ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸಮಾಜದಲ್ಲಿಂದು ಅನಾಚಾರ, ಸ್ವೇಚ್ಛಾಚಾರದ ತಾಂಡವ ಹೆಚ್ಚಾಗುತ್ತಿದೆ. ಮುಂಬರುವ ಭವಿಷ್ಯತ್ತಿನ ದಿನಮಾನಗಳಲ್ಲಿ ಈ ಪಿಡುಗು ಊಹೆಗೂ ಮೀರಿ ನಿಲ್ಲಲಿದೆ.ಇದು ಯಾರ ತರ್ಕಕ್ಕೂ ನಿಲುಕದಂತೆ ವ್ಯಾಪಕ ರೂಪ ಪಡೆಯಬಹುದು. ಕಾರಣ ಇಂದಿನ ಯುವ ಕುಸುಮಗಳಿಗೆ ಬಾಲ್ಯಾವಸ್ಥೆಯಲ್ಲಿಯೇ ನೈತಿಕತೆ ಮೌಲ್ಯಗಳ ದಿವ್ಯಾನುಭೂತಿಯ ಅಮೃತ ಸಿಂಚನದ ಸ್ಪರ್ಶ ಲೇಪಿಸಬೇಕು ಎಂದು ವೈದ್ಯೆ ಡಾ.ಗಂಗಾಶ್ರೀ ಚನ್ನು ಅನಂತಪೂರ ಅಭಿಪ್ರಾಯಿಸಿದರು.
ಸಮೀಪದ ಗೋಠೆ ಗ್ರಾಮದಲ್ಲಿ ಅಮ್ಮ ನೇತ್ರ ಸಂಸ್ಥೆಯ ಗುರುಬಸವ ಪ್ರಾಥಮಿಕ ಶಾಲೆ ಹಾಗೂ ಕಿಡ್ಸ್ ಹೋಮ್ ವೀಣಾ ಪೂರ್ವ ಪ್ರಾಥಮಿಕ ಶಾಲೆ ವಾಷಿ೯ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಪ್ರಾಥಮಿಕ ಶಾಲಾ ಹಂತವೇ ಶಿಕ್ಷಣದ ಅಡಿಪಾಯ. ಕಟ್ಟಡ ನಿಮಿ೯ಸುವಾಗ ಅಡಿಪಾಯದ ಪಿಲ್ಲರ್ ಗಟ್ಟಿಯಾಗಿದ್ದರೆ ಮಾತ್ರ ಕಟ್ಟಡಕ್ಕೆನು ತೊಂದರೆ ಇಲ್ಲ. ಹಾಗೆಯೇ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿ ಕಾಯ್ದುಕೊಳ್ಳಲು ಪ್ರಾಥಮಿಕ ಹಂತದ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಮೊದಲು ಮಹತ್ವ ನೀಡಬೇಕು. ಆದ್ಯತೆ ನೀಡಿದರೆ ಮಾತ್ರ ಮುಂದಿನ ಓದಾಭ್ಯಾಸ ಬದ್ದತೆಯಿಂದ ಸಾಗಲು ಸಾಧ್ಯ ಎಂದರು.
ಪ್ರತಿಯೊಬ್ಬ ಮಗುವಿಗೆ ಪುಸ್ತಕವೇ ಸರ್ವಸ್ವ. ಅದನ್ನು ಪ್ರೀತಿ, ಅದರದಿಂದ ಸ್ವೀಕರಿಸಬೇಕು. ಮೊಬೈಲ್ ತೊರೆದು ಪಠ್ಯ ಪುಸ್ತಕದ ನಂಟು ಬೆಳೆಸಿಕೊಳ್ಳೇಕು. ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದರೆ ತಲೆಯತ್ತಿ ಸಮಾಜದಲ್ಲಿ ಗೌರವದಿಂದ ನಡೆಯಬಹುದು ಎಂದು ಡಾ, ಗಂಗಾಶ್ರೀ ಅನಂತಪೂರ ಹಿತನುಡಿ ನುಡಿದರು.
