Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು

ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸೃಜನಶೀಲ ಪ್ರತಿಭೆ ಸಾಹಿತಿ ಸುಧಾ ಪಾಟೀಲ
ವಿಶೇಷ ಲೇಖನ

ಸೃಜನಶೀಲ ಪ್ರತಿಭೆ ಸಾಹಿತಿ ಸುಧಾ ಪಾಟೀಲ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ. ಶಶಿಕಾಂತ ಪಟ್ಟಣ
ಸಾಹಿತಿಗಳು, ವಿಮರ್ಶಕರು
ರಾಮದುರ್ಗ – ಪುಣೆ

ಉದಯರಶ್ಮಿ ದಿನಪತ್ರಿಕೆ

  ಉತ್ತರ ಕರ್ನಾಟಕದ ದೇಸಿ ಪ್ರಜ್ಞೆಯನ್ನು ಮೇಳೈಸಿಕೊಂಡು ಗದಗ ಜಿಲ್ಲೆಯ ಮಲ್ಲಸಮುದ್ರದ ಗೌಡರ ಮಗಳು ಸುಧಾ ಪಾಟೀಲ  ಮೆಲ್ಲ ಮೆಲ್ಲನೆ ಬೆಳೆದು ನಿಂತ ಅಪ್ಪಟ ಸೃಜನಶೀಲ ಪ್ರತಿಭೆ. ತಂದೆ ಲಿಂಗೈಕ್ಯ ಭೀಮನಗೌಡರು ತಾಯಿ ಅಕ್ಕ ಮಹಾದೇವಿ ಅತ್ಯಂತ ಸುಸಂಸ್ಕೃತ ಮನೆತನದ ಹುಡುಗಿ.ಇವರು ಗದಗ ಜಿಲ್ಲೆಯ ಮಲ್ಲಸಮುದ್ರದ ಸಹಕಾರಿ ಧುರೀಣರೆಂದೇ ಹೆಸರಾದ ಗೌಡರ ಮನೆತನದಲ್ಲಿ 17 -5-1966 ರಂದು ಜನಿಸಿದರು

ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಗದಗ, ಬಿಜಾಪುರ, ಧಾರವಾಡ, ಬೆಳಗಾವಿ, ಕಲ್ಬುರ್ಗಿ ಮತ್ತು ಬೆಂಗಳೂರಿನಲ್ಲಿ ಪೂರೈಸಿ, ಅಲ್ಲಿಯೇ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೈಕಾಲಜಿ, ಸೋಶಿಯಲ್ ವೆಲ್ಫೇರ್ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಗಳ
ವಿಷಯಗಳನ್ನು ಆಯ್ದುಕೊಂಡು ಡಿಗ್ರಿ ಮುಗಿಸಿದರು.
ಕನ್ನಡ ಸಾರಸ್ವತ ಲೋಕದಲ್ಲಿ ಕಥೆ ಕವನ ವ್ಯಕ್ತಿ ಪರಿಚಯ ಅಂಕಣ ಶರಣ ಚರಿತ್ರೆ ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ಈಗ ಬೆಳಗಾವಿಯ ಅನೇಕ ಸಾಹಿತಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯವಾಗಿ ಕನ್ನಡ ನಾಡು ನುಡಿ ಸಂಸ್ಕೃತಿ ವಚನ ಚಳುವಳಿಗಾಗಿ ಶ್ರಮಿಸುತ್ತಿದ್ದಾರೆ. ಇವರು ಬಸವ ತಿಳುವಳಿಕೆ ಸಂಶೋಧನಾ ಕೇಂದ್ರದ ವಿಶ್ವಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಚನ ಸಾಹಿತ್ಯದ ಗೀಳು ಮತ್ತು ಅಧ್ಯಯನ
ಸುಧಾ ಪಾಟೀಲ ಅವರಿಗೆ ಬಾಲ್ಯದಲ್ಲಿಯೇ ಡಾ. ಜ.ಚ.ನಿ ಅವರಿಂದ ಲಿಂಗ ದೀಕ್ಷೆಯಾಗಿತ್ತು. ತಾಯಿ ಅಕ್ಕಮಹಾದೇವಿ ಆಧುನಿಕ ಕಾಲದ ಶರಣೆ. ನಿತ್ಯ ವಚನ ಸಾಹಿತ್ಯ ಚಿಂತನೆ ಮಗಳಾದ ಸುಧಾ ಅವರ ಮೇಲೆ ದಟ್ಟವಾಗಿ ಬೀರಿದೆ.
ಸುಧಾ ಪಾಟೀಲ ಒಬ್ಬ ಅತ್ಯಂತ ಸೂಕ್ಷ್ಮ ಸಂವೇದನೆಯ ಕವಯಿತ್ರಿ, ಲೇಖಕಿ. ಇವರು ಸಾಮಾಜಿಕ ಕಳಕಳಿಯುಳ್ಳ ಚಿಂತಕಿ. ಕಾವ್ಯ, ಕೇಂದ್ರೀಕೃತ ಕಲ್ಪನಾತ್ಮಕತೆಯನ್ನು ಹುಟ್ಟುಹಾಕುವ ಸಾಹಿತ್ಯಅರ್ಥ, ಧ್ವನಿ ಮತ್ತು ಲಯಕ್ಕೆ ಅನುಗುಣವಾಗಿ ಆಯ್ಕೆಮಾಡಿದ ಮತ್ತು ಜೋಡಿಸಲಾದ ಭಾಷೆಯ ಮೂಲಕ ಅನುಭವದ ಅರಿವು ಅಥವಾ ನಿರ್ದಿಷ್ಟ ಭಾವನಾತ್ಮಕ ಪ್ರತಿಕ್ರಿಯೆ . ಈಗಾಗಲೇ ಆರು ಕವನ ಸಂಕಲನಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇವರು ತಮ್ಮ ಕವನ, ಕಥೆಗಳಲ್ಲಿ ತಮ್ಮ ಸುತ್ತಲಿನ ಅನೇಕ ಸಿಹಿ ಕಹಿ ಘಟನೆಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕವನ,ಕಾವ್ಯ, ಕಥೆ,ಹೀಗೆ ಎಲ್ಲ ವಿಶಿಷ್ಟ ಪ್ರಕಾರದ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೆರೆದಿದ್ದಾರೆ. ಇವರ ಬರಹಗಳು ಸ್ವಂತಿಕೆಯ ಜೊತೆಗೆ ಪ್ರಭುದ್ಧ ಅಭಿವ್ಯಕ್ತಿ.
ಇವರ ಕವನ ಸಂಕಲದಲ್ಲಿ ಸೃಷ್ಟಿಯ ಕಾಳಜಿ, ಪರಿಸರ ಪ್ರಜ್ಞೆ, ಮಾನವ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ, ಸಾಮಾಜಿಕ ಧಾರ್ಮಿಕ ಸಾಮರಸ್ಯತೆಗೆ ಒತ್ತು ಕೊಟ್ಟಿದ್ದಾರೆ. ಜೊತೆಗೆ ಸ್ನೇಹ, ಪ್ರೀತಿಯು ಇವರ ಕಾವ್ಯದ ಮೂಲ ದೃವ್ಯವೆಂದು ಹೇಳಬಹುದು.
ಇವರ ಇನ್ನೂ ಹತ್ತಾರು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಳ್ಳಲಿ ಎಂದು ಪತ್ರಿಕೆ ಹಾರೈಸುತ್ತದೆ.

ಬಾಕ್ಸ್ ೧

ಸುಧಾ ಪಾಟೀಲ ರ ಪ್ರಕಟಿತ ಕೃತಿಗಳು

ಕಿರುಹೊತ್ತಿಗೆಗಳು
1..ಡಾ. ಜ. ಚ. ನಿ (ಸಂಗ್ರಹ )
ಬದುಕು ಬರಹ
ಸಂಪಾದನೆ
1.. ವಚನಗಳಲ್ಲಿ ಗುರು ಲಿಂಗಜಂಗಮ
2..ಅನುಭವ ಸಿರಿ
3.. ಕನ್ನಡದ ಕಬ್ಬಿಗರು
4.. ದಾಸೋಹಮ
5.. ಸಂಯುಕ್ತ
6..ತಾಯಿಯಿದ್ದರೆ ತವರೆಚ್ಚು
7.. ದಿನಕ್ಕೊಂದು ಶರಣ ಮಾಲಿಕೆ – 1
8..ದಿನಕ್ಕೊಂದು ಶರಣ ಮಾಲಿಕೆ – 2
9..ದಿನಕ್ಕೊಂದು ಶರಣ ಮಾಲಿಕೆ – 3
10..ದಿನಕ್ಕೊಂದು ಶರಣ ಮಾಲಿಕೆ – 4
11 ದಿನಕ್ಕೊಂದು ಶರಣ ಮಾಲಿಕೆ – 5

