Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ

ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ

ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಭ್ರಮದ ನಾಗೂರಿನ ಯಮನೂರೇಶ್ವರ ಉರುಸು ಸಂಪನ್ನ
(ರಾಜ್ಯ ) ಜಿಲ್ಲೆ

ಸಂಭ್ರಮದ ನಾಗೂರಿನ ಯಮನೂರೇಶ್ವರ ಉರುಸು ಸಂಪನ್ನ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯು (ಉರುಸ್) ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು.ಯೋಗಿ ಚಕ್ರವರ್ತಿ ಚಾಂಗದೇವರ ಪುಣ್ಯದಿನ, ಜಾತ್ರಾಮಹೋತ್ಸವದಂಗವಾಗಿ ಬೆಳಗ್ಗೆ ಚಾಂಗದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಬೆಳಗ್ಗೆಯಿಂದಲೇ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಕೆಲ ಜನರು ಕಾಲ್ನಡಿಗೆಯಿಂದ ನಾಗೂರ ಗ್ರಾಮಕ್ಕೆ ಆಗಮಿಸಿ ಯಮನೂರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಧನ್ಯತಾ ಭಾವ ಅನುಭವಿಸಿದರು.
ಭಕ್ತರು ದೇವರಿಗೆ ಸಕ್ಕರೆ, ಲೋಬಾನ ಕೊಡುವ ಮೂಲಕ ತಮ್ಮ ಹರಕೆ ತೀರಿಸಿದರು. ಕೆಲ ಭಕ್ತರು ದೀಡ್ ನಮಸ್ಕಾರ ಹಾಕಿದರು. ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯ ಜನಸ್ತೋಮ ಜಾತ್ರಾಮಹೋತ್ಸವದಲ್ಲಿ ಕಂಡುಬಂದಿತ್ತು. ಯಮನೂರೇಶ್ವರ ಭಜನಾ ಮಂಡಳಿಯಿಂದ ಭಜನಾ ಪದಗಳು ಜರುಗಿದವು. ಜಾತ್ರೆಗೆ ಬಂದಿರುವ ವಿವಿಧ ಮನರಂಜನಾ ಆಟಗಳಲ್ಲಿ ಜನರು ಭಾಗವಹಿಸಿ ಸಂಭ್ರಮಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಖರೀದಿಸಿದರು. ಬೆಂಡು, ಬತ್ತಾಸ್ ಸೇರಿದಂತೆ ವಿವಿಧ ಸಾಮಾನುಗಳನ್ನು ಜನತೆ ಖರೀದಿಸಿದರು.
ಜಾತ್ರಾಮಹೋತ್ಸವದಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಟಗರಿನ ಕಾಳಗವನ್ನು ವೀಕ್ಷಿಸಿಲು ವಿವಿಧೆಡೆಗಳಿಂದ ಅಪಾರ ಜನರು ಬಂದಿದ್ದರು.
ಜಾತ್ರಾಮಹೋತ್ಸವದಲ್ಲಿ ಚಂದ್ರಶೇಖರ ಮುಳವಾಡ, ಸಿ.ಐ.ಮರೋಳ, ಮಹೇಶ ಮುಳವಾಡ, ಬಂದೇನವಾಜ ವಾಲೀಕಾರ, ಮಲ್ಲಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ಬಾಬು ದರ್ಗಾ, ಕಲಂದರ ದರ್ಗಾ, ಹೈದರಸಾಬ ಚಪ್ಪರಬಂದಿ, ಅಲ್ಲಾಭಕ್ಷ ದರ್ಗಾ, ಶರಣಪ್ಪ ನಿಡಗುಂದಿ, ಮಲ್ಲನಗೌಡ ಪಾಟೀಲ, ಶ್ರೀಶೈಲ ಮಸೂತಿ, ಶರಣು ಮರೋಳ, ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಲಮಾಣಿ, ವಿನೋದ ಲಮಾಣಿ, ಭೋಜು ನಾಯಕ, ಅಣ್ಣಾರಾಯಗೌಡ ಪಾಟೀಲ, ಯಮನಪ್ಪ ಪೂಜಾರಿ, ರಾವುತಪ್ಪ ತೆಲಗಿ, ಸುಬ್ಬು ಲಮಾಣಿ, ಮಲ್ಲಪ್ಪ ಆಲಕೊಪ್ಪರ, ಬಾಬು ಆರ್‍ಯರ, ನಬಿಸಾಬ ಕೊರಬು, ಎಂ.ಬಿ.ಕೊರಬು, ಅಮೀರ ಚಪ್ಪರಬಂದ, ಅಮರಯ್ಯ ಹಿರೇಮಠ, ರೇವಣಸಿದ್ದ ನಂದಿಹಾಳ, ವಿರೇಶ ಮರೋಳ, ರಾವುತಪ್ಪ ತೆಲಗಿ, ಶಿವಪ್ಪ ಹಚ್ಯಾಳ, ಎಂ.ಬಿ.ರಗಟಿ, ಶರಣಪ್ಪ ನಾಲತವಾಡ, ಸಂಗಪ್ಪ ಮಾದರ, ಈರಪ್ಪ ಭದ್ರಗೊಂಡ, ಬಾಬು ನಂದಿಹಾಳ, ಶಿವಬಸಪ್ಪ ಭದ್ರಗೊಂಡ, ಸುಬ್ಬು ಲಮಾಣಿ ಸೇರಿದಂತೆ ಅನೇಕರು ಇದ್ದರು.
