ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಪೂಜ್ಯ ಬಾಲಯೋಗಿನಿ ಸುವರ್ಣಾ ಮಾತಾಜೀ ಚಾರಿಟೇಬಲ್ ಟ್ರಸ್ಟ್ ಧನ್ನೂರ (ಭಾಲ್ಕಿ) ಇವರು ಸದ್ಗುರು ಗಣೇಶ್ವರ ಅವಧೂತರ ಪಲ್ಲಕ್ಕಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಕೊಡುಮಾಡುವ ಆದರ್ಶ ದಂಪತಿಗಳು ಪ್ರಶಸ್ತಿಗೆ ಮಹಾಗಾಂವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಪರಮೇಶ್ವರ ಪೆಂಚನಕರ ಹಾಗೂ ವಿಜಯಲಕ್ಷ್ಮಿ ಪರಮೇಶ್ವರ ಪೆಂಚನಕರ ಅವರಿಗೆ ಆದರ್ಶ ದಂಪತಿಗಳು ಪ್ರಶಸ್ತಿ ನೀಡಿ ಗೌರವಿಸಿದ ಪ್ರಯುಕ್ತ ಅಫಜಲಪುರದ ಸರ್ಕಾರಿ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಸಂಗಣ್ಣ ಸಿಂಗೆ ಆನೂರ, ಶಿವಾನಂದ ಚಿಂಚೋಳಿ, ಚಂದ್ರಕಾಂತ ನಾವಿ, ಗೌತಮ ಸಕ್ಕರಗಿ, ಚನ್ನಬಸು ದೊಡ್ಮನಿ, ಮಹಾಂತೇಶ ವಠಾರ ಇದ್ದರು.

