Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮತ್ಯ ಆಗಮಿಸಿದ್ದ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಾರ್ವಜನಿಕ ಆಸ್ಪತ್ರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿದೆಡೆ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಅವಸ್ಥೆಯನ್ನು ಕಂಡು ನನಗೆ ದಂಗು ಬಡೆದಂತಾಗಿದೆ. ಆಸ್ಪತ್ರೆ ಅಕ್ಷರಶ: ಅವ್ಯವಸ್ಥೆಯ ಆಗರವಾಗಿದೆ. ಮಹಿಳೆಯರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಬಾಣಂತಿಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಶೌಚಕ್ಕಾಗಿ ಮಹಿಳಾ ರೋಗಿಗಳು ಆಸ್ಪತ್ರೆಯಿಂದ ಹೊರಗೆ ಸುಮಾರ ೩೦೦-೪೦೦ಮೀ ದಷ್ಟು ಹೊರ ಹೋಗಬೇಕಾಗುತ್ತದೆ. ಬಾಣಂತಿಯರು ಅಂತಹ ಅವಸ್ಥೆಯಲ್ಲಿ ಅಷ್ಟೊಂದು ದೂರ ಕ್ರಮಿಸಿ ಹೋಗುವುದು ಒಬ್ಬ ಬಾಣಂತಿಯಿಂದ ಸಾಧ್ಯವೇ? ಎಂಬುದನ್ನು ಉಹಿಸಿಕೊಳ್ಳಲೂ ಕಷ್ಟ ಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಆಸ್ಪತ್ರೆಗೆ ಬಂದ ಹೊರ ರೋಗಿಗಳನ್ನು ದನಗಳಂತ ಒಂದೆಡೆ ಕೂಡಿ ಹಾಕಲಾಗುತ್ತದೆ. ಕುಳಿತುಕೊಂಡ ರೋಗಿಗಳನ್ನು ಕಸಗುಡಿಸುವ ಕರ್ಮಚಾರಿಗಳು ಕಸಬರಿಗೆಯಿಂದಲೆ ತಳ್ಳಿ ದಾರಿಮಾಡಿಕೊಂಡು ಹೋಗುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಇಲ್ಲಿ ಮಾನವೀಯತೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಉದ್ಯಾನವನದಲ್ಲಿ ಜೋಡೆತ್ತು ರೈತ ಬಾಂಧವರು ಕೃಷಿ ತಜ್ಞ ಡಾ.ಬಸವರಾಜ ಬಿರಾದಾರ ನೇತೃತ್ವದಲ್ಲಿ ನಡೆಸುತ್ತಿರುವ ನಂದಿ ಸತ್ಯಾಗ್ರಹಕ್ಕೆ ಮಂಗಳವಾರ ಸ್ಥಳೀಯ ವಿವೇಕ ಬಿಗ್ರೇಡ್ ಸಂಘಟನೆಯು ಬೆಂಬಲ ಪತ್ರ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿತು.ಈ ಸಂದರ್ಭದಲ್ಲಿ ವಿವೇಕ ಬಿಗ್ರೇಡ್ ಸಂಘಟನೆಯ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ರಾಜ್ಯದಲ್ಲಿ ಸದ್ಗುರು ಅವರು ಆರಂಭಿಸಿದ್ದ ಜನಪರ ಅಭಿಯಾನಗಳಾದ ಕಾವೇರಿ ಕೂಗು, ಮಣ್ಣು ಉಳಿಸಿ ಅಭಿಯಾನಗಳಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಅವುಗಳಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಮಣ್ಣು, ನೀರು ಉಳಿಯಬೇಕಾದರೆ ನಂದಿ ಸಂತತಿ ಉಳಿಯಬೇಕೆಂಬ ಸತ್ಯದ ಅರಿವು ನಂದಿ ಸತ್ಯಾಗ್ರಹದಿಂದ ಜನ ಜಾಗೃತಿಯಾಗುತ್ತಿದೆ. ಸಮಾಜದ ಭವಿಷ್ಯ ಜೋಡೆತ್ತಿನ ಕೃಷಿಕರ ಮೇಲೆ ನಿಂತಿರುವದರಿಂದಾಗಿ ಜೋಡೆತ್ತಿನ ಕೃಷಿಕರಿಗೆ ಸರ್ಕಾರ ಪ್ರತಿ ತಿಂಗಳು ರೂ. ೧೧ ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವ ಅಗತ್ಯವಿದೆ. ಈ ಕುರಿತು ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಹಣ ಮೀಸಲಿಡುವ ಅಗತ್ಯವಿದೆ. ಜೋಡೆತ್ತಿನ ಕೃಷಿಕರ ಬೇಡಿಕೆಗಳಿಗೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪೂರ್ಣಗೊಳ್ಳಬೇಕಾದರೆ ವಿದ್ಯಾರ್ಥಿಗಳು ತಮ್ಮ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕಾದ ಅಗತ್ಯವಿದೆ. ಆಗ ಮಾತ್ರ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ ಎಂದು ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ನೆಹರು ಯುವ ಕೇಂದ್ರ, ಕ್ರೀಡಾ ಸಚಿವಾಲಯ, ಅಲ್‌ಪಾತ ಯುಥ್ ವೆಲ್ಪೇರ ಸೊಸೈಟಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ ರ ತಾಲೂಕು ಮಟ್ಟದ ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಂಡು ನಿರಂತರವಾಗಿ ಶ್ರದ್ಧೆಯಿಂದ ಮುಂದುವರೆದರೆ ವಿಶ್ವಮಟ್ಟದ ಕ್ರೀಡಾಪಟುವಾಗುವ ಮೂಲಕ ದೇಶದ ಗೌರವವನ್ನು ಕಾಪಾಡಲು ಸಾಧ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ, ಐಕ್ಯೂಎಸಿಯ ಮುಖ್ಯಸ್ಥ ಪ್ರೊ.ದಿಲೀಪಕುಮಾರ, ಎನ್.ವೈ.ವ್ಹಿ ಮುಖ್ಯಸ್ಥ ಎಸ್.ಕೆ.ಜಾಲವಾದಿ, ಎಲ್.ಎಸ್.ಜಮಖಂಡಿ, ಸಿ.ಪಿ.ಧಡೇಕರ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಪಿ.ಎಸ್.ನಾಟೀಕಾರ,ಆರ್.ಎಂ.ಮುಜಾವರ, ಜಯರಾಮರೆಡ್ಡಿ ಇದ್ದರು. ಡಾ. ವೈ.ಬಿ.ನಾಯಕ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಚೆಸ್, ಕೇರಂ, ಖೋಖೋ, ಕಬಡ್ಡಿ, ೧೦೦…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಾಡಿನಲ್ಲಿ ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ಬಿತ್ತರಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶಿವಾನುಭವ ಸವಿನೆನಪು, ಲಿಂ.ಶಾಂತಾಬಾಯಿ ಮೇಟಿ, ವಿರುಪಾಕ್ಷಪ್ಪ ಆಲಗೂರ, ಲಿಂ.ಷಣ್ಮುಖಪ್ಪ ಶೀಲವಂತ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತು ಅಗಲಿದ ಹಿರಿಯರ ಸ್ಮರಣಾರ್ಥವಾಗಿ ದತ್ತಿ ಸ್ಮರಣೆ ಕಾರ್ಯಕ್ರಮ, ವಿವಿಧ ಕಾರ್ಯಕ್ರಮ, ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶರಣರ ಸಂದೇಶ ಜನಮಾನಸಕ್ಕೆ ಮುಟ್ಟಿಸುತ್ತಿದೆ ಎಂದರು.ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಕುರಿತು ಪ್ರವಚನಕಾರ ಬಸಯ್ಯ ಹಿರೇಮಠ ಮಾತನಾಡಿ, ಬಸವೇಶ್ವರರು ಸರ್ವಸಮಾಜದ ಸಮಾನತೆಗಾಗಿ, ಏಕತೆಗಾಗಿ, ಜಾತಿಧರ್ಮವೆನ್ನದೇ ಎಲ್ಲರನ್ನು ಒಂದುಗೂಡಿಸುವದಕ್ಕಾಗಿ ಜನಿಸಿದರು.ಸಮಾಜದ ಉದ್ಧಾರಕ್ಕಾಗಿ ಉದಯಿಸಿದ ಬಸವೇಶ್ವರರು ಹುಟ್ಟಿದಾಗಲೇ ಸಾಂಸ್ಕ್ರತಿಕ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಭಾರತ ಸಂಸ್ಕಾರವಂತ ದೇಶವಾಗಿದೆ ಎಂದರು.