Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ✍️ ಅರ್ಚನಾ ಮಂಜುನಾಥ್ (ಅಚ್ಚು ) ಉದಯರಶ್ಮಿ ದಿನಪತ್ರಿಕೆ ” ಸಂಬಂಧಗಳಲ್ಲಿ ಹೊಂದಾಣಿಕೆ” ಈ ಸಾಲುಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಹೊಂದಾಣಿಕೆ ಇಲ್ಲದೆ ಮಾನವನ ಜೀವನ ನಡೆಯಲು ಸಾಧ್ಯವೇ ಇಲ್ಲ.ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ವಿಷಯಕ್ಕೆ, ವ್ಯಕ್ತಿಗೆ, ಸಮಯಕ್ಕೆ, ಸವಾಲಿಗೆ, ನಿರ್ಧಾರಗಳಿಗೆ, ಅಭಿರುಚಿಗಳಿಗೆ, ಸ್ಥಳಗಳಿಗೆ, ಉಡುಗೆ ತೊಡುಗೆಗಳಿಗೆ ಹೀಗೆ ಇನ್ನೂ ಹಲವಾರು ವಿಚಾರಗಳಿಗೆನಮ್ಮನ್ನು ನಾವು ಹೊಂದಿಸಿಕೊಂಡು ಬದುಕಬೇಕಾಗುತ್ತದೆ. “ಸರಸವೇ ಜನನ,ವಿರಸವೇ ಮರಣ, ಸಮರಸವೇ ಜೀವನ “ಎಂಬ ನಾಣ್ಣುಡಿಯಂತೆ ಸಮರಸ ಅಂದರೆ ಹೊಂದಾಣಿಕೆಯ ಜೀವನವೇ ಬದುಕಿಗೆ ನೆಮ್ಮದಿಯ ನೆಲೆಯನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೊಂದಾಣಿಕೆ ಎಂಬುದು ಹುಟ್ಟಿನಿಂದಲೇ ಬಂದು ಬಿಟ್ಟಿರುತ್ತದೆ. ಅದರಲ್ಲೂ ಕೂಡು ಕುಟುಂಬದಲ್ಲಿ ಆಕೆ ತಂದೆ ತಾಯಿಯ, ಅಜ್ಜಿ ತಾತ,ಅಣ್ಣ ತಮ್ಮ ,ಅಕ್ಕ ತಂಗಿ, ದೊಡ್ಡಪ್ಪ ಚಿಕ್ಕಪ್ಪ, ದೊಡ್ಡಮ್ಮ ಚಿಕ್ಕಮ್ಮ, ಅತ್ತೆ ಮಾವ ಹೀಗೆ ಹಲವಾರು ಸಂಬಂಧಗಳ ಜೊತೆ ಹೊಂದಿಕೊಂಡು ಬಾಳಲೇ ಬೇಕಾಗಿರುತ್ತದೆ. ಹೊಂದಿಕೊಳ್ಳದಿದ್ದ ಪಕ್ಷದಲ್ಲಿ ಅವರು ಮನೆಯಲ್ಲಿ ಈ ರೀತಿ ಹೊಂದಿಕೊಳ್ಳದಿದ್ದರೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಭಿವೃದ್ಧಿಯಿಂದಾಗಿ ರೈತರ ಜಮೀನಿಗೆ ಭಾರಿ ಬೆಲೆ ಬಂದಿದ್ದು, ಅನ್ನದಾತರರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಿವಿಮಾತು ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾ. ಪಂ. ಕಟ್ಟಡ, ಎಸ್.ಡಬ್ಲ್ಯೂ.ಎಂ ಘಟಕ, ಗೋದಾಮು, ಎನ್.ಆರ್.ಎಲ್.ಎಂ ಘಟಕ ಮತ್ತು ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಆವರು ಮಾತನಾಡಿದರು.ಅಭಿವೃದ್ಧಿ ಕಾರ್ಯಗಳಿಂದಾಗಿ ಆರ್ಥಿಕವಾಗಿ ಸಮರ್ಥರಾಗಿರುವ ರೈತರು ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಲಾಗುವುದು. ಶಾಲಾ ಆವರಣದಲ್ಲಿ ಕ್ರೀಡಾ ಸಲಕರಣೆ ವ್ಯವಸ್ಥೆ, ಅಂಗನವಾಡಿಗಳಲ್ಲಿ ಪ್ಲೆ ಸ್ಕೂಲ್ ಮಾದರಿ ಸೌಲಭ್ಯ ಒದಗಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಯುವಕರಿಗೆ ಓಪನ್ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರ…
ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಜನತೆ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಎಂದು ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಹೇಳಿದರು.ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಶನಿವಾರ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ರಾಜಕೀಯ ವ್ಯವಸ್ಥೆ ಕೆಟ್ಟಿದೆ ಎಂದು ದುರುತ್ತಾ ಕೂಡುವ ಬದಲು ಯೋಗ್ಯರನ್ನು ಆಯ್ಕೆ ಮಾಡುವ ಕಾರ್ಯ ಯುವ ಮತದಾನರಿಂದ ನಡೆಯಬೇಕು ಎಂದು ಅವರು ಯುವ ಜನತೆಗೆ ಕರೆಕೊಟ್ಟರು. ಚುನಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮತದಾನರು ಭಾಗಿಯಾಗುವುದರಿಂದ ಜನಪರ ಸರ್ಕಾರ ಆಡಳಿತಕ್ಕೆ ಬರಲು ಸಾಧ್ಯ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಮುಂದೆ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿಯೂ ಉತ್ತಮವಾದಂತಹ ಮತದಾನದ ಪ್ರಮಾಣ ಹೆಚ್ಚಿಸುವ ಕಾರ್ಯಕ್ಕೆ ಎಲ್ಲರೂ ಪ್ರಯತ್ನಿಸೋಣ ಎಲ್ಲಾ ಚುನಾವಣೆಗಳಲ್ಲಿಯೂ ಉತ್ತಮ ಪ್ರಮಾಣದ ಮತದಾನ ನಡೆಯುವ ಹಾಗೇ ಶ್ರಮಿಸೋಣ…
ಬಬಲೇಶ್ವರ ಮತಕ್ಷೇತ್ರದಲ್ಲಿ ಪದವಿ ಕಾಲೇಜು ಪ್ರೌಢಶಾಲೆ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿದ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಟೋಯೋಟಾ ಕಂಪನಿ ತನ್ನ ಸಿ.ಎಸ್.ಆರ್. ೨೧ ಕೋಟಿ ರೂ.ಗಳನ್ನು ಅನುದಾನವನ್ನು ವಿವಿಧ ಹಂತದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿ ತನ್ನ ಸಿ.ಎಸ್.ಆರ್. ಐದು ಕೋಟಿ ರೂ. ಅನುದಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಟೋಯೋಟಾ ಶಿಸ್ತು ಹಾಗೂ ಬದ್ದತೆಗೆ ಹೆಸರಾದ ಕಂಪನಿ, ದೂರದ ಜಪಾನ್ ಮೂಲದ ಈ ಕಂಪನಿ ಮಮದಾಪೂರದ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ೨೧ ಕೋಟಿ ರೂ. ಸಿ.ಎಸ್.ಆರ್ ಅನುದಾನವನ್ನು ಬಬಲೇಶ್ವರ ಮತಕ್ಷೇತ್ರಕ್ಕೆ ನೀಡಿದೆ, ವಿವಿಧ ಹಂತಗಳಲ್ಲಿ ಶಾಲಾ ಕೊಠಡಿ ನಿರ್ಮಾಣ, ಶೈಕ್ಷಣಿಕ ಕಿಟ್ ವಿತರಣೆ, ಶೌಚಾಲಯ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಷ್ಟ್ರೀಯ ಮತದಾರರ ದಿನ-೨೦೨೫ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತ ಜಾಥಾಕ್ಕೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ನಿಂಗಪ್ಪ ಎಸ್. ಮಸಳಿ ಅವರು ಚಾಲನೆ ನೀಡಿದರು. ಜಾಥಾವು ಕಿತ್ತೂರು ರಾಣಿ ಚೆನ್ನಮ್ನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿತು. ಜಾಥಾದಲ್ಲಿ ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಶಾಲಾ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ, ಬಿಇಒ ಬಿ.ಎಸ್.ಸಾವಳಗಿ, ಕಾಲೇಜು ಪ್ರಾಂಶುಪಾಲ ಎಸ್.ಎಸ್.ಅಂಗಡಿ, ತಾ.ಪಂ.