Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ

ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ

ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಂಗಪಂಚಮಿ ರಂಗಿನಾಟಕ್ಕೆ ತೆರೆ: ಮರುಕಳಿಸಿದ ಬಣ್ಣದ ವೈಭವ
(ರಾಜ್ಯ ) ಜಿಲ್ಲೆ

ರಂಗಪಂಚಮಿ ರಂಗಿನಾಟಕ್ಕೆ ತೆರೆ: ಮರುಕಳಿಸಿದ ಬಣ್ಣದ ವೈಭವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರಂಗಪಂಚಮಿ ರಂಗಿನಾಟಕ್ಕೆ ತೆರೆ: ಮರುಕಳಿಸಿದ ಬಣ್ಣದ ವೈಭವ

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಪಟ್ಟಣದಲ್ಲಿ ಬಹುವರ್ಷದಿಂದ ಕಳೆಗುಂದಿದ್ದ ಹೋಳಿ ಹಬ್ಬದ ರಂಗಪಂಚಮಿ ಹಬ್ಬದ ಆಚರಣೆ ಬಸವೇಶ್ವರ ಸೇವಾ ಸಮಿತಿಯ ನೇತೃತ್ವದಲ್ಲಿ ಅದ್ದೂರಿಯಾಗಿ ಜರಗುವ ಮೂಲಕ ಬಣ್ಣದಾಟಕ್ಕೆ ತೆರೆ ಬಿದ್ದಿತ್ತು. ರಂಗಪಂಚಮಿಯಲ್ಲಿ ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ರಂಗಪಂಚಮಿಯ ಬಣ್ಣದಾಟದ ರಂಗ ಹೆಚ್ಚಿಸಿದರು. ರಂಗಪಂಚಮಿಯ ಶಾಂತಿಯುತವಾಗಿ ಜರುಗಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಂಗಪಂಚಮಿ ಆಚರಣೆಯಂಗವಾಗಿ ಹತ್ತು ಗಂಟೆಗೆ ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸಾನಿಧ್ಯದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಸವರಾಜ ಹಾರಿವಾಳ ಸೇರಿದಂತೆ ಅನೇಕ ಮುಖಂಡರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಗ್ಯಾಸ್‌ದಿಂದ ಬಣ್ಣವನ್ನು ಸಿಂಪಡಿಸುವ ಮೂಲಕ ಅದ್ದೂರಿ ರಂಗಪಂಚಮಿಗೆ ಚಾಲನೆ ನೀಡಿದರು.
ನಂತರ ರಂಗಪಂಚಮಿಯ ಬಣ್ಣದೋಕುಳಿಯ ಮೆರವಣಿಗೆ ಆರಂಭಗೊಂಡಿತ್ತು. ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ದಲ್ಲಿಟ್ಟಿದ್ದ ಬ್ಯಾರಲ್‌ಗಳಲ್ಲಿದ್ದ ಬಣ್ಣವನ್ನು ಮೆರವಣಿಗೆಯುದ್ದಕ್ಕೂ ನೆರೆದ ಜನರ ಮೇಲೆ ಬಣ್ಣ ಎರಚುವದು ಕಂಡುಬಂದಿತ್ತು. ಬಹುದಿನಗಳ ನಂತರ ಆರಂಭಗೊಂಡ ರಂಗಪಂಚಮಿಯ ಹಬ್ಬದಲ್ಲಿ ಪಟ್ಟಣದ ಬಹುತೇಕ ಎಲ್ಲ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರಿಂದ ರಂಗಪಂಚಮಿಗೆ ವಿಶೇಷ ಕಳೆ ಬಂದಿತ್ತು. ರಂಗಪಂಚಮಿಯಲ್ಲಿ ಭಾಗವಹಿಸಿದ್ದ ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮ ಪಟ್ಟರು. ಹಲಗೆ ನಾದಕ್ಕೆ, ಡಿಜೆ ಸೌಂಡಿಗೆ ಮೆರವಣಿಗೆಯುದ್ದಕ್ಕೂ ಜನರು ಕುಣಿದು ಕುಪ್ಪಳಿಸಿದರು. ಜನರು ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರು. ಮೆರವಣಿಗೆಯು ಸಾಗುವಾಗ ಬಸವರಾಜ ಹಾರಿವಾಳ, ಚನ್ನಬಸು ಜಾಡರ, ಶಿವಪ್ಪ ಜಾಡದ, ಮಲಕಾಜಿ ಅವಟಿ, ಸಂಗಪ್ಪ ಚಿನಿವಾಲ, ಲಕ್ಷ್ಮಣ ಬಸ್ತಾಳ ಸೇರಿದಂತೆ ಇತರರು ಹೋಳಿ ಹಾಡುಗಳನ್ನು ಹಾಡುವ ಮೂಲಕ ಮೆರವಣಿಗೆಗೆ ಮೆರಗು ತಂದರು.
ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ ರಸ್ತೆ, ಪತ್ತಾರ ಗಲ್ಲಿ, ಹಾರಿವಾಳ ಗಲ್ಲಿ ಮೂಲಕ ಪುನಃ ಅಗಸಿಗೆ ಆಗಮಿಸಿದ ಮೆರವಣಿಗೆಯು ಮಧ್ಯಾನ್ಹ ಸುಮಾರು ೨ ಗಂಟೆಗೆ ಬಸವೇಶ್ವರ ವೃತ್ತಕ್ಕೆ ಬಂದು ಮುಕ್ತಾಯವಾಯಿತು. ಮುಕ್ತಾಯದ ಸಂದರ್ಭದಲ್ಲಿ ಡಿಜೆ ಹಾಡುಗಳಿಗೆ ಬಹುತೇಕ ಎಲ್ಲ ಮುಖಂಡರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಉಭಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ. ಶಿವಪ್ರಕಾಶ ಶಿವಾಚಾರ್ಯರು ಜನರೊಂದಿಗೆ ಹೆಜ್ಜೆ ಹಾಕಿ ರಂಗಪಂಚಮಿಗೆ ಮೆರಗು ತಂದಿದ್ದು ವಿಶೇಷ. ಮೆರವಣಿಗೆ ಮಾರ್ಗದ ಮಧ್ಯದಲ್ಲಿ ಮಹಾರಾಜರ ಮಠದ ಹತ್ತಿರ, ಪವಾಡ ಬಸವೇಶ್ವರ ದೇವಸ್ಥಾನದ ಹತ್ತಿರ ತಂಪಾದ ಜ್ಯೂಸ್ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದ ಬಸವ ಜನ್ಮ ಸ್ಮಾರಕದ ಮುಂಭಾಗ ರಾಷ್ಟ್ರೀಯ ಬಸವಸೈನ್ಯವು ವ್ಯವಸ್ಥೆ ಮಾಡಿದ್ದ ರೇನ್ ಡ್ಯಾನ್ಸ್‌ನಲ್ಲಿ ಯುವಜನಾಂಗವಂತೂ ಮಸ್ತ್ ಹಾಡುಗಳಿಗೆ ಬಣ್ಣದಾಟದೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು. ರೇನ್ ಡ್ಯಾನ್ಸ್ ಮಧ್ಯಾನ್ಹ ೩ ಗಂಟೆಯವರೆಗೂ ಜರುಗಿತು.
