Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅವಳಿ ಜಿಲ್ಲೆಯ ನೂರಾರು ರೈತರು ಹಾಗೂ ರೈತ ಮಹಿಳೆಯರು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿರುವ ಪವಿತ್ರ ಪಂಚಗಂಗಾ ಕ್ಷೇತ್ರದಲ್ಲಿ ಗಂಗಾಪೂಜೆಯನ್ನು ಭಕ್ತಿ ಭಾವದಿಂದ ನೆರವೇರಿಸಿದರು.ಪಂಚಗಂಗಾ ತೀರ್ಥದಲ್ಲಿ ಜಲದೇವತೆಗೆ ಬಾಗೀನ ಅರ್ಪಿಸಿ, ಉದ್ಭವಲಿಂಗ ಹಾಗೂ ಶ್ರೀ ಕೃಷ್ಣನ ಮೂರ್ತಿಗೆ ಮಂತ್ರಪಠಣದೊಂದಿಗೆ ಉಡಿತುಂಬಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಕೆ. ಬೆಳ್ಳುಬ್ಬಿ, “ಲಕ್ಷಾಂತರ ಎಕರೆ ಜಮೀನುಗಳಿಗೆ ಹಾಗೂ ಸಕಲ ಜೀವ ರಾಶಿಗಳಿಗೆ ಜೀವಧಾರೆ ನೀಡುವ ಕೃಷ್ಣಾ ನದಿಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪಶ್ಚಿಮ ಘಟ್ಟದಲ್ಲಿ ಸಮರ್ಪಕ ಮಳೆಯಾದರೆ ಕೃಷ್ಣಾ ನದಿ ತುಂಬಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜನತೆಗೆ ಸದಾ ಅನುಕೂಲವಾಗುತ್ತದೆ” ಎಂದು ಹೇಳಿದರು.ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, “೨೫ ವರ್ಷಗಳಿಂದ ರೈತರ ಪರವಾಗಿ ಕೃಷ್ಣಾಮಾತೆಗೆ ಬೆಳ್ಳುಬ್ಬಿ ಅವರು ಪೂಜೆ ಸಲ್ಲಿಸುತ್ತಿರುವ ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಸಾಗಿಸಲು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದಲ್ಲಿ ೨೫೦ಕ್ಕೂ ಹೆಚ್ಚು ಗುಂಟಾ ಪ್ಲಾಟ್‌ಗಳ ಮಾರಾಟದಲ್ಲಿ ಉತಾರೆಗಳ ಮೂಲಕ ದೊಡ್ಡ ಪ್ರಮಾಣದ ಭ್ರಷ್ಟಾಚಾರವೆಸಗಿದ್ದು ಈಗ ಅಲ್ಲಿ ವಾಸವಿರುವ ಕುಟುಂಬಗಳಿಗೆ ಸೂಕ್ತ ಕಾನೂನು ಭದ್ರತೆ ಒದಗಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರೇಡ್-೨ ತಹಶೀಲ್ದಾರ್ ಎಂ.ಜಿ.ಬಿರಾದಾರರಿಗೆ ಕುಟುಂಬಸ್ಥರು ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಮಂಗಳವಾರ ಭೂಮಿ ಖರೀದಿಸಿದ ಕುಟುಂಬಗಳು ಮಾಲೀಕರು ಆಗಮಿಸಿ ಜಾಗೆಗಳ ಉತಾರೆಗಳಲ್ಲಿ ನಡೆದ ಅಕ್ರಮದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಧುರೀಣ ಪ್ರಕಾಶ ಗುಡಿಮನಿ ಮಾತನಾಡಿ, ಪಟ್ಟಣದಲ್ಲಿ ೨೦೦೫ ಹಾಗೂ ೨೦೦೯-೧೦ರ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಇದ್ದು ಈ ಸಮಯದಲ್ಲಿ ೮ ಮತ್ತು ೯ರ ಪುಸ್ತಕದಲ್ಲಿ ಸರ್ವೇ ಸಂಖ್ಯೆ ೧೮/೪ರ ಕ್ಷೇತ್ರ ೪.