ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿರುವ ಗಾಂಧಿ ಚೌಕ್ ಚರ್ಚ್ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂತೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ ೧೩೪ ನೇ ಜನ್ಮ ಜಯಂತಿ ನಿಮಿತ್ಯ ಕೊಡುಗೆಯಾಗಿ ನಾಡಿನ SSಐಅ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಶಿಕ್ಷಕ ಶಕರುಂದ ಸಿದ್ದಗೊಳಿಸಿರುವ SSಐಅ ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆಗೊಳಿಸಿ ಒಂದುದಿನದ ಕಾರ್ಯಾಗಾರ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫಾದರ್ ಟಿಯೋಲೋ ಮೆಚಾಡೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಯನ್ನ ಸಾಧಿಸಬೇಕಾದರೆ ಛಲ ಬಿಡದೆ ಓದಬೇಕು, ಅವಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ವಿದ್ಯಾರ್ಥಿ ಪರಷತ್ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ಪ್ರಜೆಗಳು. ಸೈನಿಕರು ಯುದ್ಧಕ್ಕೆ ಹೋಗಬೇಕಾದರೆ ಯಾವ ರೀತಿ ತಯಾರಿ ಮಾಡುತ್ತಾರೋ ಆ ರೀತಿ ಪರೀಕ್ಷೆ ಬರೆಯಲು ತಾವು ತಯಾರಿ ಮಾಡಬೇಕು ಎಂದು ಸಲಹೆ ನೀಡಿದರು.
ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ನಿಂಗಪ್ಪ ಎಸ್ ಪೂಜಾರಿ ಮಾತನಾಡಿ, ಈ ಕೈಪಿಡಿಯಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ಓದಿದರೆ ನೂರಕ್ಕೆ ನೂರು ಅಂಕ ಪಡೆಯುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಮಾಡಿದ ದಲಿತ ವಿದ್ಯಾರ್ಥಿ ಪರಿಷತ್ ತಂಡ ಅಭಿನಂದನಾರ್ಹ ಎಂದರು.
ಕಾರ್ಯಕ್ರಮದ ವೇದಿಕೆ ಅಲಂಕರಿಸಿದ ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ, ಪರೀಕ್ಷೆಯ ಕೈಪಿಡಿ ತಯಾರಿ ಮಾಡಿದ ಗೌತಮ್ ರವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪರೀಕ್ಷೆ ಎದುರಿಸಿ ಎಂದು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಹಿತೈಷಿ ಶಿಕ್ಷಕರು, ವಿದ್ಯಾರ್ಥಿ ಪರಿಷತ್ ಮುಖಂಡರಾದ ಸಂದೇಶ್ ಕುಮುಟಗಿ, ಶಂಕರ ಬಸರಗಿ, ಯುವರಾಜ್ ಓಲೇಕಾರ್, ಪಂಡಿತ ಯಲಗೋಡ ಮತ್ತು ವಿದ್ಯಾರ್ಥಿಗಳು ಅನೌಪಚಾರಿಕ ಸಂಸ್ಥೆಯ ಸಿಬ್ಬಂದಿ ಭಾಗಿಯಾಗಿದ್ದರು.

