ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂದಿನ ಪೀಳಿಗೆಗೆ ನೀರಿನ ಅಭಾವ ತಡೆಯಲು ನೀರನ್ನು ಮಿತವಾಗಿ ಬಳಸುವ ಹಾಗೂ ಪುನರ್ ಬಳಕೆ ಮಾಡುವ ಪರಿಪಾಠ ಇಂದಿನ ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ‘ವಿಶ್ವ ಜಲ ದಿನಾಚರಣೆ’ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾನವ, ಪ್ರಾಣಿ, ಪಕ್ಷಿ ಸಂಕುಲದ ಉಳಿವಿಗೆ ನೀರು ಅಮೂಲ್ಯವಾದ ಜೀವಜಲವಾಗಿದೆ. ಆಹಾರ ಉತ್ಪಾದನೆ, ಗಿಡ-ಮರ ಸೇರಿದಂತೆ ಪ್ರತಿಯೊಂದಕ್ಕೂ ನೀರಿನ ಅವಶ್ಯಕತೆ ಇರುವದರಿಂದ ನೀರಿನ ಮಿತ ಬಳಕೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ,
ನೀರಿನ ಸಂರಕ್ಷಣೆ ಬಗ್ಗೆ ಕೇವಲ ಒಂದು ದಿನ ಮಾತ್ರ ಚಿಂತನೆ ನಡೆಸಿದರೆ ಸಾಲದು. ನೀರನ್ನು ಉಳಿತಾಯ ಮಾಡುವ ಹವ್ಯಾಸ ಎಲ್ಲರ ದೈನಂದಿನ ರೂಢಿಯಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿ, ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುದರಿಂದ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಹಾಗಾಗಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,
ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ,
ನವೀನ ಬಂಡೆನ್ನವರ, ಸಚಿನ ಅವಟಿ, ಜಯಶ್ರೀ ಬಂಗಾರಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ರೇಣುಕಾ ಭಜಂತ್ರಿ, ಎಂ ಎಸ್ ಬಾಗಲಕೋಟ, ಎಂ ಎಂ ವಾಡೇದ, ಎಂ ವ್ಹಿ ಭಜಂತ್ರಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.