Author: editor.udayarashmi@gmail.com

ನಿಯಮ ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ | ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಕಾನೂನಿಗೆ ತಿದ್ದುಪಡಿ | ಸಿಎಂ ಸಿದ್ದರಾಮಯ್ಯ ತುರ್ತುಸಭೆ ಬೆಂಗಳೂರು: ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದು ಮತ್ತು ನಿಜವಾದ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.ಮೈಕ್ರೋ-ಫೈನಾನ್ಸ್ ಕಂಪನಿಗಳು ಸಾಲಗಾರರಿಂದ ಹಣ ವಸೂಲಿ ಮಾಡಲು ಕಿರುಕುಳ ನೀಡುತ್ತಿವೆ ಎಂದು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಜಿ. ಪರಮೇಶ್ವರ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.ಮೈಕ್ರೋಫೈನಾನ್ಸ್ ಕಂಪನಿಗಳ ಸಂಘದ ಪ್ರತಿನಿಧಿಗಳು, ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳು ಮತ್ತು ನಬಾರ್ಡ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಸಾಲ ವಸೂಲಾತಿ…

Read More

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಗೆ ಅಖಂಡ ಕರ್ನಾಟಕ ರೈತ ಸಂಘ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಹವಾಮಾನ ವೈಪರಿತ್ಯ ಹಾಗೂ ಕಳಪೆ ಬೀಜ ವಿತರಣೆಯಿಂದಾಗಿ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಹಾನಿಗೊಳಗಾದ ರೈತರಿಗೆ ಸೂಕ್ತ ಮದ್ಯಂತರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರವರಿಗೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಶನಿವಾರದಂದು ಮಮದಾಪೂರ ಗ್ರಾಮದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾನಿಗೊಳಗಾದ ತೊಗರಿ ಮಾಹಿತಿಯನ್ನು ಸರಿಯಾಗಿ ಕಳುಹಿಸದ ಕಾರಣ ವಿಜಯಪುರ ಜಿಲ್ಲೆಯ ರೈತರು ವಿಮಾ ಕಂಪನಿ ಬಿಡುಗಡೆಮಾಡುವ ಮದ್ಯಂತರ ಪರಿಹಾರದಿಂದ ವಂಚಿತರಾಗಿದ್ದಾರೆ ಬಿತ್ತನೆ ಮಾಡಿದ ತೊಗರಿ ಬೆಳೆ ಹಾಳಾದ ಸಂದರ್ಭದಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಮಾಡಿಸಿದ್ದರು ಕೂಡ ವಿಜಯಪುರ ಜಿಲ್ಲೆಯ ರೈತರಿಗೆ ಒಂದು ಬಿಡುಗಾಸು ಮದ್ಯಂತರ ಪರಿಹಾರ ಹಣ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಾಂತಪ್ಪ ಬಿರಾದಾರ(ಜಲಕತ್ತಿ), ಉಪಾಧ್ಯಕ್ಷರಾಗಿ ಬುರಾನಸಾಬ್ ಮಸಳಿ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಆವರಣದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ ಎಲ್.ಟಿ, ಇಂಗಳಗಿ ಹಾಗೂ ನಿವಾಳಖೇಡ ಗ್ರಾಮಗಳ ವ್ಯಾಪ್ತಿಯ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ನಿರ್ದೇಶಕರಾದ ಬಸವರಾಜ ತಾಳಿಕೋಟಿ, ಪ್ರಭಾವತಿ ಮಠಪತಿ, ಶೃತಿ ಕೋಟಿನ್, ನೀಲಮ್ಮ ಜಂಬಗಿ, ಸಂತೋಷ ದೇಸಾಯಿ, ಹಣಮಂತ್ರಾಯ ಜೋಗೂರ, ರಾಜೇಂದ್ರ ಭಾವಿಮನಿ, ಸೋಮು ಜಾಧವ, ಮೋದಿನಸಾಬ್ ಯಲಗಾರ, ವಿಠ್ಠಪ್ಪ ನಾಟೀಕಾರ ಅವರನ್ನು ಸನ್ಮಾನಿಸಲಾಯಿತು.ಚುನಾವಣಾಧಿಕಾರಿ ದತ್ತಾತ್ರೇಯ ನಾಯ್ಕೋಡಿ, ಕಾರ್ಯನಿರ್ವಹಣಾಧಿಕಾರಿ ಶರಣಗೌಡ ಅಂಗಡಿ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಸು ಜಮಾದಾರ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಮಲ್ಲಣ್ಣ ಜಲಕತ್ತಿ, ಈರಣ್ಣ ಒಂಟೆತ್ತೀನ್, ಅಜೀಜ್ ಯಲಗಾರ, ಬಸವರಾಜ…

