಜಲಪುರ: ತಾಲೂಕಿನ ಭೀಮ ತೀರದಲ್ಲಿರುವ ಸುಕ್ಷೇತ್ರ ಉಡಚಣ ಗ್ರಾಮದ ಗ್ರಾಮ ದೇವತೆ, ಮಹಾಮಹಿಮ, ಪವಾಡ ಪುರುಷ, ಬೇಡಿದವರಿಗೆ ಬೇಡಿದನ್ನೇ ನೀಡಿರುವ ಕಲಿಯುಗದ ಕಾಮದೇನು ಕಲ್ಪತರು ಶ್ರೀ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ 28ರಿಂದ ಮಾರ್ಚ್ 5 ರವರೆಗೆ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ. ದಿನಾಂಕ 28 ರಂದು ಶುಕ್ರವಾರ ಶ್ರೀ ಹುಚ್ಚ ಲಿಂಗೇಶ್ವರ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಲಿದೆ, ಮಾರ್ಚ್ 4ರಂದು ಮಂಗಳವಾರ ರಾತ್ರಿ 10.30 ಗಂಟೆಗೆ ಬನ್ನಿ ಕೊರಡು ರಾಶಿಗೆ ಅಗ್ನಿಸ್ಪರ್ಶ, ಮಾರ್ಚ್ 5ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ಹುಚ್ಚಲಿಂಗೇಶ್ವರ ಪಲ್ಲಕ್ಕಿಯೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ ಭೀಮಾ ನದಿಗೆ ತೆರಳಿ ಗಂಗೆ ಸಿತಾಳ ಪೂಜೆ ನೆರವೇರಿಸಿ ಭವ್ಯ ಮೆರವಣಿಗೆಯೊಂದಿಗೆ ಭಂಡಾರಿಯವರ ಮನೆಗೆ ಆಗಮಿಸುವುದು, ನಂತರ ಭಂಡಾರಿ ಅವರಿಗೆ ತುಂಬಾ ಆಯೇರಿ ನಂತರ ಮಧ್ಯಾಹ್ನ 12:30 ಗಂಟೆಗೆ ಭಂಡಾರಿ ದಂಪತಿಗಳು…
ಲೇಖನ – ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ದಿನದಿಂದ ದಿನಕ್ಕೆ ಬದುಕಿನ ರೈಲು ಓಡಿಸುವುದು ಕಷ್ಟವೆನಿಸುತ್ತಿದೆ. ಜಗತ್ತು ಹಾರುವ ರಾಕೆಟ್ ವೇಗದ ಗತಿಗೆ ನಮ್ಮ ಗತಿ ತುಂಬಾ ಕಡಿಮೆಯೆನಿಸುತ್ತಿದೆ. ಹೀಗಾಗಿ ನಿತ್ಯ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ವಿಲ ವಿಲ ಒದ್ದಾಡುತ್ತಿದ್ದೇವೆ. ಬದುಕಿಗೆ ಆತುಕೊಂಡಿರುವ ಹಲವಾರು ಕೆಲಸ ಕಾರ್ಯಗಳ ನಿರ್ವಹಣೆಯ ಅಗತ್ಯತೆ ಅನಿವಾರ್ಯತೆ ಬಿಡದೇ ಕಾಡುತ್ತಿದೆ. ಪಡೆದಿರುವ ಜ್ಞಾನ, ಮಾಡಿರುವ ಅಧ್ಯಯನ ಸಾಲದು ಅನಿಸುತ್ತಿದೆ. ಯಾವೆಲ್ಲ ಅನುಭವಗಳಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಹೊಸ ಹೊಸ ಅವಕಾಶಗಳು ವಿಪುಲವಾಗಿದ್ದರೂ, ಪದವಿ ಪಡೆದಿದ್ದರೂ ಇಂದಿನ ಅನೇಕ ಹೆಂಗಳೆಯರಿಗೆ ಉದ್ಯೋಗ ಗಿಟ್ಟಿಸಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಹುಡುಕುತ್ತ ನಡೆದಾಗ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ಮೊದಲಿನಂತೆ ಈಗ ಕೇವಲ ಪಡೆದ ಅಂಕಗಳ ಮೇಲೆ ನೌಕರಿ ದೊರೆಯುತ್ತಿಲ್ಲ. ಕೇವಲ ಜ್ಞಾನಾನುಭವವೂ ಹೆಚ್ಚು ಪ್ರಯೋಜನಕ್ಕೆ ಬರುತ್ತಿಲ್ಲ. ಉದ್ಯೋಗಾಕಾಂಕ್ಷಿಗಳು ಎಷ್ಟು ಅಂಕ ಗಳಿಸಿದ್ದಾರೆ? ಯಾವ ಸಂಸ್ಥೆಯಲ್ಲಿ ಓದಿದ್ದಾರೆ ಇವೆಲ್ಲವುಗಳು ಗಣನೆಗೆ ಬಾರವು. ಹೀಗಿರುವಾಗ ಓದಿದ ಓದು, ಪಡೆದ…
