ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಗಳ ಸಂಶೋಧನೆ ಮಾನವ ಜೀವನದ ನೆಮ್ಮದಿ ಮತ್ತು ಶಾಂತಿಗಾಗಿ ಸದ್ಬಳಕೆ ಯಾಗಬೇಕು. ವೈಜ್ಞಾನಿಕ ಮನೋಭಾವ ದಿಂದ ಸಮಾಜದ ಪ್ರತಿ ಕ್ಷೇತ್ರದಲ್ಲಿ ವೈಚಾರಿಕ ಚಿಂತನೆ ಹರಡುವಂತಾಗಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡಲಸಂಗ ದ ವಿಜ್ಞಾನ ಶಿಕ್ಷಕ ವೆಂಕಟೇಶ್ ಚವಾಣ್ ಹೇಳಿದರು.
ಇಂಡಿ ತಾಲ್ಲೂಕಿನ ಹಡಲಸಂಗ ದಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಅಂಗವಾಗಿ ಜರುಗಿದ ವಿವಿಧ ವಿಜ್ಞಾನ ವಿಷಯದಲ್ಲಿ ಮಕ್ಕಳ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ ಎಂದ ಅವರು ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿಯೂ ಕೂಡ ಉತ್ತಮ ಕ್ರಿಯಾಶೀಲ ಶಿಕ್ಷಕರು ಕಾರ್ಯ ಮಾಡುತ್ತಿದ್ದು, ಪಾಲಕರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಲು ಪ್ರೋತ್ಸಾಹ ನೀಡಬೇಕೆಂದರು. ಮುಖ್ಯ ಗುರುಗಳಾದ ಎಚ್ ಆರ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎ. ಎಸ್. ವಾಡಿ ಗುರುಗಳು ವಿಜ್ಞಾನ ಪ್ರತಿಜ್ಞೆಯನ್ನು ಬೋಧಿಸಿದರು.
ಸಾತಲಗಾಂವ ಪಿಬಿ ಶಾಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾತಲಗಾಂವ ಪಿಬಿ ಶಾಲೆ ಯಲ್ಲಿ ವಿವಿಧ ವಿಜ್ಞಾನ ವಿಷಯಗಳ ಆಕೃತಿಗಳ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜ್ಞಾನ ರಸಪ್ರಶ್ನೆ ಯನ್ನು ವಿಜ್ಞಾನ ಶಿಕ್ಷಕ ಪ್ರತಾಪ್ ಬಿಜಾಪೂರ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿಜ್ಞಾನ ಪ್ರತಿಜ್ಞೆಯನ್ನು ಎ. ಎಚ್. ಮಣಿಯಾರ ಶಿಕ್ಷಕರು ಬೋಧಿಸಿದರು. ಮುಖ್ಯ ಗುರುಗಳಾದ ಬಿ ಎಸ್ ಬೆಳ್ಳೆನವರ ಅಧ್ಯಕ್ಷತೆ ವಹಿಸಿದ್ದರು. ಎ. ಎಮ್. ಕಾರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೊನಕನಹಳ್ಳಿ ಶಾಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊನಕನಹಳ್ಳಿ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಶಾಲಿನಿ ಚವಾಣ್ ಅವರು ರೂಪಿಸಿದ, ವಿದ್ಯಾರ್ಥಿಗಳು ಅಭಿನಯಿಸಿದ “ಸಮತೋಲಿತ ಆಹಾರ ಸೇವನೆ ಯಿಂದಾಗುವ ಲಾಭಗಳ ” ಕುರಿತು ಕಿರು ನಾಟಕ ಅಭಿನಯಿಸಿದರು. ಮುಖ್ಯ ಗುರುಮಾತೆಯರಾದ ಎಸ್. ಬಿ. ಚಿತ್ತವಾಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿ. ಎಮ್ ಕಿಣಗಿ ಗುರುಮಾತೆಯರು ವಿಜ್ಞಾನ ಪ್ರತಿಜ್ಞೆಯನ್ನು ಬೋಧಿಸಿದರು. ಶೈಲಜಾ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