ಅತಿಥಿಗಳಾಗಿ ನಿವೃತ್ತ ಯೋಧ ಗುರುರಾಜ ಜೋಶಿ ಮಾತನಾಡಿ, ಮಕ್ಕಳು ಆದರ್ಶ ಮೌಲ್ಯಗಳೊಂದಿಗೆ ಶಿಕ್ಷಣ ಜ್ಞಾನ ಸಂಪಾದನೆ ಮಾಡಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಕಠಿಣ ಪರಿಶ್ರಮ, ಏಕಾಗ್ರತೆಯ ಕ್ಷಮತೆ ಅತ್ಯಗತ್ಯ. ಸದಾ ಜ್ಞಾನ ಪ್ರಸರಣದಲ್ಲಿ ಮಗ್ನರಾಗಿ ನವತನ ಕಂಡುಕೊಳ್ಳಬೇಕು. ಸ್ಪಧಾ೯ತ್ಮಕ ಯುಗದಲ್ಲಿಂದು ಸಮಯ ವ್ಯರ್ಥ ಮಾಡದೆ ನಿರಂತರ ಕ್ರಿಯಾಶೀಲತೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ, ಯಶಸ್ಸು ಲಭಿಸಲು ಸಾಧ್ಯ. ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋಠೆ ಪವಾಡ ಬಸವೇಶ್ವರ ಕಮೀಟಿ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ವಹಿಸಿದ್ದರು. ಅತಿಥಿಗಳಾಗಿ ಪಿ.ಕೆ.ಪಿ.ಎಸ್. ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಕುಲಕರ್ಣಿ, ಗೋಟಕಾದೇವಿ ಕಮೀಟಿ ಅಧ್ಯಕ್ಷ ವಿಠ್ಠಲ ಪೇಠಕರ, ಸದಸ್ಯ ದಿಗಂಬರ ಕುಲಕರ್ಣಿ, ಅರ್ಚಕ ಶ್ಯಾಮ ಕುಲಕರ್ಣಿ, ಗುರುಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೌನೇಶ ಬಡಿಗೇರ, ಉಪಾಧ್ಯಕ್ಷ ಚಂದ್ರಶೇಖರ ಬಡಿಗೇರ, ಸದಸ್ಯ ಡಾ, ಶಂಕರ ಹೊನಗೌಡ, ಗೋಠೆ ಗ್ರಾಪಂ ಸಿಬ್ಬಂದಿ ಬಸಲಿಂಗಯ್ಯ ಹಿರೇಮಠ, ನಿವೃತ್ತ ಪೋಲಿಸ್ ಅಧಿಕಾರಿ ಕಾಸಪ್ಪ ಅನಂತಪೂರ, ರಾಜ್ಯ ಮಟ್ಟದ ಕಬಡ್ಡಿ ತೀಪು೯ಗಾರ ಗುಂಡು ಬ್ಯಾಡಗಿ, ನಿವೃತ್ತ ಯೋಧ ಶಿವಾನಂದ ಅನಂತಪೂರ, ಪ್ರಮುಖರಾದ ಕಾಶೀನಾಥ್ ಅಕ್ಕೋಳ, ಯಲ್ಲಪ್ಪ ಮುಧೋಳ, ಮೌನೇಶ ಪತ್ತಾರ, ಅಶೋಕ ನವಣಿ, ಗಾಯಕ ಸೋಮು ಅಡಾಳಟ್ಟಿ, ಮಲ್ಲಪ್ಪ ನಾವಿ,ಹಣಮಂತ ಕುಂಬಾರ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ ಮೊದಲಾದವರಿದ್ದರು.
ಪ್ರಾಸ್ತಾವಿಕವಾಗಿ ಬಸವರಾಜ ಜಾಲೋಜಿ ಮಾತನಾಡಿದರು. ಮಂಜುನಾಥ ಅನಂತಪೂರ ಸ್ವಾಗತಿಸಿದರು. ಸುರೇಶ ಸಂತಿ ನಿರೂಪಿಸಿದರು. ಬಸವರಾಜ ಅನಂತಪೂರ ವಂದಿಸಿದರು.