Read More

ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಾರ್ಮಿಕರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಟ್ಟಂಗಿ ಬಟ್ಟಿಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಇನ್ನು ಮುಂದೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಿಲ್ಲ. ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಸಕ್ಕರೆ ಕಾರ್ಖಾನೆ ಅಥವಾ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಯ ನೀಡಿದ್ದಾರೆ.ಶನಿವಾರ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು. ಅಲ್ಲದೇ, ನೀವು ಇನ್ನು ಮುಂದೆ ಜಮಖಂಡಿ ತಾಲೂಕಿನಲ್ಲಿಯೇ ಕೆಲಸ ಮಾಡಲು ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಕಾರ್ಮಿಕರಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಆತ್ಮಸ್ಥ್ಮೈರ್ಯ ತುಂಬಿದರು. ನಿಮಗೆ ಸರಕಾರದಿಂದ ಸಕಲ ನೆರವು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಸರಕಾರ ನಿಮ್ಮೊಂದಿಗಿದೆ.…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಸಮಾಜದಲ್ಲಿ ಉತ್ತಮ ಆಡಳಿತಕ್ಕೆ ಮತದಾನದ ಪಾತ್ರ ಅನನ್ಯವಾದದ್ದು ಎಂದು ಪ್ರಾಚಾರ್ಯೆ ಡಾ.ಆರ್.ಎಂ ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಮೃತ್ ಸಮುದಾಯದ ಯೋಜನೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ದಿನಾಂಕ 24-01-2025 ಶುಕ್ರವಾರದಂದು ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚುನಾಯಿತ ಪ್ರತಿನಿಧಿಗಳ ಶೈಕ್ಷಣಿಕ ಅಗತ್ಯತೆಗಳು, ಸಾರ್ವಜನಿಕರಿಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ವಾಸ್ತವಿಕ ಸಮಗ್ರ ಮಾಹಿತಿ, ರಾಜಕೀಯ ಪಕ್ಷಗಳು ನೀಡುವ ಪ್ರಮುಖ ಭರವಸೆಗಳ ಮತ್ತು ಹೊಣೆಗಾರಿಕೆ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅರಿಯುವುದು ಅವಶ್ಯಕವಾಗಿದೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ವಾಸಿಸುವ ಬಡವರಿಗೆ ವರದಾನವಾಗಿರುವದು ಸಂತೋಷದಾಯಕ ವಿಚಾರವಾಗಿದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.ಪಟ್ಟಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಕಾರ್ಯಾಲಯ ಉದ್ಘಾಟನೆ ಹಾಗೂ ತಾಲೂಕು ಪಂಚಾಯತ ಕಛೇರಿ ವತಿಯಿಂದ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ ಕಾರ್ಯಾಲಯದ ಸರಕಾರದಿಂದ ಫಲಾನುಭವಿಗಳಿಗೆ ಮಂಜೂರು ಆಗಿರುವ ವಿವಿಧ ಯೋಜನೆಗಳ ವಿತರಣೆ ಮಾಡಿ ಮಾತನಾಡಿದರು.ರಾಜ್ಯದ ಜನತೆ ನೋಡುವಂತಹ ತಾಲೂಕಾ ಆಡಳಿತ ಕಾರ್ಯಾಲಯ ಕಟ್ಟಡ ನಿರ್ಮಾಣ ಮಾಡುತ್ತೇನೆ. ಅಲ್ಲದೆ ತಾಲೂಕು ಆಡಳಿತದ ಎಲ್ಲ ಕಛೇರಿಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನಿಡಿದರು.ಕೊಲ್ಹಾರ ಪಟ್ಟಣವು ವಾಣೀಜ್ಯ ಕ್ಷೇತ್ರದಲ್ಲಿ ಹೈನುಗಾರಿಕೆಯಲ್ಲಿ ಕ್ರಷಿ ಚಟುವಟಿಕೆಯಲ್ಲಿ ಮುಂದುವರೆಯುತ್ತಿರುವದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ ರಾಜ್ಯದಲ್ಲಿಯೆ ದನದ ಸಂತೆ ಮಾರುಕಟ್ಟೆಯನ್ನು ಅತ್ಯಂತ ಜನಪ್ರೀಯಗೊಳಿಸಲಾಗುವದು ಎಂದರು.ಗ್ಯಾರಂಟಿ ಯೋಜನೆಯ ಜಿಲ್ಹಾಧ್ಯಕ್ಷ ಇಲಿಯಾಷ ಭೋರಾಣಿ, ತಾಲೂಕು ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿ, ಸರಕಾರಿ ಯೋಜನೆ ಪಂಚ ಗ್ಯಾರಂಟಿಗಳನ್ನು ಫಲಾಭವಿಗಳಿಗೆ…