ಯೋಜನಾಧಿಕಾರಿ ಖೂಬಸಿಂಗ್ ಜಾಧವ್ ಸೇರಿದಂತೆ ಹಲವರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮತದಾರನ ದೃಢ ನಿರ್ಧಾರದ ಮತದಾನವೇ ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣ ಎಂದು ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಆಯೋಜಿಸಿರುವ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ದೇಶದ ಆಗು ಹೋಗುಗಳ ಬಗ್ಗೆ ಅರಿತಿರಬೇಕು. ಅಲ್ಲದೆ ತಮ್ಮ ಪಾಲಕರಿಗೂ ಮತದಾನದ ಅರಿವನ್ನು ಮೂಡಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಯ ಮೂಲಕ ಪ್ರತಿನಿಧಿಗಳ ಆಯ್ಕೆ ಮಾಡುವುದು ಬಹಳ ಮಹತ್ವದ್ದಾಗಿದೆ. ನಿರ್ಭಯದಿಂದ ಯಾರಿಗೂ ಹೆದರದೆ, ಯಾರ ಒತ್ತಡ ಅಥವಾ ಆಮಿಷಕ್ಕೂ ಒಳಗಾಗದೆ ಮತದಾನ ಮಾಡಿದಲ್ಲಿ ಪ್ರಜಾಪ್ರಭುತ್ವ ಯಶಸ್ಸನ್ನು ಕಾಣುತ್ತದೆ. ನೂರಕ್ಕೆ ನೂರರಷ್ಟು ಮತದಾನ ನಡೆಸುವುದು ದೇಶದ ಗುರಿಯಾಗಿದೆ. ಮತದಾರ ಪಟ್ಟಿಯ ನೋಂದಣಿ ಮತ್ತು ಮತದಾನದ ನಿಯಮದಲ್ಲಿ ಕಾಲಕಾಲಕ್ಕೆ ಚುನಾವಣಾ ಆಯೋಗ ಮಾಡುತ್ತಿರುವ ನಿಯಮವನ್ನು ಅರಿತು ಮತದಾನ ಮಾಡುವುದು ಪವಿತ್ರ ಕಾರ್ಯವೇ ಆಗಿದೆ ಎಂದರು.ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿಯವರು ಮತದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸದಸ್ಯ ಜಿ.ಜೆ.ಪಾದಗಟ್ಟಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೪-೨೫ನೇ ಕ್ರಿಕೆಟ್ ಕ್ರೀಡಾಪಟುಗಳು ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಆಯ್ಕೆಯಾಗಿದ್ದು, ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಕೆಟ್ ಕ್ರೀಡೆಯು ಇದೇ ದಿ. ೨೩-೦೧-೨೦೨೫ ರಿಂದ ೨೮-೦೧-೨೦೨೫ರ ರವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜರುಗಲಿದೆ. ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ತಂಡದ ತರಬೇತಿದಾರಾಗಿ ಕವಿತಾ ರಾಠೋಡ ಮತ್ತು ವ್ಯವಸ್ಥಾಪಕರಾಗಿ ಜಬಿನತಾಜ ಜಿಗಳೂರ ಭಾಗವಹಿಸಲಿದ್ದಾರೆ.ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ, ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಮತ್ತು ಡಾ.ಕಿರಣ ಜಿ ಎನ್ ಶುಭ ಹಾರೈಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಈ ನಾಡಿನ ಭಾಷೆ, ಜಲ, ಸಂಸ್ಕೃತಿ ಇವುಗಳ ಉಳಿವಿಗಾಗಿ ಟೊಂಕ ಕಟ್ಟಿ ನಿಂತವರು ಮಾತ್ರ ನಿಜವಾದ ಕನ್ನಡಿಗರು ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಪಟ್ಟಣದಲ್ಲಿ ಫೆ೧೫ ರಂದು ನಡೆಯಲಿರುವ ೫ನೇ ಕನ್ನಡ ಸಾಹಿತ್ಯ ಸಮ್ಮೇಳನವೊಂದು ಕನ್ನಡಿಗರ ಹಬ್ಬ. ಈ ಹಬ್ಬದ ಯಶಸ್ವಿಗಾಗಿ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಶ್ರಮಿಸಬೇಕು ಎಂದರು.ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಸಮ್ಮೇಳನದಲ್ಲಿ ಸಾಹಿತಿಗಳಿಗೆ ಹೆಚ್ಚಿನ ಒತ್ತು ಕೊಡಬೇಕು ಎಂಬ ಕೂಗು ಇದ್ದು ಖಂಡಿತ ಸಾಹಿತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಸಮ್ಮೇಳನದ ಯಶಸ್ವಿಗೆ ಎಲ್ಲ ಹಿರಿಯ ಮತ್ತು ಯುವ ಸಾಹಿತಿಗಳ, ಕನ್ನಡಾಭಿಮಾನಿಗಳ ಸಲಹೆ ಸೂಚನೆ ಅತೀ ಅವಶ್ಯ. ಚಿಕ್ಕ ಪುಟ್ಟ ಕಾರಣಗಳಿಗೆ ಬೇಸರ ಮಾಡಿಕೊಳ್ಳದೇ ಕನ್ನಡಾಂಬೆಯ ಜಾತ್ರೆಯನ್ನ ಅದ್ಧೂರಿಯಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು.ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಪಟ್ಟಣದ ಸರಕಾರಿ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿದ್ದರು.ಎಲ್ಲ ವೈದ್ಯರು ಒಂದೇ ಕಡೆಗೆ ಒಂದೇ ಕೋಣೆಯಲ್ಲಿ ಕುಳಿತು ರೋಗಿಗಳಿಗೆ ತಪಾಸಣೆ ಮಾಡುವದನ್ನು ವೀಕ್ಷಿಸಿ ವೈದ್ಯರು ಬೇರೆ ಬೇರೆ ಕೋಣೆಯಲ್ಲಿ ಕುಳಿತು ರೋಗಿಗಳಿಗೆ ತಪಾಸಣೆ ಮಾಡಲು ತಿಳಿಸಿದರು.ಒಂದು ಕೋಣೆಯಲ್ಲಿ ಒಬ್ಬರೇ ವೈದ್ಯರು ಇರಬೇಕು. ರೋಗಿಗಳಿಗೆ ಟೇಬಲ್ ಅಥವಾ ಕುರ್ಚಿಯ ಮೇಲೆ ಕುಡಿಸಿ ಸರಿಯಾದ ಮಾಹಿತಿ ಕೇಳಿ ಉಪಚರಿಸಬೇಕು. ಸಧ್ಯ ರೋಗಿಗಳಿಗೆ ಯಾವ ವೈದ್ಯರು ಕೈ ಹಚ್ಚುತ್ತಲ್ಲ, ಕೇವಲ ರೋಗಿಗಳಿಗೆ ಕೇಳಿ ಚೀಟಿ ಬರೆದು ಕೊಡುವ ವ್ಯವಸ್ಥೆ ನಡೆದಿದೆ ಎಂದು ಸಾರ್ವಜನಿಕರ ದೂರಾಗಿದೆ ಎಂದರು.ಇದೇ ಪರಿಸ್ಥಿತಿ ಮುಂದೆ ವರೆದರೆ ಜಿಲ್ಲಾಧಿಕಾರಿ, ಸಿಇಒ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕ್ರಮ ಜರುಗಿಸಲು ತಿಳಿಸುವದಾಗಿ ಸೂಚಿಸಿದರು.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ರಾಮಕೃಷ್ಣ ಇಂಗಳೆ, ಡಾ|| ರಾಜೇಶ ಕೋಳೆಕರ,ಡಾ|| ಜಗದೀಶ ಬಿರಾದಾರ, ಡಾ|| ಅಮೀತ ಕೋಳೆಕರ, ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದಲ್ಲಿ ಯುವಕರನ್ನು ಉತ್ತೇಜಿಸಲು ಜ.೨೫ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದು ಯುವಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಲ್ಲದೇ ಮತದಾನದ ಹಕ್ಕು ಮೂಲಭೂತ ಹಕ್ಕು ಎಂಬ ಅಂಶದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಎಚ್.ಜಿ.ಪಪೂ ಕಾಲೇಜಿನ ಉಪನ್ಯಾಸಕ ಎಫ್.ಎ. ಹಾಲಪ್ಪನವರ ಹೇಳಿದರು.ಸಿಂದಗಿ ಪಟ್ಟಣದ ಎಚ್.ಜಿ.ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಮತದಾನದ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯದ ಅರಿವು ಮೂಡಿಸುವುದು ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಚುನಾವಣಾ ಪ್ರಕ್ರಿಯೆ. ಪ್ರತಿಯೊಬ್ಬ ವ್ಯಕ್ತಿಯ ಮತವು ದೇಶದ ಭವಿಷ್ಯದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಬಹುದು ಎಂಬುದನ್ನು ಇದು ಒತ್ತಿಹೇಳುತ್ತದೆ ಮತ್ತು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಜ್ಞಾನದೊಂದಿಗೆ ಮತದಾನದ ಮಹತ್ವವನ್ನು ಒತ್ತಿಹೇಳುತ್ತದೆ ಎಂದರು.ಈ ವೇಳೆ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ಯುವ ಜನಾಂಗ ಮತವನ್ನ ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಈ ದೇಶದ…
