Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಈ ಜಗತ್ತಿನಲ್ಲಿ ಹೆತ್ತ ತಾಯಿಯ ಆಶಿರ್ವಾದಕ್ಕಿಂತ ಶ್ರೇಷ್ಠ ಅನುಗ್ರಹ ಇನ್ನೊಂದಿಲ್ಲ, ತಾಯಿಯ ಪವಿತ್ರ ಪಾದ ಸ್ವರ್ಗಕ್ಕೆ ಸಮಾನ. ದೇವರ ಆರಾಧನೆ ಮಾಡುವದು ತಾಯಿಯ ಸೇವೆ ಮಾಡುವದು ಎರಡು ಪವಿತ್ರ ಕಾರ್ಯ ಎಂದು ಸುಕ್ಷೇತ್ರ ಗೋಳಸಾರದ ಗುರುದೇವಿ ಅಮ್ಮನವರು ಹೇಳಿದರು.ತಾಲೂಕಿನ ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಸದ್ಗುರು ತ್ರೀಧರೇಶ್ವರ ಮಹಾಶಿವಯೋಗಿಗಳ ೩೧ ನೇ ಪುಣ್ಯಾರಾಧನೆ ಮಹೋತ್ಸವದ ಮಹಿಳಾ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾಯಿಯೇ ಪರಮ ದೈವವೆಂದು ತಿಳಿದು ತಂದೆ ತಾಯಿಯವರ ಸೇವೆಯಿಂದ ಸಕಲೈಶ್ವರ್ಯ ಪ್ರಾಪ್ತವಾಗಿ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಗುರು ಭಕ್ತಿಯನ್ನೇ ಉಸಿರಾಗಿಸಿಕೊಂಡು ಸತ್ಕಾರ್ಯ ಮಾಡುತ್ತಿರುವ ಗೋಳಸಾರ ಮತ್ತು ಜಿಲ್ಲೆಯ ಜನತೆಗೆ ಶ್ರೀ ಅಭಿನವ ಪುಂಡಲಿಂಗ ಶ್ರೀಗಳು ಮತ್ತು ಗೋಳಸಾರ ಮಠದ ದಿವ್ಯ ಕೃಪೆಯಿಂದ ಶ್ರೇಯಸ್ಸಿನ ಬದುಕು ಸಾಧ್ಯವಾಗಲಿ ಸರ್ವರಿಗೂ ಶೂಭವಾಗಲಿ ಎಂದರು.ಬುರಾಣಪೂರ ಶ್ರೀ ಸಿದ್ದಾರೂಢ ಮಠದ ಮಾತೋಶ್ರೀ ಯೋಗೀಶ್ವರಿ ಅಮ್ಮನವರು ಮಾತನಾಡಿ ಆಧ್ಯಾತ್ಮದ ಅನುಸಂಧನವೇ ಗುರು ಶಿಷ್ಯರ ನಿಜವಾದ ಸಂಬಂಧನಾವು ಸನ್ಮಾರ್ಗದಲ್ಲಿ ನಡೆದಾಗಲೂ ಲೋಕ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ವೃತ್ತವನ್ನು ಉದ್ಘಾಟಿಸಲಾಯಿತು.ಈ ವೇಳೆ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಹಣಮಂತ ಬೆಳಗಲ್ಲ, ಸಂಗಪ್ಪ ದೇವರಮನಿ, ರಮೇಶ ತಂಗಡಗಿ, ಸಂಗಪ್ಪ ವಡ್ಡರ, ಸಿದ್ದಪ್ಪ ವಡ್ಡರ, ರಾಜುಗೌಡ ಕೊಂಗಿ, ರಾಮಣ್ಣ ಕುಂಟೋಜಿ, ಮುರಗಯ್ಯ ಗಣಾಚಾರಿ, ಬಸವರಾಜ ತಾಳಿಕೋಟಿ, ಗೌಡಪ್ಪ ಗೋನಾಳ, ಅಶೋಕ ನಿಡಗುಂದಿ, ಯಮನಪ್ಪ ಬಂಡಿವಡ್ಡರ, ಹಣಮಂತ ಗ್ವಾತಗಿ, ಶಂಕ್ರಪ್ಪ ಪಾತ್ರೋಟ, ಸಚಿನ ವಡ್ಡರ, ಪರಶು ವಡ್ಡರ, ಮಂಜು ದೇವರಮನಿ, ಹುಲ್ಲಪ್ಪ ವಡ್ಡರ, ಶಿವಾನಂದ ದೇವರಮನಿ, ಸಂಗಣ್ಣ ದೇವರಮನಿ, ವಿಜಯಕುಮಾರ ವಡ್ಡರ, ಗೋಪಾಲ ಗ್ವಾತಗಿ, ಹಾಗೂ ವಡ್ಡರ ಸಮಾಜದ ಯುವಕರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ಏತ ನೀರಾವರಿ ಯೋಜನೆಯ ಪ್ರಥಮ ಹಂತದಲ್ಲಿ ಚಡಚಣ ಭಾಗದ ವಿವಿದ ಔಟ್ ಲೆಟಗಳ ಮುಖಾಂತರ ಅಧಿಕಾರಿಗಳು ರೈತರ ಜಮೀನುಗಳಿಗೆ ಗುರುವಾರ ನೀರು ಹರಿಸಿದ್ದಾರೆ. ತಮ್ಮ ಜಮೀನುಗಳಲ್ಲಿ ನೀರು ಹರಿಯುತ್ತಿರುವದನ್ನು ಕಂಡು ರೈತರು ಫುಲ್ ಖುಶ್ ಆಗಿದ್ದಾರೆ.ಚಡಚಣ ಭಾಗಕ್ಕೆ ಯಾವುದೆ ನೀರಾವರಿ ಯೋಜನೆಗಳ ಬಂದರೂ ಅದು ಕಾರ್ಯರೂಪಕ್ಕೆ ಬರುವದಿಲ್ಲ ಎನ್ನವದು ಈ ಭಾಗದ ಜನರ ನಂಬಿಕೆಯಾಗಿತ್ತು. ಚಡಚಣ ಏತ ನೀರಾವರಿ ಯೋಜನೆಯ ವಿಷಯದಲ್ಲಿಯೂ ರೈತರು ಇದೆ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಇಂದು ಶಾಸಕ ವಿಠ್ಠಲ ಕಟಕಧೋಂಡ ಖುದ್ದು ರೈತರ ಜಮೀನುಗಳಿಗೆ ತೆರಳಿ ಔಟಲೆಟ್‌ಗಳ ಮುಖಾಂತರ ನೀರು ಹರಿಯುವದನ್ನು ವೀಕ್ಷಿಸಿ ಸಂತೋಷ ಪಟ್ಟರು.ಸುಮಾರು ೫೦೦ ಕೋಟಿ ವೆಚ್ಚದ ಚಡಚಣ ಏತ ನೀರಾವರಿ ಕಾಮಗಾರಿ ೨೦೧೩ ರಲ್ಲಿ ಮಂಜೂರಾಗಿತ್ತು. ಆದರೆ ಈ ಯೋಜನೆ ಕುಂಟುತ್ತ ಸಾಗಿ ಸುಮಾರು ೧೨ ವರ್ಷಗಳ ನಂತರ ಇಗ ಪ್ರಾಯೋಗಿಕವಾಗಿ ಕಾರ್ಯ ಪ್ರಾರಂಭಿಸಿರುವದು ರೈತರಿಗೆ ಒಂದು ರೀತಿ ಆನಂದವನ್ನು ಉಂಟುಮಾಡಿದೆ. ಚಡಚಣ ತಾಲೂಕಿನ ೯೨೧೫ ಹೆಕ್ಟೆರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಂದಗಿಯ ವಿಶ್ವಪ್ರಕಾಶ ನಟನೆಯ ಮಾಧವಾನಂದ ಶೇಗುಣಸಿ ನಿರ್ಮಾಣದ “ಸಂಗಮೇಶ್ವರ ಮಹಾರಾಜರು” ಚಿತ್ರದ ಹಾಡು ಭಾಗವಹಿಸಿತ್ತು. ನಂತರ ಸಂಗಮೇಶ್ವರ ಮಹಾರಾಜರ ಭಕ್ತಿ ಪ್ರದಾನ ಚಿತ್ರಕ್ಕೆ ಅತ್ಯುತ್ತಮ ಭಕ್ತಿಗೀತೆ ಎಂದು ಆಯ್ಕೆಯಾಗಿದೆ.