Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2022-23ನೇ ಸಾಲಿನಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆಗೊಂಡು, ಬಿಡುಗಡೆಯಾಗದೆ ಬಾಕಿ ಉಳಿದ ಅನುದಾನದಲ್ಲಿ ನಗರದ 7 ದೇವಸ್ಥಾನಗಳ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ರೂ.70 ಲಕ್ಷ ಅನುದಾನ ಮಂಜೂರಿಸಲಾಗಿದ್ದು, ಮೊದಲ ಕಂತಿನಲ್ಲಿ ರೂ.25 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.ವಾರ್ಡ್ ನಂ.22ರ ಜೋರಾಪುರ ಪೇಠ ಬಜಂತ್ರಿ ಓಣಿಯಲ್ಲಿರುವ ದುರ್ಗಾದೇವಿ ದೇವಸ್ಥಾನ ಹತ್ತಿರ ಸಮುದಾಯ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.5 ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.2ರ ದರ್ಗಾದಲ್ಲಿರುವ ಕರಿಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.5 ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.26ರ ದಿವಟಗೇರಿ ಗಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.5 ಲಕ್ಷ ಬಿಡುಗಡೆ ಆಗಿದೆ.ವಾರ್ಡ್ ನಂ.9ರ ಚಂದಾಬಾವಡಿ ರಸ್ತೆಯಲ್ಲಿರುವ ಈಶ್ವರಲಿಂಗ ದೇವಸ್ಥಾನದ ಹತ್ತಿರ ಸಮುದಾಯ ಭವನ…

Read More

ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ತುಳಜಾ ಭವಾನಿ ಕಾಲೇಜ ಆಫ್ ನರ್ಸಿಂಗ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ತುಳಜಾ ಭವಾನಿ ನರ್ಸಿಂಗ ಕಾಲೇಜ್‌ನಲ್ಲಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ನಿರ್ದೇಶನಾಲಯದ ರಾಜ್ಯ ಸಾಂಕ್ರಾಮಿಕ ರೋಗಗಳ ತಜ್ಞವೈದ್ಯರಾದ ಡಾ|| ಶ್ರೀನಿವಾಸ ಎಸ್ ಆರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಜಂಟಿಯಾಗಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಅವರು ಮಾತನಾಡಿ, ಜನಸಂಖ್ಯೆ ದೇಶದ ಅಭಿವೃದ್ಧಿಗೆ ಒಂದು ಅತ್ಯಮೂಲ್ಯ ಸಂಪನ್ಮೂಲ. ಆದರೆ ಜನಸಂಖ್ಯೆ ಮಿತಿ ಮೀರಿದರೆ ದೇಶದ ಅಭಿವೃದ್ಧಿಗೆ ಮಾರಕ. ಇಂದು ಜಗತ್ತಿನ…

Read More

ಇಂಡಿಯಲ್ಲಿ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ & ಲೋಕಾರ್ಪಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ ವತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭ ಜುಲೈ ೧೪ರಂದು ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉಪಸ್ಥಿತರಿರಲಿದ್ದು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.

