ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಕ್ಕಳು ಶಾಲೆಯಲ್ಲಿ ಓದುವಾಗ ಕೇವಲ ಪಠ್ಯದ ಪಾಠಗಳನ್ನೂ ಹೇಳುವ ಬದಲಾಗಿ ಅವರ ಸಮಗ್ರ ಬೆಳವಣ ಗೆಯ ದೃಷ್ಟಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗುತ್ತದೆ. ಕ್ರೀಡೆಯಿಂದ ಮಕ್ಕಳ ಸಮಗ್ರ ಬೆಳವಣ ಗೆ ಸಾಧ್ಯ ಎಂದು ಪ್ರಾಂಶುಪಾಲ ಫಾದರ್ ರಾಜಶೇಖರ ಗುಂದಿಗಾ, ಆಡಳಿತ ಅಧಿಕಾರಿ ಫಾದರ್ ರೋಷನ್ ಡಿಸೋಜಾ ಹೇಳಿದರು.
ಅವರು ಪಟ್ಟಣದ ದೇಸಾಯಿ ಕಲ್ಲೂರ ರಸ್ತೆಯಲ್ಲಿರುವ ಹೋಲಿ ಕ್ರಾಸ್ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ಮಕ್ಕಳ ಸಮಗ್ರ ಬೆಳವಣ ಗೆಗೆ ಒತ್ತು ನೀಡಲಾಗುತ್ತದೆ. ಪಾಠದ ಜೊತೆಗೆ ಆಟಕ್ಕೂ ಮಹತ್ವ ನೀಡಲಾಗುತ್ತದೆ. ಕಲಿಕೆಯನ್ನು ಗಟ್ಟಿಗೊಳಿಸಬೇಕಾದರೆ ಕ್ರೀಡೆ ಕೂಡ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ ಹೀಗಾಗಿ ಮಕ್ಕಳ ಆಸಕ್ತಿಗನುಗುಣವಾಗಿ ಕ್ರೀಡೆಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತಿದ್ದೇವೆ ಎಂದ ಅವರು ಕ್ರೀಡೆಎಯಲ್ಲಿ ಭಾಗಿಯಾಗಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ದೈಹಿಕ ಶಿಕ್ಷಕ ರಮೇಶ ಕುಂಬಾರ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಬ್ಲೂ, ಗ್ರೀನ್, ರೆಸ್, ಎಲ್ಲೋ ಎಂಬ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ತುಂಬಾ ಉತ್ಸುಕತೆಯಿಂದ ಕ್ರೀಡೆಯಲ್ಲಿ ಭಾಗಿಯಾಗಿ ಬಲೂನ್ ಗ್ರೀಪ್, ರನ್ನಿಂಗ್ ರೇಸ್, ರೀಲೆ, ಶಾಟ್ ಪುಟ್, ಡಿಸ್ಕಸ್ ಥ್ರೋ, ಕಬ್ಬಡ್ಡಿ, ಖೋಖೋ, ಮ್ಯಾಜಿಕಲ್ ಚೇರ್, ಗ್ರೀಪ್ ದ್ ಬಾಲ್ ಆಟಗಳಲ್ಲಿ ಭಾಗಿಯಾದರು ನಾಲ್ಕು ತಂಡಗಳಲ್ಲಿ ಹೆಚ್ಚಿನ ಗೆಲುವು ಪಡೆದ ಎಲ್ಲೋ ತಂಡದವರು ಮ್ಯಾನ್ ಆಫ್ ದಿ ಸಿರೀಜ್ ಪ್ರಶಸ್ತಿ ಪಡೆದರು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

