ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ ಶಾಲೆಯಲ್ಲಿ ಸಂಭ್ರಮದ 35ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಮಕ್ಕಳ ಹಿರಿಯ ಸಾಹಿತಿ ಹಾಗೂ ರಾಷ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ರವರು, ಇಂದಿನ ಮಕ್ಕಳಿಗೆ ಒಳ್ಳೆಯ ಊಟ, ಬಟ್ಟೆ ಹಾಗೂ ಆಹಾರ ಕ್ಕಿಂತಲೂ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಅತ್ಯವಶ್ಯಕವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಗಳನ್ನು ನೀಡಿ ಇಲ್ವಾದರೆ ಮುಂದಿನ ದಿನಮಾನಗಳಲ್ಲಿ ವೃಧ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಲಿವೆ. ಇಂದು ಮಕ್ಕಳಿಗೆ ತಂದೆ , ತಾಯಿ ಹಾಗೂ ಗುರುಗಳು ಸಾಕ್ಷಾತ್ ದೇವರು ಇದ್ದಂತೆ. ಮಕ್ಕಳಿಗೆ ರಾಷ್ಟ್ರಕ್ಕೆ ಉತ್ತಮ ಪ್ರಜೆ ನೀಡುವ ಸಲುವಾಗಿ ಉತ್ತಮ ಸಂಸ್ಕಾರ ನೀಡಿ ಎಂದರು,
ಜ್ಯೋತಿ ಬೆಳಗಿಸಿ ಮಾತನಾಡಿದ ಶಿಕ್ಷಕರ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಇವತ್ತು ಜಗತ್ತು ವಿಜ್ಞಾನ, ತಂತ್ರಜ್ಞಾನದ ಫಲವಾಗಿ ಸಂಕುಚಿತ ವಾಗುತ್ತಿದೆ ಹಾಗಾಗಿ ಇನ್ನೂ ಹಲವು ತರಹದ ಸಂಶೋಧನೆ ಮಾಡುವ ಸಲುವಾಗಿ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ವಿನೂತನ ಶಿಕ್ಷಣ ನೀಡುವ ಇಂತಹ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಕಳುಹಿಸಿ ಎಂದರು.
ಈ ಸಮಾರಂಭದಲ್ಲಿ ಶಾಲೆಯಲ್ಲಿ ಕಲಿತು ವಿವಿಧ ಸರಕಾರಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಆರು ಜನ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೈನಿಕ ಸೋಮನಿಂಗ ( ಅನೀಲ ಪೂಜಾರಿ) ,ಬ್ಯಾಂಕ್ ಮ್ಯಾನೇಜರ್ ರುದ್ರೇಶ ಕಲ್ಲೂರಮಠ, ಶಿಕ್ಷಕಿ ಕಾವೇರಿ ಕಲ್ಲೂರಮಠ, ಅಭಿಯಂತರ ಸುನೀಲ ನಾಯಕ, ಆರಕ್ಷಕ ಮಂಜುನಾಥ ವಾಲಿಕಾರ, ಜಿನೇಶ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಾನಿಧ್ಯವನ್ನು ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ, ಕಾರ್ಯದರ್ಶಿ ಪ್ರಶಾಂತ ಬಡದಾಳ, ಮುಖ್ಯ ಅತಿಥಿಗಳಾದ ಅಶೋಕಗೌಡ ಕೋಳಾರಿ, ಅರವಿಂದ ಡೋಣೂರ, ಪಟ್ಟಣ ಪಂಚಾಯತ ಸದಸ್ಯರು ಈರಣ್ಣ ಕಲ್ಲೂರ, ಶಿವುಕುಮಾರ ಗುರುಕಾರ, ಎಸ್.ಎ.ಬಿರಾದಾರ, ಶಿಕ್ಷಣ ಸಂಯೋಜಕರು ಎಂ.ಪಿ.ಬಿಸ್ಸೆ, ಬಿ.ಆರ್.ಪಿ ಸಾಹೇಬಗೌಡ ಬಿರಾದಾರ, ಆಡಳಿತ ಮಂಡಳಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಶೋಕ ವಾರದ, ಶಿವಾನಂದ ಮಾರ್ಸನಳ್ಳಿ, ಅಲೋಕ ಬಡದಾಳ, ವಿನಾಯಕ ಭಸ್ಮೆ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಶಿಕ್ಷಕವೃಂದ ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರಕಾಂತ ದೇವರಮನಿ ಸ್ವಾಗಿತಿಸಿದರು, ಲಕ್ಷ್ಮೀಪುತ್ರ ಕಿರನಳ್ಳಿ ನಿರೂಪಿಸಿದರು.