Read More

ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸುಮಾರು ಎರಡುವರೆ ಶತಮಾನಗಳ ದಾಸ್ಯದ ಅವಧಿಯನ್ನು ಪೂರೈಸಿ ಅಂತಿಮವಾಗಿ ಭಾರತ ದೇಶವು 1947 ಅಗಸ್ಟ್ 15 ರಂದು ಸ್ವತಂತ್ರವಾಯಿತು. ಸ್ವಾತಂತ್ರ್ಯ ದೊರೆತ ಸಮಯದಲ್ಲಿ ನಮಗೆ ನಮ್ಮದೇ ಆದ ರಾಜಕೀಯ ಆರ್ಥಿಕ ಸಾಮಾಜಿಕ ಸಹಭಾಗಿತ್ವವನ್ನು ಹೊಂದಲು ಸಂವಿಧಾನದ ಅವಶ್ಯಕತೆಯನ್ನು ಮನಗಂಡು ಆಗಸ್ಟ್ 19 ರಂದು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲು ಸಮಿತಿಯೊಂದನ್ನು ರಚಿಸಿ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಟಿ ಟಿ ಕೃಷ್ಣಮಾಚಾರ್, ಸೈಯದ್ ಮಹಮ್ಮದ್ ಅಸಾದುಲ್ಲಾ, ಡಿ ಪಿ ಖೇತಾನ್,ಕೆ ಕೃಷ್ಣಸ್ವಾಮಿ ಅಯ್ಯರ್, ಬಿ ಎಲ್ ಮಿತ್ತಲ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎನ್ ಮುನ್ಷಿ,ಎಂ ಮಾಧವರಾವ್ ಸಂವಿಧಾನ ಕರಡು ಪ್ರತಿ ರಚನಾ ಸಮಿತಿಯ ಸದಸ್ಯರಾಗಿದ್ದರು. ವಿವಿಧ ದೇಶಗಳ ಸಂವಿಧಾನಗಳು, ರಾಜಕೀಯ ಶಾಸ್ತ್ರದ ಕುರಿತು ವಿಶೇಷ ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ತಮ್ಮ ಸಮಿತಿಯ ಸಲಹೆಯ ಮೇರೆಗೆ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಸಂವಿಧಾನ ಪ್ರತಿಯನ್ನು ತಯಾರಿಸಿದರು. ಸುಮಾರು…

Read More

ರಚನೆಅಕ್ಕಮಹಾದೇವಿ ತೆಗ್ಗಿಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಇಲ್ಲೆ ಇದ್ದಿನಿಹೀಗೆ ಇರುವೆಒಂಟಿ ಜೀವಕಾಡುತಿದೆ.ನಿನ್ನ ನೆನಪಲ್ಲೆಪ್ರತಿಕ್ಷಣ ಬದುಕಿರುವೆನಿನ್ನ ಉಸಿರೇನನ್ನ ಉಸಿರಾಗಿದೆ.ಏನು ಮೋಡಿಮಾಡಿರುವೆ ನೀನುಇಷ್ಟು ವರ್ಷ ಇಲ್ಲದ್ದುಪ್ರೀತಿ, ಪ್ರೇಮಈಗ ಉಕ್ಕಿಕ್ಕಿ ಬರುತ್ತಿದೆನಿನ್ನ ಮಾತುನಿನ್ನ ಭರವಸೆಹೊಸ ದಿಗಂತ,ನಿತ್ಯ ಜೇತನಕಾರಂಜಿಯಂತೆಪುಟಿಯುತಿದೆನೀನೆ ನನ್ನ ಸರ್ವಸ್ವಕನಸು ಬಯಕೆಯ ಬುತ್ತಿಉಸಿರು ಕಾವ್ಯ ಕವನಚಂದ್ರ, ಮಧುಚಂದ್ರಒಂಟಿ ಬದುಕಿನಬಾಳ ಬಟ್ಟೆ