೩೨ ಮತ್ತು ೧೮/೨ರ ಕ್ಷೇತ್ರ ೨.೧೨ರಲ್ಲಿ ಗುಂಟಾ ಪ್ಲಾಟ್‌ಗಳಾಗಿ ೨೫೦ ಕ್ಕೂ ಹೆಚ್ಚು ಉತಾರೆಗಳನ್ನು ದಾಖಲೆ ಮಾಡಿ ಬೇರೆಯವರ ಹೆಸರಲ್ಲಿ ಅಕ್ರಮವಾಗಿ ಖರೀದಿ ಹಾಕುವ ಮೂಲಕ ಮೋಸ ಮಾಡಲಾಗಿದೆ ಈ ರೀತಿಯಾಗಿ ಮತ್ತು ಬೇಕಾಬಿಟ್ಟಿ ಭೂಅಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ “ವಿಜಯಪುರ ಜಿಲ್ಲಾ ಛಾಯಾಗ್ರಾಹಕರ ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ತಾಲೂಕಿನ ಸಂಘದ ಸದಸ್ಯರ ಮಕ್ಕಳಿಗೆ 2025-2026ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.80% ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ. ಸದ್ಯಸ್ಯರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸಂಘ ದಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.ವಿಜಯಪುರ ಜಿಲ್ಲೆಯ ಹಾಗೂ ತಾಲೂಕಿನ ಸಂಘದ ಸದಸ್ಯರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯ ಧೃಡೀಕೃತ ಅಂಕಪಟ್ಟಿ, ಆಧಾರ ಕಾರ್ಡ, ವಿದ್ಯಾರ್ಥಿಯ ಬ್ಯಾಂಕ್ ವಿವರ, ಇತ್ತಿಚ್ಚಿನ ಎರಡು ಪಾಸಪೋರ್ಟ ಅಳತೆಯ ಭಾವಚಿತ್ರ ಹಾಗೂ ಛಾಯಾಗ್ರಾಹಕರ ಸಂಘದ ಗುರುತಿನ ಚೀಟಿಯೊಂದಿಗೆ ದಿನಾಂಕ 15-08-2026ರ ಒಳಗಡೆ ಸಂಘದ ಕಛೇರಿ, ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಅಂಗಡಿ ನಂ. 201, ಮೊದಲನೆ ಮಹಡಿ, ಎಸ್.ಎಸ್. ಕಾಂಪ್ಲೇಕ್ಸ್, ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಬಿ.ಎಲ್.ಡಿ.ಇ. ರಸ್ತೆ, ವಿಜಯಪುರ-586101 ಇಲ್ಲಿಗೆ ತಲುಪಿಸಲು ವಿನಂತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧ್ಯಕ್ಷರು,…

