ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಎಂಪಿಎಸ್ ಶಾಲಾ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದಿಂದ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಾಲೂಕು ಕೆ.ಯು. ಗಿಡ್ಡಪ್ಪಗೋಳ ಮಾತನಾಡಿ
1-7-2022 ರಿಂದ 31-7-2024 ರವರಿಗೆ ನಿವೃತ್ತಿ ಹೊಂದಿದ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಸಿಗದಿದ್ದಕ್ಕೆ ದಿನಾಂಕ 3-4-2025 ರಂದು ಗುರುವಾರ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 4-4-2025 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ಬೃಹತ್ ಸಮಾವೇಶವನ್ನು ಬೆಂಗಳೂರಿನ ಪ್ರಿನ್ಸಸ್ ಶ್ರೈನ್ (ಗೇಟ್ ನಂ-9) ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದು ಉದ್ಘಾಟನೆ ಮುಖ್ಯಮಂತ್ರಿಗಳು ಸಿದ್ದರಾಮಯ್ಯ, ಸ್ಮರಣ ಸಂಚಿಕೆ ಬಿಡುಗಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರವರು, ಅಧ್ಯಕ್ಷತೆ ರಾಜ್ಯಾಧ್ಯಕ್ಷ ಎಸ್.ಎಲ್. ಭೈರಪ್ಪ, ಉಪಸ್ಥಿತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವಹಿಸುವರು ಎಂದು ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಬಿ.ಎಸ್. ಹಂಗರಗಿ, ಎಂ.ಕೆ. ಚೌಧರಿ, ಡಾಕ್ಟರ್ ಬಿ.ಆರ್. ಮಠ, ಪಿ.ಜಿ. ಗಣಿ, ಬಸವರಾಜ ಗಿಡ್ಡಪ್ಪಗೋಳ, ಬಿ.ಎನ್. ವಂದಾಲ, ವಿಲಾಸ ಪತ್ತಾರ, ಶ್ರೀಶೈಲ ಹರನಟ್ಟಿ, ಹೆಬ್ಬಿ, ಅಪ್ಪನವರ, ಹೊನವಾಡ ಉಪಸ್ಥಿತರಿದ್ದರು.