ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗಿದ್ದು, ಮೂಢನಂಬಿಕೆಗಳ ಕುರಿತು ಜಾಗ್ರತೆ ಮೂಡಿಸುವುದು ತುಂಬ ಅವಶ್ಯಕವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಸಾಧೀಕ ಸುಂಬಡ ಹೇಳಿದರು.
ಆಲಮೇಲದ ಭೀಮಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವೈದ್ಯಸಾಹಿತಿ ಡಾ.ಸಮೀರ ಹಾದಿಮನಿ, ವಿಶ್ವಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅನನ್ಯವಾಗಿದ್ದು, ಸಾವಿರಾರು ವರ್ಷಗಳ ಹಿಂದೆಯೆ ಆರ್ಯಭಟ ಸೊನ್ನೆಯನ್ನು ಕಂಡುಹಿಡಿದಿದ್ದು, ನಮ್ಮ ವಿಜಯಪುರದ ಬಿಜ್ಜರಗಿಯಲ್ಲಿ ಜನ್ಮತಾಳಿದ್ದ ಭಾಸ್ಕರಾಚಾರ್ಯರು ಬೀಜಗಣಿತ, ಖಗೋಳ ಶಾಸ್ತ್ರಜ್ಞರಾಗಿ ಪ್ರತಿಪಾದಿಸಿದ ಅನೇಕ ಸಿದ್ದಾಂತಗಳು ಈಗಿನ ವಿಜ್ಞಾನಿಗಳಿಗೆ ಸವಾಲೊಡ್ಡುವ ರೀತಿಯಲ್ಲಿವೆ,ಆಧುನಿಕ ವೈದ್ಯವಿಜ್ಞಾನಕ್ಕೆ ಶಸ್ತ್ರ ಚಿಕಿತ್ಸೆಯ ಪಿತಾಮಹಾ ಸುಶ್ರುತ ಮಹರ್ಷಿಗಳ ಕೊಡುಗೆ ಅಪಾರವಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಸಿ ವಿ ರಾಮನ್ ,ಹರಗೋವಿಂದ ಖೋರಾನಾ ಮುಂತಾದವರಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ವಿಜ್ಞಾನಕ್ಕೆ ಮನ್ನಣೆ ಸಿಕ್ಕಿದೆ ಎಂದರು.
ರಾಂಪೂರ ಆರೋಢ ಮಠದ ನಿತ್ಯಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.
ಕಾಂಗ್ರೆಸ್ ಮುಖಂಡ ರಮೇಶ ಭಂಟನೂರ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ.ಸಂಜೀವಕುಮಾರ ಎಂಟಮಾನ, ರಿಯಾಜ್ ಬಿಳವಾರ, ಡಾ.ಮಹಾಜನ, ಶ್ರೀಶೈಲ ಮಠಪತಿ, ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

“ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮಗಳಲ್ಲಿ ನಮ್ಮ ಭೀಮಜ್ಯೋತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದ್ದು, ಕ್ರೀಡಾಕೂಟ, ಪ್ರತಿಭಾಕಾರಂಜಿ ಕಾರ್ಯಕ್ರಮಗಳಲ್ಲಿ ನಮ್ಮ ಶಾಲೆಯ ಮಕ್ಕಳ ಸಾಧನೆಯಿಂದ ಹೆಮ್ಮೆ ಅನಿಸುತ್ತದೆ. ಪ್ರಸಕ್ತ ವರ್ಷದಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆಧೀನದಲ್ಲಿ ಶ್ರೀ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಕಲಾ ಪದವಿ ಮಹಾವಿದ್ಯಾಲಯವನ್ನೂ ಪ್ರಾರಂಭಿಸಲಾಗಿದೆ.”
– ಡಾ.ಸಂಜೀವಕುಮಾರ ಎಂಟಮಾನ
ಅಧ್ಯಕ್ಷರು, ಭೀಮಜ್ಯೋತಿ ಶಿಕ್ಷಣ ಸಂಸ್ಥೆ, ಆಲಮೇಲ