ಕವನ ಸಂಕಲನಗಳು
1.. ಹೆಜ್ಜೆ ಗುರುತು
2.. ಹೃದಯದ ಮಾತು
3..ಚುಕ್ಕಿ ಹೇಳಿದ ಕಥೆ
4..ಬೊಗಸೆಯೊಳಗಿನ ಪ್ರೀತಿ
5..ವಚನ ಸುಧೆ
6…ಮುಗಿಲಿಗೆ ಏಣಿ
7 ನಕ್ಕು ಬಿಡಲಿ ಭೂಮಿ
ಗದ್ಯ ಕೃತಿಗಳು
1..ಶರಣರ ನೆನೆದರ ಸರಗಿಯ ಇಟ್ಟಂಗ
2..ವಚನ ದಿವ್ಯ
3..ತೊಟ್ಟಿಲು ತೂಗುವ ಕೈ
4..ತವರೂರ ದಾರಿಯಲಿ

ಬಾಕ್ಸ್ ೨

ಸೈವೆಗೈದ ಸಂಘ – ಸಂಸ್ಥೆಗಳು

1..ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ.. ಪುಣೆ
2.. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ
3.. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
4.. ಲಿಂಗಾಯತ ಮಹಿಳಾ ಸಮಾಜ
5.. ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ
6.. ಅಖಿಲ ಭಾರತ ವೀರಶೈವ ಮಹಾಸಭಾ
7.. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
8..ಕಾಯಕಕಟ್ಟೆ (ಲಿಂಗಾಯತ ಮಹಿಳಾ ಸ್ವಉದ್ಯೋಗ ಸಂಘ )
9.. ವಿಸ್ತಾರ ಫೌಂಡೇಶನ್ (ಸಾಮಾಜಿಕ ಕಾರ್ಯಕ್ರಮ ಬೆಳಗಾವಿ ಶಾಖೆ )
10.. ಮೈತ್ರಿ ಸಂಘ
11.. ಸಂಸ್ಕೃತಿ ಮಹಿಳಾ ಮಂಡಲ
12.. ಬೆಳಗಾವಿ ಲೇಡೀಸ್ ಮೀಟ್
13..ಕರ್ನಾಟಕ ಲೇಖಕಿಯರ ಸಂಘ
14..ರೋಷ್ಟ್ರಂ ಡೈರೀಸ್

ಪ್ರಶಸ್ತಿ – ಪುರಸ್ಕಾರಗಳು

1.. ರಾಜ್ಯೋತ್ಸವ ಪ್ರಶಸ್ತಿ..
ಚೇತನಾ ಫೌಂಡೇಶನ್ ಅವರ ವತಿಯಿಂದ…
ಕನ್ನಡ ಪರ ಕಾಳಜಿ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಸಂದ ಪ್ರಶಸ್ತಿ
2.. ಅನುಪಮ ಸೇವಾ ರತ್ನ ಪ್ರಶಸ್ತಿ…ಪೃಥ್ವಿ ಫೌಂಡೇಶನ್ ವತಿಯಿಂದ…
ಸಾಹಿತ್ತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಗೈದ ಅಪರಿಮಿತ ಸಾಧನೆಗಾಗಿ
3.. ಮಿನರ್ವ ಅವಾರ್ಡ್
ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ (ಯುರೋಪ್ ಖಂಡದ ರೋಮ್ ನಲ್ಲಿ )
ಅಂತರಾಷ್ಟೀಯ ಸಮ್ಮೇಳನದಲ್ಲಿ ಕವನವಾಚನ
4..ದತ್ತಿನಿಧಿ ಪ್ರಶಸ್ತಿ
ಅಖಿಲ ಭಾರತ ಕವಿಯಿತ್ರಿಯರ
ಸಮ್ಮೇಳನ ( ಬೆಳಗಾವಿ )
ಸಾಮಾಜಿಕ ಕಾರ್ಯಕ್ಕಾಗಿ..
5… ಬಸವ ಪ್ರಶಸ್ತಿ –
ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ
ಸಾಮಾಜಿಕ ಕಾರ್ಯ ಮತ್ತು ಮಹಿಳಾ ಸಂಘಟನೆಯಲ್ಲಿ ಅನುಪಮ ಸೇವೆಗಾಗಿ..
6.. ಹೆಜ್ಜೆ ಗುರುತು – ಕವನ ಸಂಕಲನ ಪುಸ್ತಕಕ್ಕೆ ದತ್ತಿ ಪ್ರಶಸ್ತಿ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ ( ಶಿವಮೊಗ್ಗ )
7..ಹೆಜ್ಜೆ ಗುರುತು -ಕವನ ಸಂಕಲನ ಪುಸ್ತಕಕ್ಕೆ ಕವಿ ಡಾ. ಡಿ. ಎಸ್. ಕರ್ಕಿ ಪ್ರಶಸ್ತಿ -ಬೆಳಗಾವಿ
8..ಅಪ್ರತಿಮ ಮಹಿಳೆ – ಕೃತಿಗೆ ಆಸ್ಸಾಂ ನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ದತ್ತಿ ಪ್ರಶಸ್ತಿ
9 ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಅವಾರ್ಡ್ ಚೆನ್ನೈ 2026