ಚಲನಚಿತ್ರೋತ್ಸವದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಕಿನ್ನಾಳ ರಾಜ, ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ, ಮಾಸ್ಟರ್ ಆನಂದ, ಗಾಯಕ ಜಸ್ಕರಣ ಸಿಂಗ್, ಡಾ.ಆರ್ ಎಸ್ ರಾಜು, ಚಿತ್ರತಂಡ ಛಾಯಾಗ್ರಾಹಕ ರವಿ ಕುಂಟೋಜಿ, ಸಂಕಲನಕಾರ ಬಸವರಾಜ ಬಡಿಗೇರ, ಸಚಿನ ಶೆಟ್ಟಿ, ಸಿನಿಮಾ ಪ್ರಚಾರಕರ್ತ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ಸೇರಿದಂತೆ ಇನ್ನಿತರರು ಇದ್ದರು. ಮಂಗಳೂರಿನ ದೀಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಮಟ್ಟದ ಜ.೨೬ರಂದು ಜರುಗಲಿರುವ ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಣೆ ಮಾಡಲೂ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಆಚರಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ಪರಸ್ಪರ ಸಮನ್ವಯದೊಂದಿಗೆ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸರಕಾರಿ ಕಚೇರಿ, ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಚತೆಯೊಂದಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಕಾರ್ಯಕ್ರಮ ಸ್ಥಳದ ಸ್ವಚ್ಚತೆ ಹಾಗೂ ಅತಿಥಿಗಳಿಗೆ ಆಸನದ, ಅಲ್ಪೋಪಹಾರದ ವ್ಯವಸ್ಥೆಗೆ ಕ್ರಮ ವಹಿಸಿಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮದ ಕುರಿತು ಮುದ್ರಿಸಲಾಗುವ ಆಮಂತ್ರಣ ಪತ್ರಿಕೆಗಳನ್ನು ಶಿಷ್ಟಾಚಾರದ ಪ್ರಕಾರ ಮುದ್ರಿಸಿ ಗಣ್ಯರಿಗೆ ಸಮಯಕ್ಕಿಂತ ಮುಂಗಡವಾಗಿ ತಲುಪಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ, ಮೂಲಭೂತ ಸೌಲಭ್ಯ ವ್ಯವಸ್ಥೆ, ವೇದಿಕೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯರಗಲ್ ಕೆಡಿ ಗ್ರಾಮದಲ್ಲಿ ೨ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಾರೆ. ಸುತ್ತಲಿನ ಹತ್ತಾರು ಹಳ್ಳಿಯ ಮಕ್ಕಳು ಶಾಲಾ-ಕಾಲೇಜಿಗೆ ಕಲಿಯಲು ಆಗಮಿಸುತ್ತಾರೆ. ಗ್ರಾಮದಿಂದ ನಿತ್ಯ ನೂರಾರು ಕೂಲಿ ಕಾರ್ಮಿಕರು ಬೇರೆಡೆಗೆ ದುಡಿಯಲು ಹೋಗುತ್ತಾರೆ ಎಂದು ರೈತ ಸಂಘ ರಾಜ್ಯ ಕಾರ್ಯದರ್ಶಿ ಪೀರು ಕೆರೂರ ಹೇಳಿದರು.ಸಿಂದಗಿ ತಾಲೂಕಿನ ಯರಗಲ್ ಕೆ.ಡಿ.ಗ್ರಾಮಸ್ಥರು ಬಸ್ ನಿಲುಗಡೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿಜಯಪುರ ವಿಭಾಗದ ಬಸ್‌ಗಳು ಮಾತ್ರ ಗ್ರಾಮದಲ್ಲಿ ನಿಲುಗಡೆಯಾಗುತ್ತಿದ್ದು, ಕಲಬುರಗಿ ವಿಭಾಗದ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಈಗಾಗಲೇ ಸಿಂದಗಿ, ವಿಜಯಪುರ, ಲಬುರಗಿ ಸಾರಿಗೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಅನೇಕ ದಿನಗಳಾಗಿವೆ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ. ತಮಗೆ ಒಂದು ವಾರ ಗಂಡುವು ನೀಡುತ್ತೇವೆ. ಅಷ್ಟರಲ್ಲಿ ನಮ್ಮ ಸಮಸ್ಯೆ ಪರಿಹರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ಸಿಂದಗಿ ತಾಲೂಕಿನ ಯರಗಲ್…