Read More

ಐದೂ ವರ್ಷ ನಾನೇ ಸಿಎಂ |ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲಿ ನಡೆಯುತ್ತಿಲ್ಲ | ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನವದೆಹಲಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಜೊತೆಯಲ್ಲಿ ನಾನು ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿದ್ದೇವೆ. ನಿಗಮ-ಮಂಡಳಿಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಚರ್ಚೆ ಮಾಡಿದ್ದೇವೆ, ಆದರೆ ನೇಮಕ ಪ್ರಕ್ರಿಯೆ ಪೂರ್ಣವಾಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜುಲೈ 16ರಂದು ಸುರ್ಜೆವಾಲಾ ಅವರು ಮತ್ತೊಮ್ಮೆ ಬೆಂಗಳೂರಿಗೆ ಬರುತ್ತಾರೆ, ಅಂದು ನಾವು ಎಲ್ಲಾ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕವನ್ನು ಅಂತಿಮಗೊಳಿಸುತ್ತೇವೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂಬುದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲೀ ಯಾವುದೂ ನಡೆಯುತ್ತಿಲ್ಲ. ದೆಹಲಿ ಭೇಟಿಯಲ್ಲಿಯೂ ಅಧಿಕಾರ ಹಂಚಿಕೆ ಕುರಿತು ಚರ್ಚೆಯಾಗಿಲ್ಲ.ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಗ್ಗೆ ಈಗಾಗಲೇ ನಮ್ಮ ಹೈಕಮಾಂಡ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಸ್ಪಷ್ಟನೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ (ಮಹಾಬಲೇಶ್ವರ): ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳೂ ಸೇರಿದಂತೆ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟ, ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಯ ರೈತ ಕುಟುಂಬಗಳಿಗೆ ಕೃಷ್ಣಾ ನದಿ ಜೀವನಾಡಿಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಮುಂಗಾರು ಹಂಗಾಮಿನ ಮೊದಲ ಹಬ್ಬವಾದ ಕಡ್ಲಿಗರ ಹುಣ್ಣಿಮೆಯಂದು ಮಹಾರಾಷ್ಟ್ರ ರಾಜ್ಯದ ಮಹಾಬಲೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬಸವನ ಬಾಗೇವಾಡಿ ಮತಕ್ಷೇತ್ರದ ಹಾಗೂ ಅವಳಿ ಜಿಲ್ಲೆಗಳ ರೈತರ ನೂರಾರು ರೈತರೊಂದಿಗೆ ಕೃಷ್ಣೆಯ ಉಗಮ ಸ್ಥಾನವಾದ ಪಂಚಗಂಗಾ ನದಿಯಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.ರೈತ ಕುಟುಂಬಗಳಿಗೆ ಕೃಷ್ಣಾ ನದಿ ಜೀವನಾಡಿಯಾಗಿದೆ. ಹೀಗಾಗಿ ಕಳೆದ ೧೯ ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನವಾದ ಈ ಮಹಾಬಲೇಶ್ವರದಲ್ಲಿ ಬಸವನ ಬಾಗೇವಾಡಿ ಕ್ಷೇತ್ರವೂ ಸೇರಿದಂತೆ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ರೈತಾಪಿ ಜನತೆಯೊಂದಿಗೆ ಗಂಗಾ ಪೂಜೆಯೊಂದಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಕೃಷ್ಣೆಯ ಜತೆಗೆ ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ನದಿಗಳಿಗೂ ಈ ಮಹಾಬಲೇಶ್ವರ ಉಗಮ ಸ್ಥಾನವಾಗಿದ್ದು ದಕ್ಷಿಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಧಾನ ಪರಿಷತ್‌ನ ಮಾಜಿ ಸಭಾಪತಿ ಹಾಗೂ ಹಿರಿಯ ಮುಖಂಡ ಎನ್.ತಿಪ್ಪಣ್ಣ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅಧಿಕಾರಿಗಳು ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು, ನಮ್ಮ ಮಹಿಳಾ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿದ್ದ ಎನ್.ತಿಪ್ಪಣ್ಣ ಅವರು ವಿವಿ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ಈ ಸಂದಭದಲ್ಲಿ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಜನಿಸಿದ ಎನ್.ತಿಪ್ಪಣ್ಣ ಅವರು ಕರ್ನಾಟಕದ ಕಾನೂನು, ರಾಜಕೀಯ ಮತ್ತು ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಅಗಲುವಿಕೆ ರಾಜ್ಯಕ್ಕೆ ಮತ್ತು ನಮ್ಮ ಮಹಿಳಾ ವಿವಿಗೆ ಅಪಾರ ನಷ್ಟ ಉಂಟು ಮಾಡಿದೆ ಎಂದರು.ಐಕ್ಯುಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ ಅವರು ಮಾತನಾಡಿ, ಎನ್.