Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರುಮುಖ್ಯಮಂತ್ರಿಗಳು ಸನ್ಮಾನ್ಯರೇ,ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ತಮ್ಮ ಸರಕಾರ ಘೋಷಿಸಿ ಈಗ ಒಂದು ವರ್ಷವಾಗುತ್ತಾ ಬಂತು. ಈ ಸಂದರ್ಭದಲ್ಲಿ ಸಮಾಜವಾದಿ ಮತ್ತು ಬಸವಾಯತರಾದ ತಮಗೆ ಅನಂತ ಭಕ್ತಿ ಪೂರ್ವಕ ಶರಣಾರ್ಥಿಗಳು.ಹನ್ನೆರಡನೆಯ ಶತಮಾನದ ಸಮಗ್ರ ಪರಿಪೂರ್ಣ ಕ್ರಾಂತಿಯನ್ನು ಇಂದು ಇಡೀ ಜಗತ್ತೇ ಮಾದರಿ ಎಂದು ಕೊಂಡಾಡುತ್ತಿದೆ. ಆ ನಿಟ್ಟಿನಲ್ಲಿ ಬಸವಣ್ಣನವರ ವಚನ ಸಾಹಿತ್ಯ ಪ್ರಸಾರ ಶರಣರ ಸ್ಮಾರಕಗಳ ಸಂರಕ್ಷಣೆ, ಬೇರೆ ಬೇರೆ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ, ವಚನಸಾಹಿತ್ಯ ಪರಿಷ್ಕರಣೆ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಸರಕಾರವು ಗಮನಕೊಟ್ಟು ವೈಚಾರಿಕ ಪುರುಷ ಸಮಾಜವಾದಿ ಬಸವಣ್ಣನವರ ತತ್ವಗಳನ್ನು ಇಂದು ಜಗತ್ತಿನ ಎಲ್ಲ ರಾಷ್ಟಗಳಿಗೆ ತಲುಪಿಸಬೇಕಾದದ್ದು ತಮ್ಮ ಆದ್ಯ ಕರ್ತವ್ಯ ಮತ್ತು ಹೆಮ್ಮೆಯ ವಿಷಯವಾಗಿದೆ.1 ) ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೂ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಿಲ್ಲ. ಕಾರಣ ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡಲು ಕಳಕಳಿಯ…

Read More

ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಉಮರಜ ಗ್ರಾಮ ಪಂಚಾಯತಿಯಲ್ಲಿ ಸುಮಾರು ೬೦ ಲಕ್ಷ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಚಡಚಣ ತಾಲೂಕು ಸಮೀತಿಯ ಉಮರಜ ಗ್ರಾಮದ ಸದಸ್ಯರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಉಮರಜ ಪಂಚಾಯತಿ ಅಧಿಕಾರಿ ಪಿಡಿಓ ಎಲ್ ಎಫ್ ನದಾಫ ಮತ್ತು ಗ್ರಾ.ಪಂ.ಅಧ್ಯಕ್ಷ ಕಂವುಸನ ಇಬ್ರಾಹಿಮ್ ಸಾವಳೆ ಇವರಿಬ್ಬರೂ ಕೂಡಿ ೨೦೨೪-೨೫ ನೇ ಸಾಲೀನ ೧೫ ನೇ ಹಣಕಾಸು ಯೋಜನೆಯ ವಿವಿಧ ಕಾಮಗಾರಿಗಳ ಸುಮಾರು ೬೦ ಲಕ್ಷ ರೂಪಾಯಿ ಹಣವನ್ನು ಅಭಿವೃದ್ಧಿ ಕೆಲಸ ಮಾಡಿಸದೆ ಹಣ ಗುಳುಂ ಮಾಡಿದ್ದಾರೆ ಎಂದು ಉಮರಜ ಗ್ರಾಮದ ಗ್ರಾಮಸ್ಥರು ಮತ್ತು ಪ್ರಗತಿಪರ ಸಂಘಟನೆಯ ಜನರು ಆರೋಪಿಸಿ ಅಹೋರಾತ್ರಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹವನ್ನು ಇವರ ವಿರುದ್ಧ ಉಮರಜ ಪಂಚಾಯತಿ ಮುಂದೆ ದಿ.೧೪ರ ಸಾಯಂಕಾಲ ದಿಂದ ಆರಂಭಿಸಿದ್ದಾರೆ.ಅಹೋರಾತ್ರಿ ಪ್ರಾರಂಭಗೊಂಡ ಧರಣಿ ಸತ್ಯಾಗ್ರಹದ ಬಗ್ಗೆ ತಿಳಿಯುತ್ತಿದ್ದಂತೆ ಪಿಡಿಓ ಎಲ್…