ಮುದ್ದೇಬಿಹಾಳ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆದ ಶ್ರೀ ಗುರು ಚಕ್ರವರ್ತಿ ಸದಾಶಿವ ಹಾಗೂ ಜಗನ್ಮಾತೆ ಶ್ರೀ ಚಂದ್ರಗಿರಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಿವೃತ ಶಿಕ್ಷಕರಾದ ಜಮಖಂಡಿ ಡಿ.ಬಿ.ಇ.ಪ್ರೌಢಶಾಲೆಯ ಮಲ್ಲು ಪಟ್ಟಣಶೆಟ್ಟಿ ಹಾಗೂ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಅವರನ್ನು ಜಾತ್ರಾ ಕಮೀಟಿ ವತಿಯಿಂದ ಶಾಲು ಹೊದಿಸಿ ಭಿನ್ನವತ್ತಳೆ ಗುರು ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಗ್ರಾಮದ ಹಿರಿಯರಾದ ಸಿದ್ರಾಮ ಗಂಗಪ್ಪ ಕಲ್ಯಾಣಿ ಸೇರಿದಂತೆ ಕಮೀಟಿ ಸದಸ್ಯರು, ಗ್ರಾಮದ ಗುರು,ಹಿರಿಯರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಅಸಂಖ್ಯಾತ ಭಕ್ತರ ತಾಣ ಚಂದ್ರಗಿರಿ ಚಂದ್ರಮ್ಮಾ ದೇವಿ ಜಾತ್ರೆ ಇದೇ ಮಾ.೬ ರಿಂದ ಆರಂಭಗೊಳ್ಳಲಿದ್ದು, ಜಾತ್ರೆಗೆ ದೂರದಿಂದ ಬರುವ ಭಕ್ತಾದಿಗಳ ದಂಡು ಆರಂಭಗೊAಡಿದ್ದು, ದೇವಸ್ಥಾನ ಸುತ್ತಮುತ್ತ ಭಕ್ತರ ಕಲರವ ಹೆಚ್ಚಾಗಿದೆ.ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ ಪ್ರಥಮ ಗ್ರಾಮ ಚಂದ್ರಗಿರಿ. ಇಲ್ಲಿಯ ಧರ್ಮರ ಮಠ ಹಲವು ಭಕ್ತರ ಆಶ್ರಯ ತಾಣ. ದೇವತೆಗಳ ಅವತಾರಗಳಲ್ಲಿ ಒಂದಾಗಿರುವ ಚಂದ್ರಮ್ಮಾ ದೇವಿ ಸಹಸ್ರಾರು ಭಕ್ತರ ಆರಾಧ್ಯ ದೈವ.ವಿಜಯಪುರ, ಬಾಗಲಕೋಟೆ ಜಿಲ್ಲೆಯ ನಾನಾ ಕಡೆಯಿರುವ ವಿವಿಧ ಚಂದ್ರಮ್ಮ ದೇವಿಯ ದೇವಸ್ಥಾನಗಳಿಗೆ ಮೂಲ ಇಲ್ಲಿಯ ಚಂದ್ರಗಿರಿ. ಚಂದ್ರಗಿರಿಯ ಚಂದ್ರಮ್ಮಾ ದೇವಿ ದೇವಸ್ಥಾನ, ಮಠ ಕೃಷಾ ನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಆಲಮಟ್ಟಿ ನೌಕರರ ವಸಾಹತು ಬಳಿ ಕೃಷಾ ನದಿ ತೀರದಲ್ಲಿ ಸ್ಥಳಾಂತರಿಸಿ ಮಠ, ದೇವಸ್ಥಾನ ಕಟ್ಟಲಾಗಿದೆ. ಅಲ್ಲಿ ಇದೇ ೬ ರಿಂದ ಮೂರು ದಿನಗಳ ಕಾಲ ಜಾತ್ರೆ ಸಂಭ್ರಮದಿಂದ ಜರುಗಲಿದೆ. ನಿತ್ಯ ಬೆಳಿಗ್ಗೆ ದೀಡ ನಮಸ್ಕಾರ ಹಾಕುವವರ ಸಂಖ್ಯೆಯೂ ಅಪಾರ. ಮಾ.೬…
ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಶಿಬಿರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಮಹಾವಿದ್ಯಾಲಯದ ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ ಸೆಲ್ ವಿಭಾಗದ ಮತ್ತು ಎಸ್ ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಬಿ ಎ,ಬಿಎಸ್ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ 15 ದಿನಗಳ ಶಿಬಿರವನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂದಿನ ಯುವ ಜನಾಂಗ ಮೊಬೈಲ್ ಫೋಬಿಯಾಗೆ ಒಳಗಾಗಿದೆ. ಸಮಾಜಿಕ ಜಾಲತಾಣಗಳು, ಮೊಬೈಲ್, ಯುವ ಜನಾಂಗವನ್ನು ಕಟ್ಟಿ ಹಾಕಿದೆ. ಅದು