Read More

ಲೇಖನ- ವೈ.ಸಿ.ಸಂಪತ್ ಕುಮಾರ.ಮುಖ್ಯ ವರದಿಗಾರವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವಿಜಯಪುರ ಉದಯರಶ್ಮಿ ದಿನಪತ್ರಿಕೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಭೀಕರ ಬರಗಾಲ ಆವರಿಸಿದೆ. ಜಲಾಶಯಗಳು ಬತ್ತುತ್ತಿವೆ, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಮತ್ತು ಹೆಚ್ಚು ನೀರು ಬೇಡುವ ಬೆಳೆಗಳನ್ನು ನಂಬಿ ಕೂತರೆ ರೈತರು ಸಂಪೂರ್ಣ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.ಅದಕ್ಕಾಗಿಯೇ ಕೃಷಿ ತಜ್ಞರು ಈಗ ‘ಪರ್ಯಾಯ ಬೆಳೆ ಪದ್ಧತಿ’ ಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಕಡಿಮೆ ನೀರು, ಕಡಿಮೆ ಅವಧಿ ಮತ್ತು ಕನಿಷ್ಠ ವೆಚ್ಚದಲ್ಲಿ ಕೈತುಂಬ ಆದಾಯ ತರುವ ಬೆಳೆಗಳತ್ತ ಮುಖ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.ಏನಿದು ಪರ್ಯಾಯ ಬೆಳೆ ಪದ್ಧತಿ?ಬರಗಾಲದ ಸಮಯದಲ್ಲಿ ನೀರಾವರಿ ಸೌಲಭ್ಯ ಕಡಿಮೆಯಾದಾಗ, ಹೆಚ್ಚು ನೀರು ಬೇಡುವ ಬೆಳೆಗಳಾದ ಭತ್ತ, ಕಬ್ಬು ಮತ್ತು ಅಡಿಕೆಗೆ ಬೆಳೆಗಳಿಗೆ ಪರ್ಯಾಯವಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದೇ ಪರ್ಯಾಯ ಬೆಳೆ ಪದ್ಧತಿ. ಇದು ಮಣ್ಣಿನ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಂಡು,…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪುಟ್ಟ ಹಳ್ಳಿಯಲ್ಲಿ ಸೋಮು ಎಂಬ ಹತ್ತು ವರ್ಷದ ಚುರುಕಾದ ಹುಡುಗನಿದ್ದನು. ಅವನಿಗೆ ಅಜ್ಜಿಯೆಂದರೆ ಪಂಚಪ್ರಾಣ. ಅಜ್ಜಿಯ ಬಳಿ ಅವಳ ಮದುವೆಯ ಸಮಯದಲ್ಲಿ ಅವಳ ತಂದೆ ಕೊಟ್ಟಿದ್ದ ಒಂದು ಅಪರೂಪದ, ಹೊಳೆಯುವ ಮುತ್ತಿನ ಮೂಗುತಿ ಇತ್ತು. ಅಜ್ಜಿಗೆ ಅದು ಜಗತ್ತಿನಲ್ಲೇ ಅತ್ಯಂತ ಪ್ರೀತಿಯ ವಸ್ತುವಾಗಿತ್ತು. ಒಂದು ದಿನ ಮಧ್ಯಾಹ್ನ, ಅಜ್ಜಿ ಅಂಗಳದಲ್ಲಿ ಕುಳಿತು ಹರಟುತ್ತಿದ್ದಾಗ ಆ ಮೂಗುತಿಯಲ್ಲಿದ್ದ ಮುತ್ತು ಕಳಚಿ ಎಲ್ಲಿಯೋ ಬಿದ್ದುಹೋಯಿತು. ಅಜ್ಜಿಗೆ ತುಂಬಾ ಬೇಸರವಾಯಿತು. ಕಣ್ಣೀರು ಹಾಕುತ್ತಾ ಅಂಗಳದಲ್ಲೆಲ್ಲಾ ಹುಡುಕತೊಡಗಿದಳು. ವಯಸ್ಸಾಗಿದ್ದರಿಂದ ಅವಳಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.ಅಜ್ಜಿಯ ಕಣ್ಣೀರು ನೋಡಲಾಗದ ಸೋಮು, “ಅಜ್ಜಿ ನೀನು ಯೋಚನೆ ಮಾಡಬೇಡ, ನಾನು ಹುಡುಕಿ ತರುತ್ತೇನೆ” ಎಂದು ಅಂಗಳಕ್ಕೆ ಓಡಿದನು. ಅಂಗಳ ತುಂಬಾ ಒಣಗಿದ ಎಲೆಗಳು, ಸಣ್ಣ ಕಲ್ಲುಗಳು ಮತ್ತು ಮಣ್ಣು ತುಂಬಿತ್ತು. ಸೋಮು ಗಂಟೆಗಟ್ಟಲೆ ಮಣ್ಣನ್ನೆಲ್ಲಾ ಜಾಲಾಡಿದನು, ಎಲೆಗಳನ್ನೆಲ್ಲಾ ಎತ್ತಿ ನೋಡಿದನು. ಆದರೆ ಆ ಪುಟ್ಟ ಮುತ್ತು ಎಲ್ಲೂ ಕಾಣಿಸಲಿಲ್ಲ. ಸೂರ್ಯ ಮುಳುಗುತ್ತಾ…

Read More

ಅನ್ಯಾಯ ಸರಿಪಡಿಸಲು ಪ್ರೆಸ್ ಕ್ಲಬ್ ಜಮಖಂಡಿ ಘಟಕದ ಅಧ್ಯಕ್ಷ ಕೇದಾರಪ್ಪ ರಾವಳೋಜಿ ಮನವಿ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 2026ರ ಕರಡು ಅಧಿಸೂಚನೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ರೂಪಿಸಿರುವ ಪರೀಕ್ಷಾ ನಿಯಮಗಳು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ, ಪತ್ರಿಕೆ–3ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ 50 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವುದನ್ನು ಕಡ್ಡಾಯಗೊಳಿಸಿರುವ ನಿಯಮವನ್ನು ಕೂಡಲೇ ಹಿಂಪಡೆಯುವಂತೆ ಕರ್ನಾಟಕ ಪ್ರೆಸ್ ಕ್ಲಬ್ ಜಮಖಂಡಿ ಘಟಕದ ಅಧ್ಯಕ್ಷ ಕೇದಾರಪ್ಪ ರಾವಳೋಜಿ ಅವರು ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಗರದ ಮಿನಿ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು…