Read More

ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಪ್ರೌಢಶಾಲಾ ಮುಖೋಪಾಧ್ಯಾಯರ ಸಭೆಯಲ್ಲಿ ಬಿಇಓ ಸುಜಾತಾ ಮಾಹಿತಿ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಜಾತ ಹುನೂರ ನೇತೃತ್ವದಲ್ಲಿ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳ ಸಭೆಯನ್ನು ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.ಸಭೆಯಲ್ಲಿ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ತಾಲೂಕಿನ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎನ್ ಜೆ ಸಿನಖೇಡ ಶಿಕ್ಷಣ ಸಂಯೋಜಕರು ೨೦೨೫-೨೬ನೇ ಸಾಲಿನ ಫಲಿತಾಂಶ ಸುಧಾರಣೆಗೆ ಘಟಕವಾರು ಮೌಲ್ಯಂಕನ (LBA) ನೂತನ ವ್ಯವಸ್ಥೆ ಬಗ್ಗೆ ಮತ್ತು ಫಲಿತಾಂಶ ಸುಧಾರಣೆಗೆ ಇಲಾಖೆಯ ೨೯ ಅಂಶಗಳ ಕುರಿತು ಮಾಹಿತಿ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಹುನೂರ ಮಾತನಾಡಿ, ೨೦೨೫-೨೬ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಇಲಾಖೆಯ ನೂತನ ಯೋಜನೆಗಳಾದ ಪ್ರತಿ ಘಟಕವಾರು ಪರೀಕ್ಷೆಗಳನ್ನು ನಡೆಸಿ (LBA) ಅಂಕಗಳನ್ನು SATS ನಲ್ಲಿ ಕೇಂದ್ರಿಕರಿಸುವುದು, ಇಲಾಖೆ ಅಧಿಕಾರಿಗಳು ಪ್ರತಿ ಶುಕ್ರವಾರ ಶಾಲೆಗಳಿಗೆ ಭೇಟಿ ಕೊಟ್ಟು ಕಡಿಮೆ ಫಲಿತಾಂಶ ಬಂದ ಶಾಲೆಗಳ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಹಿರಿಯ ಪತ್ರಕರ್ತ ರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪತ್ರಿಕಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಜುಲೈ ೧೯ ರಂದು ಶನಿವಾರ ಬೆಳಿಗ್ಗೆ ೧೦ ಕೈ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ ಹೇಳಿದರು,ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಸಂಘದ ಎಲ್ಲ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು,ಜಿಲ್ಲಾಪಂಚಾಯತ್ ರಸ್ತೆಯ ಪತ್ರಿಕಾ ಭವನದಲ್ಲಿ ತುರ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದವರು ೨೦೨೪/೨೫ ನೇ ಸಾಲಿನಲ್ಲಿ ಎಸ್‍.ಎಲ್‍.ಸಿ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಪತ್ರಕರ್ತರರ ಮಕ್ಕಳು ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿ /ವಿಧ್ಯಾರ್ಥಿನಿ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ದಿನಾಚರಣೆ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ 2025-26ನೇ ಸಾಲಿನ ಜಿಲ್ಲಾ ಪ್ರಶಸ್ತಿಗೆ ದೇವರಹಿಪ್ಪರಗಿ ತಾಲೂಕು ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಉತ್ನಾಳ ತಿಳಿಸಿದ್ದಾರೆ. ಜು.19ರಂದು ವಿಜಯಪೂರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಸ್ತುವಾರಿ ಸಚಿವರು, ಸಚಿವರು, ಸಂಸದರು, ಶಾಸಕರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು, ಸಂಘದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಿರಿಯ ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶದಲ್ಲಿ ಶಾಸಕ ಜಗದೀಶ ಗುಡಗುಂಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಾವು ಬೆಳೆಯುವುದಲ್ಲದೆ, ನಮ್ಮ ಸುತ್ತ ಮುತ್ತಲಿನವರನ್ನು ಬೆಳೆಸಬೇಕು, ಮನೆಯೇ ಮೊದಲ ಪಾಠಶಾಲೆ ಆಗಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ನಗರದ ಬಸವ ಭವನದಲ್ಲಿ ಜಮಖಂಡಿ ತಾಲೂಕಾ ಮಾಳಿ ಸಮಾಜ ನೌಕರರ ಸಂಘ ಹಾಗೂ ಜಮಖಂಡಿ ಮಾಳಿ ಸಮಾಜದಿಂದ ಏರ್ಪಡಿಸಿದಕರ್ನಾಟಕ ರಾಜ್ಯ ಮಟ್ಟದ ಮಾಳಿ/ ಮಾಲಗಾರ ಸಮಾಜ ನೌಕರರ / ವೃತ್ತಿ ಪರರ ಸಮಾವೇಶ ಹಾಗೂ 2024/25 ನೇ ಸಾಲಿನ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ರಾಜ್ಯ / ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಮಾಳಿ ಸಮಾಜ ಸಣ್ಣ ಸಮಾಜ ಇವರು ಕಾಯಿಪಲ್ಲೆ, ಹೂ ವ್ಯಾಪಾರ ಮಾಡುತ್ತಾ, ಎಲ್ಲ ಸಮಾಜದ ಬಾಂಧವರೊಂದಿಗೆ ಅನೋನ್ಯತೆಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ತಂದೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸೈಬರ್ ಕ್ರೈಂ, ಮಾದಕ ವ್ಯಸನ ಮತ್ತು ರಸ್ತೆ ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಜನರು ತಮಗೆ ಅರಿವಿಲ್ಲದೆಯೇ ಎಪಿಕೆ ಫೈಲ್ ಬಳಕೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದು ಡಿವೈಎಸ್‌ಪಿ ಜಮೀರ್ ರೋಷನ್ ಹೇಳಿದರು.ನಗರದ ಕಡಪಟ್ಟಿ ಕ್ರಾಸ್‌ ಬಳಿಯ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಉಪಕ್ರಮದೊಂದಿಗೆ ಸದಾ ನಿಮ್ಮ ಸೇವೆಯಲ್ಲಿ ಪೊಲೀಸ್ ಇಲಾಖೆ ಮತ್ತು ಮನೆ-ಮನೆಗೆ ಭೇಟಿ; ಅಹವಾಲು ಸ್ವೀಕಾರ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.ಪೊಲೀಸ್ ಇಲಾಖೆಯೊಂದಿಗೆ ಜನರಲ್ಲಿರುವ ಭಯದ ವಾತಾವರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಮನೆ-ಮನೆಗೆ ಭೇಟಿ ನೀಡುತ್ತಿದೆ. ಜನರೊಂದಿಗೆ ಮುಕ್ತವಾಗಿ ಚರ್ಚಿಸಿ ತೊಂದರೆಗಳ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. ಅಹವಾಲು ಸ್ವೀಕರಿಸಿದ ಕುಟುಂಬದವರಿಗೆ ನ್ಯಾಯ ನೀಡುವ ಕೆಲಸ ಮಾಡಲಾಗುವುದು. ಸಮನ್ವಯ ಸಾಧನೆಗಾಗಿ ಪೊಲೀಸ್ ಇಲಾಖೆ ಈ ವ್ಯವಸ್ಥೆ ಕೈಗೊಂಡಿದೆ ಎಂದರು.ಪಾಸ್ ಪೋರ್ಟ್ಗಾಗಿ, ವೆರಿಫಿಕೇಶನ್, ಕಳ್ಳತನ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಜನತೆ ಸಮತೋಲಿತ ಮತ್ತು ನೈಸರ್ಗಿಕ ಆಹಾರವನ್ನು ಸೇವಿಸುವ ಮೂಲಕ ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು ಎಂದು ವೈದ್ಯೆ ಡಾ. ಪೂಜಾ ತೊದಲಬಾಗಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಎಂ. ಬಿ. ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಙಾಟಿಸಿ ಅವರು ಮಾತನಾಡಿದರು.ಯುವ ಜನತೆ ದುಶ್ಚಟಗಳಿಂದ ದೂರವಿರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ಗುಣಮಟ್ಟದ ಆಹಾರ ಸೇವನೆ, ಕವಾಯತುಗಳನ್ನು ಮಾಡಬೇಕು. ಮಾನಸಿಕ ಒತ್ತಡವನ್ನು ನಿಭಾಯಿಸಲು ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡಬೇಕು. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಈ ಮೂಲಕ ಹೃದಯದ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಅವರು ಹೇಳಿದರು.ಸಂಸ್ಥೆಯ ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಸೂರ್ಯಕಾಂತ ಬಿರಾದಾರ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅವರ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಎಂದು ಸ್ನೇಹ, ಐಎಲ್‌ಪಿ ಸಂಯೋಜಕ ಸಾಗರ ಘಾಟಗೆ ಹೇಳಿದರು.ತಾಲ್ಲೂಕಿನ ಕುದರಗೊಂಡ ಗ್ರಾಮದಲ್ಲಿ ಗುರುವಾರ ವಿದ್ಯಾಸಾಥಿ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ತಾಲ್ಲೂಕಿನ ಒಟ್ಟು ೧೫ ಗ್ರಾಮಗಳಲ್ಲಿ ವಿದ್ಯಾಸಾಥಿ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿ ಹೊರತುಪಡಿಸಿ ಹೆಚ್ಚಿನ ಕಲಿಕೆ ಒದಗಿಸಲು ಸೇವಾ ಮನೋಭಾವನೆಯ ವಿದ್ಯಾಸಾಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದೆ. ಇವರ ಕಾರ್ಯ ತಳಪಾಯ ಕಲಿಕಾ ಮೌಲ್ಯಮಾಪನ ಮಾಡಿ ಪ್ರತಿ ಕೇಂದ್ರಕ್ಕೆ ೩೦ ಮಕ್ಕಳನ್ನು ಗುರುತಿಸುವುದಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ಶಾಲಾ ಅವಧಿಯನ್ನು ಹೊರತುಪಡಿಸಿ, ಕೇಂದ್ರ ನಿಗದಿಪಡಿಸಿದ ಸಮಯಕ್ಕೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು.ಶಾಲೆಯ ಸಹಶಿಕ್ಷಕ ಎಸ್.ಎಸ್.ಬಿರಾದಾರ ಮಾತನಾಡಿ ನಾವು ಎಲ್ಲಾ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಚಟುವಟಿಕೆ ಮೂಲಕ ಶಿಕ್ಷಣ ಕೊಡುತ್ತೇವೆ ಮತ್ತು ನಾವು ಪ್ರತಿ ಗುರುವಾರ…

