ಉದಯರಶ್ಮಿ ದಿನಪತ್ರಿಕೆ
ಅಪಜಲಪುರ: ತಾಲೂಕಿನ ಭೀಮ ತೀರದಲ್ಲಿರುವ ಸುಕ್ಷೇತ್ರ ಉಡಚಣ ಗ್ರಾಮದ ಗ್ರಾಮ ದೇವತೆ, ಮಹಾಮಹಿಮ, ಪವಾಡ ಪುರುಷ, ಬೇಡಿದವರಿಗೆ ಬೇಡಿದನ್ನೇ ನೀಡಿರುವ ಕಲಿಯುಗದ ಕಾಮದೇನು ಕಲ್ಪತರು ಶ್ರೀ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ 28ರಿಂದ ಮಾರ್ಚ್ 5 ರವರೆಗೆ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ. ದಿನಾಂಕ 28 ರಂದು ಶುಕ್ರವಾರ ಶ್ರೀ ಹುಚ್ಚ ಲಿಂಗೇಶ್ವರ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಲಿದೆ, ಮಾರ್ಚ್ 4ರಂದು ಮಂಗಳವಾರ ರಾತ್ರಿ 10.30 ಗಂಟೆಗೆ ಬನ್ನಿ ಕೊರಡು ರಾಶಿಗೆ ಅಗ್ನಿಸ್ಪರ್ಶ, ಮಾರ್ಚ್ 5ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ಹುಚ್ಚಲಿಂಗೇಶ್ವರ ಪಲ್ಲಕ್ಕಿಯೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ ಭೀಮಾ ನದಿಗೆ ತೆರಳಿ ಗಂಗೆ ಸಿತಾಳ ಪೂಜೆ ನೆರವೇರಿಸಿ ಭವ್ಯ ಮೆರವಣಿಗೆಯೊಂದಿಗೆ ಭಂಡಾರಿಯವರ ಮನೆಗೆ ಆಗಮಿಸುವುದು, ನಂತರ ಭಂಡಾರಿ ಅವರಿಗೆ ತುಂಬಾ ಆಯೇರಿ ನಂತರ ಮಧ್ಯಾಹ್ನ 12:30 ಗಂಟೆಗೆ ಭಂಡಾರಿ ದಂಪತಿಗಳು ಅಗ್ನಿ ಪ್ರವೇಶ ಮಾಡುವರು, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ, ನಂತರ ದೇವರಿಗೆ ನೈವೇದ್ಯ ನೀಡಿ, ತಮ್ಮ ಹರಕೆ ತೀರಿಸುವರು, ಪ್ರತಿ ವರ್ಷದಂತೆ ದನಗಳ ಜಾತ್ರೆ ಜರುಗಲಿದೆ, ಈ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು, ಶ್ರೀ ಬಸವೇಶ್ವರ ದೇವಸ್ಥಾನದಲ್ಲೂ ಕೂಡ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು, ನಂತರ ರಾತ್ರಿ 10.30 ಗಂಟೆಗೆ ಶ್ರೀ ಹುಚ್ಚ ಲಿಂಗೇಶ್ವರ ಕೃಪಾಪೋಷಿತ ನಾಟಕ ಸಂಘದ ವತಿಯಿಂದ ಪವಾಡ ಪುರುಷ ಉಡಚಾಣ ಶ್ರೀ ಹುಚ್ಚ ಲಿಂಗೇಶ್ವರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕವನ್ನು ಅಭಿನಯಿಸುವರು. ಜಾತ್ರೆಗೆ ಬರುವ ಭಕ್ತಾದಿಗಳ ಸಲುವಾಗಿ ಅಪಜಲಪುರ , ಇಂಡಿ, ಅಕ್ಕಲಕೋಟ ಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಭೀಮ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಭಕ್ತಾದಿಗಳು ಸ್ನಾನ ಮಾಡುವಾಗ ಎಚ್ಚರಿಕೆಯಿಂದ ಇರಬೇಕು, ಬೇಸಿಗೆ ಬಿಸಿಲು ಆರಂಭವಾಗಿರುವುದರಿಂದ ಮಹಿಳೆಯರು ಮಕ್ಕಳು ವೃದ್ಧರು ಜಾಗೃತಿಯಿಂದ ಇರಬೇಕು ಎಂದು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಸಿದ್ದಾರ್ಥ್ ಮೈಂದರಗಿ, ಉಪಾಧ್ಯಕ್ಷ ಗಡದೆಪ್ಪ ಕಡ್ಲಾಜಿ, ಕಾರ್ಯದರ್ಶಿ ಖಾಜಪ್ಪ ನಾಲ್ಕ ಮನ್, ಖಜಾಂಚಿ ವಿಠ್ಠಲ್ ಕಡ್ಲಾಜಿ ಭಕ್ತವೃಂದದವರಲ್ಲಿ ವಿನಂತಿಸಿದ್ದಾರೆ,