ರಂಗಪಂಚಮಿಯ ಬಣ್ಣದಾಟದಲ್ಲಿ ಮುಖಂಡರಾದ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ,ಲೋಕನಾಥ ಅಗರವಾಲ,ಬಸವರಾಜ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಅನಿಲ ಅಗರವಾಲ, ಎಂ.ಜಿ.ಆದಿಗೊಂಡ, ಬಿ.ಕೆ.ಕಲ್ಲೂರ, ಶೇಖರ ಗೊಳಸಂಗಿ, ರವಿ ಪಟ್ಟಣಶೆಟ್ಟಿ, ಅಶೋಕ ಹಾರಿವಾಳ, ಶಂಕರಗೌಡ ಬಿರಾದಾರ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಾನಂದ ಮಂಗಾನವರ, ಡಾ.ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಸಿದ್ದು ಉಕ್ಕಲಿ, ಸಿ.ಎಸ್.ಪಾಟೀಲ, ಸುರೇಶಗೌಡ ಪಾಟೀಲ, ಸದಾನಂದ ಯಳಮೇಲಿ, ಶಿವಲಿಂಗಯ್ಯ ತೆಗ್ಗಿನಮಠ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ವಿವೇಕಾನಂದ ಕಲ್ಯಾಣಶೆಟ್ಟಿ, ಆರ್.ಜಿ.ಅಳ್ಳಗಿ, ಮುತ್ತು ಕಿಣಗಿ, ಜಟ್ಟಿಂಗರಾಯ ಮಾಲಗಾರ, ರಮೇಶ ಯಳಮೇಲಿ, ಪ್ರವೀಣ ಪೂಜಾರಿ, ಅಮರ ಗಾಯಕವಾಡ, ಶ್ರೀಕಾಂತ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಅವಟಿ, ಬಸವಂತ ಅಡಗಿಮನಿ, ಸಿದ್ದಣ್ಣ ಕಲ್ಲೂರ, ಮಹಾಂತೇಶ ಯಳಮೇಲಿ, ಅಶೋಕ ಕಲ್ಲೂರ, ಬಸವರಾಜ ಚೌರಿ, ಉದಯ ಮಾಂಗಲೇಕರ, ಶಂಕರ ಕ್ಷೀರಸಾಗರ, ಮುದಕಣ್ಣ ಹೊರ್ತಿ, ಎಚ್.ಬಿ.ಬಾರಿಕಾಯಿ, ಶ್ರೀಶೈಲ ಪತ್ತಾರ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ

ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ

ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ

ಡಾ.ಸಮೀಕ್ಷಾ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಪಶು ವೈದ್ಯಕೀಯ ಸಂಘ ಆಗ್ರಹ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇವರ ದಾಸಿಮಯ್ಯ ನವರ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ನಿಸರ್ಗ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು :ಗವಿಸಿದ್ದೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಡಾ.ಸಮೀಕ್ಷಾ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಪಶು ವೈದ್ಯಕೀಯ ಸಂಘ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ರೈತ ಮುಖಂಡರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಹತ್ತಳ್ಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಮಾ.೨೪ ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ :ಯಂಪೂರೆ
    In (ರಾಜ್ಯ ) ಜಿಲ್ಲೆ
  • ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳದ ವಾಲ್ ಪೋಸ್ಟರ್‌ ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಹೆಣ್ಣು ಹುಟ್ಟಿದರೆ ಹೊನ್ನು ಬಂದತೆ :ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
  • ಶರಣರ ವಚನಗಳನ್ನು ರಕ್ಷಿಸಿದ ವಚನನಿಧಿರಕ್ಷಕ ಮಡಿವಾಳ ಮಾಚಿದೇವರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.