Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ

ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ

ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಎಚ್‌ವ್ಹಿಪಿ ಲಸಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿವನ ರೂಪ ಲಾವಣ್ಯ ಕಣ್ತುಂಬಿಸಿಕೊಂಡ ಭಕ್ತಗಣ
(ರಾಜ್ಯ ) ಜಿಲ್ಲೆ

ಶಿವನ ರೂಪ ಲಾವಣ್ಯ ಕಣ್ತುಂಬಿಸಿಕೊಂಡ ಭಕ್ತಗಣ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಕನೂರ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಬೃಹತ್ ಶಿವನಮೂತಿ೯ | 71ಅಡಿ ಎತ್ತರ | ರೂ.4 ಕೋಟಿ ವೆಚ್ಚ | 1 ಎಕರೆ ಪ್ರದೇಶದಲ್ಲಿ ಶಿವನ ಅವತಾರ
!

ಉದಯರಶ್ಮಿ ದಿನಪತ್ರಿಕೆ

ವರದಿ: ಗುಲಾಬಚಂದ ಜಾಧವ
ಚಿಕ್ಕಪಡಸಲಗಿ: ಸಮೀಪದ ಕೃಷ್ಣಾನದಿ ತಟದಲ್ಲಿರುವ ಜಕನೂರ ಎಂಬ ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಆದಿಯೋಗಿ ಶಿವನ ಬೃಹತ್ ಮೂತಿ೯ ಈ ಭಾಗದ ಶಿವಭಕ್ತರ ಆಕರ್ಷಣೆ ಭಕ್ತಿರಸ ಭಾವದ ಕೇಂದ್ರ ಬಿಂದುವಾಗಿದೆ.
ಕೃಷ್ಣಾ ತೀರದ ದಡದಲ್ಲಿ ಮೈದೇಳಿರುವ ಈ ಶಿವನಮೂತಿ೯ಯ ರೂಪಾಲಂಕಾರದ ಲಾವಣ್ಯ ಕಣ್ತುಂಬಿಸಿಕೊಳ್ಳಲು ಶಿವರಾತ್ರಿ ಹಬ್ಬದಂದು ಅಸಂಖ್ಯಾತ ಶಿವಭಕ್ತರು ಇತ್ತ ಲಗ್ಗೆಯಿರಿಸಿ ಭಕ್ತಿ ನಮನ ಪೂಜಾ ಸಲ್ಲಿಸಿದರು.
ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಅಂಗಳದಲ್ಲಿ ತಲೆಯತ್ತಿರುವ ಬೃಹತ್ ಶಿವನಮೂತಿ೯ 71 ಅಡಿ ಎತ್ತರದಲ್ಲಿದೆ. ಸುಮಾರು ನಾಲ್ಕು ಕೋಟಿ ರೂ,ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಶಿವ ಪರಮಾತ್ಮನ ಮೂತಿ೯ ಒಂದು ಎಕರೆ ವಿಶಾಲ ಜಾಗದಲ್ಲಿ ಶಿವಮನಗಳ ಕಣ್ಮನ ಸೆಳೆಯುತ್ತಿದೆ.ಬಹು ಅತ್ಯಾಕರ್ಷಕವಾಗಿ ರಾರಾಜಿಸಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.
ಶಿವರಾತ್ರಿ ಹಬ್ಬದಂದು ರಾತ್ರಿ ಕಲರಫೂಲ್ ಬಗೆಬಗೆಯ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸಿ ಭಕ್ತರನ್ನು ತನ್ನತ್ತ ಸೆಳೆದಿದೆ. ಮನಃಪೂರ್ವಕವಾಗಿ ಆಕರ್ಷಿಸಿಸಿ ಭಕ್ತಿಭಾವದಲ್ಲಿ ತೇಲುವಂತೆ ಮಾಡಿದೆ. ಶಿವರಾತ್ರಿ ಸಂಭ್ರಮ, ಸಡಗರ ಭಾವಲೋಕದ ವೈಭವಕ್ಕೆ ಜಕನೂರ ಗ್ರಾಮದ ಈ ವೈವಿಧ್ಯಮಯ ಶಿವನಮೂತಿ೯ ಸಾಕ್ಷಿಯಾಗಿದೆ.
ಅಂದು ಮುಂಜಾನೆಯಿಂದಲೇ ಅಪಾರ ಭಕ್ತರು ಆಗಮಿಸಿ ಶಿವನಿಗೆ ವಿಶೇಷ ಪೂಜೆ,ಪುರಸ್ಕಾರಗಳನ್ನು ನೆರವೇರಿಸಿದರು.ಭಕ್ತ ಸಮೂಹ ಶಿವನ ಅಂಗಳದಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡು ಶಿವನ ಕೃಪೆಗೆ ಪಾತ್ರರಾದರು. ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಭಕ್ತರ ದಂಡು ಆಗಮಿಸಿ ಶಿವನಮೂತಿ೯ ದರ್ಶನ ಪಡೆದು ಪುನೀತರಾದರು.ಭಕ್ತಿ ನಮನದಿಂದ ಧನ್ಯತಾಭಾವ ಮೆರೆದರು. ವಿವಿಧ ಬಗೆಯ ಪೂಜಾ ಕೈಂಕರ್ಯ ಕೈಗೊಂಡರು.ಶಿವನ ನೆಲ ಭಕ್ತಿ ಪರಾಕಾಷ್ಠೆಯಲ್ಲಿ ನಿಂತಿತು. ಶಿವರಾತ್ರಿ ಸಡಗರ ಮನಮನಗಳಲ್ಲಿ ಮನೆ ಮಾಡಿತ್ತು. ಶಿವನಮೂತಿ೯ ದರ್ಶನಕ್ಕೆ ಬಂದ ಭಕ್ತರಿಗಾಗಿ ಡಾ.ಮಾದುಲಿಂಗ ಮಹಾರಾಜರು ಪ್ರಸಾದ ವ್ಯವಸ್ಥೆ ಕಲ್ಪಿಸಿದರು. ರಾಗಿ ಅಂಬ್ಲಿ ,ಸಾಬೂದಾಣಿ,ಬಾಳೆಹಣ್ಣು, ದ್ರಾಕ್ಷಿ, ,ಶರಬತ್ ಪಾನೀಯ ವ್ಯವಸ್ಥೆ ಮಾಡಲಾಯಿತು. ಭಾಗಶಃ ಭಕ್ತರು ಉಪವಾಸ ವೃತದೊಂದಿಗೆ ಇಲ್ಲಿಗೆ ಆಗಮಿಸಿ ತಮ್ಮ ಮನಭಾವದ ಭಕ್ತಿ ಸಮಪಿ೯ಸಿದರು.
ಪ್ರತಿ ಭಾನುವಾರದಂದು ಇಲ್ಲಿಗೆ ಆಗಮಿಸುವ ಭಕ್ತರಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಭಕ್ತರು ಶಿವನ ದರ್ಶನಕ್ಕೆ ಬರುತ್ತಾರೆ.ಅದರಲ್ಲೂ ರವಿವಾರದಂದು ಭಕ್ತರ ಸಂಖ್ಯೆ ಇಮ್ಮಡಿಯಾಗಿರುತ್ತದೆ. ಸಿದ್ಧಾಶ್ರಮದ ಡಾ.ಮಾದುಲಿಂಗ ಮಹಾರಾಜರ ಕೃಪಾಭಾವದಿ ನೇತೃತ್ವದಲ್ಲಿ ಇವೆಲ್ಲವೂ ಸಾಂಗವಾಗಿ ನೆರವೇರಿದವು.
ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಪ್ರಮುಖರಾದ ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಓಯಪ್ಪ ಬ್ಯಾಕೋಡ, ಮಹಾದೇವ ಮಿಜಿ೯, ಹಣಮಂತ ಅಮರಿ,ಮಹಾದೇವ ಶಿರೋಳ, ಗಂಗಪ್ಪ ಮಂಟೂರ ಮಹಾದೇವ ಗುಡದಾರ, ಶಿವಪ್ಪ ಹುಣಶಿಕಟ್ಟಿ, ಮಲ್ಲಿಕಾರ್ಜುನ ಒಡೆಯರ,, ಮರೆಗುದ್ದಿಯ ಗುರುಪಾದಪ್ಪ ಮಠಪತಿ, ಕುಂಚನೂರಿನ ಹನಮು ಸಾಹುಕಾರ ಮೊದಲಾದವರ ಉಸ್ತುವಾರಿ ಸಹಕಾರದಿಂದ ಡಾ,ಮಾದುಲಿಂಗ ಮಹಾರಾಜರು ಅಚ್ಚುಕಟ್ಟಾಗಿ ಭಕ್ತರಗೆ ವ್ಯವಸ್ಥೆ ರೂಪಿಸಿ ಜನಭಾವದಲ್ಲಿ ಮಿನುಗಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ

ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ

ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಎಚ್‌ವ್ಹಿಪಿ ಲಸಿಕೆ

ಮೃತ ಲಕ್ಷ್ಮಣಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ :ಸಾಂತ್ವನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ
    In (ರಾಜ್ಯ ) ಜಿಲ್ಲೆ
  • ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಎಚ್‌ವ್ಹಿಪಿ ಲಸಿಕೆ
    In (ರಾಜ್ಯ ) ಜಿಲ್ಲೆ
  • ಮೃತ ಲಕ್ಷ್ಮಣಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ :ಸಾಂತ್ವನ
    In (ರಾಜ್ಯ ) ಜಿಲ್ಲೆ
  • ಹಾಡಿಗಳಲ್ಲಿ ಕಬ್ಬಿಣದ ಕಡಲೆಯಾದ ಎಸ್ಐಆರ್ ಪ್ರಕ್ರಿಯೆ
    In (ರಾಜ್ಯ ) ಜಿಲ್ಲೆ
  • ಮಂದಗತಿಯಲ್ಲಿ ನಡೆದ ಲೋಕಾ ತನಿಖೆ :ಚರ್ಚೆಗೆ ಗ್ರಾಸ
    In (ರಾಜ್ಯ ) ಜಿಲ್ಲೆ
  • ಕೆರೆಯ ಪಕ್ಕದಲ್ಲೇ ಬಾವಿಗಳನ್ನು ತೋಡಿ ಬೇರೆಡೆಗೆ ನೀರು ಸರಬರಾಜು
    In (ರಾಜ್ಯ ) ಜಿಲ್ಲೆ
  • ಎಸ್ ಐಆರ್ ಗೆ ರಾಜಕೀಯ ಪಕ್ಷಗಳು ಸಹಕರಿಸಬೇಕು
    In (ರಾಜ್ಯ ) ಜಿಲ್ಲೆ
  • ಭ್ರೂಣಲಿಂಗ ಪತ್ತೆ: ನಿರ್ದಾಕ್ಷಿಣ್ಯ ಕ್ರಮಕ್ಕೆ ಡಿಸಿ ಡಾ.ಆನಂದ್ ಸೂಚನೆ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್: ತಹಶಿಲ್ದಾರ ಚವಲರ ಗ್ರಾಮಗಳಿಗೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.