ವಿದ್ಯಾರ್ಥಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ವಿದ್ಯಾರ್ಥಿಗಳು ಅಂತರ್ಜಾಲವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಸಾಮಾಜಿಕ ಮಾಧ್ಯಮ, ಆನ್ಲೈನ್ ಕಲಿಕಾ ಸಾಧನಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಪದವಿಯಲ್ಲಿಯೇ ಸ್ಪರ್ಧಾತ್ಮಕ ಮನೋಭಾವ ಮತ್ತು ಪರೀಕ್ಷೆಗಳ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಓರ್ವ ಮಹಿಳೆ ನಮ್ಮ ದೇಶದಲ್ಲಿ ಪ್ರಧಾನಿಯಾಗಿ ಆಡಳಿತ ಮಾಡುವ ಮೂಲಕ ಮಹಿಳಾ ಸಾಮರ್ಥ್ಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದರಂತೆ ವಿಧ್ಯಾರ್ಥಿಗಳು ತಮ್ಮ ಗುರಿಯತ್ತ ಸಾಗಬೇಕಾದರೆ ಶಿಸ್ತು ಬಹಳ ಮುಖ್ಯ, ಶಿಸ್ತನ್ನು ಮೈಗೂಡಿಸಿಕೊಂಡು ಚೆನ್ನಾಗಿ ಓದಿ ವಿದ್ಯಾವಂತರಾಗಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಐಐಎಸ್, ಐಪಿಎಸ್ ಅಂತಹ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಬೇಕು ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ ಹೇಳಿದರು.ಸೋಮವಾರ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಸರಕಾರಿ ಗಂಡು ಮತ್ತು ಹೆಣ್ಣು ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ನಾಗರಾಜ ಗೌರಬಿದರನೂರ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸಂಯೋಜಕರು, ಭಾರತ ಸರಕಾರ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಜೀವನದಲ್ಲಿ ಎಲ್ಲರೂ ಕಷ್ಟಪಟ್ಟು ಓದಿ ಮುಂದೆ ಬರಬೇಕು. ನೀವು ದೇಶದ ಉತ್ತಮ ಪ್ರಜೆಯಾಗಿ ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು. ಒಟ್ಟು ತಾಲ್ಲೂಕಿಗೆ 7 ಸಾವಿರ ಬ್ಯಾಗ ಬಂದಿದ್ದು, ಅದರಲ್ಲಿ ಸಾಲೋಟಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಇಂದು ನಡೆದ ದ್ವೀತಿಯು ಪಿಯುಸಿ ವಾರ್ಷಿಕ ಪರೀಕ್ಷೆ-೧ರ ತಮಿಳು, ತೆಲಗು, ಮಲಯಾಳಂ, ಮರಾಠಿ ಹಾಗೂ ಫ್ರೆಂಚ್ ಭಾಷಾ ಪರೀಕ್ಷೆಗೆ ನೊಂದಾಯಿಸಿಕೊಂಡ ೧೨೯೮ ವಿದ್ಯಾರ್ಥಿಗಳ ಪೈಕಿ ೧೨೧೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೮೩ ಅಭ್ಯರ್ಥಿಗಳು ಪರೀಕ್ಷೆಗೆ ಗೈರ ಹಾಜರಾಗಿದ್ದರು. ಇಂದು ನಡೆದ ಪರೀಕ್ಷೆಯಲ್ಲಿ ಯಾವುದೇ ಡಿಬಾರ್ ಆಗಿರುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೧೦/೧೧ ಕೆವಿ ಕೆರೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಲ್ಲಿ ಮಾರ್ಚ್ ೬ರ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ, ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
