ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆದ ಶ್ರೀ ಗುರು ಚಕ್ರವರ್ತಿ ಸದಾಶಿವ ಹಾಗೂ ಜಗನ್ಮಾತೆ ಶ್ರೀ ಚಂದ್ರಗಿರಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಿವೃತ ಶಿಕ್ಷಕರಾದ ಜಮಖಂಡಿ ಡಿ.ಬಿ.ಇ.ಪ್ರೌಢಶಾಲೆಯ ಮಲ್ಲು ಪಟ್ಟಣಶೆಟ್ಟಿ ಹಾಗೂ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಅವರನ್ನು ಜಾತ್ರಾ ಕಮೀಟಿ ವತಿಯಿಂದ ಶಾಲು ಹೊದಿಸಿ ಭಿನ್ನವತ್ತಳೆ ಗುರು ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಗ್ರಾಮದ ಹಿರಿಯರಾದ ಸಿದ್ರಾಮ ಗಂಗಪ್ಪ ಕಲ್ಯಾಣಿ ಸೇರಿದಂತೆ ಕಮೀಟಿ ಸದಸ್ಯರು, ಗ್ರಾಮದ ಗುರು,ಹಿರಿಯರು ಉಪಸ್ಥಿತರಿದ್ದರು.

