ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆಕೆಆರ್‌ಟಿಸಿಗೆ ಕಲ್ಯಾಣ ರಥ ಹಾಗೂ ಅಮೋಘವರ್ಷ ಬ್ರ‍್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ, ಉಪಕ್ರಮಗಳಿಗಾಗಿ ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿ ( ನ್ಯಾಶನಲ್ ಟ್ರಾನ್ಸಫೋರ್ಟ್ ಎಕ್ಸಲೆನ್ಸ ಅವಾರ್ಡ್) ಲಭಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಕಿರಣ್ ಬೇಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗ, ಮುಖ್ಯ ಯಾಂತ್ರಿಕ ಶಿಲ್ಪಿ ಸಂತೋಷ್ ಗೋಗೇರಿ, ಕೆಕೆಆರ್‌ಟಿಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಉಪಸ್ಥಿತರಿದ್ದರು.

