ಲೇಖನ
ಡಾ. ಶಶಿಕಾಂತ ಪಟ್ಟಣ
ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ.
ಪುಣೆ – ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಭಾರತೀಯ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ದಾಪುಗಾಲು ಇಟ್ಟು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ಗುರುತರವಾದ ಜವಾಬ್ದಾರಿಯನ್ನು ಕೈಗೊಂಡ
ಅಪ್ಪಟ ಹಿಂದೂಸ್ತಾನಿ ಗಾಯಕಿ ಕಲಾವಿದೆ ಬೆಳಗಾವಿಯ ಶರಣೆ ನೈನಾ ಗಿರಿಗೌಡರ ..
ಚಿಕ್ಕೋಡಿಯ ಪ್ರತಿಷ್ಠಿತ ಭಾತೆ ಮನೆತನದ ಶ್ರೀ ಶಿವಲಿಂಗಪ್ಪ ಭಾತೆ ವಕೀಲರು ತಾಯಿ ಶರಣೆ ಮಂಗಳಾ ಶಿ ಭಾತೆ ಇವರ ಮಗಳಾಗಿ ಜನಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನೂ ಚಿಕ್ಕೋಡಿಯಲ್ಲಿ ಮುಗಿಸಿ ಅಲ್ಲಿಯೇ ತಮ್ಮ ವಿಜ್ಞಾನದ ಪದವಿ ಪಡೆದು ಒಬ್ಬ ವಿನಮ್ರ ಭಾವದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ.
ಬಾಲ್ಯದಿಂದಲೂ ಸಂಗೀತದ ಗೀಳು ಹೊಂದಿರುವ ಅಪರೂಪದ ಪ್ರಬುದ್ಧ ಗಾಯಕಿ ನೈನಾ ಇವರಿಗೆ ತಾಯಿಯೇ ಸಂಗೀತದ ಪ್ರಥಮ ಗುರು
ಬೆಳಗಾವಿಯ ಶ್ರೀ ಉಮೇಶ್ ಗಿರಿಗೌಡರನ್ನು ಮದುವೆಯಾದ ಮೇಲೆ ಸಂಗೀತ ಅಭ್ಯಾಸ ಮುಂದುವರೆಸಿದರು. ಬೆಳಗಾವಿಯ ಕನ್ನಡ ಭವನದಲ್ಲಿ ಖ್ಯಾತ ಸಂಗೀತ ತಜ್ಞೆ ಡಾ ಸುನೀತಾ ಪಾಟಿಲ ಅವರ ಹತ್ತಿರ ಸಂಗೀತ ಶಿಕ್ಷಣ ಶಾಸ್ತ್ರೀಯವಾಗಿ ಕಲಿತರು.
ಕಾರಂಜಿಶ್ರೀ ಮಠದ ಶ್ರೀ ಗುರುಸಿದ್ಧಸ್ವಾಮಿಗಳ ಸಾನಿಧ್ಯ ಶ್ರೀ ರೇಣುಕಾಶ್ರಮದ ಮಾತೋಶ್ರೀ ಗಂಗಾಮಾತಾ ಇವರ ನೆರಳಲ್ಲಿ ತಮ್ಮ ಸಂಗೀತ ಸೇವೆ ವಚನ ಪ್ರಾರ್ಥನೆ ಮುಂದುವರೆಸಿದರು. ರುದ್ರಾಕ್ಷಿ ಮಠದ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೆಳಗಾವಿಯ ಶ್ರೀಮಹಂತೇಶನಗರದ ರಹವಾಸಿಗಳ ಬಿ ಇಡಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಈ ಮಧ್ಯೆ ಕೆ ಎಲ್ ಇ ಸಂಸ್ಥೆಯ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ತಮ್ಮ ಹಿಂದೂಸ್ತಾನಿ ಸಂಗೀತದ ಸ್ನಾತಕೋತ್ತರ ಪದವಿಯನ್ನು ಬಂಗಾರದ ಪದಕದೊಂದಿಗೆ ಪಾಸಾದರು.
ಬೆಳಗಾವಿ ಜಿಲ್ಲೆಯ ಅಥಣಿ ಚಿಕ್ಕೋಡಿ ನಿಪ್ಪಾಣಿ ಗೋಕಾಕ ಸಂಕೇಶ್ವರ ಬೈಲಹೊಂಗಲ ಮುಂತಾದ ಎಲ್ಲಾ ತಾಲೂಕುಗಳಲ್ಲಿ ತಮ್ಮ ಸಂಗೀತದ ಪ್ರತಿಭೆಯನ್ನು ಜನರಿಗೆ ನೀಡಿದ್ದಾರೆ.