Read More

ಲೇಖನವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ..ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ..ಭಾರತೀಯ ಸಂಸ್ಕೃತಿ, ಸಂಪ್ರದಾಯ, ಭಕ್ತಿ, ನಂಬಿಕೆ ಬಗ್ಗೆ ಅಪಾರ ಅಭಿಮಾನವಿರುವ ಆತ ರಾತ್ರಿಯೆಲ್ಲ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗಿನ ಹೊತ್ತಿಗೆ ಮೆಜಸ್ಟಿಕ್ ನ ಗಿಜಿಗುಡುವ ಬಸ್ ನಿಲ್ದಾಣದಲ್ಲಿ ಇಳಿಯುತ್ತಾನೆ..ನಗರ ಜೀವನದ ಬಗ್ಗೆ ಅಷ್ಟೇನೂ ಅರಿವಿರದ ಆತ ದಟ್ಟ ಜನಸಂದಣಿಗೆ ಸ್ವಲ್ಪ ಬೆಚ್ಚುತ್ತಾನೆ..ಜನರ ನೂಕಾಟ ತಳ್ಳಾಟಗಳ ನಡುವೆ ತಲೆ ಎತ್ತಿ ನೋಡುತ್ತಾನೆ. ಅಲ್ಲಿ ಒಂದು ದೊಡ್ಡ ಬೋರ್ಡ (ಫಲಕ) .. ಕಳ್ಳರಿದ್ದಾರೆ ಎಚ್ಚರಿಕೆ ಆ ಯುವಕನಿಗೆ ಶಾಕ್. ರಾಜ್ಯದ ರಾಜಧಾನಿ ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದಲ್ಲಿ ಈ ಅಸಹ್ಯಕರವಾದ ಫಲಕ..ಛೆ,.. ಇರಲಾರದು, ಏನೋ ತಪ್ಪಾಗಿರಬೇಕು, ಬಸ್ ನಿಲ್ದಾಣದಲ್ಲಿ ಕಳ್ಳರೇ ! ಎಂದು ಭಾವಿಸಿ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಅದರ ಬಗ್ಗೆ ಕೇಳುತ್ತಾನೆ..ಆ ವ್ಯಕ್ತಿ”ಹೌದು ಸಾರ್ ಇಲ್ಲಿ ಕಳ್ಳರು -…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ರಂಗಭೂಮಿ ಕಲಾವಿದೆ, ಚಲನಚಿತ್ರನಟಿ, ಹಿನ್ನೆಲೆ ಗಾಯಕಿ, ಶ್ರೀಮತಿ ಬಿ.ಜಯಶ್ರೀ ಯವರು ದಿನಾಂಕ : ೨೮-೦೧-೨೦೨೫ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಸ್ವಯಂಬೋ ಆರ್ಟ್ಸ್ ಫೌಂಡೇಶನ್ ನಲ್ಲಿ ಕಲಾವಿದರೊಂದಿಗೆ ಸಂವಾದ ಇದ್ದು, ಜನಪದ, ರಂಗಭೂಮಿ, ಪಾರಿಜಾತ, ಚೌಡಕಿ, ಏಕ್ತಾರಿ, ರಂಗಗೀತೆ, ಹೀಗೆ ಇನ್ನು ಹಲವಾರು ಕಲಾವಿದರೊಂದಿಗೆ ಸಂವಾದ ನಡೆಸಲಿದ್ದಾರೆ.ಸಂವಾದಲ್ಲಿ ಪಾಲ್ಗೊಂಡ ಕಲಾವಿದರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಲಾಗುವದು.ಈ ಸಂವಾದದಲ್ಲಿ ಭಾಗವಹಿಸುವ ಆಸಕ್ತ ಕಲಾವಿದರು, ಶರಣು ಸಬರದ, ಭಾರತ್ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಅರ್ಜಿ ಸಲ್ಲಿಸಬಹುದು. ಫೋನ್ ಮುಖಾಂತರ ಹೆಸರು ನೊಂದಾಯಿಸಬಹುದು. ಸಂಪರ್ಕಿಸುವ ಸಂಖ್ಯೆ : ಶರಣು ಸಬರದ ಮೊ : ೯೭೪೦೫೮೨೦೦೯ ಹಾಗೂ ಮೋಹನ ಕಟ್ಟಿಮನಿ ಮೊ: ೮೯೭೧೩೧೦೦೦೮ ಇದಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Read More