ತಿಪ್ಪಣ್ಣ ಅವರು, ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ಕು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ; ಜಿಲ್ಲೆಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಷ್ಕಾರ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಜುಲೈ 19 ರಂದು ಜರುಗಲಿರುವ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಸಚಿವ ಶಿವಾನಂದ ಪಾಟೀಲ, ಮುಖ್ಯ ಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಇವರನ್ನು ಆವ್ಹಾನಿಸಲು ಜಿಲ್ಲೆಯ ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರರ್ಣಿ, ರಾಜ್ಯ ಕಾರ್ಯಕಾರಿ ನಾಮನಿರ್ದೇಶನ ಸದಸ್ಯ ಕೆ.ಕೆ.ಕುಲಕರ್ಣಿ ಹಾಗೂ ಜಿಲ್ಲಾ ಖಜಾಂಚಿ ರಾಹುಲ್ ಆಪ್ಟೆ ಅವರು ಬೆಂಗಳೂರಿಗೆ ತೆರಳಿ ಅತಿಥಿಗಳನ್ನು ಅಮಂತ್ರಿಸಿದರು.ಈ ಎಲ್ಲರೂ ಕಾರ್ಯಕ್ರಮಕ್ಕೆ ಭಾಗವಹಿಸುವ ಭರವಸೆ ನೀಡಿದ್ಧಾರೆಂದು ಮೋಹನ ಕುಲಕರ್ಣಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪ್ರಸ್ತುತ ಕೃಷಿ ಬಿಕ್ಕುಟ್ಟುಗಳ ಜೊತೆ ಭವಿಷ್ಯದಲ್ಲಿ ತುಂಡು ಕೃಷಿ ತಂದೊಡ್ಡಬಹುದಾದ ಸಮಸ್ಯೆಗಳನ್ನು ಮೆಟ್ಟಿ ನಿಂತು ರೈತರ ಬದುಕಲ್ಲಿ ಆಶಾದಾಯಕ ಭರವಸೆ ಮೂಡಿಸಲು ಸಮುದಾಯ ಕೃಷಿಯಿಂದ ಮಾತ್ರ ಸಾಧ್ಯವೆಂಬುದನ್ನು ನಿರೂಪಿಸಲು ಹುಟ್ಟಿ ಬಂದ ರೈತ ಉತ್ಪಾದಕ ಕಂಪನಿಯ ಕಲ್ಪನೆಗೆ ದಾಸೋಹಿ ಹೊಸ ಭಾಷ್ಯೆ ಬರೆದಿದೆ ಎಂದು ಹಿರೇಮುರಾಳದ ಶ್ರೀ ಸಂಗಮೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ.ವಿ ಭೋವಿ ಹೇಳಿದರು.ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿರುವ ದಾಸೋಹಿ ರೈತ ಉತ್ಪಾದಕ ಕಂಪನಿಯ ದಾಸ್ತಾನು ಮಳಿಗೆ ಆವರಣದಲ್ಲಿ ಏರ್ಪಡಿಸಲಾಗಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಪ್ರಥಮ ಸಂಸ್ಥಾಪನಾ ದಿನಾಚರಣೆ ಹಾಗೂ ದಾಸ್ತಾನು ಮಳಿಗೆಯ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸದಸ್ಯ ರೈತರೇ ಮಾಲೀಕರೆಂದು ಪ್ರತಿಪಾದಿಸಿ ಒಂದೇ ವರ್ಷದಲ್ಲಿ ದಾಸೋಹಿ ಎಂಬ ಸೂರಿನಡಿ ರೈತರ ಅಗತ್ಯತೆಯನ್ನು ಪೂರೈಸಲು ಹಲವು ಸೇವೆಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನೆಡೆಸುತ್ತಿರುವುದು ಶ್ಲಾಘನೀಯವೆಂದರು.ಮುಖ್ಯ ಅತಿಥಿಯಾಗಿದ್ದ ಎ.ಪಿ.ಎಂ.ಸಿ ಜಾಗೃತ ಕೋಶದ ನಿವೃತ್ತ ಅಧಿಕಾರಿ ಜಿ.ಎಂ ಯಡವಣ್ಣವರ ಮಾತನಾಡಿ, ರೈತರನ್ನು…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಿಂದ ಮುಖ್ಯ ರಸ್ತೆಯಲ್ಲಿರುವ ಹಳ್ಳದ ಸೇತುವೆಯಲ್ಲಿ ಅಪಾಯಕರ ಪ್ರಮಾಣದಲ್ಲಿರುವ ಬ್ರಹತ್ ಗುಂಡಿಗಳು ಬಾಯ್ತೆರೆದು ಬಲಿಗಾಗಿ ಕಾಯುತಿದ್ದು ಈ ಭಾಗದ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.ಗ್ರಾಮದಿಂದ ಜಗದಾಳ ಮಾರ್ಗವಾಗಿ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ಗ್ರಾಮದ ಸಮೀಪದಲ್ಲಿಯೇ ಹಳ್ಳಕ್ಕೆ ನಿರ್ಮಿಸಲಾಗಿರುವ ಬ್ರಹತ್ ಸೇತುವೆಯ ಎರಡೂ ಬದಿಗಳಲ್ಲಿ ಒಡೆದು ದೊಡ್ಡ ಗುಂಡಿ ನಿರ್ಮಾಣವಾಗಿರುವುದರಿಂದ ಈ ಮಾರ್ಗದ ಸಂಚಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಟ್ರ್ಯಾಕ್ಟರ್, ಟಿಪ್ಪರ್, ಶಾಲಾ ವಾಹನಗಳು ಸೇರಿದಂತೆ ನೂರಾರು ಸರಕಾರಿ ಖಾಸಗಿ ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತಿರುವುದರಿಂದ ಚಾಲಕರು ಆತಂಕದಿಂದಲೇ ಈ ಸೇತುವೆ ದಾಟಬೇಕಾಗಿದೆ. ಸೇತುವೆಯ ತಳಭಾಗ ದಿನದಿನಕ್ಕೂ ಕುಸಿಯುತ್ತಿರುವುದರಿಂದ ಯಾವುದೇ ಸಂಧರ್ಬದಲ್ಲಿ ಅನಾಹುತ ಸಂಭವಿಸುವ ಆತಂಕವಿದೆ, ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಈಕುರಿತು ಹಲವಾರು ಬಾರಿ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸೇತುವೆ ಇಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ದುರಸ್ತಿಗೆ ಸ್ಪಂದಿಸದ ಅಧಿಕಾರಿಗಳು ಅನಾಹುತ ಸಂಭವಿಸುವುದಕ್ಕಾಗಿ ಕಾಯುತಿದ್ದಾರೆಯೇ ಎಂದು ಈ ಭಾಗದ ರೈತರು ಗ್ರಾ.ಪಂ. ಸದಸ್ಯರು…