Read More

ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ವಿಷಾದ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರುಗಳು ಕೇವಲ ತಮ್ಮ ಮತಕ್ಷೇತ್ರವನ್ನಷ್ಟೇ ಉಸ್ತುವಾರಿ ಮಾಡುವುದರ ಮೂಲಕ ನಾಮಕೇವಾಸ್ತೆ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ ಹೊಂದುತ್ತಿರುವುದು ವಿಷಾದನೀಯ ಎಂದು ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಜಿಲ್ಲಾ ಉಸ್ತುವಾರಿಗಳಾದವರು ತಮ್ಮ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಬಗ್ಗೆ ಗಮನಹರಿಸಿ ಆ ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸಬೇಕು. ಆದರೆ ವಿಪರ್ಯಾಸವೆಂದರೆ ತಮ್ಮ ಮತ ಕ್ಷೇತ್ರಗಳನ್ನು ಅಷ್ಟೇ ಅಭಿವೃದ್ದಿ ಪಡಿಸುತ್ತಿದ್ದಾರೆ. ಹೀಗಾದರೆ ಜಿಲ್ಲಾ ಉಸ್ತುವಾರಿ ಹುದ್ದೆ ಯಾಕೆಬೇಕು ಎಂದು ಪ್ರಶ್ನಿಸಿದ ಅವರು ವರ್ಷದಲ್ಲಿ ಕನಿಷ್ಠ ತ್ರೈಮಾಸಿಕ ಸಭೆಯನ್ನು ತಾಲೂಕಾ ಮಟ್ಟದಲ್ಲಿ ಕರೆದು ಜನರ ಅಹವಾಲುಗಳನ್ನು ಸ್ವೀಕರಿಸುವಂತಾಗಬೇಕು. ಇದರಿಂದ ಶಾಸಕರಿಗೂ ಕಾರ್ಯದ ಭಾರದ ಒತ್ತಡ ಕಡಿಮೆಯಾಗುತ್ತದೆ ಮತ್ತು ತಾಲೂಕಿನ ಪ್ರಗತಿ ಸಾಧ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಹುದ್ದೆಯ ಘನತೆಯನ್ನು ಹೆಚ್ಚಿಸಿದಂತಾಗುತ್ತದೆ. ಜನರ ತೆರಿಗೆ ಹಣ…

Read More