ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರವರು ಮಾ.1 ಶನಿವಾರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಅಂದು ಬೆ.10ಗಂ. ತಿಕೋಟಾ ತಾಲೂಕಿನ ಕಂದಾಯ ಇಲಾಖೆಯ ಭೂಮಾಪನ ಎ.ಡಿ.ಎಲ್.ಆರ್ ಕಚೇರಿಗೆ ಚಾಲನೆ ನೀಡಲಿದ್ದಾರೆ. ಬೆ.10.30ಗಂ. ತಿಕೋಟಾ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟಿಸಲಿದ್ದಾರೆ. ಬೆ.11ಗಂ. ಕೆ.ಎನ್.ಎನ್.ಎಲ್ ನಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಹೊನವಾಡದಲ್ಲಿ ಹೊನವಾಡ-ಕನಮಡಿ ರಸ್ತೆ ಮತ್ತು ರೂ.1.40 ಕೋಟಿ ವೆಚ್ಚದಲ್ಲಿ ಹೊನವಾಡ-ಬಿಜ್ಜರಗಿ ಹಾಗೂ ಪಿ.ಆರ್.ಡಿ ರೂ.80 ಲಕ್ಷ ವೆಚ್ಚದಲ್ಲಿ ಹೊನವಾಡ-ಬಾಬಾನಗರ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ಮ.12.30ಗಂ. ಘೋಣಸಗಿ ಗ್ರಾಮದ ಅಮೋಘಸಿದ್ದ ದೇವಸ್ಥಾನ ಹತ್ತಿರ ಕೆ.ಎನ್.ಎನ್.ಎಲ್ ವತಿಯಿಂದ ರೂ.80 ಲಕ್ಷ ವೆಚ್ಚದಲ್ಲಿ ಅಳಗಿನಾಳ-ಗುಡ್ಡಾಪುರ ಗಡಿ ರಸ್ತೆವರೆಗೆ ಮತ್ತು ಸಿಡಿ ಕಾಮಗಾರಿ ಮತ್ತು ರೂ.1.25 ಕೋಟಿ ವೆಚ್ಚದಲ್ಲಿ ಘೋಣಸಗಿ ಮುಖ್ಯರಸ್ತೆಯಿಂದ ಹುಬನೂರ ಮಹಾರಾಷ್ಟ್ರ ಗಡಿಯವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಸಾ.5ಗಂ. ಹೊನಗನಹಳ್ಳಿಯಲ್ಲಿ ಆರ್.ಡಿ.ಪಿ.ಆರ್ ವತಿಯಿಂದ ಗ್ರಾಮಪಂಚಾಯತಿ ಕಟ್ಟಡ ಅಡಿಗಲ್ಲು ಸಮಾರಂಭ ಹಾಗೂ ಗ್ರಾಮ ಪಂಚಾಯತಿ ಸಂಜೀವಿನಿ ಶೆಡ್ ಉದ್ಘಾಟಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