Read More

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ಜಮಖಂಡಿ ಸಾರಿಗೆ ಘಟಕಕ್ಕೆ ನೂತನ ಘಟಕ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಸದಾಶಿವ ಶೀಲವಂತರ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಲಾಜಿ ಗುಡಿಮನಿ, ಪ್ರಧಾನ ಕಾರ್ಯದರ್ಶಿ ಶಂಕರ ಭಜಂತ್ರಿ, ರಾಜ್ಯ ಸಮಿತಿ ಸದಸ್ಯ ಪ್ರಭು ಬಿದರಿ, ದಿಲೀಪ್ ದೊಡಮನಿ, ವಾಯುವ್ಯ ವಲಯದ ಪದಾಧಿಕಾರಿ ಬಾಲು ಬೆಕೆನಾಳ, ಘಟಕದ ಕಾರ್ಯಾಧ್ಯಕ್ಷ ಹನಮಂತ ಕಾಂಬಳೆ, ಕೇಂದ್ರ ಸಮನ್ವಯ ಕನ್ನಡ ಸಂಘದ ಅಧ್ಯಕ್ಷ ಆನಂದ ಕರಾತ ಹಾಗೂ ಮಲ್ಲು ಪೋತರಾಜ ಅವರು ನೂತನ ವ್ಯವಸ್ಥಾಪಕರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ನೂತನ ಘಟಕ ವ್ಯವಸ್ಥಾಪಕರ ನೇತೃತ್ವದಲ್ಲಿ ಜಮಖಂಡಿ ಸಾರಿಗೆ ಘಟಕವು ಇನ್ನಷ್ಟು ಅಭಿವೃದ್ಧಿ ಹೊಂದಿ, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಮಾದರಿ ಘಟಕವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.ನೂತನ ಘಟಕ ವ್ಯವಸ್ಥಾಪಕರಾದ ಸದಾಶಿವ ಶೀಲವಂತರ…

Read More

ಪ್ರವಾಹ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿಯ www.merakify.ai ಎಂಬ ಆನ್‌ಲೈನ್ ಬುದ್ದಿಮತ್ತೆ(AI) ವೇದಿಕೆಯನ್ನು ಉದ್ಘಾಟಿಸಿದ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಪ್ರತಿಭೆಗಳು ನವೋದ್ಯಮಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಸೋಮವಾರ ನಗರದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ತಮ್ಮ ಯುವ ಸ್ನೇಹಿತರೊಂದಿಗೆ ಸೇರಿ ಪ್ರಾರಂಭಿಸಿರುವ ಪ್ರವಾಹ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿಯ www.merakify.ai ಎಂಬ ಆನ್‌ಲೈನ್ ಬುದ್ದಿಮತ್ತೆ(AI) ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂಥ ಕೃತಕ ಬುದ್ದಿಮತ್ತೆ ವೇದಿಕೆಗಳು ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುತ್ತವೆ. ಈ ನವೋದ್ಯಮ ತಂತ್ರಜ್ಞಾನ ಆಧಾರಿತವಾಗಿದ್ದು, ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಸೃಜನಶೀಲರು ಹಾಗೂ ಉದ್ಯಮಿಗಳಿಗೆ ಅತ್ಯಂತ ಉಪಯುಕ್ತ ವೇದಿಕೆಯಾಗಿದೆ. ನಮ್ಮ ಮನದಲ್ಲಿರುವ ಹೊಸ ಆಲೋಚನೆಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ಗುಣಮಟ್ಟದ…

Read More

ನೂತನ ಗ್ರಾಮೀಣ ಆರೋಗ್ಯ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಡಾ.ತೇಜಸ್ವಿನಿ ವಲ್ಲಭ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿವಂಗತ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆಯ ಅಂಗವಾಗಿ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ನೂತನ ಗ್ರಾಮೀಣ ಆರೋಗ್ಯ ಕೇಂದ್ರ ಉದ್ಘಾಟನೆ ಸಮಾರಂಭ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಸೋಮವಾರ ನಡೆಯಿತು.ಈ ನೂತನ ಗ್ರಾಮೀಣ ಆರೋಗ್ಯ ಕೇಂದ್ರವನ್ನು ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತೇಜಸ್ವಿನಿ ವಲ್ಲಭ, ಗ್ರಾಮೀಣ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಅವರ ಸಮೀಪದಲ್ಲೇ ಒದಗಿಸುವ ಉದ್ದೇಶದಿಂದ ಈ ಗ್ರಾಮೀಣ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಗಣ್ಯರು ದಿ. ಶ್ರೀ ಬಿ. ಎಂ. ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ…

Read More