Read More

ಬಸ್ ನಿಲುಗಡೆಗೆ ಆಗ್ರಹಿಸಿ ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯರಗಲ್ ಕೆಡಿ ಗ್ರಾಮದಲ್ಲಿ ೨ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಾರೆ. ಸುತ್ತಲಿನ ಹತ್ತಾರು ಹಳ್ಳಿಯ ಮಕ್ಕಳು ಶಾಲಾ-ಕಾಲೇಜಿಗೆ ಕಲಿಯಲು ಆಗಮಿಸುತ್ತಾರೆ. ಗ್ರಾಮದಿಂದ ನಿತ್ಯ ನೂರಾರು ಕೂಲಿ ಕಾರ್ಮಿಕರು ಬೇರೆಡೆಗೆ ದುಡಿಯಲು ಹೋಗುತ್ತಾರೆ ಎಂದು ರೈತ ಸಂಘ ರಾಜ್ಯ ಕಾರ್ಯದರ್ಶಿ ಪೀರು ಕೆರೂರ ಹೇಳಿದರು.ಸಿಂದಗಿ ತಾಲೂಕಿನ ಯರಗಲ್ ಕೆ.ಡಿ.ಗ್ರಾಮಸ್ಥರು ಬಸ್ ನಿಲುಗಡೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿಜಯಪುರ ವಿಭಾಗದ ಬಸ್‌ಗಳು ಮಾತ್ರ ಗ್ರಾಮದಲ್ಲಿ ನಿಲುಗಡೆಯಾಗುತ್ತಿದ್ದು, ಕಲಬುರಗಿ ವಿಭಾಗದ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಈಗಾಗಲೇ ಸಿಂದಗಿ, ವಿಜಯಪುರ, ಲಬುರಗಿ ಸಾರಿಗೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಅನೇಕ ದಿನಗಳಾಗಿವೆ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ. ತಮಗೆ ಒಂದು ವಾರ ಗಂಡುವು ನೀಡುತ್ತೇವೆ. ಅಷ್ಟರಲ್ಲಿ ನಮ್ಮ ಸಮಸ್ಯೆ ಪರಿಹರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ…