ಗಂಧಾಭಿಷೇಕ, ದೀಪೋತ್ಸವಃ ದೇವಸ್ಥಾನ ಆವರಣದಲ್ಲಿ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಸಂಜೆ ೧೧೧೧ ದೀಪೋತ್ಸವ ಜರುಗಿದ ನಂತರ ವಾದ್ಯವೈಭವದೊಂದಿಗೆ ಯಮನೂರೇಶ್ವರ ದೇವರಿಗೆ ಗಂಧಾಭಿಷೇಕ (ಸಂದಲ್) ನೆರವೇರಿತು. ಇದಕ್ಕೂ ಮುನ್ನ ಸಂಜೆ ೫ ಗಂಟೆಗೆ ಚಾಂಗದೇವರ ಭಾವಚಿತ್ರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ರಾತ್ರಿ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಜರುಗಿದವು. ಕಾರ್ಯಕ್ರಮದಲ್ಲಿ ಮಣ್ಣೂರ ಗ್ರಾಪಂ ಅಧ್ಯಕ್ಷ ಬಾಲು ಲಮಾಣಿ, ಸಿ.ಎಂ.ಮರೋಳ, ಸಿ.ಐ.ಮುಳವಾಡ, ಧರ್ಮಣ್ಣ ಪೂಜಾರಿ, ಮಲ್ಲಪ್ಪ ಪೂಜಾರಿ, ಶ್ರೀಶೈಲ ಮಸೂತಿ, ಹೈದರ ಚಪ್ಪರಬಂದ, ವಿನೋದ ನಾಯಕ, ಬೋಜು ನಾಯಕ, ಶರಣು ಮರೋಳ, ಮಹೇಶ ಮುಳವಾಡ, ಬಂದೇನವಾಜ ವಾಲೀಕಾರ, ದಸ್ತಗೀರ ಮುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ

ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ

ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ

ಡಾ.ಸಮೀಕ್ಷಾ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಪಶು ವೈದ್ಯಕೀಯ ಸಂಘ ಆಗ್ರಹ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಡಾ.ಸಮೀಕ್ಷಾ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಪಶು ವೈದ್ಯಕೀಯ ಸಂಘ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ರೈತ ಮುಖಂಡರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಹತ್ತಳ್ಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಮಾ.೨೪ ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ :ಯಂಪೂರೆ
    In (ರಾಜ್ಯ ) ಜಿಲ್ಲೆ
  • ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳದ ವಾಲ್ ಪೋಸ್ಟರ್‌ ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಹೆಣ್ಣು ಹುಟ್ಟಿದರೆ ಹೊನ್ನು ಬಂದತೆ :ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
  • ಶರಣರ ವಚನಗಳನ್ನು ರಕ್ಷಿಸಿದ ವಚನನಿಧಿರಕ್ಷಕ ಮಡಿವಾಳ ಮಾಚಿದೇವರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.