ರಂಗಗೀತೆಗಳ ತರಬೇತಿಯನ್ನು ರಂಗ ಜಂಗಮ ನಾಡೋಜ ಡಾ ಏಣಗಿ ಬಾಳಪ್ಪ ಅವರಿಂದ ಒಂದು ವರುಷ ಪಡೆದರು. ಭಾವ ಗೀತೆ ವಚನ ಪ್ರಾರ್ಥನೆ ರಂಗಗೀತೆ ಮುಂತಾದ ಎಲ್ಲಾ ಬಗೆಯ ಸಂಗೀತಗಳ ಪ್ರಾವೀಣ್ಯ ನೈನಾ ಗಿರಿಗೌಡರ ಇವರಲ್ಲಿ ಕಾಣಬಹುದು.
ಕಿತ್ತೂರು ಉತ್ಸವ ಸಂಗೊಳ್ಳಿ ರಾಯಣ್ಣ ಉತ್ಸವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಸಂಗೀತ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಲಿಂಗಾಯತ ಧರ್ಮದ ಸಮ್ಮೇಳನದಲ್ಲಿ 101 ಕಲಾವಿದರಿಂದ ವಚನ ಸಮೂಹ ಗಾಯನ ಮಾಡಿಸಿದ್ದು ಒಂದು ದಾಖಲೆ ಎಂದು ಹೇಳಬಹುದು. ವಿಜಯಪುರ, ಧಾರವಾಡ, ಬಾದಾಮಿ, ಸಿಂದಗಿ, ಬಸವ ಕಲ್ಯಾಣ ಮುಂತಾದ ಕಡೆಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ.
ಅಕ್ಕನ ಅರಿವು ತಂಡದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಹಿರಿಯ ಅಜೀವ ಸದಸ್ಯೆಯಾಗಿರುವ ಲಿಂಗಾಯತ ಮಹಿಳಾ ಸಮಾಜದವ ಪದಾಧಿಕಾರಿಯಾಗಿಯೂ ಸೇವೆಯಲ್ಲಿದ್ದಾರೆ.
ಹಲವಾರು ಶರಣರ ರೂಪಕಗಳನ್ನು ನಾಟಕಗಳನ್ನು ರಚಿಸಿ ಸಂಗೀತಕ್ಕೆ ಅಳವಡಿಸಿ ಅತ್ಯುತ್ತಮ ರಂಗ ಪ್ರದರ್ಶನ ನೀಡಿದ್ದಾರೆ.

ಏ.೨೫ ರಂದು ಪ್ರಶಸ್ತಿ ಪ್ರದಾನ :ಪಟ್ಟಣ
ಇವರ ಸಂಗೀತ ಸೇವೆ ಗುರುತಿಸಿ ಅಂತರಾಷ್ಟ್ರೀಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ವಿಜಯಪುರ ಜಿಲ್ಲಾ ಘಟಕದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ನೈನಾ ಗಿರಿಗೌಡರ ಇವರಿಗೆ ದಿನಾಂಕ 25 ಏಪ್ರಿಲ್ ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಕೊಡಗು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ ಅಶೋಕ ಸಂಗಪ್ಪ ಆಲೂರ ಮತ್ತು ಅಂತಾರಾಷ್ಟ್ರೀಯ ಖ್ಯಾತ ವೈದ್ಯರು ಡಾ ಅಜಿತ್ ಎಂ ರಾಂಪುರೆ ಇವರ ಸಮ್ಮುಖದಲ್ಲಿ ವಚನ ಗಾನ ಕೋಗಿಲೆ ಪ್ರದಾನ ಮಾಡಲಾಗುವುದು ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರು ತಿಳಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು
ಬೆಳಗಾವಿ ಲಿಂಗಾಯತ ಸೈನ್ಯ ಪ್ರಶಸ್ತಿ
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಕನ್ನಡ ಕಲಾವೈಭವ ಪ್ರಶಸ್ತಿ
ನಾಗನೂರು ರುದ್ರಾಕ್ಷಿಮಠದ
ಮಹಿಳಾರತ್ನ ಪ್ರಶಸ್ತಿ ಪಡೆದ ವಿನಯ ಭಾವದ ಸಂಗೀತ ಸಾಧಕಿ.

