ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಮಕ್ಕಾ ಮಸೀದ ನ ಹಾಲ್ ನಲ್ಲಿ ಮಾ೧೨ ರಂದು ಸಂಜೆ ಇಫ್ತಿಯಾರ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು ಮುಸ್ಲಿಂ ಸಮಾಜದ ಎಲ್ಲ ಬಾಂಧವರು, ಪುರಸಭೆಯ ಆಡಳಿತ ಮಂಡಳಿಯ ಸದಸ್ಯರು, ದಿ ಕರ್ನಾಟಕ ಕೋ ಅಪ್ ಬ್ಯಾಂಕಿನ ನಿರ್ದೇಶಕರುಗಳು ಹಾಗೂ ಪಟ್ಟಣದ ಎಲ್ಲ ಪ್ರಮುಖರು ಭಾಗಿಯಾಗುವಂತೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮನವಿ ಮಾಡಿಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಅಸ್ಕಿ ಫೌಂಡೇಶನ್ ವತಿಯಿಂದ ವಿವಿಧ ಸೇವಾ ಕಾರ್ಯವನ್ನು ಮಾಡುತ್ತಿದ್ದೇವೆ. ಕೊಣ್ಣೂರು, ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡಗಳಲ್ಲಿ ಪ್ರತೀ ವರ್ಷ ಇಫ್ತಿಯಾರ ಕೂಟವನ್ನು ಏರ್ಪಡಿಸುತ್ತ ಬಂದಿದ್ದೇವೆ. ನಾವು ಹೇಗೆ ದೇವರ ಸೇವೆ ಮಾಡುತ್ತಿದ್ದೇವೆ ಅದರಂತೆ ನಮಗೆ ಹೆಚ್ಚಿನ ಸಂಪತ್ತನ್ನು ಭಗವಂತ ಕರುಣಿಸುತ್ತಿದ್ದಾನೆ. ಹಾಗಾಗಿ ಈ ವರ್ಷವೂ ಕೂಡ ಇಫ್ತಿಯಾರ ಕೂಟವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ತಿಳಿಸಿದರು.
ಮೌಲಾನಾ ಅಲ್ಲಾಭಕ್ಷ ಖಾಜಿ, ಮೌಲಾನಾ ಖಾರಿ ಮೊಹಮ್ಮದ ಇಸಾಕ ಮಾಗಿ, ಮೌಲಾನಾ ಮೊಹಮ್ಮದ ರಫೀಕ ನದಾಫ, ಮೌಲಾನಾ ಹುಸೇನ ಚೌದ್ರಿ, ಪ್ರಮುಖರಾದ ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಜಬ್ಬಾರ ಗೋಲಂದಾಜ, ಬಬಲು ಹುಣಚಗಿ, ಮುನ್ನಾ ಮಕಾಂದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.