Read More

ವಿಜಯಪುರದಲ್ಲಿ ಸಿದ್ದೇಶ್ವರ ಜಾನುವಾರು ಜಾತ್ರೆ | ಬಹುಮಾನ ವಿತರಣಾ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೋ ಸಂಪತ್ತು ಮುಗಿದರೆ, ಅಲ್ಲಿಗೆ ಒಕ್ಕಲುತನ ಮುಗಿಯುತ್ತೆ. ಈ ಕಳವಳಕಾರಿ ಸಂಗತಿ ರೈತರಿಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ರೈತರದಷ್ಟೆ ತಪ್ಪಿಲ್ಲ, ಸರ್ಕಾರದ ನೀತಿಗಳು ತಪ್ಪಿವೆ. ತೊಗರಿಗೆ ನೀಡಿದಂತೆ ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಿದರೆ, ಜೋಳದ ಬೆಳೆ ಪ್ರಮಾಣ ಹೆಚ್ಚಾಗಿ, ಕಣಕಿ, ಹೊಟ್ಟು ಸಿಗುತ್ತದೆ. ಆಗ ದನಕರುಗಳ ನಿರ್ವಹಣೆಗೆ ನೆರವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ತೊರವಿ ಗ್ರಾಮದ ಹೊರವಲಯದಲ್ಲಿ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಶ್ರೀ ಸಿದ್ದೇಶ್ವರ ಜಾನುವಾರ ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಯಾಂತ್ರಿಕೃತ ಜಗತ್ತು, ದನಗಳ ನಿರ್ವಹಣೆ ಕಷ್ಟದಿಂದ ಒಳ್ಳೆಯ ಗೋವುಗಳು, ಎತ್ತುಗಳು ಕಟುಕರ ಪಾಲಾಗುತ್ತಿವೆ. ಈ ಹಿಂದೆ ಸಿದ್ದೇಶ್ವರ ಜಾನುವಾರ ಜಾತ್ರೆ ಬಹುದೊಡ್ಡ ಜಾತ್ರೆ ಆಗಿತ್ತು. ಮಹಾರಾಷ್ಟ್ರ, ಆಂದ್ರ ರಾಜ್ಯಗಳಿಂದಲೂ ಖರೀದಿಗೆ ಬರುತ್ತಿದ್ದರು. 110 ಎಕರೆ ವಿಶಾಲ ಪ್ರದೇಶದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಕಚೇರಿಯ ಜಿಲ್ಲಾಧಿಕಾರಿ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ. ವಿವರಗಳನ್ನು www.vijayapur.nic.inವೆಬ್ ಸೈಟ್‌ನಲ್ಲಿ ನೋಡಬಹುದಾಗಿದೆ.ಆಯ್ಕೆ ಪಟ್ಟಿಯಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜನವರಿ ೧೬ರಿಂದ ೨೩ರ ವರೆಗೆ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ.ನಿಗದಿಪಡಿಸಿದ ದಿನಾಂಕ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧ್ಯಕ್ಷರು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದಾರೆ.

Read More

ಜ.೧೮ ರಂದು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ, ಬ.ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಹಾಗೂ ಸಿಂದಗಿಯ ಒಟ್ಟು ೩೯ ಪರೀಕ್ಷಾ ಕೇಂದ್ರಗಳಲ್ಲಿ ಜ.೧೮ ರಂದು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳು ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ದಿನದಂದು ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟವಾಚ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್‌ಲೆಸ್, ಕ್ಯಾಲ್ಕುಲೇಟರ್ ಮುಂತಾದ ಎಲೆಕ್ಟಾçನಿಕ ವಸ್ತುಗಳನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ ೮ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರನೆಟ್, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಲಾಗಿದೆ.

Read More