ಏ.೨೫ ರಂದು ಬಸವ ಸೇವಾ ಪ್ರಶಸ್ತಿ ಪ್ರದಾನ

ಸುಧಾ ಪಾಟೀಲ ತಮ್ಮ ಬರವಣಿಗೆಯಲ್ಲಿ ಹೊಸ ಪ್ರಯೋಗದೊಂದಿಗೆ ಹೊಸತನದ ಹುಡುಕಾಟವನ್ನು ನಡೆಸಿದ್ದಾರೆ. ತಮ್ಮ ಸ್ನೇಹಪರ ಮಾತೃ ಹೃದಯದ ಮಾನವ ಪ್ರೀತಿ ಕಾಳಜಿ ಅಪಾರವಾದವು. ಇವರ ಸಾಹಿತ್ತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಗುರುತಿಸಿ ಇವರಿಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ಬಸವ ಸೇವಾ ಪ್ರಶಸ್ತಿಯನ್ನು ವಿಜಯಪುರದಲ್ಲಿ ದಿನಾಂಕ 25 ಏಪ್ರಿಲ್ ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ಸಭಾಭವನದಲ್ಲಿ
ಡಾ ಅಶೋಕ ಆಲೂರ ಕುಲಪತಿಗಳು ಕೊಡಗು ವಿಶ್ವ ವಿದ್ಯಾಲಯ ಮತ್ತು ಡಾ ಅಜಿತ್ ರಾಂಪುರೆ ಅಂತರಾಷ್ಟ್ರೀಯ ವೈದ್ಯರು ಕೆನಡಾ ಇವರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ತಿಳಿಸಿದ್ದಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು

ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ

ಮಕ್ಕಳಿಗೆ ಇಂದು ಕಂಪ್ಯೂಟರ್ ಜ್ಞಾನ ಅತ್ಯವಶ್ಯ :ಮಠಪತಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು
    In (ರಾಜ್ಯ ) ಜಿಲ್ಲೆ
  • ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಇಂದು ಕಂಪ್ಯೂಟರ್ ಜ್ಞಾನ ಅತ್ಯವಶ್ಯ :ಮಠಪತಿ
    In (ರಾಜ್ಯ ) ಜಿಲ್ಲೆ
  • ಹೈರಿಗೆಯಲ್ಲಿ ಅಂಬೇಡ್ಕರ್ ಜಯಂತಿ & ರಣದಕಾಳಮ್ಮ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ :ಕುರಂದವಾಡೆ
    In (ರಾಜ್ಯ ) ಜಿಲ್ಲೆ
  • ದಸಾಪ ವಿಭಾಗೀಯಸಂಯೋಜಕರಾಗಿ ಕಟ್ಟಿಮನಿ ನೇಮಕ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಶ್ರೇಷ್ಠ ಆಧ್ಯಾತ್ಮಿಕ ಸಂತ ಆದಿ ಶಂಕರಾಚಾರ್ಯರು :ಡಾ.ನಾಯಿಕ್
    In (ರಾಜ್ಯ ) ಜಿಲ್ಲೆ
  • ಸಕಲ ಜೀವಿಗಳಿಗೂ ಲೇಸನ್ನೆ ಬಯಸಿದ ಬಸವಣ್ಣನವರು :ಗುಮಶೆಟ್ಟಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.