Read More

ಲೇಖನ- ಎಸ್.ಶ್ರೀಧರಮೂರ್ತಿ(ಶಿವಜಯಸುತ)ಮಂಡ್ಯ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಮೈತ್ರಿ ಮತ್ತು ಧಾತ್ರಿ ಬಾಲ್ಯದ ಗೆಳತಿಯರು. ಎರಡು ಜೀವ ಒಂದೇ ಪ್ರಾಣದಂತಿತ್ತು ಅವರ‌ ಗೆಳೆತನ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇಬ್ಬರೂ ಓದಿನಲ್ಲಿ ತುಂಬಾ ಚುರುಕು. ಏಳನೇ ತರಗತಿಯಲ್ಲಿ ಮೈತ್ರಿ ಶಾಲೆಗೆ ಪ್ರಥಮಳಾದರೆ ಧಾತ್ರಿ ದ್ವಿತೀಯ ಸ್ಥಾನ ಪಡೆದಿದ್ದಳು. ಶಾಲೆಯ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮುಂದಿದ್ದು ಶಿಕ್ಷಕ- ಶಿಕ್ಷಕಿಯರಿಗೆ ಪ್ರೀತಿ ಪಾತ್ರರಾಗಿದ್ದರು ಈ ಕನಸು ಕಂಗಳ ಪೋರಿಯರು. ಅವರಿಬ್ಬರ ವಿಚಾರ,ಹವ್ಯಾಸ, ಅಭ್ಯಾಸ, ಸ್ವಭಾವಗಳೆಲ್ಲವೂ ಅಪರಿಚಿತರಿಗೆ ಅವರು ಅವಳಿ ಸಹೋದರಿಯರಿರಬೇಕೆಂಬ ಭ್ರಮೆ ಹುಟ್ಟಿಸುತ್ತಿತ್ತು. ಕೊನೆಯವರೆಗೂ ಜೊತೆಯಾಗಿ ಓದಿ ವೈದ್ಯೆಯರಾಗುವ ಹಂಬಲ ಇವರದು. ಮೈತ್ರಿ ಬಡ ಕುಟುಂಬದ ಕುಡಿ. ಆಕೆಯ ಅಪ್ಪ ಕಛೇರಿಯೊಂದರ ದಿನಗೂಲಿ ಗುಮಾಸ್ತರಾಗಿದ್ದರು. ಅಮ್ಮ ಅನಕ್ಷರಸ್ಥ ಗೃಹಿಣಿ. ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಪ್ರೀತಿಯ ತಮ್ಮನೊಂದಿಗೆ ಇದ್ದುದರಲ್ಲಿಯೇ ತೃಪ್ತಿ ಕಾಣುತ್ತಿದ್ದಳು ಮೈತ್ರಿ. ಆದರೆ ಧಾತ್ರಿ ಐಶ್ವರ್ಯ ಲಾಲಸೆಯ ಸಿರಿವಂತ ಮನೆತನದವಳು. ಶ್ರೀಮಂತ ಉದ್ಯಮಿ ಹಾಗೂ ಜಮೀನ್ದಾರರ ಮಗಳವಳು. ಅವಳಿಗೂ…

Read More